ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಕೆಂದಾವರೆ ಹೂವಿನಂಥಾ ಹೊರ ಮೈ, ಕಡು ನೇರಳೆ ಬಣ್ಣದ ಮೃದು ತಿರುಳುಳ್ಳ, ಸವಿಯಾದ ಹಣ್ಣಿನ ಹೆಸರು ಡ್ರಾಗನ್ ಫ್ರೂಟ್. ಇದು ಉಷ್ಣವಲಯದಲ್ಲಿ ಬೆಳೆಯೋ ಹಣ್ಣು. ಹೆಸರಿನಂತೆ ಹಣ್ಣಿನ ವಿನ್ಯಾಸವೂ ವಿಶಿಷ್ಟವಾಗಿದ್ದು ಹೊರಮೈ ನೋಟವೇ ಫಲಪ್ರೇಮಿಗಳನ್ನು ಆಕರ್ಷಿಸುತ್ತದೆ.
ಹೈಲೋಸೆರಿಯಸ್ ಕಳ್ಳಿ ಜಾತಿಯ ಗಿಡದಲ್ಲಿ ಬೆಳೆಯೋ ಈ ಹಣ್ಣಿನ ಗಿಡದಲ್ಲಿ ಹೂವೂ ಬಿಡುತ್ತೆ. ಆದರೆ ಅದರ ಹೂವುಗಳು ಅರಳೋದು ರಾತ್ರಿಯ ವೇಳೆ ಅನ್ನೋದೇ ವಿಶೇಷ. ಈ ಹೈಲೋಸೆರಿಯಸ್ ಕಳ್ಳಿ ಗಿಡವನ್ನು ಹೊನೊಲುಲು ರಾಣಿ ಅಂತಾನೂ ಕರೀತಾರೆ.ಇಂದು ಪ್ರಪಂಚದಾದ್ಯಂತ ಈ ಹಣ್ಣನ್ನು ಬೆಳೀತಾರಾದ್ರೂ ಇದರ ಮೂಲ ದಕ್ಷಿಣ ಮೆಕ್ಸಿಕೋ ಹಾಗೂ ಅಮೆರಿಕಾ. ಪಿಟಾಯ, ಪಿಟಹಾಯಾ, ಸ್ಟ್ರಾಬೆರಿ ಪಿಯರ್ ಹೀಗೆ ವಿವಿಧ ಹೆಸರುಗಳಿವೆ ಈ ಹಣ್ಣಿಗೆ.
ಡ್ರ್ಯಾಗನ್ ಹಣ್ಣು ಕೆಂಪು ಅಥವಾ ಬಿಳಿ ತಿರುಳು ಹಾಗೂ ಕಪ್ಪು ಬೀಜ ಹೊಂದಿದೆ. ಕಿವಿ ಮತ್ತು ಪಿಯರ್ ಹಣ್ಣಿನ ರುಚಿಯನ್ನು ಹೋಲುತ್ತದೆ.
ಡ್ರ್ಯಾಗನ್ ಫ್ರೂಟ್ ಹೇರಳವಾದ ಪೋಷಕಾಂಶಗಳನ್ನು ಹೊಂದಿದೆ. ಕಬ್ಬಿಣ, ಮೆಗ್ನೇಶಿಯಂ ಹಾಗೂ ನಾರಿನ ಅಂಶಗಳನ್ನು ಹೊಂದಿದ್ದು ಆರೋಗ್ಯಕ್ಕೆ ಲಾಭದಾಯಕವಾಗಿದೆ.ಹಣ್ಣಿನಲ್ಲಿರುವ ಪೋಷಕಾಂಶಗಳ ಪ್ರಮಾಣ ಹೀಗಿದೆ.
ಕ್ಯಾಲೋರಿ- 60
ಪ್ರೊಟೀನ್ – 1.2 ಗ್ರಾಂ
ಕೊಬ್ಬು – 0
ಕಾಬ್ಸರ್ – 13 ಗ್ರಾಂ
ಫೈಬರ್ – 3 ಗ್ರಾಂ
ವಿಟಮಿನ್ ಸಿ- ಆರ್ಡಿಐನ 3%
ಕಬ್ಬಿಣ ಆರ್ಡಿಐನ 4%
ಮೆಗ್ನೇಶಿಯಂ – ಆರ್ಡಿಐನ 10%
ಇನ್ಯಾಕೆ ತಡ? ಮಾರ್ಕೆಟ್’ನಲ್ಲಿ ಈ ಹಣ್ಣು ನಿಮ್ಮ ಕಣ್ಣಿಗೇನಾದ್ರೂ ಬಿದ್ರೆ, ಇದರ ರುಚಿಯನ್ನು ಮಿಸ್ ಮಾಡ್ಕೋಬೇಡಿ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9481252093 – info@kalpa.news
Discussion about this post