ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ತುಳಸಿ ಪೂಜೆ
ಇಲ್ಲಿದೆ ಪೂಜೆ ವಿಧಾನ, ಮಹತ್ವ ಮತ್ತು ಶುಭ ಮುಹೂರ್ತ..! ನವೆಂಬರ್ 25 ರಂದು ಬುಧವಾರ ದೇವ ಉತ್ಥಾನ ಏಕಾದಶಿಯನ್ನು ಆಚರಿಸಲಾಗುತ್ತದೆ. 26 ಗುರುವಾರ ಉತ್ಥಾನ ದ್ವಾದಶಿ. ತುಳಸಿ ಹಬ್ಬ.
ಕಾರ್ತಿಕ ತಿಂಗಳ ಶುಕ್ಲ ಪಕ್ಷದ ಏಕಾದಶಿಯಂದು ತುಳಸಿ ಮತ್ತು ಭಗವಾನ್ ಶಾಲಿಗ್ರಾಮನ ವಿವಾಹವನ್ನು ಆಚರಿಸಲಾಗುತ್ತದೆ. ಈ ಬಾರಿ, ಈ ಶುಭ ದಿನಾಂಕ ನವೆಂಬರ್ 25 ರಂದು ಬುಧವಾರ ಬಂದಿದೆ. ಇದನ್ನು ದೇವ ಉತ್ಥಾನ ಏಕಾದಶಿ, ದೇವೋತ್ಥಾನ ಏಕಾದಶಿ ಅಥವಾ ದೇವ ಪ್ರಬೋಧಿನೀ ಏಕಾದಶಿ ಎಂದೂ ಕರೆಯುತ್ತಾರೆ. ತುಳಸಿಗೆ ಈ ದಿನ ವಿವಾಹವಾಯಿತೆಂಬ ನಂಬಿಕೆಯಿದೆ. ದಕ್ಷಿಣ ಕರ್ಣಾಟಕದ ಪ್ರಮುಖ ಆಚರಣೆಯಲ್ಲಿ ಇದೂ ಒಂದಾಗಿದ್ದು, ಇದನ್ನು ತುಳಸಿ ಪೂಜೆ ಎಂದು ಕರೆಯುತ್ತಾರೆ. ಹಿಂದೂ ಪದ್ಧತಿಯಲ್ಲಿ ವಧು-ವರರು ಮದುವೆಯಾದ ರೀತಿಯಲ್ಲಿಯೇ ತುಳಸಿ ವಿವಾಹವನ್ನು ಆಯೋಜಿಸಲಾಗಿದೆ. ಈ ದಿನ ತುಳಸಿ ಸಸ್ಯವನ್ನು ವಧುವಿನಂತೆ ಅಲಂಕರಿಸಲಾಗುತ್ತದೆ ಮತ್ತು ಮಂಗಳಕರ ಹಾಡುಗಳನ್ನು ಹಾಡಲಾಗುತ್ತದೆ. ತುಳಸಿ ವಿವಾಹದ ಮೂಲಕ, ವಿಷ್ಣುವನ್ನು ಮೆಚ್ಚಿಸಲು ಈ ದಿನವನ್ನು ಅತ್ಯುತ್ತಮವೆಂದು ಪರಿಗಣಿಸಲಾಗುತ್ತದೆ ಮತ್ತು ತುಳಸಿ ವಿವಾಹ ಪೂಜೆಯು ಕನ್ಯಾ ದಾನಕ್ಕೆ ಸಮಾನವಾದ ಫಲವನ್ನು ನೀಡುತ್ತದೆ. 2020 ತುಳಸಿ ಪೂಜೆಯ ಶುಭ ಸಮಯ ಮತ್ತು ಪೂಜಾ ವಿಧಾನವನ್ನು ತಿಳದುಕೊಳ್ಳೋಣ.
ಸಾಮಾನ್ಯವಾಗಿ ಎಲ್ಲಾ ಮಂಗಳ ಕಾರ್ಯಗಳೂ ತುಳಸಿ ಪೂಜೆಯಿಂದ, ಗಣೇಶನ ಪೂಜೆಯಿಂದ ಆರಂಭವಾಗುತ್ತದೆ. ಕನ್ಯಾ ಸಂತೋಷದಿಂದ ಅಂದರೆ ಹೆಣ್ಣು ಮಗುವಿಲ್ಲದೆ ವಂಚಿತರಾದವರು, ಈ ದಿನದಂದು ತುಳಸಿ ವಿವಾಹವನ್ನು ಅಥವಾ ತುಳಸಿ ಪೂಜೆಯನ್ನು ಮಾಡಬೇಕು, ಇದರಿಂದ ಅವರು ಕನ್ಯಾದಾನದ ಫಲವನ್ನು ಪಡೆಯಬಹುದು ಎಂದು ನಂಬಲಾಗಿದೆ. ಕಾರ್ತಿಕ ತಿಂಗಳ ಶುಕ್ಲ ಪಕ್ಷದ ನವಮಿ ದಿನಾಂಕವನ್ನು ತುಳಸಿ ವಿವಾಹವೆಂದು ಅನೇಕ ಜನರು ಪರಿಗಣಿಸಿದ್ದರೂ, ಕೆಲವರು ತುಳಸಿ ಪೂಜೆಯನ್ನು ಏಕಾದಶಿಯಿಂದ ಪೂರ್ಣಿಮಾವರೆಗೆ ಮಾಡುತ್ತಾರೆ ಮತ್ತು ಐದನೇ ದಿನ ತುಳಸಿ ವಿವಾಹವನ್ನು ಆಯೋಜಿಸುತ್ತಾರೆ.
ಏಕಾದಶಿ ತಿಥಿ ಪ್ರಾರಂಭ: ನವೆಂಬರ್ 24 ರ ಮಧ್ಯರಾತ್ರಿ 02:43 ರಿಂದ
ಏಕಾದಶಿ ತಿಥಿ ಮುಕ್ತಾಯ: ನವೆಂಬರ್ 26 ರ ಬೆಳಗ್ಗೆ 05:11 ಕ್ಕೆ
ದ್ವಾದಶಿ ತಿಥಿ ಆರಂಭ: ನವೆಂಬರ್ 26 ರಂದು ಬೆಳಗ್ಗೆ 05:00 ಗಂಟೆಯಯಿಂದ
ದ್ವಾದಶಿ ತಿಥಿಯ ಮುಕ್ತಾಯ: ನವೆಂಬರ್ 27 ರಂದು ಬೆಳಗ್ಗೆ 7 – 32.
ತುಳಸಿ ಪೂಜೆ ತಯಾರಿ
ತುಳಸಿ ಮದುವೆಗಾಗಿ, ಮುಂಜಾನೆ ಬೇಗ ಎದ್ದು, ಮೊದಲು ತುಳಸಿ ಕಟ್ಟೆಯನ್ನು ಮತ್ತು ಗಿಡವನ್ನು ಶುದ್ಧಗೊಳಿಸಿ.ತುಳಸಿ ಕಟ್ಟೆಯ ಮುಂದೆ ನೀರು ಅಥವಾ ಸಗಣಿ ನೀರನ್ನು ಹಾಕಿ, ನಂತರ ರಂಗೋಲಿಯನ್ನು ಬಿಡಿಸಿ.ನಂತರ ಅದರ ಸುತ್ತಲೂ ಕಬ್ಬಿನ ಮೇಲಾವರಣವನ್ನು ಮಾಡಿ.ತುಳಸಿಯ ಮೇಲೆ, ಕೆಂಪು, ಹಸಿರು ಮತ್ತು ಹಳದಿ ಬಣ್ಣದ ಬಟ್ಟೆಗಳನ್ನು ಸುಮಂಗಲಿಯ ಸಂಕೇತವಾಗಿ ಇರಿಸಿ.ಇದು ತುಳಸಿ ಸಸ್ಯದ ಮೇಲೆ ಚಳಿಗಾಲದ ಪರಿಣಾಮವನ್ನು ಕಡಿಮೆ ಮಾಡುತ್ತದೆ ಮತ್ತು ಅದು ಹಸಿರಾಗಿರುತ್ತದೆ.ನೀವು ಬಯಸಿದರೆ, ನೀವು ಸೀರೆ ಉಡಿಸಿ ವಧುವಿನಂತೆ ಅಲಂಕರಿಸಬಹುದು ಮತ್ತು ತುಳಸಿಗೆ ಆಭರಣಗಳನ್ನು ಕೂಡ ಹಾಕಿ ಅಲಂಕರಿಸಬಹುದು.ಒಡೆಯದ, ಬಿರುಕು ಬಿಡದ ಒಂದು ತೆಂಗಿನಕಾಯಿಯನ್ನು, ವೀಳ್ಯದೆಲೆ, ಅಡಿಕೆಯನ್ನು ತುಳಸಿಯ ಮೇಲಿಟ್ಟು, ತುಳಸಿಗೆ ಸಿಂಧೂರವನ್ನು ಹಚ್ಚಿ.ಇದರ ನಂತರ, ಶಾಲಿಗ್ರಾಮವನ್ನು ವಿಷ್ಣುವಾಗಿ ಒಂದು ಆಸನದ ಮೇಲೆ ಇರಿಸಿ.ನಂತರ ಮದುವೆಯ ಸಮಯದಲ್ಲಿ ನೀವು ವಧುವಿನ ಕೈಗೆ ಅರಿಶಿನವನ್ನು ಹಚ್ಚಿದಂತೆಯೇ ಅವರಿಬ್ಬರಿಗೂ ಅರಿಶಿನ ಹಚ್ಚಿ.ನಂತರ ತುಳಸಿ ಗಿಡದ ಸುತ್ತ ಏಳು ಸುತ್ತುಗಳನ್ನು ಹಾಕಿ ನಂತರ ಅವೆರಡನ್ನೂ ಆರತಿ ಮಾಡಿ ಮದುವೆ ಮಾಡಿ.ಕೊನೆಯದಾಗಿ ವಿವಾಹದಲ್ಲಿ ಹಾಡುವಂತಹ ಸೋಬಾನೆ ಹಾಡುಗಳನ್ನು ಹಾಡಿ.
ತುಲಸಿ ತ್ವಾಂ ನಮಾಮ್ಯಹಂ
ಯನ್ಮೂಲೇ ಸರ್ವತೀರ್ಥಾನಿ ಯನ್ಮಧ್ಯೇ ಸರ್ವ ದೇವತಾ: |ಯದಗ್ರೇ ಸರ್ವವೇದಾಶ್ಚ ತುಲಸಿ ತ್ವಾಂ ನಮಾಮ್ಯಹಂ |
ಎಲ್ಲಿ ತುಳಸಿಯ ವನವು ಅಲ್ಲೊಪ್ಪುವರು ಸಿರಿನಾರಾಯಣನು | ಪ |
ಗಂಗೆಯಮುನೆ ಗೋದಾವರಿ ಕಾವೇರಿ ಕಂಗೊಳಿಸುವ ಮಣಿಕರ್ಣಿಕೆಯು |
ತುಂಗಭದ್ರೆ ಕೃಷ್ಣವೇಣಿತೀರ್ಥಗಳೆಲ್ಲ ಸಂಗಡಿಸುತ ವ್ರುಕ್ಷಮೂಲದಲ್ಲಿರುವುವು | ೧ |
ಸರಸಿಜಭವ ಸುರಪ ಪಾವಕ ಚಂದಿರ ಸೂರ್ಯ ಮೊದಲಾದವರು |
ಸಿರಿರಮಣನ ಆಜ್ಞೆಯಲಿ ಅಗಲದಂತೆ ತರುಮದ್ಯದೊಳು ನಿತ್ಯನೆಲೆಸಿಪ್ಪರು | ೨ |
ಋಗ್ವೇದ ಯಜುರ್ವೇದ ಸಾಮ ಅಥರ್ವಣ ಅಗ್ಗಳಿಸಿ ವೇದ ಘೋಷಗಳು |
ಅಗ್ರಭಾಗದಲಿದೆ ಬೆಟ್ಟದೊಡೆಯನು ಅಲ್ಲಿ ಶೀಘ್ರದಿ ಒಲಿದ ಶ್ರೀಪುರಂದರವಿಠಲ | ೩ |
ದಾಸರು ತುಳಸಿಯ ಮೂಲದಲ್ಲಿ ಸಕಲ ತೀರ್ಥಾಭಿಮಾನಿಗಳಾದ ಗಂಗಾ, ಯುಮುನ, ಗೋದಾವರಿ, ಕಾವೇರಿ, ಮಣಿಕರ್ಣಿಕಾ, ತುಂಗ, ಭದ್ರಾ, ಕೃಷ್ಣವೇಣಿ, ಮುಂತಾದ ಸಕಲ ನದ್ಯಭಿಮಾನಿಗಳು ನೆಲೆಸಿರುವರು ಎಂದಿದ್ದಾರೆ. ಪ್ರತಿನಿತ್ಯ ತುಳಸಿ ಗಿಡದಮೂಲಕ್ಕೆ ಭಕ್ತಿಯಿಂದ ನೀರು ಉಣಿಸಿದಲ್ಲಿ ಸಕಲ ತೀರ್ಥಗಳ ದರ್ಶನ, ಸ್ನಾನ ಪುಣ್ಯ ಪ್ರಾಪ್ತಿಯಾಗುತ್ತದೆ.
ಎರಡನೇ ಪದ್ಯದಲ್ಲಿ ಬ್ರಹ್ಮದೇವರು (ಸರಸಿಜಭವ), ರುದ್ರ (ಭವ), ಇಂದ್ರ (ಸುರಪ), ಅಗ್ನಿ (ಪಾವಕ), ಸೂರ್ಯಚಂದ್ರರ ಸನ್ನಿಧಾನವಿದೆ. ಗಿಡದ ಮಧ್ಯದಿ ಸಕಲ ಭಗವಂತನ ಅನುಚರ ದೇವತೆಗಳು ಸನ್ನಿಹಿತರಾಗಿರುತ್ತಾರೆ ಎಂದಿದ್ದಾರೆ.
ಮೂರನೇ ನುಡಿಯಲ್ಲಿ ತುಳಸಿಯ ಅಗ್ರದಲ್ಲಿ ಋಗಾದಿ ಚತುರ್ವೇದಾಭಿಮಾನಿಗಳು ನಿತ್ಯವೂ ಶ್ರೀಹರಿಯ ಸ್ತುತಿಸುತಲಿಹರು, ಅಗ್ರಭಾಗದಲ್ಲಿ ಶ್ರೀಹರಿಯು ಸ್ವತ: ಲಕ್ಷ್ಮೀಸಹಿತನಾಗಿ ನೆಲೆಸಿಹನೆಂದಿದ್ದಾರೆ. ಹೀಗೆ ತುಳಸಿಯ ಪೂಜೆಯಿಂದ ಸಕಲ ಅಭೀಷ್ಟಗಳೂ ಪೂರೈಸುವುವು ಎಂಬುದು ತಾತ್ಪರ್ಯ.
ತುಳಸಿಯ ಮಹಾಮಹಿಮೆ
ಯಾ ದೃಷ್ಟಾ ನಿಖಿಲಾಘಸಂಘಶಮನೀ ಸ್ಪೃಷ್ಟ್ವಾ ವಪು: ಪಾವನೀ ರೋಗಾಣಾಂ ಅಭಿವಂದಿತಾ ನಿರಸನೀ ಸಿಕ್ತಾಂತಕತ್ರಾಸಿನೀ |
ಪ್ರತ್ಯಾಸತ್ತಿವಿಧಾಯಿನೀ ಭಗವತ: ಕೃಷ್ಣಸ್ಯ ಸಂರೋಪಿತಾನ್ಯಸ್ತಾ ತಚ್ಚರಣೇ ವಿಮುಕ್ತಿಫಲದಾ ತಸ್ಯೈ ತುಲಸ್ಯೈ ನಮ: ||
ತುಳಸಿಗೆ ನಮಸ್ಕರಿಸಬೇಕು – ಆ ತುಳಸಿಯು ಏನೇನು ಮಾಡತಕ್ಕಂತವಳು ಎಂಬುದನ್ನು ಈ ಶ್ಲೋಕ ಹೇಳುತ್ತದೆ –
ತನ್ನ ದರ್ಶನಮಾತ್ರದಿಂದ ಸಕಲಪಾಪಗಳ ಹಿಂಡನ್ನೇ ಪರಿಹರಿಸುತ್ತದೆ. ತನ್ನ ಸ್ಪರ್ಶನದಿಂದ ಇಡೀ ದೇಹವನ್ನೇ ಪಾವನಗೊಳಿಸುತ್ತದೆವಂದನೆ ಮಾತ್ರದಿಂದ ಸಕಲರೋಗಗಳನ್ನೂ ಗುಣಪದಿಸುತ್ತದೆಪ್ರೋಕ್ಷಣದಿಂದ ಯಮನ ಭಯವನ್ನು ಪರಿಹರಿಸುತ್ತದೆಮನೆಯಲ್ಲಿ ಬೆಳೆಸುವುದರಿಂದ ಭಗವಂತನಾದ ಶ್ರೀ ಕೃಷ್ಣನಲ್ಲಿ ಭಕ್ತಿಯನ್ನು ಕರುಣಿಸುತ್ತದೆತುಳಸಿಯನ್ನು ಪರಮಾತ್ಮನ ಪಾದಕಮಲದಲ್ಲಿ ಸಮರ್ಪಣದಿಂದ ಮುಕ್ತಿ ಫಲವನ್ನು ನೀಡುತ್ತದೆ.
ತುಳಸಿಯನ್ನು ಕೀಳಬಾರದ ದಿನಗಳು
ಕವಿ ಮಂಗಳವಅದ ವೈಧೃತಿ ವ್ಯತೀಪಾತ
ರವಿಶಶಿಯ ಸಂಗಮ ಪರ್ವಣಿ ಪುಣ್ಯಕಾಲ
ದಿವಸ ದ್ವಾದಶಿ ಶ್ರೇಷ್ಠ ಉಪರಾಗ
ಪಿತೃಶ್ರಾದ್ಧ ಇವುಗಳಲಿ ತೆಗೆಯದಿರಿ |
ನವವಸನ ಪೊದ್ದು ಊಟವ ಮಾಡಿ ತಂಬೂಲ
ಸವಿಯುತ್ತ ಮುಟ್ಟದಿರಿ ಯುವತಿ ಶ್ರೂದ್ರರಿಂ ತರಿ-
ಸುವುದುಚಿತವಲ್ಲವೆಂದು ತಿಳಿದು ಕೊಂಡಾಡುತಿರು
ದಿವಸ ದಿವಸಗಳೊಳಯ್ಯ
ತುಳಸಿಯ ಜನನ
ಸುಧೆಗಡಲ ಮಥಿಸುವ ಸಮಯದಿ ವೈದ್ಯನಾಗಿ ಪದುಮನಾಭನು ತಾನು ಉದ್ಭವಿಸಿ ಬರಲಂದು ಉದುರಿದವು ಕಣ್ಣಿಂದ ಉದವುತ್ಸಹದಿಂದಲದೆ ತುಳಸಿನಾಮವಾಗೆ| ತ್ರಿದಶರೊಂದಿಸುತ ಮೋದದಿಂ ಕೊಂಡಾಡಿದರು .
ಒದಗಿ ಸುಜನರು ತಮ್ಮ ಸದನದಿ ನಿತ್ಯ ಸತ್ಪದವಿದೆ ಸಿದ್ದವೆಂದು ಮುದದಿಂ ತಿಳಿದು ವೃಂದಾವನವ ರಚಿಸಿದರೈಯ್ಯಾ |
ಹಿಂದೆ ಅಮೃತಪ್ರಾಪ್ತಿಗಾಗಿ ದೇವದಾನವರು ಕ್ಷೀರಸಮುದ್ರದಲಿ ಮಂದರಪರ್ವತವನ್ನು ಕಡುಗೋಲಾಗಿಯೂ, ವಾಸುಕಿಯನ್ನು ಹಗ್ಗವನ್ನಾಗಿಯೂ, ಮಾಡಿಕೊಂಡು ಶ್ರೀಹರಿಯ ಅದ್ಭುತ ಮಹಿಮೆಯ ಸಹಾಯದಿಂದ ಸಮುದ್ರಮಥನ ಮಾಡಿದರು. ಆಗ ಅಮೃತಕಲಶವನ್ನು ಹಿಡಿದುಕೊಂಡು ಶ್ರೀಹರಿಯು ವೈದ್ಯರೂಪನಾಗಿ ಸಮುದ್ರಮಧ್ಯದಿಂದ ಧನ್ವಂತರೀರೂಪದಿಂದ ಅವತರಿಸಿದನು. ಆ ದಿನ ಕಾರ್ತಿಕ ಹುಣ್ಣಿಮೆಯಾಗಿತ್ತು. ತಕ್ಷಣ ಅವನ ಕಣ್ಣಿಂದ ಆನಂದಾಶ್ರುವಿನ ಹನಿಗಳು ಅಮೃತಕಲಶದಲ್ಲಿ, ಬೀಳಲು ತುಳಸಿಯ ಜನನವಾಯ್ತು.
ತುಳಸೀ ಕಟ್ಟೆಯಲ್ಲಿ ವಿಷ್ಣು ಸ್ವರೂಪವಾದ ನೆಲ್ಲಿ ಕೊಂಬೆಯನ್ನು ನೆಟ್ಟು “ತುಲಸೀ ಪೂಜೆ” ಮಾಡುವ ಸಂಪ್ರದಾಯ ಎಲ್ಲಕಡೆಗಳಲ್ಲಿದೆ.ಆಷಾಢ ಶುದ್ಧ ಏಕಾದಶಿಯ “ಶಯನೈಕಾದಶಿ” ಯಂದು ಮಲಗಿದ ಮಹಾವಿಷ್ಣುವು ಇಂದು ಏಳುತ್ತಾನೆ.ಆದ್ದರಿಂದ ಇದಕ್ಕೆ “ಉತ್ಥಾನ (ಏಳುವುದು) ದ್ವಾದಶಿ” ಎಂದು ಹೇಳುತ್ತಾರೆ.
ಉತ್ಥಾನ ದ್ವಾದಶಿ ತುಲಸೀ ವಿವಾಹ
ವಿಷ್ಣುವಿನ ಯೋಗನಿದ್ರಾಕಾಲದ ಆಷಾಢ ಶುದ್ಧ ದ್ವಾದಶಿಯಿಂದ,ಕಾರ್ತೀಕ ಶುದ್ಧ ದ್ವಾದಶಿವರೆಗಿನ ಈ ನಾಲ್ಕು ತಿಂಗಳು ಮದುವೆ ಮುಂತಾದ ಶುಭಕಾರ್ಯಗಳನ್ನು ಮಾಡುವುದಿಲ್ಲ.ಉತ್ತರ ಕರ್ನಾಟಕ ಮತ್ತು ಕರಾವಳಿಯಲ್ಲಿ ಈಗಲೂ ಇದು ಚಾಲ್ತಿಯಲ್ಲಿದೆ.ತುಲನೆ ಇಲ್ಲದ ಸಸ್ಯವಾದ್ದರಿಂದ ತುಲಸೀ ಎಂಬ ಹೆಸರು ಬಂದಿದೆ.ಅಮೃತ ಮಂಥನದಲ್ಲಿ ವಿಷ್ಣುವು ಅಮೃತಕಲಶವನ್ನು ನೋಡಿದಾಗ ಅವನ ಕಂಗಳಿಂದ ಹೊರಟ ಆನಂದಾಶ್ರುವು ಅದರಲ್ಲಿ ಬಿದ್ದು ಲಕ್ಷ್ಮಿಯೇ ಸಸ್ಯವಾಗಿ ಉದ್ಭವಿಸಿದ ಗಿಡ ತುಲಸಿ.ಕೃಷ್ಣನ ತುಲಾಭಾರದಲ್ಲಿ ಎಷ್ಟು ರತ್ನ ವಜ್ರ ವೈಢೂರ್ಯಾದಿಗಳಿಂದಲೂ ಮೇಲೇರದ ತಕ್ಕಡಿಗೆ ರುಕ್ಮಿಣಿ ಹಾಕಿದ ಒಂದು ತುಳಸೀದಳದಿಂದ ಅದು ಮೇಲೇರಿತು.ಇದು ತುಳಸಿಯ ಶಕ್ತಿ.ಉತ್ಥಾನ ದ್ವಾದಶಿಯಂದು ವಿಷ್ಣು ಲಕ್ಷ್ಮಿಯೊಂದಿಗೆ ತುಲಸಿಯನ್ನು ವಿವಾಹವಾದನು.
ಜಲಂಧರಾಸುರನು ಕಂಟಕನಾಗಿ ಅವನ ಪತ್ನಿಯ ಪಾತಿವ್ರತ್ಯ ಪ್ರಭಾವದಿಂದ ಸಂಹರಿಲಾಗದಿದ್ದಾಗ ವಿಷ್ಣುವು ಜಲಂಧರನ ರೂಪಧರಿಸಿ ಅವನ ಪತ್ನಿ ವೃಂದಾಳ ಪಾತಿವ್ರತ್ಯ ಭಂಗ ಮಾಡಿದ ನಂತರ ಜಲಂಧರನ ಸಂಹಾರ ಸಾಧ್ಯವಾಯಿತು.ಬೃಂದಾಳ ಪಾತಿವ್ರತ್ಯವನ್ನು ಜಲಂಧರನ ರೂಪಧರಿಸಿ ಮೋಸದಿಂದ ಭಂಗ ಮಾಡಿ,ಅವಳೊಂದಿಗೆ ಸುಖಿಸಿ ಶೀಲಹರಣ ಮಾಡಿದ್ದರಿಂದ ಕುಪಿತಳಾದ ಬೃಂದೆಯು,*ನನಗೆ ಪತಿಯೊಂದಿಗೆ ಸಮಾಗಮಕ್ಕೆ ಅನರ್ಹಳಾಗುವಂತೆ ಮಾಡಿ ಪತಿ ಸಂಗಮ ಸುಖ ವಂಚಿತಳಾಗಿಸಿದ ನಿನಗೂ ಬಹಳ ಕಾಲ ಪತ್ನಿಯಿಂದ ವಿಯೋಗವಾಗಲಿ” ಎಂದು ವಿಷ್ಣುವಿಗೆ ಶಾಪವಿತ್ತಳು.ಬೃಂದಾಳಿಗೆ (ವೃಂದಾ) ವಿಷ್ಣುವು “ನೀನು ಪತಿವ್ರತೆ.ಪವಿತ್ರ ತುಳಸಿಯಾಗಿ ಪೂಜೆಗೊಳ್ಳು” ಎಂದು ವರವನ್ನಿತ್ತನು.ಇದರ ಕುರುಹಾಗಿ ತುಲಸಿಕಟ್ಟೆಗೆ ಬೃಂದಾವನ ಎಂಬ ಹೆಸರು,ಮತ್ತು ವಿಷ್ಣುಸ್ವರೂಪದ ನೆಲ್ಲಿಕೊಂಬೆಯನ್ನು ತುಲಸಿ ಗಿಡದೊಂದಿಗಿಟ್ಟು ಅಲಂಕರಿಸಿ ದೀಪಗಳನ್ನು ಹಚ್ಚಿ ತುಲಸೀ ವಿವಾಹ ಮಾಡಿ ನಾವು ಆಚರಿಸುತ್ತೇವೆ.ಅಂದಿನವರೆಗೆ ನೆಲ್ಲಿಕಾಯಿಯನ್ನು ಯಾರೂ ತಿನ್ನುವುದಿಲ್ಲ.ಮನೆಗೆ ತರುವುದಿಲ್ಲ.ಅಲ್ಲಿಯವರೆಗೆನೆಲ್ಲಿಕಾಯಿಗೆ ಅಶೌಚ.ಆ ದಿನ ತುಳಸಿಯೊಂದಿಗಿಟ್ಟು ಪೂಜಿಸಿದ ನಂತರ ಶುದ್ಧವೆಂದು ಕಿತ್ತು ಉಪಯೋಗಿಸುತ್ತಾರೆ.
ತುಲಸಿಯು ಔಷಧೀಯ ಸಸ್ಯ
ಜಲಮಾಲಿನ್ಯ,ಅರ್ಬುದ,ಕೆಮ್ಮು,ಬೊಜ್ಜು,ಮರೆವು,ಮಧುಮೇಹ,ರಕ್ತದ ಏರೊತ್ತಡ,ಸೊರಿಯಾಸಿಸ್,ಖಿನ್ನತೆ ಚರ್ಮರೋಗಗಳಿಗೆ ತುಲಸಿಯು ದಿವ್ಯೌಷಧ.
ತುಳಸಿಯಲ್ಲಿ ಬಿಳಿ ಮತ್ತು ಕರಿ_ತುಳಸಿ ಎಂದು ಎರಡು ಪ್ರಭೇದಗಳಿವೆ.ರಾಮತುಳಸಿ,ಕೃಷ್ಣತುಳಸಿ ಎಂಬ ಹೆಸರುಗಳೂ ಇವೆ.ಔಷಧೀಯ ಗುಣ ಎರಡಲ್ಲೂ ಒಂದೇ ರೀತಿ ಇದೆ.ಸುಮಂಗಲಿಯರು ಪ್ರತಿದಿನ ತುಳಸಿ ಪೂಜೆ ಮಾಡುತ್ತಾರೆ.ಶಾಲಗ್ರಾಮ ಮತ್ತು ಶಂಖದ ಮೇಲೆ ತಪ್ಪದೆ ತುಳಸಿಯ ಕುಡಿ ಇರಲೇ ಬೇಕು ಎಂದು ಶಾಸ್ತ್ರಗಳು ಸಾರಿವೆ.ತುಳಸೀದಳ ಮಿಶ್ರಿತ ತೀರ್ಥ ಸೇವನೆಯು ರೋಗ ನಿರೋಧಕ ಶಕ್ತಿಯನ್ನು ವರ್ಧಿಸುತ್ತದೆಂದು ವೈಜ್ಞಾನಿಕವಾಗಿಯೂ ಸಾಬೀತಾಗಿದೆ.ಕ್ಷೀರ ಸಮುದ್ರವನ್ನು ದೇವ-ದಾನವರು ಅಮೃತಕ್ಕಾಗಿ ಕಡೆದಾಗ ಅಮೃತೋದ್ಭವವಾದ ದಿನವೂ “ಉತ್ಥಾನದ್ವಾದಶಿ” ಯ ದಿನ.ಹಾಗಾಗಿ ಮಥನದ್ವಾದಶಿ,ಕ್ಷೀರಾಬ್ಧಿವ್ರತ” ಎಂಬ ವ್ರತಾಚರಣೆಯೂ ಇಂದು ಆಚರಿಸುತ್ತಾರೆ.
ನಮಸ್ತುಲಸಿ ಕಲ್ಯಾಣೀನಮೋ ವಿಷ್ಣುಪ್ರಿಯೇ ಶುಭೇ |ನಮೋ ಮೋಕ್ಷಪ್ರದೇ ದೇವೀನಮಃ ಸಂಪತ್ಪ್ರದಾಯಿನೀ ||
ತುಲಸಿಯ ಬಗ್ಗೆ ಇನ್ನೊಂದು ಕತೆ ಇದೆ
ಹಂಸಧ್ವಜನ ಮಗ ಧರ್ಮಧ್ವಜನಿಂದ ಅವನ ಪತ್ನಿ ಮಾಧವಿಯಲ್ಲಿ ಲಕ್ಷ್ಮಿಯ ಅಂಶದಿಂದ ಜನಿಸಿದವಳು ತುಲಸೀ.ಈಕೆಯು ಬಾಲ್ಯದಲ್ಲಿಯೇ ಬದರಿಕಾಶ್ರಮದಲ್ಲಿ ತಪಸ್ಸು ಮಾಡಿ, ಬ್ರಹ್ಮನಿಂದ “ವಿಷ್ಣು ತನಗೆ ಪತಿಯಾಗಬೇಕೆಂದು” ವರ ಬೇಡಿದಳು.ಬ್ರಹ್ಮನು “ನಿನ್ನ ಕೋರಿಕೆ ಈಡೇರುತ್ತದೆ.ಆದರೆ ನೀನು ಗಿಡವಾಗುವೆ” ಎಂದನು.ದಂಭಾಸುರನ ಮಗ ಶಂಖಚೂಡನು ಜೈಗೀಷವ್ಯ ಮುನಿಯಿಂದ ವಿಷ್ಣು ಮಂತ್ರೋಪದೇಶಪಡೆದು,ಪುಷ್ಕರ ಕ್ಷೇತ್ರದಲ್ಲಿ ತಪಸ್ಸು ಮಾಡಿ ಸಿದ್ಧಿಯನ್ನು ಪಡೆದಿದ್ದನು.ಅಕಸ್ಮಾತ್ತಾಗಿ ಇವರಿಬ್ಬರೂ ಸಂಧಿಸಿ ಮಾತನಾಡುತ್ತಿರುವಾಗ ಅಲ್ಲಿಗೆ ಬಂದ ನಾರದರು “ನಿನಗೆ ಶಂಖಚೂಡ,ಅವನಿಗೆ ನೀನು ಅನುರೂಪ ವಧು-ವರರು” ಮದುವೆಯಾಗಿರಿ ಎಂದರು.ಅವರ ಮಾತಿನಂತೆ ಅವರಿಬ್ಬರೂ ವಿವಾಹವಾದರು.ಕೆಲಕಾಲದ ಬಳಿಕ ಶಂಖಚೂಡನು ದೇವತೆಗಳೊಂದಿಗಿನ ಯುದ್ಧದಲ್ಲಿ ಮಡಿದನು.ವಿಷ್ಣುವು ಶಂಖಚೂಡನ ರೂಪದಲ್ಲಿ ಬಂದು “ನಾನು ದೇವತೆಗಳನ್ನು ಗೆದ್ದು ಬಂದೆನೆಂದಾಗ ಸಂತೋಷದಿಂದ ಅವನನ್ನುಪಚರಿಸಿ, ಸಮಾಗಮ ಹೊಂದಿದಾಗ,ಕೆಲವು ಕುರುಹುಗಳಿಂದ ಅವನು ಶಂಖಚೂಡನಲ್ಲವೆಂದು ತಿಳಿದು ದೂರ ಸರಿದು ನಿಂತಳು.ವಿಷ್ಣು ತನ್ನ ನಿಜರೂಪ ತೋರಿಸಿ ತಾನೇ ಶಂಖಚೂಡ,ತುಲಸಿಯನ್ನು ವಿವಾಹವಾಗಲು ತಪಸ್ಸು ಮಾಡಿದ್ದೆ ಎಂದಾಗ ಶಂಖಚೂಡ ಮಡಿದ ಸುದ್ದಿ ಕೇಳಿ ತಾನು ಗಿಡವಾದಳು.ದುರ್ವಾಸನ ಶಾಪದಿಂದ ಪದಭ್ರಷ್ಟನಾದ ಇಂದ್ರನು ದೇವ-ದಾನವರನ್ನು ಸೇರಿಸಿ ಕ್ಷೀರಸಮುದ್ರ ಕಡೆದಾಗ ಅಮೃತ ಕಲಶ ಬಂದಿತು.ವಿಷ್ಣು ಅದನ್ನೆತ್ತಿಕೊಂಡಾಗ ಅವನ ಕಣ್ಣುಗಳಿಂದ ಹೊರಬಿದ್ದ ಆನಂದಬಾಷ್ಪಗಳು ಕಲಶದಲ್ಲಿ ಬಿದ್ದು ಒಂದು ಸಣ್ಣ ಗಿಡ ಹುಟ್ಟಿತು.ಇದಕ್ಕೆ ತುಲನೆ ( ಹೋಲಿಕೆ ) ಇಲ್ಲವಾಗಿ ತುಲಸಿ ಎಂದು ಹೆಸರಿಟ್ಟು ಲಕ್ಷ್ಮಿಯೊಂದಿಗೆ ತುಲಸಿಯನ್ನು ವಿಷ್ಣುವನ್ನು ಮದುವೆಯಾದನು.
ಶ್ರೀ ತುಳಸಿ ಪೂಜಾ ವಿಧಾನ
ಶ್ರೀ ತುಳಸಿ ವೃಂದಾವನದ ಸುತ್ತಲೂ ಚೆನ್ನಾಗಿ ಗೋಮಯದಿಂದ ಸಾರಿಸಿ ರಂಗೋಲಿ ಹಾಕಿ.
|| ಶ್ರೀಯಃ ಪ್ರಿಯೇ ಶ್ರಿಯಾವಾಸೇ ನಿತ್ಯಂ ಶ್ರೀಧರವಲ್ಲಭೇ ||
|| ಭಕ್ತ್ಯಾ ದತ್ತಂ ಮಯಾರ್ಘ್ಯಂ ಹಿ ತುಳಸಿ ಪ್ರತಿಗ್ರಹ್ಯತಾಮ್ ||
ಮೇಲಿನ ಮಂತ್ರ ಹೇಳುತ್ತಾ ತುಳಸಿಗೆ ಅಭಿಷೇಕ ಮಾಡಿ.ನಂತರ ಅರಶಿನ ಕುಂಕುಮ ಹೂವುಗಳಿಂದ ಪೂಜೆ ಮಾಡಿ.
|| ಯನ್ಮೂಲೇ ಸರ್ವತೀರ್ಥಾನಿ ಯನ್ಮಧ್ಯೇ ಸರ್ವದೇವತಾಃ ಯದಗ್ರೇ ಸರ್ವವೇದಾಸ್ಚ ತುಳಸೀ ತ್ವಾಂ ನಮಾಮ್ಯಹಂ ||
|| ತುಳಸಿ ಶ್ರೀಸಖಿ ಶುಭೆ ಪಾಪಹಾರಿಣಿ ಪುಣ್ಯದೇ||
|| ನಮಸ್ತೇ ನಾರದನುತೇ ನಾರಾಯಣಮನಃ ಪ್ರಿಯೇ ||
ಮೇಲಿನ ಮಂತ್ರ ಹೇಳಿ ನಮಸ್ಕರಿಸಿ.ಶ್ರೀ ತುಳಸಿ ಪ್ರಾರ್ಥನೆ
ನಮಸ್ತುಳಸಿ ಕಲ್ಯಾಣಿ ನಮೋ ವಿಷ್ಣು ಪ್ರಿಯೇ ಶುಭೆ |ನಮೋ ಮೋಕ್ಷ ಪ್ರದಾಯಿಕೆ ದೇವೀ ನಮಃ ಸಂಪತ್ಪ್ರದಾಯಿಕೆ ||
ಶ್ರೀ ತುಳಸಿ ಧ್ಯಾನ
ಧ್ಯಾಯೇಸ್ಚ ತುಳಸಿಂ ದೇವೀಂ ಶ್ಯಾಮಂ ಕಮಲ ಲೋಚನಮ್ |ಪ್ರಸನ್ನಂ ಪದ್ಮಕಲ್ಹಾರ ವರದಾಭಯ ಚತುರ್ಭುಜಮ್ ||
ಕಿರೀಟ ಹಾರ ಕೇಯೂರ ಕುಂಡಲಾದಿ ವಿಭೂಶಿತಾಮ್ |ಧವಲಾಂಕುಶ ಸಂಯುಕ್ತಾಂ ನಿಶಿದುಶೀಮ್ ||
ಶ್ರೀ ತುಳಸಿ ಪ್ರಣಾಮ
ವೃಂದಾಯೈ ತುಳಸಿ ದೇವ್ಯೈಪ್ರಿಯಾಯೈ ಕೇಶವಸ್ಯ ಚಕೃಷ್ಣ ಭಕ್ತಿ ಪರದೆ ದೇವಿಸತ್ಯವತ್ಯೈ ನಮೋ ನಮಃ
ಶ್ರೀ ತುಳಸಿ ಪ್ರದಕ್ಷಿಣ ಮಂತ್ರ
ಯಾನಿ ಕಾನಿ ಚಪಾಪಾನಿಬ್ರಹ್ಮ ಹತ್ಯಾದಿಕಾನಿ ಚತಾನಿ ತಾನಿ ಪ್ರನಶ್ಯಂತಿಪ್ರದಕ್ಷಿಣಃ ಪದೇ ಪದೇ
ಶ್ರೀ ತುಳಸಿ ನಮಸ್ಕಾರ
ಯನ್ಮೂಲೇ ಸರ್ವ ತೀರ್ಥಾನಿ ಯನ್ಮಧ್ಯೆ ಸರ್ವದೇವತಾಃ |ಯದಗ್ರೇ ಸರ್ವವೇದಾಸ್ಚ ತುಳಸಿ ತ್ವಾಂ ನಮಾಮ್ಯಹಂ ||
ಪ್ರಸೀದ ತುಳಸೀ ದೇವಿ ಪ್ರಸೀದ ಹರಿವಲ್ಲಭೇ |ಕ್ಷೀರೋದ ಮಥನೊದ್ಭೋತೇ ತುಳಸಿ ತ್ವಾಂ ನಮಾಮ್ಯಹಂ ||
ಅಷ್ಟ ನಾಮ ಸ್ತವ (ಪದ್ಮ ಪುರಾಣದಿಂದ)
|| ವೃಂದಾವನಿ, ವೃಂದ, ವಿಶ್ವಪೂಜಿತಾ, ಪುಷ್ಪಸಾರ, ನಂದಿನಿ, ಕೃಷ್ಣ ಜೀವನಿ, ವಿಶ್ವ ಪಾವನಿ, ತುಳಸಿ ||
ಶ್ರೀ ತುಳಸಿ ಪೂಜೆ ಮಾಡುವಾಗ ಶ್ರೀ ತುಳಸಿ ದೇವಿಯ ಈ ಎಂಟು ನಾಮಗಳನ್ನು ಹೇಳಿದರೆ ಅಶ್ವಮೇಧದ ಫಲ ಬರುತ್ತದೆ. ಶ್ರೀ ತುಳಸಿ ದೇವಿಯ ಜನ್ಮದಿನವಾದ ಹುಣ್ಣಿಮೆಯಂದು ಈ ಎಂಟು ನಾಮಗಳಿಂದ ಪೂಜಿಸಿದರೆ ಜೀವನ್ಮ್ರುತ್ಯು ಮತ್ತು ಎಲ್ಲಾ ಬಂಧನಗಳಿಂದ ಮುಕ್ತರಾಗಿ ವೃಂದಾವನ ಸೇರುತ್ತಾರೆ. ಈ ಹೆಸರುಗಳನ್ನು ಹೇಳುವುದರಿಂದ ಕೃಷ್ಣನ ಕ್ರಪೆಗೆ ಪಾತ್ರರಾಗುತ್ತಾರೆ.
ತುಲಸೀ ಪ್ರದಕ್ಷಿಣೆ ಮಾಡುವಾಗ ಹೇಳಬೇಕಾದ ಮಂತ್ರ
ತುಲಸೀಲಾನನಂ ಯತ್ರ’ ಯತ್ರ ಪದ್ಮವನಾನಿ ಚ |ವಸಂತಿ ವೈಷ್ಣವಾ ಯತ್ರ ತತ್ರ ಸನ್ನಿಹಿತೋ ಹರಿ: |
ಪುಷ್ಕರಾದ್ಯಾನಿ ತೀರ್ಥಾನಿ ಗಂಗಾದ್ಯಾ: ಸರಿತಸ್ತಥಾ |ವಾಸುದೇವಾದಯೋ ದೇವಾ ವಸಂತಿ ತುಲಸೀವನೇ |
ಪ್ರಸೀದ ತುಲಸೀದೇವಿ ಪ್ರಸೀದ ಹರಿವಲ್ಲಭೇ |ಕ್ಷೀರೋದ ಮಥನೋದ್ಭೂತೇ ತುಲಸಿ ತ್ವಾಂ ನಮಾಮ್ಯಹಂ |
ತುಳಸಿ ವಿವಾಹದ ಕಥೆ
ಜಲಂಧರ ಎಂಬ ರಾಕ್ಷಸನನ್ನು ಅಂತ್ಯಗೊಳಿಸುವ ಸಲುವಾಗಿ ವಿಷ್ಣು ವೃಂದಾ ಸತಿತ್ವವನ್ನು ಅಂದರೆ ಆಕೆಯ ಮಾನವನ್ನು ತೆಗೆದಿದ್ದನು ಎಂದು ದಂತಕಥೆಗಳು ಹೇಳುತ್ತದೆ. ವೃಂದಾ ವಿಷ್ಣುವಿನ ಪರಮ ಭಕ್ತೆ. ವೃಂದಾ ಅವರ ದೃಢತೆ ಮತ್ತು ಸದ್ಗುಣದಿಂದಾಗಿ ಸಾಕಷ್ಟು ಶಕ್ತಿಶಾಲಿಯಾಗಿದ್ದರು. ವೃಂದಾ ಜಲಂಧರನನ್ನು ಮದುವೆಯಾದರು ಮತ್ತು ವೃಂದಾ ಅವಳ ತಪಸ್ಸಿನಿಂದ ಸಾಕಷ್ಟು ಶಕ್ತಿಶಾಲಿಯಾದಳು, ಇದು ದೇವತೆಗಳಿಗೆ ತೊಂದರೆಯಾಯಿತು. ಜಲಂಧರ ತನ್ನ ಅಧಿಕಾರದ ಬಗ್ಗೆ ಅತಿಯಾದ ದುರಾಂಹಕಾರವನ್ನು ಹೊಂದಿದನು. ಜಲಂಧರನು ಪಾರ್ವತಿಯ ಮೇಲೂ ಕೂಡ ತನ್ನ ಕೆಟ್ಟ ನೋಟವನ್ನು ಬೀರಿದ್ದನು.
ವೃಂದಾ ವಿಷ್ಣುವಿಗೆ ಶಾಪವನ್ನು ನೀಡಿದಳು
ಜಲಂಧರನಿಂದ ವಿಚಲಿತರಾದ ಎಲ್ಲಾ ದೇವರುಗಳು ಭಗವಾನ್ ವಿಷ್ಣುವನ್ನು ತಲುಪಿ ಅವರ ಸಮಸ್ಯೆಗಳ ಬಗ್ಗೆ ಅರಿವು ಮೂಡಿಸಿದರು. ಆಗ ದೇವರುಗಳು ಒಗ್ಗೂಡಿ, ಜಲಂಧರ ಕೊನೆಗೊಳ್ಳಬೇಕಾದರೆ ವೃಂದಾಳ ಶಕ್ತಿಯನ್ನು ಕೊನೆಗೊಳಿಸಬೇಕೆಂದು ತೀರ್ಮಾನ ಮಾಡಿದರು. ನಂತರ ಭಗವಾನ್ ವಿಷ್ಣು, ಜಲಂಧರ ರೂಪವನ್ನು ತೆಗೆದುಕೊಂಡು ತನ್ನ ಭಕ್ತ ವೃಂದಾಳ ಸತಿತ್ವವನ್ನು ವಂಚನೆಯಿಂದ ಮರೆಮಾಚಿದನು, ನಂತರ ಜಲಂಧರನನ್ನು ದೇವರುಗಳು ನಾಶ ಮಾಡಲು ಸಾಧ್ಯವಾಯಿತು. ಇದರ ಸತ್ಯತೆಯನ್ನು ತಿಳಿದ ವೃಂದಾ ವಿಷ್ಣುವಿಗೆ ನೀನು ಕಲ್ಲಾಗು ಎಂದು ಶಾಪವನ್ನು ನೀಡಿದಳು.
ಭಗವಾನ್ ವಿಷ್ಣು ಶಾಲಿಗ್ರಾಮನಾದದ್ದು ಹೇಗೆ..?
ಈ ಶಾಪದಿಂದ ವಿಷ್ಣು ಕಪ್ಪು ಕಲ್ಲಾಗಿ ಮಾರ್ಪಟ್ಟನು ಮತ್ತು ಅದೇ ಕಲ್ಲನ್ನು ಶಾಲಿಗ್ರಾಮ ಎಂದು ಕರೆಯಲಾಯಿತು. ಇದು ಇಡೀ ವಿಶ್ವದಲ್ಲಿ ಪ್ರಳಯದ ಸ್ಥಿತಿಗೆ ಕಾರಣವಾಯಿತು. ಆಗ ದೇವರು ಮತ್ತು ತಾಯಿ ಲಕ್ಷ್ಮಿ ವೃಂದಾಳನ್ನು ಕೋರಿದರು. ವೃಂದಾ ವಿಷ್ಣುವನ್ನು ಶಾಪದಿಂದ ಮುಕ್ತಗೊಳಿಸಿ ತಾನು ಅಗ್ನಿಗೆ ಹಾರಿ ಪ್ರಾಣವನ್ನು ತ್ಯಜಿಸುತ್ತಾಳೆ. ವೃಂದಾ ದೇವಿಯು ತನ್ನ ಬೂದಿಯ ಮೇಲೆ ತುಳಸಿಯಾಗಿ ಕಾಣಿಸಿಕೊಂಡಳು. ಆಗ ಭಗವಾನ್ ವಿಷ್ಣು ನಾನು ನಿನ್ನನ್ನು ಯಾವಾಗಲೂ ನನ್ನ ತಲೆಯ ಮೇಲೆ ಧರಿಸುತ್ತೇನೆ ಮತ್ತು ಲಕ್ಷ್ಮಿ ದೇವಿಯಂತೆ ನೀನು ಯಾವಾಗಲೂ ನನ್ನ ಪ್ರೀತಿ ಪಾತ್ರಳಾಗಿರುತ್ತೀಯ ಮತ್ತು ನೀನಿಲ್ಲದೇ ನಾನು ಏನನ್ನು ಸ್ವೀಕರಿಸುವುದಿಲ್ಲವೆಂದು ಹೇಳುತ್ತಾನೆ.
ಈ ಘಟನೆಯ ನಂತರ, ವಿಷ್ಣು ನಾಲ್ಕು ತಿಂಗಳ ನಿದ್ರೆಯಿಂದ ಎಚ್ಚರಗೊಂಡಾಗ ತುಳಸಿಯೊಂದಿಗೆ ಮದುವೆ ನಡೆಯಿತು. ಈ ದಿನವನ್ನೇ ದೇವ ಉತ್ಥಾನ ದ್ವಾದಶಿ ಎಂದು ಕರೆಯಲಾಗುತ್ತದೆ. ಕಾರ್ತಿಕ ತಿಂಗಳ ಶುಕ್ಲ ಪಕ್ಷದ ದ್ವಾದಶಿ , ತುಳಸಿ ಮತ್ತು ಶಾಲಿಗ್ರಾಮದಲ್ಲಿ ಭಕ್ತನು ಏನೇ ಬಯಸಿದರೂ ಅವರ ಎಲ್ಲಾ ಆಶಯಗಳು ಈಡೇರುತ್ತವೆ ಎಂದು ಧರ್ಮಗ್ರಂಥಗಳಲ್ಲಿ ತಿಳಿಸಲಾಗಿದೆ. ವಿಷ್ಣು ಮತ್ತು ಮಹಾಲಕ್ಷ್ಮಿ ಅವರ ಸಾಂಕೇತಿಕ ವಿವಾಹದಂತೆಯೇ ಶಾಲಿಗ್ರಾಮ ಮತ್ತು ತುಳಸಿಯ ವಿವಾಹವನ್ನು ಆಚರಿಸಲಾಗುತ್ತದೆ.
ಶ್ರೀತುಲಸೀ ಮಾಹಾತ್ಮ್ಯಮ್ ಸ್ತೋತ್ರಂ
ಪಾಪಾನಿ ಯಾನಿ ರವಿಸೂನುಪಟಸ್ಥಿತಾನಿಗೋಬ್ರಹ್ಮಬಾಲಪಿತೃಮಾತೃವಧಾದಿಕಾನಿ |
ನಶ್ಯಂತಿ ತಾನಿ ತುಲಸೀವನದರ್ಶನೇನಗೋಕೋಟಿದಾನಸದೃಶಂ ಫಲಮಾಪ್ನುವಂತಿ || ೧ ||
ಪುಷ್ಕರಾದ್ಯಾನಿ ತೀರ್ಥಾನಿ ಗಂಗಾದ್ಯಾಃ ಸರಿತಸ್ಥತಾ |ವಾಸುದೇವಾದಯೋ ದೇವಾ ವಸಂತಿ ತುಲಸೀವನೇ || ೨ ||
ತುಲಸೀಕಾನನಂ ಯತ್ರ ಯತ್ರ ಪದ್ಮವನಾನಿ ಚ |ವಸಂತಿ ವೈಷ್ಣವಾ ಯತ್ರ ತತ್ರ ಸನ್ನಿಹಿತೋ ಹರಿಃ || ೩ ||
ಯನ್ಮೂಲೇ ಸರ್ವತೀರ್ಥಾನಿ ಯನ್ಮಧ್ಯೇ ಸರ್ವದೇವತಾಃ |ಯದಗ್ರೇ ಸರ್ವವೇದಾಶ್ಚ ತುಲಸಿ ತ್ವಾಂ ನಮಾಮ್ಯಹಮ್ || ೪ ||
ತುಲಸಿ ಶ್ರೀಸಖಿ ಶುಭೇ ಪಾಪಹಾರಿಣಿ ಪುಣ್ಯದೇ |ನಮಸ್ತೇ ನಾರದನುತೇ ನಾರಾಯಣಮನಃಪ್ರಿಯೇ || ೫ ||
ರಾಜದ್ವಾರೇ ಸಭಾಮಧ್ಯೇ ಸಂಗ್ರಾಮೇ ಶತ್ರುಪೀಡನೇ |ತುಲಸೀಸ್ಮರಣಂ ಕುರ್ಯಾತ್ ಸರ್ವತ್ರ ವಿಜಯೀ ಭವೇತ್ || ೬ ||
ತುಲಸ್ಯ ಮೃತಜನ್ಮಾಽಸಿ ಸದಾ ತ್ವಂ ಕೇಶವಪ್ರಿಯೇ |ಕೇಶವಾರ್ಥೇ ಚಿನೋಮಿ ತ್ವಾಂ ವರದಾ ಭವ ಶೋಭನೇ || ೭ ||
ಮೋಕ್ಷೈಕಹೇತೋರ್-ಧರಣೀ-ಧರಸ್ಯ ವಿಷ್ಣೋಃ ಸಮಸ್ತಸ್ಯ ಗುರೋಃ ಪ್ರಿಯಸ್ಯ |
ಆರಾಧನಾರ್ಥಂ ಪುರುಷೋತ್ತಮಸ್ಯ ಛಿಂದೇ ದಲಂ ತೇ ತುಲಸಿ ಕ್ಷಮಸ್ವ || ೮ ||
ಕೃಷ್ಯಾರಂಭೇ ತಥಾ ಪುಣ್ಯೇ ವಿವಾಹೇ ಚಾರ್ಥಸಂಗ್ರಹೇ |ಸರ್ವಕಾರ್ಯೇಷು ಸಿದ್ದ್ಯರ್ಥಂ ಪ್ರಸ್ಥಾನೇ ತುಲಸೀಂ ಸ್ಮರೇತ್ || ೯ ||
ಯಃ ಸ್ಮರೇತ್ ತುಲಸೀಂ ಸೀತಾಂ ರಾಮಂ ಸೌಮಿತ್ರಿಣಾ ಸಹ |ವಿನಿರ್ಜಿತ್ಯ ರಿಪೂನ್ ಸರ್ವಾನ್ ಪುನರಾಯಾತಿ ಕಾರ್ಯಕೃತ್ || ೧೦ ||
ಯಾ ದೃಷ್ಟಾ ನಿಖಿಲಾಘಸಂಘಶಮನೀ ಸ್ಪೃಷ್ಟಾ ವಪುಃಪಾವನೀ ರೋಗಾಣಾಮಭಿವಂದಿತಾ ನಿರಸನೀ ಸಿಕ್ತಾಽಂತಕತ್ರಾಸಿನೀ |
ಪ್ರತ್ಯಾಸತ್ತಿವಿಧಾಯಿನೀ ಭಗವತಃ ಕೃಷ್ಣಸ್ಯ ಸಂರೋಪಿತಾ ನ್ಯಸ್ತಾ ತಚ್ಚರಣೇ ವಿಮುಕ್ತಿಫಲದಾ ತಸ್ಯೈ ತುಲಸ್ಯೈ ನಮಃ || ೧೧ ||
ಖಾದನ್ ಮಾಂಸಂ ಪಿಬನ್ ಮದ್ಯಂ ಸಂಗಚ್ಛನ್ನಂತ್ಯಜಾದಿಭಿಃ |ಸದ್ಯೋ ಭವತಿ ಪೂತಾತ್ಮಾ ಕರ್ಣಯೋಸ್ತುಲಸೀಂ ಧರನ್ || ೧೨ ||
ಚತುಃ ಕರ್ಣೇ ಮುಖೇ ಚೈಕಂ ನಾಭಾವೇಕಂ ತಥೈವ ಚ | ಶಿರಸ್ಯೇಕಂ ತಥಾ ಪ್ರೋಕ್ತ ತೀರ್ಥೇ ತ್ರಯಮುದಾಹೃತಮ್ || ೧೩ ||
ಅನ್ನೋಪರಿ ತಥಾ ಪಂಚ ಭೋಜನಾಂತೇ ದಲತ್ರಯಮ್ | ಏವಂ ಶ್ರೀತುಲಸೀಂ ಗ್ರಾಹ್ಯಾ ಅಷ್ಟಾದಶದಲಾ ಸದಾ || ೧೪ ||
|| ಇತಿ ಶ್ರೀತುಲಸೀಮಾಹಾತ್ಮ್ಯಮ್ ||
ಶ್ರೀ ತುಳಸಿ ಪೂಜಾ ವಿಧಾನ
ಶ್ರೀ ತುಳಸಿ ವೃಂದಾವನದ ಸುತ್ತಲೂ ಚೆನ್ನಾಗಿ ಗೋಮಯದಿಂದ ಸಾರಿಸಿ ರಂಗೋಲಿ ಹಾಕಿ.
|| ಶ್ರೀಯಃ ಪ್ರಿಯೇ ಶ್ರಿಯಾವಾಸೇ ನಿತ್ಯಂ ಶ್ರೀಧರವಲ್ಲಭೇ ||
|| ಭಕ್ತ್ಯಾ ದತ್ತಂ ಮಯಾರ್ಘ್ಯಂ ಹಿ ತುಳಸಿ ಪ್ರತಿಗ್ರಹ್ಯತಾಮ್ ||
ಮೇಲಿನ ಮಂತ್ರ ಹೇಳುತ್ತಾ ತುಳಸಿಗೆ ಅಭಿಷೇಕ ಮಾಡಿ.
ನಂತರ ಅರಶಿನ ಕುಂಕುಮ ಹೂವುಗಳಿಂದ ಪೂಜೆ ಮಾಡಿ.
|| ಯನ್ಮೂಲೇ ಸರ್ವತೀರ್ಥಾನಿ ಯನ್ಮಧ್ಯೇ ಸರ್ವದೇವತಾಃ ಯದಗ್ರೇ
ಸರ್ವವೇದಾಸ್ಚ ತುಳಸೀ ತ್ವಾಂ ನಮಾಮ್ಯಹಂ ||
|| ತುಳಸಿ ಶ್ರೀಸಖಿ ಶುಭೆ ಪಾಪಹಾರಿಣಿ ಪುಣ್ಯದೇ||
|| ನಮಸ್ತೇ ನಾರದನುತೇ ನಾರಾಯಣಮನಃ ಪ್ರಿಯೇ ||
ಮೇಲಿನ ಮಂತ್ರ ಹೇಳಿ ನಮಸ್ಕರಿಸಿ.
ಶ್ರೀ ತುಳಸಿ ಪ್ರಾರ್ಥನೆ
ನಮಸ್ತುಳಸಿ ಕಲ್ಯಾಣಿ ನಮೋ ವಿಷ್ಣು ಪ್ರಿಯೇ ಶುಭೆ |ನಮೋ ಮೋಕ್ಷ ಪ್ರದಾಯಿಕೆ ದೇವೀ ನಮಃ ಸಂಪತ್ಪ್ರದಾಯಿಕೆ ||
ಶ್ರೀ ತುಳಸಿ ಧ್ಯಾನ
ಧ್ಯಾಯೇಸ್ಚ ತುಳಸಿಂ ದೇವೀಂ ಶ್ಯಾಮಂ ಕಮಲ ಲೋಚನಮ್ |ಪ್ರಸನ್ನಂ ಪದ್ಮಕಲ್ಹಾರ ವರದಾಭಯ ಚತುರ್ಭುಜಮ್ ||
ಕಿರೀಟ ಹಾರ ಕೇಯೂರ ಕುಂಡಲಾದಿ ವಿಭೂಶಿತಾಮ್ |ಧವಲಾಂಕುಶ ಸಂಯುಕ್ತಾಂ ನಿಶಿದುಶೀಮ್ ||
ಶ್ರೀ ತುಳಸಿ ಪ್ರಣಾಮ
ವೃಂದಾಯೈ ತುಳಸಿ ದೇವ್ಯೈ
ಪ್ರಿಯಾಯೈ ಕೇಶವಸ್ಯ ಚ
ಕೃಷ್ಣ ಭಕ್ತಿ ಪರದೆ ದೇವಿ
ಸತ್ಯವತ್ಯೈ ನಮೋ ನಮಃ
ಶ್ರೀ ತುಳಸಿ ಪ್ರದಕ್ಷಿಣ ಮಂತ್ರ
ಯಾನಿ ಕಾನಿ ಚಪಾಪಾನಿ
ಬ್ರಹ್ಮ ಹತ್ಯಾದಿಕಾನಿ ಚ
ತಾನಿ ತಾನಿ ಪ್ರನಶ್ಯಂತಿ
ಪ್ರದಕ್ಷಿಣಃ ಪದೇ ಪದೇ
ತುಳಸಿ ನಮಸ್ಕಾರ
ಯನ್ಮೂಲೇ ಸರ್ವ ತೀರ್ಥಾನಿ ಯನ್ಮಧ್ಯೆ ಸರ್ವದೇವತಾಃ |
ಯದಗ್ರೇ ಸರ್ವವೇದಾಸ್ಚ ತುಳಸಿ ತ್ವಾಂ ನಮಾಮ್ಯಹಂ ||
ಪ್ರಸೀದ ತುಳಸೀ ದೇವಿ ಪ್ರಸೀದ ಹರಿವಲ್ಲಭೇ |
ಕ್ಷೀರೋದ ಮಥನೊದ್ಭೋತೇ ತುಳಸಿ ತ್ವಾಂ ನಮಾಮ್ಯಹಂ ||
ಅಷ್ಟ ನಾಮ ಸ್ತವ (ಪದ್ಮ ಪುರಾಣದಿಂದ)
|| ವೃಂದಾವನಿ, ವೃಂದ, ವಿಶ್ವಪೂಜಿತಾ, ಪುಷ್ಪಸಾರ, ನಂದಿನಿ, ಕೃಷ್ಣ ಜೀವನಿ, ವಿಶ್ವ ಪಾವನಿ, ತುಳಸಿ ||
ಶ್ರೀ ತುಳಸಿ ಪೂಜೆ ಮಾಡುವಾಗ ಶ್ರೀ ತುಳಸಿ ದೇವಿಯ ಈ ಎಂಟು ನಾಮಗಳನ್ನು ಹೇಳಿದರೆ ಅಶ್ವಮೇಧದ ಫಲ ಬರುತ್ತದೆ. ಶ್ರೀ ತುಳಸಿ ದೇವಿಯ ಜನ್ಮದಿನವಾದ ಹುಣ್ಣಿಮೆಯಂದು ಈ ಎಂಟು ನಾಮಗಳಿಂದ ಪೂಜಿಸಿದರೆ ಜೀವನ್ಮ್ರುತ್ಯು ಮತ್ತು ಎಲ್ಲಾ ಬಂಧನಗಳಿಂದ ಮುಕ್ತರಾಗಿ ವೃಂದಾವನ ಸೇರುತ್ತಾರೆ. ಈ ಹೆಸರುಗಳನ್ನು ಹೇಳುವುದರಿಂದ ಕೃಷ್ಣನ ಕ್ರಪೆಗೆ ಪಾತ್ರರಾಗುತ್ತಾರೆ.
ತುಳಸಿ ಪೂಜೆ
ಪ್ರತಿ ವರ್ಷ ದೀಪಾವಳಿಯ ನಂತರ ಬರುವ ಹಾಗೂ ಅದ್ದೂರಿಯಾಗಿ ಆಚರಿಸಲಾಗುವ ಹಬ್ಬವೇ ತುಳಸಿ ಪೂಜೆ. ಇದನ್ನಾಚರಿಸುವ ಉದ್ದೇಶ ವಿಷ್ಣು ಹಾಗೂ ತುಳಸಿಯ ಮದುವೆಯ ಆಚರಣೆಯಾಗಿರುತ್ತದೆ. ಚಾಂದ್ರಮಾನ ಕಾರ್ತಿಕಮಾಸ ಶುಕ್ಲಪಕ್ಷದ 12ನೇ ದಿನ ಅಂದರೆ ದ್ವಾದಶಿಯಂದು ಈ ಹಬ್ಬವನ್ನು ಉತ್ಥಾನ ದ್ವಾದಶಿ ಎಂದು ಆಚರಿಸಲಾಗುತ್ತದೆ. ದೀಪಗಳಿಂದ ಮನೆಯ ಅಥವಾ ಮಠದ ಅಥವಾ ದೇವಸ್ಥಾನಗಳ ಬೃಂದಾವನವನ್ನು ಅಲಂಕರಿಸಲಾಗುತ್ತದೆ. ಈ ದಿನದಂದು ತುಳಸಿ ಕಟ್ಟೆಯನ್ನು ನಾನಾ ಶೈಲಿಯ ರಂಗೋಲಿ, ಹೂವು ಹಾಗೂ ಮಾವಿನ ಎಲೆಗಳಿಂದ ಅಲಂಕರಿಸಿ ಶ್ರೀ ಕೃಷ್ಣನ ಮೂರ್ತಿಯಿರಿಸಿ ಪೂಜಿಸಲಾಗುತ್ತದೆ.
ತುಳಸಿ ಪುರಾಣದ ಹಿನ್ನಲೆ
ತುಳಸಿ, ಜಲಂಧರನ ಹೆಂಡತಿಯಾದ ವೃಂದ. ರಾಕ್ಷಸನಾದ ಜಲಂಧರನ ಕಿರುಕುಳ ತಾಳಲಾಗದೆ ದೇವತೆಗಳು ವಿಷ್ಣುವಿನ ಸಹಾಯಕ್ಕೆ ಮೊರೆ ಹೋಗುತ್ತಾರೆ. ವಿಷ್ಣುವಿನ ಪರಮಭಕ್ತೆಯೂ ಹಾಗೂ ಪತಿವ್ರತೆಯಾದ ವೃಂದಳ ತಪೋಶಕ್ತಿಯಿಂದ ಜಲಂಧರನು ಅತ್ಯಂತ ಶಕ್ತಿಶಾಲಿಯಾಗಿರುತ್ತಾನೆ. ಜಲಂಧರ ತನ್ನ ಅಧಿಕಾರದ ಬಗ್ಗೆ ಅತಿಯಾದ ದುರಾಂಹಕಾರವನ್ನು ಹೊಂದಿದ್ದನು. ಮಾತ್ರವಲ್ಲ ಈತನು ಪಾರ್ವತಿಯ ಮೇಲೂ ತನ್ನ ಕೆಟ್ಟ ನೋಟವನ್ನು ಬೀರಿದ್ದನು.
ವೃಂದಾಳು ವಿಷ್ಣುವಿಗೆ ನೀಡಿದ ಶಾಪ
ಇದಕ್ಕೆಲ್ಲಾ ಮುಕ್ತಿ ಪಡೆಯಬೇಕಾದರೆ ವೃಂದಾ ಳ ತಪಸ್ಸನ್ನು ಕೆಡಿಸುವುದು ಅನಿವಾರ್ಯವಾಗಿತ್ತು. ಇದರ ಕುರಿತು ದೇವತೆಗಳೆಲ್ಲರೂ ಒಟ್ಟುಗೂಡಿ ಚರ್ಚಿಸಿ ನಂತರ ಈ ಭಯಾನಕ ಸಮಸ್ಯೆಗಳ ನಿವಾರಣೆಗೊಳಿಸುವಂತೆ ವಿಷ್ಣುವಿನ ಸಹಾಯಕ್ಕೆ ಬರುತ್ತಾರೆ. ಅದರಂತೆ ವಿಷ್ಣು ಜಲಂಧರನ ರೂಪ ಧರಿಸಿ ತನ್ನ ಪರಮಭಕ್ತೆಯಾದ ವೃಂದಳ ಪಾತಿವ್ರತ್ಯ ಶಕ್ತಿಯನ್ನು ಭಂಗ ಮಾಡುತ್ತಾನೆ. ಇದರಿಂದ ದೇವತೆಗಳಿಗೆ ಜಲಂಧರನನ್ನು ಅಂತ್ಯಗೊಳಿಸಲು ಅನುಕೂಲವಾಯಿತು. ತನ್ನ ಪತಿಯ ಮರಣದ ಬಗ್ಗೆ ಸ್ಪಷ್ಟವಾಗಿ ಅರಿತ ವೃಂದಳು ವಿಷ್ಣುವಿಗೆ ಶಾಪ ನೀಡಿ ತನ್ನ ಪತಿಯ ಶವದೊಂದಿಗೆ ಬೂದಿಯಾಗುತ್ತಾನೆ. ಈ ಶಾಪದಿಂದ ವಿಷ್ಣು ಕಪ್ಪು ಬಣ್ಣದ ಕಲ್ಲಾಗಿ ಮಾರ್ಪಾಡಾಗುವನು. ನಂತರದ ದಿನಗಳಲ್ಲಿ ಅದೇ ಕಲ್ಲನ್ನು ಶಾಲಿಗ್ರಾಮ ಎಂದು ಕರೆಯಲಾಗುತ್ತದೆ. ಇದು ಇಡೀ ವಿಶ್ವದಲ್ಲಿ ಪ್ರಳಯದ ಸ್ಥಿತಿಗೆ ಕಾರಣವಾಯಿತು. ಇದರಿಂದ ಕಂಗಲಾದ ದೇವತೆಗಳು ತಾಯಿ ವೃಂದಾ ಳನ್ನು ಭೇಟಿ ಮಾಡಿ ವಿಷ್ಣುವನ್ನು ಶಾಪದಿಂದ ಮುಕ್ತಗೊಳಿಸುವಂತೆ ಕೋರುತ್ತಾರೆ. ಅದರಂತೆ ವೃಂದಾ ವಿಷ್ಣುವನ್ನು ಶಾಪದಿಂದ ಮುಕ್ತಗೊಳಿಸಿ ತಾನು ಅಗ್ನಿಗೆ ಹಾರಿ ಪ್ರಾಣವನ್ನು ತ್ಯಜಿಸಿ ಬೂದಿಯಾಗುವಳು. ವೃಂದಾ ದೇವಿಯು ತನ್ನ ಬೂದಿಯ ಮೇಲೆ ತುಳಸಿಯಾಗಿ ಕಾಣಿಸಿಕೊಂಡಳು. ಆಗ ಭಗವಾನ್ ವಿಷ್ಣು ನಾನು ನಿನ್ನನ್ನು ಯಾವಾಗಲೂ ನನ್ನ ತಲೆಯ ಮೇಲೆ ಧರಿಸುತ್ತೇನೆ ಮತ್ತು ಲಕ್ಷ್ಮಿ ದೇವಿಯಂತೆ ನೀನು ಯಾವಾಗಲೂ ನನ್ನ ಪ್ರೀತಿ ಪಾತ್ರಳಾಗಿರುವೆ ಹಾಗೂ ನೀನಿಲ್ಲದೇ ನಾನು ಏನನ್ನು ಸ್ವೀಕರಿಸುವುದಿಲ್ಲವೆಂದು ವಾಗ್ದಾನ ನೀಡುವನು. ಮುಂದೆ ಆ ವೃಂದಳೇ ತುಳಸಿಯಾಗಿ ಪಾರ್ವತಿ ತಯಾರಿಸಿದ ಬೃಂದಾವನದಲ್ಲಿ ಹುಟ್ಟುತ್ತಾಳೆ. ನಂತರ ಇವಳು ರುಕ್ಮಿಣಿಯಾಗಿ ಜನ್ಮಪಡೆದು ಕಾರ್ತಿಕ ಶುದ್ಧ ದ್ವಾದಶಿಯಂದು ಕೃಷ್ಣನನ್ನು ಮದುವೆಯಾದಳೆಂದು ಪುರಾಣದಲ್ಲಿ ಹೇಳಲಾಗಿದೆ.
ಈ ಘಟನೆಯ ನಂತರ, ವಿಷ್ಣು ನಾಲ್ಕು ತಿಂಗಳ ನಿದ್ರೆಯಿಂದ ಎಚ್ಚರಗೊಂಡಾಗ ತುಳಸಿಯೊಂದಿಗೆ ಮದುವೆ ನಡೆಯಿತು. ಈ ದಿನವನ್ನೇ ದೇವ ಉತ್ಥಾನ ಏಕಾದಶಿ ಎಂದು ಕರೆಯಲಾಗುತ್ತದೆ. ಕಾರ್ತಿಕ ತಿಂಗಳ ಶುಕ್ಲ ಪಕ್ಷದ ಏಕಾದಶಿಯಂದು, ತುಳಸಿ ಮತ್ತು ಶಾಲಿಗ್ರಾಮದಲ್ಲಿ ಭಕ್ತನು ಏನೇ ಬಯಸಿದರೂ ಅವರ ಎಲ್ಲಾ ಆಶಯಗಳು ಈಡೇರುತ್ತವೆ ಎಂದು ಧರ್ಮಗ್ರಂಥಗಳಲ್ಲಿ ತಿಳಿಸಲಾಗಿದೆ. ವಿಷ್ಣು ಮತ್ತು ಮಹಾಲಕ್ಷ್ಮಿ ಅವರ ಸಾಂಕೇತಿಕ ವಿವಾಹದಂತೆಯೇ ಶಾಲಿಗ್ರಾಮ ಮತ್ತು ತುಳಸಿಯ ವಿವಾಹವನ್ನು ಆಚರಿಸಲಾಗುತ್ತದೆ.
ಇನ್ನೊಂದು ಪುರಾಣದ ಪ್ರಕಾರ ದೇವತೆಗಳೂ, ದಾನವರೂ ಕ್ಷೀರಸಾಗರವನ್ನು ಕಡೆದಾಗ ಕೊನೆಯಲ್ಲಿ ಅಮೃತಕಲಶ ಬಂತು. ಅದನ್ನು ಕೈಗೆ ತೆಗೆದುಕೊಂಡ ವಿಷ್ಣುವಿನ ಕಣ್ಣುಗಳಿಂದ ಬಂದ ಆನಂದಬಾಷ್ಪಗಳು ಆ ಕಲಶದಲ್ಲಿ ಬಿದ್ದು ಅದರಿಂದ ಒಂದು ಸಣ್ಣ ಗಿಡ ಹುಟ್ಟಿತು. ಅದಕ್ಕೆ ತುಲನೆ (ಹೋಲಿಕೆ) ಇಲ್ಲವಾದ್ದರಿಂದ,ತುಳಸಿ ಎಂದು ಹೆಸರಿಟ್ಟು, ಲಕ್ಷ್ಮಿಯೊಂದಿಗೆ ತುಳಸಿಯನ್ನು ವಿಷ್ಣುವು ಮದುವೆಯಾದನು ಎಂದು ಹೇಳುತ್ತದೆ.
ಭಗವಂತೋತ್ಥಾನ
ಆಷಾಢಮಾಸ ಶುಕ್ಲ ಪಕ್ಷದ ಏಕಾದಶಿಯಲ್ಲಿ ಕ್ಷೀರಸಾಗರದಲ್ಲಿ ಶೇಷಶಾಯಿಯಾದ ಭಗವಂತನನ್ನು ಈ ದಿನ ರಾತ್ರಿಯಲ್ಲಿ ಏಳಿಸುವುದರಿಂದ ಈ ದ್ವಾದಶಿಗೆ ಭಗವಂತೋತ್ಥಾನ ರೂಪವಾದ ಉತ್ಥಾನದ್ವಾದಶೀ ಎಂದು ಹೆಸರು ಬಂದಿದೆ. ಆಷಾಢ ಶುಕ್ಲಪಕ್ಷದಲ್ಲಿ ಪ್ರಾರಂಭಿಸಿದ ಚಾತುರ್ಮಾಸ್ಯ ವ್ರತವನ್ನು ಈ ದಿವಸ ಮುಕ್ತಾಯಗೊಳಿಸಬೇಕು.
ವ್ರತಾಚರಣ
ಈ ದ್ವಾದಶಿಯಲ್ಲಿ ಕ್ಷೀರಾಬ್ಧಿಶಯನ ವ್ರತವನ್ನು ಆಚರಿಸುತ್ತಾರೆ. ತುಲಸಿ ಸಹಿತ ಧಾತ್ರೀ ಲಕ್ಷ್ಮೀನಾರಾಯಣ ಪ್ರೀತ್ಯರ್ಥವಾಗಿ ಈ ವ್ರತವನ್ನು ಮಾಡುವುದು ಇಂದಿಗೂ ರೂಢಿಯಲ್ಲಿದೆ. ಇದರ ದ್ಯೋತಕವಾಗಿ ಉತ್ಥಾನ ದ್ವಾದಶೀ ದಿವಸ ಬೆಳಗ್ಗೆ ಬೃಂದಾವನದಲ್ಲಿ ಧಾತ್ರಿಯನ್ನು (ಕಾಯಿಸಹಿತವಾದ ನೆಲ್ಲಿಗಿಡವನ್ನು) ನೆಟ್ಟು ಅಲ್ಲಿ ಭಗವಂತನನ್ನು ಕೂರಿಸಿ ನೀರಾಜನಾದಿಗಳಿಂದ ಪೂಜಿಸುತ್ತಾರೆ. ರಾತ್ರಿಯಲ್ಲಿ ಬೃಂದಾವನವನ್ನು ಪುಷ್ಪಾದಿಗಳಿಂದ ಅಲಂಕರಿಸಿ ಭಗವಂತನನ್ನು ಆ ಬೃಂದಾವನದಲ್ಲಿಟ್ಟು ಉತ್ಸವ ಮಾಡುತ್ತಾರೆ. ಮನೆಗಳಲ್ಲಿ ಬೃಂದಾವನವನ್ನು ಪೂಜಿಸಿ ದೀಪಗಳಿಂದ ಅಲಂಕರಿಸಿ ಪೂಜಿಸುತ್ತಾರೆ. ರಾತ್ರಿ ಭಗವಂತನಿಗೆ ಅಂದರೆ ಶ್ರೀ ಕೃಷ್ಣನಿಗೆ ಕ್ಷೀರಾನ್ನನಿವೇದನ ಮಾಡುವುದು ಒಂದು ವಿಶೇಷವಾಗಿದೆ. ಹೊಸ ನೆಲ್ಲಿಕಾಯನ್ನು ಈ ದ್ವಾದಶಿಯಿಂದ ಉಪಯೋಗಿಸಲು ಪ್ರಾರಂಭಿಸುತ್ತಾರೆ. ಕ್ಷೀರಾಬ್ಧಿಯಲ್ಲಿ ಶಯನಿಸಿದ ಭಗವಂತ ಈ ದ್ವಾದಶಿಯಲ್ಲಿ ತುಲಸೀ ಆವಾಸವಾದ ಬೃಂದಾವನದಲ್ಲಿ ತುಲಸೀ ಲಕ್ಷ್ಮಿಯರೊಡನೆ ಏಳುವುದರ ಸಂಕೇತವಾಗಿ ಈ ಪೂಜೆ ಇಂದಿಗೂ ನಡೆಯುವ ರೂಢಿಯಿದೆ. ಈ ದಿವಸದಲ್ಲಿ ದೀಪೋತ್ಸವ ವಿಶೇಷ ಪುಣ್ಯಪ್ರದವಾಗಿರುತ್ತದೆ. ಈ ದ್ವಾದಶಿಯಲ್ಲಿ ಧಾತ್ರೀ ತುಲಸೀ ಸಹಿತ ಲಕ್ಷ್ಮೀನಾರಾಯಣನನ್ನು ಪೂಜಿಸುವುದರಿಂದ ಸರ್ವವಿಧವಾದ ಪಾತಕಗಳೂ ನಶಿಸುತ್ತವೆ ಎಂದು ವ್ರತಮಹಾತ್ಮ್ಯೆ ತಿಳಿಸುತ್ತದೆ.
ಇಷ್ಟೆಲ್ಲಾ ಪೌರಾಣಿಕ ಹಿನ್ನೆಲೆಯಿರುವ ತುಳಿಸಿಯಲ್ಲಿ ಸಾಕಷ್ಟು ಔಷಧೀಯ ಗುಣಗಳಿವೆ. ಕ್ರಿಮಿ, ಕೀಟಗಳೂ ಮನೆಯೊಳಗೆ ಹೋಗದಂತೆ ತಡೆಯುವ ಶಕ್ತಿ ಈ ಪುಟ್ಟ ತುಳಸಿ ಗಿಡಕ್ಕಿದೆ. ಆ ಕಾರಣಕ್ಕೆ ಪ್ರತಿಯೊಬ್ಬ ಹಿಂದೂವಿನ ಮನೆಯಲ್ಲಿಯೂ ತುಳಸಿಕಟ್ಟೆ ಅಥವಾ ಗಿಡವಿದ್ದು, ಜನರು ಭಯ ಭಕ್ತಿಯಿಂದ ಪೂಜಿಸುತ್ತಾರೆ.
ತುಳಸಿ ಗಾಳಿಗೆ ಅನೇಕ ಆರೋಗ್ಯ ಸಮಸ್ಯೆಗಳನ್ನು ತೊಲಗಿಸುವ ಶಕ್ತಿ ಇದೆ ಎಂದರೆ, ಅದರಲ್ಲಿ ಎಷ್ಟು ಔಷಧೀಯ ಗುಣಗಳಿದೆ ಎಂಬುದನ್ನು ನಾವುಗಳು ಅರಿತುಕೊಳ್ಳಬಹುದು. ಪೌರಾಣಿಕ ಮತ್ತು ಆಯುರ್ವೇದದಲ್ಲಿ ಮಹತ್ವ ಪಡೆದುಕೊಂಡಿರುವ ತುಳಸಿ ಪೂಜೆಯನ್ನು ನೆರವೇರಿಸಿ ಆ ದೇವಿಯ ಕೃಪೆಗೆ ಪಾತ್ರರಾಗೋಣ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9481252093 – info@kalpa.news
Discussion about this post