ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಮೋದಿ ಬಂದು ಭಾರತೀಯರು ಸ್ವಾವಲಂಭಿಯಾಗಬೇಕು. ಎಲ್ಲಾ ವಸ್ತುಗಳು ಭಾರತದಲ್ಲಿಯೇ ತಯಾರಾಗಬೇಕು. ಜಾಗತಿಕ ಮಟ್ಟದಲ್ಲಿ ಭಾರತ ಸ್ವಾವಲಂಭಿ ಆಗಬೇಕು ಎಂದು ಭಾರತೀಯರಿಗೆ ಕರೆಕೊಟ್ಟರು.
ಆದರೆ ಭಾರತ ಸ್ವಾವಲಂಭಿ ಆಗಿರುವುದು ಇಂದು ಮೋದಿ ಹೇಳಿದ್ದಕ್ಕೆ ಆಗಲಿಲ್ಲ. ಬದಲಾಗಿ ಹಿಂದಿನಿಂದ ನಡೆದುಕೊಂಡು ಬಂದ ಪದ್ಧತಿಯಲ್ಲೇ ಇತ್ತು ಭಾರತದ ಸ್ವಾವಲಂಭಿ ಕಲ್ಪನೆ.
ಸ್ವಲ್ಪ ಪುರಾಣದ ಕಾಲಕ್ಕೆ ಭಾರತ ಹೇಗಿತ್ತೆಂದು ಯೋಚಿಸಿದರೆ ನಮಗೆ ಸ್ಪಷ್ಟತೆ ಸಿಗಬಹುದೇನೋ. ಹಿಂದಿನ ಕಾಲದಲ್ಲಿ ಶಸ್ತ್ರಾಸ್ತ್ರಗಳ ಪ್ರಯೋಗ ರಾಜ ಮಹಾರಾಜರುಗಳು ಜಗತ್ತಿಗೆ ಪರಿಚಯಿಸುವ ಮೂಲಕ ಹೀಗೂ ಒಂದು ಕಲೆಯಿದೆ ಎಂಬುದು ತೋರಿಸಿದರು.
ರಾಮ ಸೇತು ಕಟ್ಟುವ ಮೂಲಕ ಜಗತ್ತಿಗೆ ಸೇತುವೆಗಳ ನಿರ್ಮಾಣದ ಬುನಾದಿ ಹಾಕಿ ಕೊಟ್ಟಿತು ಭಾರತ. ಸೀತಾಪಹರಣ ದೃಶ್ಯ ನೋಡಿದರೆ ವಿಮಾನಗಳ ತಂತ್ರಜ್ಞಾನ ಅಂದಿನ ಕಾಲದಲ್ಲಿ ಇತ್ತು ಹಾಗೂ ಭಾರತ ಅದನ್ನು ಬಳಸುತ್ತಿತ್ತು ಎಂಬುದು ನೋಡಬಹುದು.
ಗೂಢಾಚಾರಿಕೆ ಮೂಲಕ ರಾಜರು ಯುದ್ಧದ ಸೂಚನೆಗಳನ್ನು ಗ್ರಹಿಸುತ್ತಿದ್ದರು ಹಾಗೂ ಪತ್ರಗಳ ಮುಖಾಂತರ ವ್ಯವಹಾರ ನಡೆಯುತ್ತಿತ್ತು. ಶಿಕ್ಷಣ ವ್ಯವಸ್ಥೆಗೆ ಗುರುಕುಲ ಪದ್ದತಿ ಅನುಸರಿಸುತ್ತಿತ್ತು.
ಇನ್ನು ಆಧುನಿಕ ಯುಗಕ್ಕೆ ಬಂದರೇ, ಗಾಂಧೀಜಿ ಚರಕದ ಮೂಲಕ ಜಗತ್ತಿಗೆ ಸ್ವದೇಶಿ ವಸ್ತ್ರಗಳನ್ನು ನಿರ್ಮಿಸುವುದನ್ನು ಹೇಳಿಕೊಟ್ಟರು. ಟಾಟಾ ಇನ್ಫೋಸಿಸ್’ನಂತಹ ಭಾರತದ ಕಂಪನಿಗಳು ಜಗತ್ತಿಗೆ ಭಾರತದ ಕೌಶಲ್ಯವನ್ನು ತೋರಿಸಿದರು. ಭಾರತ ವಿದೇಶಗಳಿಗೆ ಚಿನ್ನವನ್ನು, ಇಂಜಿನಿರ್ಯ, ಡಾಕ್ಟರ್, ಮುಂತಾದ ಚಾಣಾಕ್ಷ ಬುದ್ಧಿಯುಳ್ಳ ವ್ಯಕ್ತಿಗಳನ್ನು ಭಾರತ ಸನ್ನದ್ದಗೊಳಿಸಿ ಕಳುಹಿಸಿದೆ.
ಭಾರತ ಹಿಂದೆ ಸ್ವಾವಲಂಬಿ ಆಗಿತ್ತು. ಆದರೆ ಭಾರತದ ಮೇಲೆ ಹಲವಾರು ಆಕ್ರಮಣದಿಂದಾಗಿ ಹಾಗೂ ಭಾರತದ ಆಡಳಿತ ನಡೆಸಿದ ಸರ್ಕಾರಗಳ ವಿಫಲ್ಯಗಳಿಂದಾಗಿ ಭಾರತ ತನ್ನ ಸ್ವಾವಲಂಬಿ ಉತ್ಪಾದನೆ ನೆಲಕಪ್ಪಳಿಸಿ ಭಾರತ ಅನಿವಾರ್ಯವಾಗಿ ವಿದೇಶಿ ವಸ್ತುಗಳ ಮೇಲೆ ಅವಲಂಭನೆ ಜಾಸ್ತಿಯಾಗುತ್ತಾ ಹೋಯಿತು.
ಈಗ ಮತ್ತೆ ಮೈಕೊಡವಿ ತನ್ನ ಹಿಂದಿನ ಸಂಸ್ಕೃತಿಯನ್ನು ಆತ್ಮ ನಿರ್ಭರ ಭಾರತ ಎಂಬ ಹೊಸ ಟ್ಯಾಗ್ ಲೈನ್’ನೊಂದಿಗೆ ಮೇಲೇಳುತ್ತಿದೆಯೇ ಹೊರತು ಭಾರತ ಹಿಂದಿನಿಂದಲೂ ಸ್ವಾವಲಂಬಿಯೇ. ಆತ್ಮ ನಿರ್ಭರವೇ.
Get In Touch With Us info@kalpa.news Whatsapp: 9481252093
Discussion about this post