ಮಹಾಭಾರತ ಕುರುಕ್ಷೇತ್ರ ಯುದ್ಧಾತ್ಪೂರ್ವ ಶ್ರೀಕೃಷ್ಣನ ಶಾಂತಿ ಸಂಧಾನ ಸಭೆ ನಡೆಯುತ್ತದೆ. ಫಲ ಶ್ರುತಿ ಎಂದರೆ ಹದಿನೆಂಟು ದಿನಗಳ ಕುರುಕ್ಷೇತ್ರ ಸಮರದ ನಿರ್ಣಯ.
ದುರ್ಯೋಧನನ ಅಹಂಕಾರ ಎಷ್ಟಿತ್ತೆಂದರೆ ಶಾಂತಿ ದೂತ ಕೃಷ್ಣನನ್ನೇ ಬಂಧಿಸುವಲ್ಲಿಯವರೆಗೂ ಸಾಗುತ್ತಾನೆ. ಆಗ ಕೃಷ್ಣ ಕೇವಲ ತನ್ನ ದಿವ್ಯ ಶಕ್ತಿಯನ್ನು ಮಾತ್ರ ತೋರಿಸಿ ಎಲ್ಲರನ್ನೂ ಭೀತಿ ಹುಟ್ಟುವಂತೆ ಮಾಡುತ್ತಾನೆ. ನಂತರ ಶ್ರೀಕೃಷ್ಣನು ದುರ್ಯೋಧನನಿಗೆ ಒಂದು ಎಚ್ಚರಿಕೆಯನ್ನು ನೀಡಿಯೇ ಅಲ್ಲಿಂದ ನಿರ್ಗಮಿಸುತ್ತಾನೆ.
‘ಹೇ ದುರ್ಯೋಧನಾ, ನಿನ್ನ ಅಧರ್ಮವನ್ನು ನಾಶ ಮಾಡಲು ಹದಿನೆಂಟು ದಿನಗಳೇಕೆ? ಹದಿನೆಂಟು ಕ್ಷಣವೂ ಬೇಡ ನನ್ನ ಸುದರ್ಶನನಿಗೆ. ಆದರೆ ನೀನು ಯಾವ ರೂಪದಿಂದ ಅನ್ಯಾಯ ಮಾಡಿದಿಯೋ ಅದೇ ರೂಪದಲ್ಲಿ ಶಿಕ್ಷೆಯಾದರೆ ಮಾತ್ರ ಪ್ರಜೆಗಳು ಧರ್ಮವನ್ನು ಗೌರವಿಸೋದು. ಆ ಧರ್ಮ ಸಂಘರ್ಷಕ್ಕೆ ನಾನು ಕೇವಲ ಪ್ರೇರಣೆಯಾಗುತ್ತೇನೆಯೇ ಹೊರತು ಆಯುಧ ಹಿಡಿಯುವುದಿಲ್ಲ. ಇಲ್ಲಿ ನನ್ನ ಪ್ರಭಾವಳಿಯನ್ನು ತೋರಿಸಿದೆಯಷ್ಟೆ. ಮುಂದಿನ ದಿನಗಳಲ್ಲಿ ಮತ್ತೆ ಮತ್ತೆ ತೋರಿಸಬೇಕಾದಂತಹ ಅನಿವಾರ್ಯತೆ ಬರಬಹುದು. ಹಾಗೆ ಆಗಬಾರದೆಂದೇ ನಾನು ಇಷ್ಟು ಸಂಯಮದಲ್ಲಿ ಇದ್ದದ್ದು ಎಂದು ನೆನಪಿರಲಿ’ ಎಂದು ನಿರ್ಗಮಿಸುತ್ತಾನೆ. ಇದು ಆಗಿನ ತಂತ್ರಗಾರಿಕೆ.
ಈಗ ಪ್ರಧಾನಿ ನರೇಂದ್ರ ಮೋದಿಯವರು ಮನಸ್ಸು ಮಾಡಿದರೆ ರಾಮ ಮಂದಿರವನ್ನು ಸುಗ್ರೀವಾಜ್ಞೆಯ ಮೂಲಕ ನಿರ್ಮಿಸಬಹುದು. ಆದರೆ ಇದು ನ್ಯಾಯಬದ್ಧವಾದ ಪ್ರಜೆಗಳ ತೀರ್ಮಾನವಾಗದು ಎಂದೇ ಸುಮ್ಮನಿದ್ದಾರೆ. ಶಬರಿಮಲೆಯ ವಿಚಾರದಲ್ಲೂ ಪ್ರವೇಶಿಸುವ ತಾಕತ್ತಿದೆ. ಆದರೆ ಎಲ್ಲವೂ ಶಾಸನಬದ್ದವಾಗಿ ನಡೆದರೆ ಅದಕ್ಕೆ ಬಲ ಹೆಚ್ಚು.
ಅಂದು ಆ ಧೃತರಾಷ್ಟ್ರ ಕಣ್ಣಿಲ್ಲದೆ ಕುರುಡ. ಇಂದು ಕಣ್ಣು ಇದ್ದೂ ಕುರುಡರಾಗಿರುವ ಧೃತರಾಷ್ಟ್ರರಿದ್ದಾರೆ.
-ಪ್ರಕಾಶ್ ಅಮ್ಮಣ್ಣಾಯ
ಜ್ಯೋರ್ತಿವಿಜ್ಞಾನಂ
Interior / upgradation of Next-Generation Amrit Bharat Coaches. Sample coach ready
Kalpa Media House | New Delhi | The Hon’ble Minister of Railways inspected sample coaches developed with proposed interior design...
Read moreDetails
















