No Result
View All Result
Indian Railways Recruits 5.56 Lakh Since 2014
English Articles

Indian Railways Recruits 5.56 Lakh Since 2014 | 1.61 Lakh More Vacancies Underway

by kalpa News
July 30, 2026
0

Kalpa Media House  |  New Delhi  | 5.56 Lakh Recruitments Done Since 2014 (Up to June 2026), Including 50,485 in...

Read moreDetails
11-Year-Old Mysuru Girl Writes Children's Ramayana in Just 15 Days

11-Year-Old Mysuru Girl Writes Children’s Ramayana in Just 15 Days

July 27, 2026
Kotak | creating fresh opportunities for SMEs

Growth Is No Longer Just a Bengaluru Story: Kotak

July 24, 2026
Prayagraj - Yesvantpur Special Weekly Express Trains

Special Weekly Express Trains Between Prayagraj and Yesvantpur Announced

July 23, 2026
Nestlé India Reports Strong Q1 Growth

Nestlé India Reports Strong Q1 Growth; Sales Up 25.4%, Profit Jumps 47.9%

July 23, 2026
  • Advertise With Us
  • Grievances
  • About Us
  • Contact Us
Thursday, July 30, 2026
Follow Us
kalpa.news
Advertisement
ADVERTISEMENT
  • Home
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಹುಬ್ಬಳ್ಳಿ-ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಯಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
    • ವಿಜಯನಗರ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
    • ಡಾ. ಮೈತ್ರೇಯಿ ಆದಿತ್ಯಪ್ರಸಾದ್
  • ರೈಲ್ವೆ ಸುದ್ದಿಗಳು
  • ಇತರೆ
    • ವಿಜ್ಞಾನ-ತಂತ್ರಜ್ಞಾನ
    • ಜಾಬ್-ಸ್ಟ್ರೀಟ್
    • ಕೈ ರುಚಿ
    • ನಿತ್ಯ ಪಂಚಾಂಗ/ದಿನ ವಿಶೇಷ
    • ಮುಂಜಾನೆ ಸುವಿಚಾರ
    • ಆಧ್ಯಾತ್ಮ/ಭಕ್ತಿಭಾವ
Subscribe
kalpa.news
No Result
View All Result
  • Home
  • ರಾಜಕೀಯ
  • ಶಿವಮೊಗ್ಗ
  • ಜಿಲ್ಲೆ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
  • ರೈಲ್ವೆ ಸುದ್ದಿಗಳು
  • ಇತರೆ
ADVERTISEMENT
Home Special Articles

ನೆಲ್ಲಿಕಾರು ಜೈನ ಬಸದಿಯ ವಿಶೇಷತೆ, ಐತಿಹ್ಯ ನಿಮಗೆ ಗೊತ್ತಾ?

kalpa News by kalpa News
June 19, 2020
in Special Articles
0
ನೆಲ್ಲಿಕಾರು ಜೈನ ಬಸದಿಯ ವಿಶೇಷತೆ, ಐತಿಹ್ಯ ನಿಮಗೆ ಗೊತ್ತಾ?
Share on FacebookShare on TwitterShare on WhatsApp

ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ

ಬಸದಿ
ನಾವು ಸಾಮಾನ್ಯವಾಗಿ ಬಸದಿ ಎಂಬ ಪದವನ್ನು ಕೇಳಿದಾಗಲೆಲ್ಲ ವಿಶೇಷ ದಿನಗಳು, ಪೂಜೆ ಪುರಸ್ಕಾರಗಳು, ಉತ್ಸವಗಳು, ಆರಾಧನೆಗಳು ಇತ್ಯಾದಿಗಳ ಬಗ್ಗೆ ಯೋಚಿಸುತ್ತೇವೆ. ಬಸದಿಯ ಇತಿಹಾಸದ ಬಗ್ಗೆ ಬಹಳ ಕಡಿಮೆ ಜನರು ಯೋಚಿಸುತ್ತಾರೆ.

ಎಲ್ಲಾ ಬಸದಿಗಳು ವಿಶೇಷ ವಿಷಯವನ್ನು, ವಿಸ್ಮಯಕಾರಿ ಇತಿಹಾಸಗಳನ್ನು ಹೊಂದಿರುತ್ತದೆ. ಇಂತಹದ್ದೇ ಒಂದು ವಿಸ್ಮಯಕಾರಿ ಇತಿಹಾಸವನ್ನು ಹೊಂದಿರುವ ಬಸದಿಯ ಬಗ್ಗೆ ನಿಮಗೆ ತಿಳಿಸಲು ಬಯಸುತ್ತೇನೆ.

ಪಶ್ಚಿಮಘಟ್ಟದ ಸುಂದರ ವಾತಾವರಣ. ಅನೇಕ ಸಸ್ಯ ಮತ್ತು ಪ್ರಾಣಿ ಪ್ರಭೇದಗಳಿಗೆ ಸಹ್ಯಾದ್ರಿಯು ನೆಲೆಯಾಗಿತ್ತು. ಪರ್ವತಶ್ರೇಣಿಯ ತಪ್ಪಲಿನಲ್ಲಿ ಒಂದು ಪುಟ್ಟ ಗ್ರಾಮ. ನೆಲ್ಲಿಕಾಯಿಯ ಮರಗಳಿಂದ, ಎತ್ತರವಾಗಿ ಬೆಳೆದಿರುವ ಹುತ್ತಗಳಿಂದ ಕೂಡಿದ್ದ ಈ ಗ್ರಾಮವನ್ನು ನೆಲ್ಲಿಕಾಡು ಎಂದು ಕರೆಯುತ್ತಿದ್ದರು. ಜನ ಸಂಖ್ಯೆಯು ಕಡಿಮೆ ಇದ್ದುದರಿಂದ ಕಾಡು ದಟ್ಟವಾಗಿಯೇ ಬೆಳೆದಿತ್ತು. ಸುಮಾರು 800 ವರ್ಷಗಳ ಹಿಂದೆ, ಕಲ್ಯಾಣಕೀರ್ತಿ ಮುನಿಗಳು ತಮ್ಮ ದೀಕ್ಷೆಯನ್ನು ಪಡೆದು ಕರಿಕಲ್ಲು (ಕಾರ್ಕಳ) ನಗರದಿಂದ ಮೂಡುವೇಣುಪುರ(ಮೂಡಬಿದಿರೆ)ಕ್ಕೆ ವಿಹಾರವನ್ನು ಪ್ರಾರಂಭಿಸಿದ್ದರು. ಸಂಜೆಯ ವೇಳೆ ಈ ಕಾಡು ಪ್ರದೇಶದಲ್ಲಿ ಉಳಿಯಬೇಕಾಯಿತು. ಸಂಧ್ಯಾವಂದನೆಯ ನಂತರ ವಿಶ್ರಾಂತಿಯನ್ನು ಪಡೆದರು.


ಈ ನಡುವೆ ಬೆಳಗಿನ ಜಾವ ಮುನಿಗಳಿಗೆ ಒಂದು ಸ್ವಪ್ನವು ಕಂಡಿತು. ಆ ಕನಸಿನಲ್ಲಿ ಒಬ್ಬ ಯಕ್ಷ ಬಿಳಿ ಕುದುರೆಯ ಮೇಲೆ ಸವಾರಿಯನ್ನು ಮಾಡುತ್ತಾ ಮುನಿಗಳ ಬಳಿ ಇಲ್ಲಿರುವ ಒಂದು ಹುತ್ತದೊಳಗೆ ಒಬ್ಬ ಜಿನೇಶ್ವರ ಮೂರ್ತಿ ಹಾಗೂ ಒಂದು ಬ್ರಹ್ಮ ಸ್ತಂಭವಿರುತ್ತದೆ. ಆ ಹುತ್ತವನ್ನು ಅಗೆದು, ಅದರಲ್ಲಿರುವ ಮೂರ್ತಿ ಹಾಗೂ ಸ್ತಂಭವನ್ನು ತೆಗೆದು ಇಲ್ಲಿ ಪ್ರತಿಷ್ಠಾಪಿಸಬೇಕು ಎಂದು ತಿಳಿಸುತ್ತಾನೆ. ಮುಂಜಾನೆಯ ಮಂಪರಿನಲ್ಲಿ ಎಚ್ಚೆತ್ತುಕೊಂಡ ಮುನಿಗಳು, ಈ ಕನಸಿನ ಬಗ್ಗೆ ಗಾಢವಾಗಿ ಯೋಚಿಸುತ್ತಾರೆ. ಬ್ರಾಹ್ಮೀಮುಹೂರ್ತದಲ್ಲಿ ಕಂಡ ಕನಸು ನಿಜವಾಗಿಯೇ ಇರಬೇಕೆಂದು, ಬೆಳಗಾದ ಕೂಡಲೇ ಸಮೀಪದಲ್ಲಿ ವಾಸಿಸುತ್ತಿರುವ ಜನರನ್ನು ಕರೆಸಿ, ಹುತ್ತವನ್ನು ಅಗೆಯಲಾಯಿತು. ಕನಸಿನಲ್ಲಿ ಬಂದು ತಿಳಿಸಿದ ಯಕ್ಷನ ಮಾತಿನಂತೆಯೇ ಜಿನೇಶ್ವರನ ಮೂರ್ತಿ ಹಾಗೂ ಬ್ರಹ್ಮಸ್ತಂಭವು ದೊರಕಿತು. ಜಿನೇಶ್ವರನ ಮೂರ್ತಿಯೇನೋ ದೊರಕಿತು, ಆದರೆ ಆ ಮೂರ್ತಿ ಯಾವ ತೀರ್ಥಂಕರನದ್ದೆಂದು ಯಾವುದೇ ಸುಳಿವಿರಲಿಲ್ಲ. ನೆರೆದಿದ್ದ ಜನರು ಆಶ್ಚರ್ಯರಾದರೂ. ಈ ರಹಸ್ಯವನ್ನು ತಿಳಿಸಿದ ಯಕ್ಷ ಈ ಸಂದಿಗ್ಧ ಪರಿಸ್ಥಿತಿಯಲ್ಲಿಯೂ ಏನಾದರೂ ದಾರಿ ತೋರಿಸಬಹುದು ಎಂದು ಮುನಿಗಳು ನಂಬಿದರು. ಮೂರ್ತಿಯ ಪ್ರತಿಷ್ಠಾಪನೆಗೆ ಎಲ್ಲಾ ಸಿದ್ಧತೆಯನ್ನು ಮಾಡಲು ಪ್ರಾರಂಭಿಸಿದರು.

ಹೀಗೊಮ್ಮೆ ಮುನಿವರ್ಯರು ಮೂರ್ತಿಯನ್ನು ವೀಕ್ಷಿಸಲು ಹೋದಾಗ, ಕರಡಿಯೊಂದು ಆ ಮೂರ್ತಿಯ ಸುತ್ತಲೂ ಹೆಜ್ಜೆ ಹಾಕುತ್ತಿತ್ತು. ಈ ದೃಶ್ಯವನ್ನು ಕಂಡ ಮುನಿಗಳು, ಮೂರ್ತಿಯು ಕರಡಿ ವಾಹನವುಳ್ಳ ತೀರ್ಥಂಕರನದ್ದೇ ಆಗಿರಬೇಕೆಂದು ತಿಳಿದರು. ನಂತರ ಈ ಪ್ರತಿಷ್ಠಾಪನಾ ಕಾರ್ಯಕ್ರಮವು ನಿರ್ವಿಘ್ನವಾಗಿ ನಡೆಯಿತು. ಅಂದಿನಿಂದ ಅನಂತನಾಥ ಸ್ವಾಮಿಯು ಪೂರ್ವಾಭಿಮುಖ, ಹಾಗೂ ಬ್ರಹ್ಮಯಕ್ಷನನ್ನು ಬ್ರಹ್ಮ ಸ್ತಂಭದ ಮೇಲೆ ಉತ್ತರಾಭಿಮುಖವಾಗಿ ಸ್ಥಾಪಿಸಲಾಯಿತು.

ವರ್ಷಗಳು ಉರುಳಿದವು ಮತ್ತು ಜನರ ವಾಸ್ತವ್ಯ ಈ ಗ್ರಾಮದಲ್ಲಿ ಹೆಚ್ಚಿತು. ವಿವಿಧ ಧರ್ಮ ಮತ್ತು ಜಾತಿಗೆ ಸೇರಿದ ಜನರು ವಾಸಿಸುತ್ತಿದ್ದರು. ಬ್ರಹ್ಮಯಕ್ಷನ ದರ್ಶನ ಪಡೆಯಲು ಜನರು ಕಾತುರರಾಗಿದ್ದರು. ಬ್ರಹ್ಮಯಕ್ಷನು ಗರ್ಭಗುಡಿಯಲ್ಲಿ ಉತ್ತರಾಭಿಮುಖವಾಗಿ ಇದ್ದುದರಿಂದ ಶ್ರಾವಕ ಶ್ರಾವಕಿಯರಿಗಲ್ಲದೆ ಅನ್ಯ ಜಾತಿಯ ಜನರಿಗೆ ದರ್ಶನ ಪಡೆಯಲು ಅಸಾಧ್ಯವಾಗಿತ್ತು. ತಮ್ಮ ಆಸೆಯನ್ನು ಬಸದಿಯ ಮುಖಂಡರಿಗೆ ತಿಳಿಸಿದರು. ಹೀಗಾಗಿ ದೇವಾದಿದೇವತೆಗಳ ಆಶೀರ್ವಾದ ಹಾಗೂ ಶ್ರೀ ಬ್ರಹ್ಮಯಕ್ಷನ ಅನುಮತಿಯಿಂದ ಪುರೋಹಿತ ವರ್ಗ ಹಾಗೂ ಶ್ರಾವಕ ಶ್ರಾವಕಿಯರು ಒಂದು ನಿರ್ಧಾರವನ್ನು ತೆಗೆದುಕೊಳ್ಳುತ್ತಾರೆ.

ಚೈತ್ರಮಾಸದ ಯುಗಾದಿಯಂದು ಬ್ರಹ್ಮಯಕ್ಷನನ್ನು ಬ್ರಹ್ಮ ಗುಂಡದಿಂದ ಇಳಿಸಿ ಪೂರ್ವಾಭಿಮುಖವಾಗಿ ಇಡುವುದು ಹಾಗೂ ಜೇಷ್ಠ ಮಾಸದ ಅಮಾವಾಸ್ಯೆಯಂದು ಪುನಃ ಬ್ರಹ್ಮಯಕ್ಷನನ್ನು ಬ್ರಹ್ಮ ಸ್ತಂಭದಲ್ಲಿ ಇಡಲಾಗುವುದು. ಈ ತೀರ್ಮಾನವು ಎಲ್ಲಾ ಜನರಿಗೆ ಬ್ರಹ್ಮಯಕ್ಷನ ದರ್ಶನವನ್ನು ಪಡೆಯುವಂತಾಯಿತು. ವರ್ಷ ಕಳೆದಂತೆಯೇ ಯುಗಾದಿಯ ದಿನದಂದು ಬ್ರಹ್ಮಯಕ್ಷನನ್ನು ಪೂರ್ವಾಭಿಮುಖವಾಗಿ ಕೆಳಗಿಡುವುದಲ್ಲದೆ, ಧ್ವಜಾರೋಹಣ ಮಾಡಿ ಮುಂಬರುವ 6ನೇ ದಿನದಂದು ಶ್ರೀ ಅನಂತನಾಥ ಸ್ವಾಮಿ, ಸರ್ವಾಹ್ನಯಕ್ಷ, ಕ್ಷೇತ್ರಪಾಲ ಪಾತ್ರಿ, ಬ್ರಹ್ಮಯಕ್ಷ ಪಾತ್ರಿಯೊಂದಿಗೆ ರಥಾರೋಹಣವಾಗಿ ವಿಜ್ರಂಭಣೆಯಿಂದ ರಥೋತ್ಸವವನ್ನು ಮಾಡಲೂ ಪ್ರಾರಂಭಿಸಿತು. ನೆಲ್ಲಿಕಾಡು ಎಂಬ ಗ್ರಾಮದ ಜನರು ಶ್ರೀಬ್ರಹ್ಮಯಕ್ಷನ ಹಲವು ಮಹಿಮೆಗಳನ್ನು ಕಂಡುಕೊಂಡಿದ್ದಾರೆ.


ಆ ಕಾರಣ ನೆಲ್ಲಿಕಾಡು ಇಂದು ಅತಿಶಯ ಶ್ರೀಕ್ಷೇತ್ರ ನೆಲ್ಲಿಕಾರು ಎಂದು ಪರಿವರ್ತನೆಯಾಗಿದೆ. ತನ್ನ ಸನ್ನಿಧಿಗೆ ಬರುವ ಭಕ್ತರನ್ನು ಕಾಪಾಡುವ ಬ್ರಹ್ಮಯಕ್ಷ ತುಂಬಾ ಜನಪ್ರಿಯನಾಗಿದ್ದಾನೆ.

ಹೀಗೆ ಹಲವಾರು ವಿಷಯಗಳು ನಮ್ಮ-ನಿಮ್ಮೆಲ್ಲರ ನಡುವೆ ಇದ್ದಿರಬಹುದು. ನಮಗೆ ಆ ವಿಷಯಗಳು ತಿಳಿದಿದ್ದರೂ ಇನ್ನೊಬ್ಬರಿಗೆ ತಿಳಿಸುವಲ್ಲಿ ವಿಫಲರಾಗುತ್ತೇವೆ. ನಮ್ಮ ಜೈನ ತೀರ್ಥಕ್ಷೇತ್ರಗಳ ಇತಿಹಾಸಗಳನ್ನು ನಾವೂ ತಿಳಿದು ಇನ್ನೊಬ್ಬರಿಗೂ ತಿಳಿಸೋಣ.

ಜೈ ಜಿನೇಂದ್ರ

Get In Touch With Us info@kalpa.news Whatsapp: 9481252093

Tags: Jain BasadiKannadaNewsWebsiteLatestNewsKannadaNellikaru Villageಜೈ ಜಿನೇಂದ್ರಜೈನ ಬಸದಿನೆಲ್ಲಿಕಾರುಶ್ರೀ ಅನಂತನಾಥ ಸ್ವಾಮಿ
Share227Tweet123Send
Aniruddha Vasishta S R

Aniruddha Vasishta S R

Editor-in-Chief

Previous Post

ದೇಶದ ಪ್ರತಿಯೊಬ್ಬ ಪ್ರಜೆಯು ಈಗ ಸಾವಿನೊಡನೆ ಹೋರಾಡಬೇಕಿದೆ

Next Post

ಆತ್ಮ ನಿರ್ಭರ ಭಾರತ ಭಾರತೀಯರಿಗೆ ಹೊಸದೇನಲ್ಲ, ಎಲ್ಲವೂ ಹಳೆಯ ಪದ್ಧತಿಗಳೇ

kalpa News

kalpa News

Next Post
ಆತ್ಮ ನಿರ್ಭರ ಭಾರತ ಭಾರತೀಯರಿಗೆ ಹೊಸದೇನಲ್ಲ, ಎಲ್ಲವೂ ಹಳೆಯ ಪದ್ಧತಿಗಳೇ

ಆತ್ಮ ನಿರ್ಭರ ಭಾರತ ಭಾರತೀಯರಿಗೆ ಹೊಸದೇನಲ್ಲ, ಎಲ್ಲವೂ ಹಳೆಯ ಪದ್ಧತಿಗಳೇ

Leave a Reply Cancel reply

Your email address will not be published. Required fields are marked *

No Result
View All Result
Indian Railways Recruits 5.56 Lakh Since 2014
English Articles

Indian Railways Recruits 5.56 Lakh Since 2014 | 1.61 Lakh More Vacancies Underway

by kalpa News
July 30, 2026
0

Kalpa Media House  |  New Delhi  | 5.56 Lakh Recruitments Done Since 2014 (Up to June 2026), Including 50,485 in...

Read moreDetails
11-Year-Old Mysuru Girl Writes Children's Ramayana in Just 15 Days

11-Year-Old Mysuru Girl Writes Children’s Ramayana in Just 15 Days

July 27, 2026
Kotak | creating fresh opportunities for SMEs

Growth Is No Longer Just a Bengaluru Story: Kotak

July 24, 2026
Prayagraj - Yesvantpur Special Weekly Express Trains

Special Weekly Express Trains Between Prayagraj and Yesvantpur Announced

July 23, 2026
Nestlé India Reports Strong Q1 Growth

Nestlé India Reports Strong Q1 Growth; Sales Up 25.4%, Profit Jumps 47.9%

July 23, 2026
kalpa.news

Copyright © 2026 Kalpa News. Designed by KIPL

Navigate Site

  • Advertise With Us
  • Grievances
  • Privacy & Policy
  • About Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected by Kalpa News!!
No Result
View All Result
  • Home
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಹುಬ್ಬಳ್ಳಿ-ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಯಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
    • ವಿಜಯನಗರ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
    • ಡಾ. ಮೈತ್ರೇಯಿ ಆದಿತ್ಯಪ್ರಸಾದ್
  • ರೈಲ್ವೆ ಸುದ್ದಿಗಳು
  • ಇತರೆ
    • ವಿಜ್ಞಾನ-ತಂತ್ರಜ್ಞಾನ
    • ಜಾಬ್-ಸ್ಟ್ರೀಟ್
    • ಕೈ ರುಚಿ
    • ನಿತ್ಯ ಪಂಚಾಂಗ/ದಿನ ವಿಶೇಷ
    • ಮುಂಜಾನೆ ಸುವಿಚಾರ
    • ಆಧ್ಯಾತ್ಮ/ಭಕ್ತಿಭಾವ

Copyright © 2026 Kalpa News. Designed by KIPL