ಬೆಂಗಳೂರು: ರಾಜ್ಯ ರಾಜಕೀಯ ದೊಂಡರಾಟದಲ್ಲಿ ಅಂತಿಮವಾಗಿ ಮುಖ್ಯಮಂತ್ರಿ ಸ್ಥಾನದಿಂದ ನಿರ್ಗಮಿಸುವ ಮುನ್ನ ರಾಜ್ಯದ ರೈತರಿಗೆ ಎಚ್.ಡಿ. ಕುಮಾರಸ್ವಾಮಿ ಬಂಪರ್ ಗಿಫ್ಟ್ ಕೊಟ್ಟಿದ್ದು, ಭೂಮಿಯಿಲ್ಲದ ರೈತರಿಗೆ, 2 ಹೆಕ್ಟೇರ್ ಗಿಂತ ಕಡಿಮೆ ಭೂಮಿ ಹೊಂದಿರುವ ರೈತರು ಅಥವಾ 1 ಲಕ್ಷ 20 ಸಾವಿರಕ್ಕಿಂತ ಕಡಿಮೆ ವರಮಾನ ಹೊಂದಿರುವವರಿಗಾಗಿ ಋಣಮುಕ್ತ ಕಾಯ್ದೆಯನ್ನು ಜಾರಿಗೊಳಿಸಿದ್ದಾರೆ.
ಈ ಕುರಿತಂತೆ ಮಾತನಾಡಿರುವ ಕುಮಾರಸ್ವಾಮಿಯವರು, ವಿಶ್ವಾಸಮತ ಯಾಚನೆಗೂ ಮುನ್ನ ರಾಜ್ಯ ಸರ್ಕಾರ ಋಣಮುಕ್ತ ಕಾಯ್ದೆಯನ್ನು ಜಾರಿಗೊಳಿಸಿದ್ದು, ಇದರಿಂದ ಕಡಿಮೆ ಭೂಮಿ ಹೊಂದಿದ ರೈತರಿಗೆ ಅನುಕೂಲವಾಗಲಿದೆ. ಈ ಕಾಯ್ದೆಗೆ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅಂಗೀಕರಿಸಿದ್ದಾರೆ ಎಂದಿದ್ದಾರೆ.
ಖಾಸಗಿ ಲೇವಾದೇವಿದಾರರಿಂದ ಸಾಲ ಪಡೆದವರಿಗೆ ಒನ್ ಟೈಮ್ ರಿಲೀಫ್ ಆಗಲಿದ್ದು, 1.20 ಲಕ್ಷ ಆದಾಯ ಹೊಂದಿರುವವರು ಕೈ ಸಾಲ, ಚಿನ್ನ ಅಡವಿಟ್ಟವರು 90 ದಿನದೊಳಗೆ ನೋಡಲ್ ಅಧಿಕಾರಿಯನ್ನು ಭೇಟಿಯಾಗಿ ದಾಖಲೆ ತಂದು ಕೊಟ್ಟದರೆ ಸಾಲಮನ್ನಾ ಆಗಲಿದೆ ಎಂದು ವಿವರಿಸಿದರು.
Discussion about this post