ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಹೈದರಾಬಾದ್: ದೇಶದಾದ್ಯಂತ ಕೊರೋನಾ ವೈರಸ್ ಲಾಕ್’ಡೌನ್ ಹಿನ್ನೆಲೆಯಲ್ಲಿ ದೇಶದ ಇಡಿಯ ಚಿತ್ರರಂಗ ಸ್ಥಬ್ದಗೊಂಡಿದೆ. ಈ ಹಿನ್ನೆಲೆಯಲ್ಲಿ ಮೆಗಾಸ್ಟಾರ್ ಚಿರಂಜೀವಿ ಮನೆಯಲ್ಲೇ ಉಳಿದಿದ್ದು, ತಮ್ಮ ಮೊಮ್ಮಗಳೊಂದಿಗೆ ಆಡುತ್ತಿರುವ ವೀಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ತಮ್ಮ ಒಂದು ವರ್ಷದ ಮೊಮ್ಮಗಳೊಂದಿಗೆ ಟಿವಿ ಮುಂದೆ ಆಡುತ್ತಾ ಕುಳಿತ ಚಿರಂಜೀವಿ, ಏನು ಬೇಕು, ಯಾವ ಹಾಡು ಬೇಕು ಎಂದು ಕೇಳುತ್ತಾರೆ. ಮ್ಮಿಮ್ಮಿ ಹಾಡು ಬೇಕು ಎಂದು ಕೇಳಿ ಹಾಕಿಸಿಕೊಳ್ಳುವ ಮಗು, ಎಂಜಾಯ್ ಮಾಡುತ್ತದೆ. ಆದರೆ, ನಡುವೆ ಬೇಕೆಂತಲೇ ಹಾಡನ್ನು ಚಿರಂಜೀವಿ ನಿಲ್ಲಿಸಿದ ವೇಳೆ ಮಗು ಹಾಡು ಬೇಕು ಎಂದು ಹಠ ಮಾಡುತ್ತದೆ. ಮಗುವಿನ ಆಸೆಗಾಗಿ ಮತ್ತೆ ಹಾಡು ಹಾಕುತ್ತಾರೆ.
ಈ ವಿಚಾರವನ್ನು ಟ್ವೀಟ್ ಮಾಡಿರುವ ಚಿರಂಜೀವಿ, ನಾನು ಆಶ್ಚರ್ಯ ಚಕಿತನಾದೆ. ಸಂಗೀತದ ಶಕ್ತಿ ಎಂತಹುದ್ದು. ಕೇವಲ 1 ವರ್ಷದ ಪುಟ್ಟ ಮಗು ಸಂಗೀತವನ್ನು ಹೇಗೆ ಆನಂದಿಸಿತು ಮತ್ತು ನೃತ್ಯ ಚಲನೆಗಳನ್ನು ಮಾಡಲು ಪ್ರಯತ್ನಿಸಿದ್ದು ನನಗೆ ಸಂತೋಷ ನೀಡಿದೆ ಎಂದು ಟ್ವೀಟ್ ಮಾಡಿದ್ದಾರೆ.
Get in Touch With Us info@kalpa.news Whatsapp: 9481252093
















