ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಶಿವಮೊಗ್ಗ: ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರ ಜನ್ಮದಿನದ ಹಿನ್ನೆಲೆಯಲ್ಲಿ ಶಿವಮೊಗ್ಗ ಲೋಕಸಭಾ ಕ್ಷೇತ್ರದಾದ್ಯಂತ ಆಯುಷ್ಮಾನ್ ಭಾರತ ಆರೋಗ್ಯ ಕರ್ನಾಟಕ ಯೋಜನೆ ಅಡಿಯಲ್ಲಿ ಕೇವಲ ಮೂರೇ ದಿನಗಳಲ್ಲಿ ದಾಖಲೆ ಪ್ರಮಾಣದಲ್ಲಿ ವಿತರಣೆ ಮಾಡಲಾಗಿದೆ.
ಸಂಸದ ಬಿ.ವೈ. ರಾಘವೇಂದ್ರ ಅವರ ನಿರ್ದೇಶನದಂತೆ ಪ್ರೇರಣಾ ಎಜುಕೇಶನಲ್ ಹಾಗೂ ಸೋಷಿಯಲ್ ಟ್ರಸ್ಟ್ ವತಿಯಿಂದ ಲೋಕಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಶಿಬಿರಗಳನ್ನು ನಡೆಸುವ ಮೂಲಕ ಒಟ್ಟು 313 ಗ್ರಾಮ ಪಂಚಾಯ್ತಿಗಳಲ್ಲಿ 83,273 ಕಾರ್ಡ್‌ಗಳನ್ನು ವಿತರಿಸಲಾಗಿದೆ.



ಈ ಯಶಸ್ಸಿಗೆ ಕಾರಣರಾದ ಶಿವಮೊಗ್ಗದ ಪ್ರೇರಣಾ ಎಜುಕೇಶನ್ ಮತ್ತು ಸೋಷಿಯಲ್ ಟ್ರಸ್ಟ್, ಜಿಲ್ಲಾಡಳಿತಕ್ಕೆ, ಜಿಲ್ಲಾ ಪಂಚಾಯತ್, ಬಾಪೂಜಿ ಸೇವಾ ಕೇಂದ್ರ, ಆಶಾ ಕಾರ್ಯಕರ್ತರು, ಆರೋಗ್ಯ ಇಲಾಖೆ, ತಾಂತ್ರಿಕ ವರ್ಗದವರಿಗೆ, ಪ್ರತ್ಯಕ್ಷ ಮತ್ತು ಪರೋಕ್ಷವಾಗಿ ಸಹಕರಿಸಿದ ಎಲ್ಲರಿಗೂ ಸಂಸದ ರಾಘವೇಂದ್ರ ಧನ್ಯವಾದ ತಿಳಿಸಿದ್ದಾರೆ.
| ಕ್ರ. ಸಂ | ತಾಲ್ಲೂಕು | ಗ್ರಾ.ಪಂ.ಗಳ ಸಂಖ್ಯೆ | ಆರೋಗ್ಯ ಕಾರ್ಡ್ ವಿತರಿಸಿದ ಸಂಖ್ಯೆ |
| 01 | ಶಿವಮೊಗ್ಗ | 42 | 14,190 |
| 02 | ಭದ್ರಾವತಿ | 41 | 11,678 |
| 03 | ತೀರ್ಥಹಳ್ಳಿ | 38 | 8,781 |
| 04 | ಸಾಗರ | 34 | 8,079 |
| 05 | ಸೊರಬ | 41 | 11,139 |
| 06 | ಶಿಕಾರಿಪುರ | 44 | 13,978 |
| 07 | ಹೊಸನಗರ | 30 | 7,513 |
| 08 | ಬೈಂದೂರು | 43 | 1,867 |
| 09 | ನಗರ ಮತ್ತು ಪಟ್ಟಣ ವ್ಯಾಪ್ತಿಯ ಪ್ರಾ.ಆ.ಕೇಂದ್ರಗಳಲ್ಲಿ ಸಿ.ಹೆಚ್.ಸಿ. ಮೂಲಕ | 19 | 6,048 |
| ಒಟ್ಟು ವಿತರಣೆಯಾದ ಆ.ಭಾ-ಆ.ಕ. ಕಾರ್ಡ್ ಗಳ ಸಂಖ್ಯೆ | 83,273 | ||
Get in Touch With Us info@kalpa.news Whatsapp: 9481252093







Discussion about this post