ನವದೆಹಲಿ: ಲೋಕಸಭಾ ಚುನಾವಣೆ ಹತ್ತಿರವಾಗುತ್ತಿರುವಂತೆಯೇ, ಬಿಜೆಪಿ ಈಗಲೇ ಬಿರುಸಿನ ತಯಾರಿ ಆರಂಭಿಸಿದ್ದು, ಹಲವು ರೀತಿಯ ತಂತ್ರಗಾರಿಕೆಯನ್ನು ರೂಪಿಸುತ್ತಿದೆ. ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ನಿನ್ನೆ ನಟಿ ಮಾಧುರಿ ದೀಕ್ಷಿತ್ ಅವರನ್ನು ಭೇಟಿಯಾಗಿದ್ದು, ಇದರ ಭಾಗವೇ ಎಂದು ಹೇಳಲಾಗಿದೆ.
ನಿನ್ನೆ ಮುಂಬೈಗೆ ಭೇಟಿ ನೀಡಿದ್ದ ಅಮಿತ್ ಶಾ, ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಜೊತೆಯಲ್ಲಿ ಮಾಧುರಿ ದೀಕ್ಷಿತ್ ಹಾಗೂ ಉದ್ಯಮಿ ರತನ್ ಟಾಟಾ ಅವರನ್ನು ಭೇಟಿಯಾದರು.
It was pleasant meeting the noted bollywood actress @MadhuriDixit and Dr. Shriram Nene as a part of “Sampark For Samarthan” initiative at their home in Mumbai, Maharashtra. Have discussed the achievements and path breaking initiatives of PM @narendramodi govt in last 4 years. pic.twitter.com/slBh5mXAf6
— Amit Shah (@AmitShah) June 6, 2018
ಸುಮಾರು 40 ನಿಮಿಷಗಳ ಕಾಲ ಮಾಧುರಿ ಮನೆಯಲ್ಲೇ ಮಾತುಕತೆ ನಡೆಸಿದ ಅಮಿತ್ ಶಾ, ಬಿಜೆಪಿ ಕೇಂದ್ರ ಸರ್ಕಾರದ ನಾಲ್ಕು ವರ್ಷಗಳ ಸಾಧನೆಯ ಬುಕ್ಲೆಟ್ ನೀಡಿ, ವಿವರಣೆ ನೀಡಿದರು. ಈ ವೇಳೆ ಮಾಧುರಿ ಪತಿ ವೈದ್ಯ ಶ್ರೀರಾಮ್ ನೇನಿ ಸಹ ಉಪಸ್ಥಿತರಿದ್ದರು.
ಬಿಜೆಪಿ ಸರ್ಕಾರದ ನಾಲ್ಕು ವರ್ಷಗಳ ಸಾಧನೆಯನ್ನು ಪ್ರಚಾರ ಮಾಡಲು ಸಂಪರ್ಕ್ ಫಾರ್ ಸಮರ್ಥನ್ ಎಂಬ ಕಾರ್ಯಕ್ರಮವನ್ನು ಕಳೆದ ತಿಂಗಳು ಬಿಜೆಪಿ ಜಾರಿಗೊಳಿಸಿದೆ.
Met Shri @RNTata2000 ji as part of “Sampark For Samarthan” campaign. I took him through Modi government’s development achievements and initiatives. It was nice meeting him and greatly value our conversation. pic.twitter.com/IeT07DmK2A
— Amit Shah (@AmitShah) June 6, 2018
Discussion about this post