ನವದೆಹಲಿ: ಪುಲ್ವಾಮಾದಲ್ಲಿ ಉಗ್ರರ ದಾಳಿ ನಡೆದು 42 ಯೋಧರು ವೀರಸ್ವರ್ಗ ಸೇರಿದ ಘಟನೆಯ ಬೆನ್ನಲ್ಲೇ ಭಾರತೀಯ ಸೇನೆಗೆ ಪ್ರಮುಖ ಹೊಸ ಅಸ್ತ್ರವೊಂದು ಸೇರ್ಪಡೆಯಾಗಲಿದ್ದು, ನಮ್ಮ ಭದ್ರತಾ ಪಡೆಗಳಿಗೆ ಮತ್ತಷ್ಟು ಬಲ ಬರಲಿದೆ.
ಹೌದು… ಸೇನೆಗೆ ಬಲ ತುಂಬುವ ಸಲುವಾಗಿ 114 ಧನುಷ್ ಫಿರಂಗಿಗಳನ್ನು ಸರಬರಾಜು ಮಾಡಲು ರಕ್ಷಣಾ ಸಚಿವಾಲಯದಿಂದ ಆರ್ಡಿನೆನ್ಸ್ ಫ್ಯಾಕ್ಟರಿ ಬೋರ್ಡ್’ಗೆ ಆದೇಶ ಮಾಡಲಾಗಿದೆ.
ಧನುಷ್ ದೂರದವರೆಗೂ ಉಡಾಯಿಸಬಹುದಾದ ಮೊಟ್ಟ ಮೊದಲ ದೇಶೀಯ ನಿರ್ಮಿತ ಫಿರಂಗಿಯಾಗಿದ್ದು, ಇದನ್ನು ಮೇಕ್ ಇನ್ ಇಂಡಿಯಾದ ಅಡಿಯಲ್ಲಿ ತಯಾರಿಸಲಾಗಿದೆ. ಅಲ್ಲದೇ, ಮೇಕ್ ಇಂಡಿಯಾದ ಯಶಸ್ಸಿಗೆ ಇದು ಪ್ರಮುಖ ಹೆಜ್ಜೆಯಾಗಿದ್ದು, ಭಾರತೀಯ ಸೇನೆಗೂ ಸಹ ಬಲ ತುಂಬಿದೆ.
ಸೇನೆಗಾಗಿ 114 ಧನುಷ್ ಫಿರಂಗಿಗಳನ್ನು ಸರಬರಾಜು ಮಾಡಲು ರಕ್ಷಣಾ ಸಚಿವಾಲಯದಿಂದ ಆದೇಶ ಬಂದಿರುವುದಾಗಿ ಒಎಫ್’ಬಿ ಖಚಿತಪಡಿಸಿದ್ದು, ಆದಷ್ಟು ಶೀಘ್ರ ಇದು ಪೂರೈಕೆಯಾಗಲಿದೆ ಎನ್ನಲಾಗಿದೆ.
Discussion about this post