ವಾಷಿಂಗ್ಟನ್: ಅಮೆರಿಕಾ ವಿಶೇಷ ಸೇನಾ ಪಡೆಗಳ ಕಾರ್ಯಾಚರಣೆ ವೇಳೆ ಹೆದರಿಕೊಂಡೇ ತನ್ನನ್ನು ತಾನು ಸ್ಫೋಟಿಸಿಕೊಂಡು ನಾಯಿಯಂತೆ ಸತ್ತ ಐಸಿಸಿ ಮುಖ್ಯಸ್ಥ ನಟೋರಿಯಸ್ ಉಗ್ರ ಅಬೂಬಕರ್ ಅಲ್ ಬಾಗ್ದಾದಿಯ ಹೆಣ ಏನಾಯಿತು ಎಂಬ ಮಾಹಿತಿಯನ್ನು ಅಮೆರಿಕಾ ಬಿಡುಗಡೆ ಮಾಡಿದೆ.
ಅಮೆರಿಕಾ ಸರ್ಕಾರ ಬಿಡುಗಡೆ ಮಾಡಿರುವ ಮಾಹಿತಿಯಂತೆ, ಆತ ತನ್ನನ್ನು ತಾನು ಸ್ಫೋಟಿಸಿಕೊಂಡ ಕಾರಣ ಆತನ ದೇಹ ಸಂಫೂರ್ಣ ಛಿದ್ರ ಛಿದ್ರವಾಗಿತ್ತು. ಹೀಗಾದ ನಂತರ ಅಳಿದುಳಿದ ದೇಹದ ಭಾಗಗಳು ಯಾರಿಗೂ ಸಿಗಬಾರದು ಎಂದು ಸಮುದ್ರಕ್ಕೆ ಎಸೆಯಲಾಗಿದೆ.
ಸಿರಿಯಾದ ವಾಯುವ್ಯ ಭಾಗದಲ್ಲಿರುವ ಹಳ್ಳಿಯೊಂದರ ತನ್ನ ಅಡಗುತಾಣದಲ್ಲಿ ಅವಿತಿದ್ದ ಬಾಗ್ದಾದಿ ಇರುವುದನ್ನು ಖಚಿತಪಡಿಸಿಕೊಂಡು ಆತನ ಆ ಅಡಗುತಾಣದ ಮೇಲೆ ದಾಳಿಯನ್ನು ನಡೆಸಿದ್ದ ಅಮೆರಿಕಾ ಸೇನಾಪಡೆಯ ವಿಶೇಷ ಕಾರ್ಯಾಚರಣೆ ವೇಳೆ ಬಾಗ್ದಾದಿ ತನ್ನನ್ನು ತಾನೇ ಸ್ಫೋಟಿಸಿಕೊಂಡು ಸತ್ತಿದ್ದ.
ಆನಂತರ ಆತನ ದೇಹದ ಭಾಗಗಳನ್ನು ಒಂದೆಡೆ ಸಂಗ್ರಹಿಸಿದ ಅಮೆರಿಕಾದ ವಿಶೇಷ ಪಡೆಗಳು ಅದನ್ನು ಅಮೆರಿಕಾದ ನೌಕಾದಳದ ಹಡಗೊಂದರ ಮೂಲಕ ದೇಹಕ್ಕೆ ಅಂತಿಮ ವಿಧಿವಿಧಾನಗಳನ್ನು ನಡೆಸಿ ಬಳಿಕ ಅದನ್ನು ಸಮುದ್ರಕ್ಕೆ ಎಸೆದಿದ್ದಾರೆ.
ಹಿಂದೆ ಒಸಾಮಾ ಬಿನ್ ಲಾಡೆನ್’ನನ್ನು ಅಮೆರಿಕಾದ ಸೇನಾ ಪಡೆಗಳು ಹತ್ಯೆ ಮಾಡಿದ ನಂತರ ಇಸ್ಲಾಮಿಕ್ ಕಾನೂನಿನಲ್ಲಿ ಸೂಚಿಸಿರುವಂತೆ ಲಾಡೆನ್ ದೇಹಕ್ಕೆ ಸ್ನಾನವನ್ನು ಮಾಡಿಸಿ ಬಳಿಕ ಅದನ್ನು ಸರಿಯಾಗಿ ಮುಚ್ಚಿ ಬಳಿಕ ಲಾಡೆನ್ ದೇಹವನ್ನು ಸಮುದ್ರದಾಳದಲ್ಲಿ ಮುಳುಗಿಸಲಾಗಿತ್ತು. ಈಗ ಬಾಗ್ದಾದಿಯ ಹೆಣವನ್ನೂ ಸಹ ಅದೇ ರೀತಿ ಮಾಡಲಾಗಿದೆ.
Discussion about this post