ಬಾರಾಮುಲ್ಲಾ: ಇಡಿಯ ಭಾರತವೇ ಬೆಚ್ಚಿ ಬೀಳುವಂತೆ ಪುಲ್ವಾಮಾದಲ್ಲಿ ಭೀಕರ ದಾಳಿ ನಡೆಸಿದ ಪಾಕ್ ಉಗ್ರರ ಕೃತ್ಯಕ್ಕೆ ಭಾರತೀಯ ಸೇನೆಯ 42 ಯೋಧರು ವೀರಸ್ವರ್ಗ ಸೇರಿದ್ದಾರೆ. ಇದರ ಬೆನ್ನಲ್ಲೆ, ಪಾಕ್ ವಿರುದ್ಧ ಕೆರಳಿರುವ ಇಡಿಯ ಭಾರತ ಪ್ರತೀಕಾರಕ್ಕಾಗಿ ಒತ್ತಾಯಿಸುತ್ತಿದೆ.
ಹಾಗೆಯೇ, ಕಾಶ್ಮೀರಿಗಳು ಉಗ್ರರಿಗೆ ಪ್ರತ್ಯಕ್ಷ ಹಾಗೂ ಪರೋಕ್ಷ ಸಹಕಾರ ನೀಡುತ್ತಿದ್ದಾರೆ ಎಂಬುದು ಎಷ್ಟು ಸತ್ಯವೋ, ಉಗ್ರರಿಂದ ನಿರಂತರವಾಗಿ ಉಪಟಳ ಅನುಭವಿಸುತ್ತಿರುವ ಒಳ್ಳೆಯ ಕಾಶ್ಮೀರಿಗಳೂ ಸಹ ಇದ್ದಾರೆ ಎಂಬುದೂ ಅಷ್ಟೆ ಸತ್ಯ. ಇಂತಹ ಉಗ್ರರ ನಿರಂತರ ಉಪಟಳದಿಂದ ಬೇಸತ್ತಿರುವ ಕಾಶ್ಮೀರಿ ಯುವಕರು ಈಗ ಪಾಕ್’ಗೆ ಸರಿಯಾದ ಉತ್ತರ ನೀಡುವಲ್ಲಿ ಭಾಗಿಯಾಗಬೇಕು ಎಂದು ಸೇನೆ ಸೇರಲು ಮುಂದಾಗಿದ್ದಾರೆ.
#WATCH Queues seen at an Army recruitment drive for 111 vacancies in Baramulla earlier today. #JammuAndKashmir pic.twitter.com/BJFbHmBcaL
— ANI (@ANI) February 19, 2019
ಉಗ್ರರಿಂದ ಪದೇ ಪದೇ ತೊಂದರೆಗೆ ಒಳಗಾಗುತ್ತಿರುವ ಬಾರಾಮುಲ್ಲಾ ಜಿಲ್ಲೆಯಲ್ಲಿ ನಿನ್ನೆಯಿಂದ ಸೇನಾ ನೇಮಕಾತಿ ರ‍್ಯಾಲಿ ಆರಂಭವಾಗಿದೆ. ನಿನ್ನೆ ಒಂದೇ ದಿನ ಸುಮಾರು 2500ಕ್ಕೂ ಅಧಿಕ ಯುವಕರು ಸೇನೆ ಸೇರಲು ಹಾತೊರೆದು, ಅಗತ್ಯವಿರುವ ಎಲ್ಲ ಹಂತಗಳನ್ನು ಪೂರೈಸುತ್ತಿದ್ದಾರೆ. ಇಂದೂ ಸಹ ಸಾವಿರಾರು ಸಂಖ್ಯೆಯಲ್ಲಿ ಯುವಕರು ಸಾಲುಗಟ್ಟಿ ನಿಂತಿದ್ದು, ಹೇಗಾದರೂ ಮಾಡಿ ಸೈನ್ಯ ಸೇರಲೇಬೇಕು ಎಂದು ಹಾತೊರೆಯುತ್ತಿದ್ದಾರೆ.
ಈ ವೇಳೆ ಮಾತನಾಡಿರುವ ಯುವಕರು, ನಮಗೆ ಉದ್ಯೋಗ ಬೇಕು ಎನ್ನುವುದಕ್ಕಿಂತಲೂ ಉಗ್ರರ ವಿರುದ್ಧ ಸೇಡು ತೀರಿಸಿಕೊಳ್ಳಬೇಕು. ನಮ್ಮ ರಾಜ್ಯದಲ್ಲಿ ಪಾಕ್ ಸೇನೆ ಹಾಗೂ ಉಗ್ರರ ಉಪಟಳ ಮಿತಿ ಮೀರಿದ್ದು, ನಮಗೂ ಸಹಿಸಿ ಸಹಿಸಿ ಸಾಕಾಗಿದೆ. ಅಲ್ಲದೇ, ನಮ್ಮ ಯೋಧರ ಹತ್ಯೆ ನಮ್ಮ ರಕ್ತವನ್ನು ಕೆರಳಿಸಿದೆ. ಹೀಗಾಗಿ, ನಮ್ಮ ದೇಶದ ರಕ್ಷಣೆಗಾಗಿ ಹಾಗೂ ನಮ್ಮ ಕುಟುಂಬಗಳ ರಕ್ಷಣೆಗಾಗಿ ಸೇನೆ ಸೇರುವುದೇ ದಾರಿ ಎಂದು ನಿರ್ಧರಿಸಿ, ಇಲ್ಲಿಗೆ ಬಂದಿದ್ದೇವೆ ಎಂದಿದ್ದಾರೆ.
Discussion about this post