ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ನವದೆಹಲಿ: ಈರುಳ್ಳಿ ಹೆಚ್ಚುವಾಗ ಮಾತ್ರವಲ್ಲ ಕೊಳ್ಳುವಾಗಲೂ ಸಹ ಕಣ್ಣಲ್ಲಿ ನೀರು ಬರುವ ಮಟ್ಟಿಗೆ ಬೆಲೆ ಏರಿಕೆಯಾಗಿರುವ ಹಿನ್ನೆಲೆಯಲ್ಲಿ ಈರುಳ್ಳಿ ಖರೀದಿ ಮಾಡುವವರಿಗೆ ಅಲ್ಲಿ ಲೋನ್/ಸಾಲ ದೊರೆಯುತ್ತದೆ.
ಹೌದು… ದೇಶದಲ್ಲಿ ಈರುಳ್ಳಿ ಬೆಲೆ ಏರಿಕೆಯಾಗಿರುವ ಹಿನ್ನೆಲೆಯಲ್ಲಿ ಪ್ರತಿಪಕ್ಷಗಳು ಕೇಂದ್ರ ಸರ್ಕಾರ ಹಾಗೂ ಬಿಜೆಪಿ ಆಡಳಿತವಿರುವ ರಾಜ್ಯ ಸರ್ಕಾರಗಳ ವಿರುದ್ಧ ಪ್ರತಿಭಟನೆ ನಡೆಸುತ್ತಿವೆ. ಇಂತಹ ಪ್ರತಿಭಟನೆ ಭಾಗವಾಗಿ ಉತ್ತರ ಪ್ರದೇಶದಲ್ಲಿ ಈ ರೀತಿಯದ್ದೊಂದು ವಿಚಿತ್ರ ಲೋನ್ ನೀಡಲಾಗುತ್ತಿದೆ.
ಸಮಾಜವಾದಿ ಪಕ್ಷದ ಯುವ ಮೋರ್ಚಾ ಘಟಕದಿಂದ ಇಂತಹ ಒಂದು ವಿನೂತನ ಹಾಗೂ ವಿಚಿತ್ರ ಕೆಲಸ ಮಾಡಲಾಗುತ್ತಿದ್ದು, ಇದನ್ನು ಪ್ರತಿಭಟನೆ ಎಂದೇ ಬಿಂಬಿಸಲಾಗಿದೆ.
ಪ್ರಧಾನಿ ನರೇಂದ್ರ ಮೋದಿ ಪ್ರತಿನಿಧಿಸುವ ವಾರಣಾಸಿ ಕ್ಷೇತ್ರದಲ್ಲಿ ಇಂತಹ ಒಂದು ವಿಚಿತ್ರ ಕೌಂಟರನ್ನು ಸಮಾಜವಾದಿ ಪಕ್ಷ ಆರಂಭಿಸಿದ್ದು, ಇಲ್ಲಿ ಈರುಳ್ಳಿ ಕೊಳ್ಳುವವರಿಗೆ ಸಾಲ ನೀಡಲಾಗುತ್ತಿದೆ. ಇಲ್ಲಿ ಸಾಲ ಪಡೆಯುವವರು ತಮ್ಮ ಆಧಾರ್ ಕಾರ್ಡ್ ಹಾಗೂ ಬೆಳ್ಳಿಯ ವಸ್ತುಗಳನ್ನು ಅಡಮಾನ ಇಟ್ಟು ಸಾಲ ಪಡೆಯಬಹುದಾಗಿದೆ. ಅಲ್ಲದೇ ಕೆಲವು ಕಡೆಗಳಲ್ಲಿ ಈರುಳ್ಳಿಯನ್ನು ಸಂಗ್ರಹಿಸಲು ಲಾಕರ್’ಗಳನ್ನೂ ಸಹ ಆರಂಭಿಸಲಾಗಿದೆ.
ಈರುಳ್ಳಿ ಬೆಲೆ ಗಗನಕ್ಕೇರಿರುವ ಹಿನ್ನೆಲೆಯಲ್ಲಿ ಪ್ರಧಾನಿ ಮೋದಿ ಸರ್ಕಾರದ ವಿರುದ್ಧ ಪ್ರತಿಭಟನೆ ಮಾಡುವ ಮಾರ್ಗವಾಗಿ ಈ ರೀತಿಯ ವಿಚಿತ್ರ ಕೌಂಟರನ್ನು ತೆರೆಯಲಾಗಿದೆ ಎಂದು ಸಮಾಜವಾದಿ ಪಕ್ಷದ ಯುವಮೋರ್ಚಾ ಘಟಕ ಹೇಳಿಕೊಂಡಿದೆ.
Get in Touch With Us info@kalpa.news Whatsapp: 9481252093
Discussion about this post