ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಕಾಂಗ್ರೇಸ್ ಶಾಸಕಾಂಗ ಪಕ್ಷದ ನಾಯಕರು ವಿಪಕ್ಷ ನಾಯಕರೂ ಆದ ಸಿದ್ದರಾಮಯ್ಯ ಅವರ ಶಿವಮೊಗ್ಗ ಭೇಟಿಯನ್ನು ಕೊನೆ ಘಳಿಗೆಯಲ್ಲಿ ಮುಂದೂಡಲಾಗಿದೆ.
ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಕೊರೊನಾ ಸೋಂಕಿನಿಂದ ಆಸ್ಪತ್ರೆಗೆ ದಾಖಲಾದ ಸುದ್ದಿ ಹೊರಬೀಳುತ್ತಿದ್ದಂತೆ ವಿಪಕ್ಷನಾಯಕ ಸಿದ್ದರಾಮಯ್ಯ ಅವರು ಸಿ.ಎಂ ತವರು ಜಿಲ್ಲೆಯ ತಮ್ಮ ಭೇಟಿಯನ್ನು ಮುಂದೂಡಿದರು.
ಆಸ್ಪತ್ರೆಗೆ ದಾಖಲಾಗಿರುವ ಯಡಿಯೂರಪ್ಪ ಅವರ ಯೋಗಕ್ಷೇಮವನ್ನು ವಿಚಾರಿಸಿಕೊಂಡಿರುವ ಸಿದ್ದರಾಮಯ್ಯ ಅವರು, ಶೀಘ್ರ ಗುಣಮುಖರಾಗಿ ಬರಲಿ ಎಂದು ಹಾರೈಸಿದ್ದಾರೆ. (ಸ್ವತಃ ಯಡಿಯೂರಪ್ಪ ಅವರೇ ಈ ವಿಷಯವನ್ನು ವಿಡಿಯೋ ಮೂಲಕ ಹೇಳಿಕೊಂಡಿದ್ದಾರೆ.)
ಕೊರೊನಾ ಸಂಬಂಧಿತ ವೈದ್ಯಕೀಯ ಉಪಕರಣಗಳ ಖರೀದಿಯಲ್ಲಿ ಭ್ರಷ್ಟಾಚಾರ ನಡೆದಿದೆ ಎಂಬುದನ್ನು ಜನರ ಮುಂದಿಡಲು ಕಾಂಗ್ರೇಸ್ ನಾಯಕರ ತಂಡಗಳು ಜಿಲ್ಲಾ ಪ್ರವಾಸಗಳನ್ನು ಮಾಡುತ್ತಿದ್ದು, ಜನರ ಮುಂದೆ ಸರ್ಕಾರದ ಭ್ರಷ್ಟಾಚಾರ ವನ್ನು ವಿವರಿಸುವುದೇ ಆಗಿತ್ತು. ಅದರಂತೆ ವಿಪಕ್ಷ ನಾಯಕರೂ , ಕಾಂಗ್ರೇಸ್ ನ ಶಾಸಕಾಂಗ ಪಕ್ಷದ ನಾಯಕರೂ ಆದ ಸಿದ್ದರಾಮಯ್ಯ, ಕೆಪಿಸಿಸಿ ಕಾರ್ಯಾಧ್ಯಕ್ಷರು ಆದ ಸಲೀಂ ಆಹಮ್ಮದ್ ಅವರ ನೇತೃತ್ವದ ತಂಡ ಪೂರ್ವನಿಗದಿಯಂತೆ ಇಂದು ರಾತ್ರಿಯೇ( ಜು.3) ಶಿವಮೊಗ್ಗಕ್ಕಾಗಮಿಸಿ ವಾಸ್ತವ್ಯ ಹೂಡಿ. ನಾಳೆ ಜು.4 ರಂದು ಲಗನ್ ಕಲ್ಯಾಣಮಂದಿರದಲ್ಲಿ ಬೆಳಗ್ಗೆ 11 ಗಂಟೆಗೆ ಸಿದ್ದರಾಮಯ್ಯ , ಸಲೀಂ ಆಹಮ್ಮದ್ ಅವರು ಪತ್ರಿಕಾಗೋಷ್ಟಿ ನಡೆಸುವುದು ನಂತರ ಕಾರ್ಯಕರ್ತ ಮುಖಂಡರುಗಳ ಸಭೆ ನಡೆಸುವುದು ಖಚಿತವಾಗಿ ,
ಅದಕ್ಕೆ ಪೂರಕವಾಗಿ ಜಿಲ್ಲಾ ಕಾಂಗ್ರೇಸ್ ತಮ್ಮ ನಾಯಕರನ್ನು ಸ್ವಾಗತಿಸಲು ಸಕಲ ಸಿದ್ದತೆಗಳನ್ನು ಮಾಡಿಕೊಂಡಿತ್ತಲ್ಲದೆ. ಕಾರ್ಯಕರ್ತರಲ್ಲಿ ಉತ್ಸಾಹ ಕೂಡ ಮನೆ ಮಾಡಿತ್ತು. ನಗರದಲ್ಲಿ ಎಲ್ಲಡೆ ಫ್ಲಕ್ಸ್ , ಬ್ಯಾನರ್ ಗಳನ್ನು ಹಾಕಲಾಗಿದ್ದು, ಜಿಲ್ಲಾ ಕಾಂಗ್ರೇಸ್ ವತಿಯಿಂದ ಪ್ರಕಟಣೆಯನ್ನು ಕೂಡ ಹೊರಡಿಸಲಾಗಿತ್ತು.
ಆದರೆ ಇಂದು ಮಧ್ಯಾಹ್ನ ಸಿದ್ದರಾಮಯ್ಯ ಅವರ ಭೇಟಿ ಕಾರ್ಯಕ್ರಮ ರದ್ದಾಗಿರುವುದಾಗಿ ಜಿಲ್ಲಾಕಾಂಗ್ರೇಸ್’ನಿಂದ ಪ್ರಕಟಣೆ ಹೊರಬಿದ್ದಿತು. ಇದು ಸಹಜವಾಗಿಯೇ ಕಾಂಗ್ರೇಸ್ ಕಾರ್ಯಕರ್ತರಲ್ಲಿ ಉತ್ಸಾಹಕ್ಕೆ ತಣ್ಣೀರೆರಚಿದಂತಾಗಿದೆ,
ಆದರೆ ಇದರ ಹಿಂದೆ ಇದ್ದದ್ದು ಸಿದ್ದರಾಮಯ್ಯ ಅವರ ಮಾನವೀಯ ಸ್ಪಂದನೆಯ ಮುತ್ಸದ್ದಿ ನಡೆ ಎಂಬುದು ವ್ಯಕ್ತವಾಗುತ್ತಿದೆ.
ಈ ರಾಜ್ಯದ ಮುಖ್ಯಮಂತ್ರಿ ಯಡಿಯೂರಪ್ಪ ಅವರು ಕೊರೊನಾ ಸೋಂಕಿನಿಂದ ಆಸ್ಪತ್ರೆಗೆ ದಾಖಲಾಗಿರುವ ಈ ಹೊತ್ತಿನಲ್ಲಿ ಅವರ ತವರು ಜಿಲ್ಲೆಗೆ ಆಗಮಿಸಿ ಸರ್ಕಾರದ ಭ್ರಷ್ಟಾಚಾರದ ಬಗ್ಗೆ ಟೀಕೆ, ಆರೋಪಗಳನ್ನು ಮಾಡುವುದು ಸರಿಯಲ್ಲ. ಇಂತಹ ಆರೋಪಗಳಿಂದ ಆಸ್ಪತ್ರೆಯಲ್ಲಿರುವ ಯಡಿಯೂರಪ್ಪ ಅವರನ್ನು ಒತ್ತಡಕ್ಕೆ ಸಿಲುಕಿಸುವುದು ಅಮಾನವೀಯ ನಡೆಯಾದೀತು. ಅದೊಂದು ಸಂವೇದನೆಯ ಶೀಲ ನಡೆಯಾಗಲಾರದು. ಎಂದು ಸಿದ್ದರಾಮಯ್ಯ ಅವರು ಸಿ.ಎಂ ತವರು ಜಿಲ್ಲೆ ಶಿವಮೊಗ್ಗ ಭೇಟಿಯನ್ನು ಮುಂದೂಡಿದ್ದಾರೆ ಎಂಬುದು ಅವರ ಆಪ್ತ ಮೂಲಗಳು ತಿಳಿಸಿವೆ.
ಕೇಂದ್ರದ ಗೃಹ ಸಚಿವ ಅಮಿತ್ ಶಾ ಅವರು ಕೊರೊನಾ ಸೋಂಕಿನಿಂದ ಆಸ್ಪತ್ರೆಗೆ ದಾಖಲಾಗಿರುವಾಗ ಆತಂಕಗೊಳ್ಳುವ ರಾಹುಲ್ ಗಾಂಧಿ ಅವರು ಶಾ ಬೇಗ ಗುಣಮುಖರಾಗಲಿ ಎಂದು ಪ್ರಾರ್ಥಿಸುತ್ತಾರೆ.
ಯಡಿಯೂರಪ್ಪ ಅವರು ಆಸ್ಪತ್ರೆಗೆ ದಾಖಲಾಗಿರುವಾಗ ಅವರ ಮನಸ್ಸಿಗೆ ಘಾಸಿಗೊಳ್ಳುವ ಯಾವ ರಾಜಕೀಯ ನಡೆಯೂ ಸಮಂಜಸವಲ್ಲ ಎಂಬ ವಿವೇಕದ ನಡೆಯನ್ನು ಸಿದ್ದರಾಮಯ್ಯ ತೋರುತ್ತಾರೆ. ರಾಜಕೀಯವಾಗಿ, ಸೈದ್ಧಾಂತಿಕವಾಗಿ ಅದೆಷ್ಟೇ ವಿರೋಧಗಳು ಇದ್ದಾಗ್ಯೂ ವ್ಯಕ್ತಿಗತ ಸಂಬಂಧಗಳನ್ನು ಪರಸ್ಪರ ಘನತೆಯೊಂದಿಗೆ ಕಾಪಾಡಿಕೊಂಡು ಬರುವ ಅನೇಕ ಉದಾಹರಣೆಗಳನ್ನು ಆಗ್ಗಾಗ್ಗೆ ನಾವು ಕಾಣುತ್ತಲೆ ಇರುತ್ತೇವೆ. ಇದೇ ಪ್ರಜಾಪ್ರಭುತ್ವದ ಸೌಂದರ್ಯ ಕೂಡ.
Get In Touch With Us info@kalpa.news Whatsapp: 9481252093
Discussion about this post