No Result
View All Result
Rani KoHEnur Calls Transgender Bill “Absurd”, Questions Lawmakers in Explosive Podcast Interview
English Articles

Rani KoHEnur Calls Transgender Bill “Absurd”, Questions Lawmakers in Explosive Podcast Interview

by ಕಲ್ಪ ನ್ಯೂಸ್
April 9, 2026
0

Kalpa Media House  |  Mumbai | Artist, drag performer, and activist Rani KoHEnur (Sushant Divgikar) has ignited widespread conversation following...

Read moreDetails
RPF team Seized 40.495 Kgs Ganja at Ballari Railway station

RPF team Seized 40.495 Kgs Ganja at Ballari Railway station

April 7, 2026
ಶ್ರೀ ಕೊಟ್ಟೂರೇಶ್ವರ ಜಾತ್ರೆ ಪ್ರಯುಕ್ತ | ಹೊಸಪೇಟೆ – ತೊಳಹುಣಸೆ ನಡುವೆ ವಿಶೇಷ ರೈಲು ಸಂಚಾರ

Extension of Special Train Services to Manage Summer Rush

April 7, 2026
Interior / upgradation of Next-Generation Amrit Bharat Coaches. Sample coach ready

Interior / upgradation of Next-Generation Amrit Bharat Coaches. Sample coach ready

April 6, 2026
ಶ್ರೀ ಕೊಟ್ಟೂರೇಶ್ವರ ಜಾತ್ರೆ ಪ್ರಯುಕ್ತ | ಹೊಸಪೇಟೆ – ತೊಳಹುಣಸೆ ನಡುವೆ ವಿಶೇಷ ರೈಲು ಸಂಚಾರ

Special Train Between Bengaluru Cantt and Chennai

April 3, 2026
  • Advertise With Us
  • Grievances
  • About Us
  • Contact Us
Saturday, April 11, 2026
Follow Us
kalpa.news
Advertisement
ADVERTISEMENT
  • Home
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಹುಬ್ಬಳ್ಳಿ-ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಯಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
    • ವಿಜಯನಗರ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
    • ಡಾ. ಮೈತ್ರೇಯಿ ಆದಿತ್ಯಪ್ರಸಾದ್
  • ರೈಲ್ವೆ ಸುದ್ದಿಗಳು
  • ಇತರೆ
    • ವಿಜ್ಞಾನ-ತಂತ್ರಜ್ಞಾನ
    • ಜಾಬ್-ಸ್ಟ್ರೀಟ್
    • ಕೈ ರುಚಿ
    • ನಿತ್ಯ ಪಂಚಾಂಗ/ದಿನ ವಿಶೇಷ
    • ಮುಂಜಾನೆ ಸುವಿಚಾರ
    • ಆಧ್ಯಾತ್ಮ/ಭಕ್ತಿಭಾವ
Subscribe
kalpa.news
No Result
View All Result
  • Home
  • ರಾಜಕೀಯ
  • ಶಿವಮೊಗ್ಗ
  • ಜಿಲ್ಲೆ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
  • ರೈಲ್ವೆ ಸುದ್ದಿಗಳು
  • ಇತರೆ
ADVERTISEMENT
Home Editorial

ಬಂದವರನ್ನೆಲ್ಲಾ ಬಿಟ್ಟುಕೊಳ್ಳಲು ದೇಶವೇನು ಧರ್ಮಛತ್ರವಾ?

ಕಲ್ಪ ನ್ಯೂಸ್ by ಕಲ್ಪ ನ್ಯೂಸ್
August 2, 2018
in Editorial
0
Share on FacebookShare on TwitterShare on WhatsApp

ಆರಂಭದಲ್ಲೇ ಹೇಳಿ ಬಿಡುತ್ತೇನೆ… ದೇಶ ಪ್ರೇಮ ಇರುವ ಯಾವುದೇ ಭಾರತೀಯ ಇಂತಹ ನೀಚ ಕೃತ್ಯವನ್ನು ಮಾಡುವುದಿಲ್ಲ.

ದಶಕಗಳಗಟ್ಟಲೆ ದೇಶವನ್ನು ಹರಿದು ತಿಂದ, ತಮ್ಮ ಸ್ವಾರ್ಥಕ್ಕಾಗಿ ದೇಶಕ್ಕೇ ವಿಷವಿಕ್ಕಿದ ಜಂತುಗಳೆಲ್ಲವೂ ಇಂದು ಎಲ್ಲರನ್ನೂ ಸಮಾನವಾಗಿ ಕಾಣಬೇಕು ಎಂದು ಹೇಳಿಕೊಡಲು ಆರಂಭಿಸಿವೆ. ಅಯ್ಯಾ ಮಹಾನುಭಾವಗಳಿರಾ, ಇಂತಹ ಸದ್ಗುಣಗಳನ್ನು ದೇಶದ ಮೂಲ ನಿವಾಸಿಗಳಿಗೆ ನೀವು ಹೇಳಿಕೊಡಬೇಕಿಲ್ಲ. ಇಡಿಯ ಜಗತ್ತಿಗೆ ವಿಶ್ವ ಭ್ರಾತೃತ್ವವನ್ನು ಸಾರಿದ ಏಕೈಕ ಧರ್ಮ ಹಿಂದೂ ಧರ್ಮ ಹಾಗೂ ನಮ್ಮ ಭಾರತ ದೇಶ.

ಇಂತಹ ದೇಶಕ್ಕೆ ತಮ್ಮ ಸ್ವಾರ್ಥಕ್ಕೆ ಬುದ್ದಿ ಹೇಳುವುದು ಮಾತ್ರವಲ್ಲ ಅವರಾಡುವ ಮಾತುಗಳನ್ನು ಕೇಳಿದರೆ ರಕ್ತ ಕುದಿಯುತ್ತದೆ. ವಿಚಾರ ಏನು ಎಂದು ನಿಮಗೆ ಈಗಾಗಲೇ ತಿಳಿದಿರಬಹುದು… ಅದೇ ಅಕ್ರಮ ಬಾಂಗ್ಲಾ ವಲಸಿಗರು ಹಾಗೂ ಎನ್ ಆರ್ ಸಿ ಹಾಗೂ ದೇಶದಲ್ಲಿರುವ ಜಂತುಗಳು..

ಹೌದು… ಯಾವಾಗ 2014ರಲ್ಲಿ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರ ದೇಶದಲ್ಲಿ ಅಸ್ಥಿತ್ವಕ್ಕೆ ಬಂದಿತೋ ಅಲ್ಲಿಯವರೆಗೂ ದೇಶದಲ್ಲಿ ಗೋಡೌನ್ ಹೆಗ್ಗಣಗಳಂತೆ ತಿಂದು ತೇಗಿ, ದೇಶವನ್ನು ಅರಾಜಕವನ್ನಾಗಿ ಮಾಡಿ ಮೆರೆದ ಎಲ್ಲ ನೀಚಿರಿಗೆ ತೊಡೆ ನಡಗಲು ಆರಂಭವಾಗಿತ್ತು. ಇದರಲ್ಲಿ ಮುಖ್ಯವಾದವುಗಳಲ್ಲಿ ಒಂದು ಅಕ್ರಮ ವಲಸಿಗರ ಹಾವಳಿ.

ವಾಸ್ತವವಾಗಿ ಮೋದಿ ಸರ್ಕಾರ ಅಸ್ಥಿತ್ವಕ್ಕೆ ಬಂದ ದಿನದಿಂದಲೇ ಈ ಅಕ್ರಮ ವಲಸಿಗರ ಹಾಗೂ ಅವರಿಗೆ ಇಲ್ಲಿ ಅಕ್ರಮವಾಗಿ ಪೌರತ್ವ ನೀಡಿರುವ ಕುರಿತಾಗಿನ ವಿಚಾರದಲ್ಲಿ ಹಿಡನ್ ಕಾರ್ಯಾಚರಣೆ ನಡೆಯುತ್ತಲೇ ಇತ್ತು ಎಂಬುದು ಬಹಳಷ್ಟು ಮಂದಿಗೆ ತಿಳಿದಿರಲಿಕ್ಕಿಲ್ಲ. ಆದರೆ, ಅದು ಈಗ ಎನ್ ಆರ್ ಸಿ ಕರಡು ಸಿದ್ದವಾದ ನಂತರ ಬಿಸಿ ತಾಕುತ್ತಿದೆ.

ಸ್ವಲ್ಪ ಇತಿಹಾಸವನ್ನು ನೋಡಿ… ಎಲ್ಲಿಂದಲೋ ವ್ಯಾಪಾರಕ್ಕೆಂದು ನಮ್ಮ ದೇಶಕ್ಕೆ ಬಂದವರನ್ನು ನಮ್ಮವರು ಬಿಟ್ಟುಕೊಂಡರು. ಒಳಗೆ ಬಂದ ನಂತರ ತಮ್ಮ ಮುಖವಾಡ ಕಳಚಿದ ಬ್ರಿಟೀಷರು ಇಡಿಯ ದೇಶವನ್ನು ಹಿಡಿತಕ್ಕೆ ತೆಗೆದುಕೊಂಡು 300 ವರ್ಷ ನಮ್ಮನ್ನು ಗುಲಾಮರಂತೆ ನಡೆಸಿಕೊಳ್ಳಲು ಪ್ರಮುಖ ಕಾರಣ ಅವರಿಗೆ ಸಹಕಾರ ನೀಡಿದ ದೇಶದ ಒಳಗೇ ಇದ್ದ ನಮ್ಮ ದೇಶದ ಮೂಲ ನಿವಾಸಿಗಳೇ ಆದ ಕೆಲವು ನೀಚರು.

ಯಾರು ಅವರೆಲ್ಲಾ? ನಮ್ಮವರೇ ನಮಗೆ ಹಿತ ಶತ್ರುಗಳಾಗಿ ತಲೆ ಹಿಡುಕ ಕೆಲಸ ಮಾಡಿದ್ದಕ್ಕಾಗಿಯೇ ಅಂತಹ ಸ್ಥಿತಿಗೆ ದೇಶ ತಲುಪಿತ್ತು.
ಇನ್ನು, ಬೇರು ಮಟ್ಟದಿಂದ ನೋಡುವುದಾದರೆ ದೇಶಿಗರೇ ಅಲ್ಲದ ಕುಟುಂಬವೊಂದು 60 ವರ್ಷ ದೇಶವನ್ನು ಹರಿದು ತಿಂದಿದೆ. ಈ ಕುಟುಂಬದ್ದೇ ಪ್ರಸಾದ ಈಗ ದೇಶಕ್ಕೆ ಕಾಡುತ್ತಿರುವ ಎಡಪಂಥೀಯ ಚಿಂತನೆಗಳು, ಎಡಪಕ್ಷಗಳು ಹಾಗೂ ಅಕ್ರಮ ವಲಸಿಗರು.

ಪ್ರಧಾನಿ ಮೋದಿ ನೇತೃತ್ವದ ಸರ್ಕಾರದ ಕಠಿಣ ನಿಲುವಿನ ಪರಿಣಾಮ ಅಸ್ಸಾಂ ನ ರಾಷ್ಟ್ರೀಯ ಜನಸಂಖ್ಯಾ ರಿಜಿಸ್ಟರ್ ಕರಡು ಈಗಷ್ಟೇ ಸಿದ್ಧವಾಗಿದೆ. ಪಟ್ಟಿಯಲ್ಲಿ ಬರೋಬ್ಬರಿ 40 ಲಕ್ಷ ಮಂದಿ ಭಾರತೀಯರು ಎಂದು ಹೇಳುವುದಕ್ಕೆ ಹಿಂದು-ಮುಂದೂ ಏನೂ ಇಲ್ಲ. 40 ಲಕ್ಷ ಜನರು ಮಾಹಿತಿ ನೀಡಬೇಕಾಗಿದೆ. ಆನಂತರ ಅವರು ಆಪೇಕ್ಷಣೆ ಸಲ್ಲಿಸಿದ ನಂತರ ಅಂತಿಮ ಎನ್ ಆರ್ ಸಿ ಪಟ್ಟಿಯನ್ನು ಬಿಡುಗಡೆ ಮಾಡಲಾಗುವುದು ಎಂದು ಚುನಾವಣಾ ಆಯೋಗದ ಆಯುಕ್ತ ಒ.ಪಿ. ರಾವತ್ ಸಹ ಹೇಳಿದ್ದಾರೆ.

ನಿಜವಾದ ಆಟ ಇರುವುದೇ ಇಲ್ಲಿ… ಇವರೆಲ್ಲಾ ಅಕ್ರಮವಾಗಿ ದೇಶದೊಳಗೆ ವಲಸೆ ಬಂದವರು. ಪ್ರಶ್ನೆ ಏನು ಎಂದರೆ, ಈ ಬಾಂಗ್ಲಾದೇಶಿಗರು ಅಕ್ರಮವಾಗಿ ಭಾರತದೊಳಗೆ ಬಂದಿದ್ದು ಹೇಗೆ? ಇವರಲ್ಲಿ ಹಲವರು ಭಾರತೀಯರಂತೆ ಗುರುತು ಪತ್ರ ಹೊಂದಿದ್ದಾರೆ ಎಂದರೆ ಇವರಿಗೆ ಇದನ್ನು ನೀಡಿದವರು ಯಾರು? ಬಾಂಗ್ಲಾ ಗಡಿಯಲ್ಲಿರುವ ಗಡಿ ಭದ್ರತಾ ಪಡೆ ಇಷ್ಟು ವರ್ಷ ಏನು ಮಾಡುತ್ತಿತ್ತು? ಅಂತಾರಾಷ್ಟ್ರೀಯ ಗಡಿಯನ್ನು ಹೊಂದಿರುವ ಅಲ್ಲಿನ ರಾಜ್ಯ ಸರ್ಕಾರಗಳು ಇದನ್ನು ಏಕೆ ತಡೆಯಲಿಲ್ಲ? ಹೀಗೆ ನೂರಾರು ಪ್ರಶ್ನೆಗಳಿವೆ.
ಇವಕ್ಕೆಲ್ಲಾ ಒಂದೇ ಉತ್ತರ ವೋಟ್ ಬ್ಯಾಂಕ್… ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟೆವು(?) ಎಂದು ಅಹಂಕಾರದಿಂದ ಬೀಗುವ ಕಾಂಗ್ರೆಸ್ ಸೃಷ್ಠಿಸಿದ ಪಾಪದ ಪಿಂಡ ವೋಟ್ ಬ್ಯಾಂಕ್… ಇದನ್ನು ಎಡಪಕ್ಷಗಳು, ಮಮತಾ ಬ್ಯಾನರ್ಜಿಯಂತಹ ನೀತಿಗೆಟ್ಟ ರಾಜಕಾರಣಿಗಳು ಅಕ್ರಮವಾಗಿ ಪೋಷಣೆ ಮಾಡಿಕೊಂಡು, ತಮ್ಮ ಸ್ಥಾನ ಭದ್ರ ಪಡಿಸಿಕೊಂಡವು.

ಈಶಾನ್ಯ ರಾಜ್ಯಗಳು, ಪಶ್ಚಿಮ ಬಂಗಾಳದಂತಹ ರಾಜ್ಯಗಳಲ್ಲಿ ಇವರೆಲ್ಲಾ ಲೀಲಾಜಾಲವಾಗಿ ಚುನಾವಣೆಯಲ್ಲಿ ಹೇಗೆ ಗೆಲುವು ಸಾಧಿಸುತ್ತಾರೆ ಎಂದುಕೊಂಡಿರಿ. ಚುನಾವಣೆಯಲ್ಲಿ ಇವರುಗಳು ಸಾಕಿದ ಪಾಪದ ಕೂಸುಗಳ ಮತಗಳಿಂದಷ್ಟೇ… ಪ್ರಜಾಪ್ರಭುತ್ವ ಎಂಬ ಹೆಸರಿನ ಅಡಿಯಲ್ಲಿ ಇಂತಹ ಅಕ್ರಮ ಸಂತಾನ ಸೃಷ್ಠಿಯಾಗುತ್ತಲೇ ಬಂದಿದೆ.

ಕೇವಲ ಈಶಾನ್ಯ ರಾಜ್ಯಗಳು ಮಾತ್ರ ಎಂದುಕೊಳ್ಳಬೇಡಿ. ದೇಶದ ಉದ್ದಗಲಕ್ಕೂ ಈ ಅಕ್ರಮ ವಲಸಿಗರು ಹರಡಿದ್ದಾರೆ. ಕಳೆದ ವರ್ಷ ಶಿವಮೊಗ್ಗ ಜಿಲ್ಲೆಯಲ್ಲೇ ಬಾಂಗ್ಲಾ ದೇಶಿಗನೊಬ್ಬ ಅಕ್ರಮವಾಗಿ ಸಂಚರಿಸುವ ವೇಳೆ ಬಂಧಿಸಲಾಗಿತ್ತು. ಹಾಗೆಯೇ, ರಾಜ್ಯದ ಮಟ್ಟಿಗೆ ಪ್ರತೀ ನಗರಗಳಲ್ಳೂ ಸಹ ಅಸ್ಸಾಮಿಗಳು ಎಂದು ಹೇಳಿಕೊಳ್ಳುವ ಅಕ್ರಮ ಬಾಂಗ್ಲಾ ವಲಸಿಗರು ಸಿಗುತ್ತಾರೆ. ಇವರೆಲ್ಲಾ ಇಲ್ಲಿವರೆಗೂ ಹೇಗೆ ಬಂದರು ಎಂಬುದೇ ಪ್ರಶ್ನೆ?

ಆದರೆ, ಈಗ ಕಾಲ ಬದಲಾಗಿದೆ. ಇವಕ್ಕೆಲ್ಲಾ ಅಂತ್ಯ ಹಾಡುವ ಕಾಲ ಪಕ್ವವಾಗಿದೆ. ಮೋದಿ ಸರ್ಕಾರದ ಕಠಿಣ ನಿಲುವಿನಿಂದ ಎನ್ ಆರ್ ಸಿ ಕರಡು ಸಿದ್ದವಾಗಿದೆ. ಇದರ ಬೆನ್ನಲ್ಲೇ ದೇಶದಲ್ಲಿರುವ ಅಕ್ರಮ ವಲಸಿಗರನ್ನು ಹೊರಗಟ್ಟಿ ಎಂಬ ಕೂಗೂ ದಿನೇ ದಿನೇ ಹೆಚ್ಚಾಗುತ್ತಿದೆ. ಇದರಿಂದಾಗಿ ತಮ್ಮ ಬುಡಕ್ಕೆ ಸಂಚಕಾರ ಬಂದಿರುವ ಕಾಂಗ್ರೆಸ್ ಹಾಗೂ ಟಿಎಂಸಿಯ ಮಮತಾ ಬ್ಯಾನರ್ಜಿ ಎನ್ ಆರ್ ಸಿಗೆ ವಿರೋಧ ಮಾಡಿದ್ದಾರೆ.

ಮಮತಾ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ, ಎನ್ ಆರ್ ಸಿ ಕೈಬಿಡದೇ ಇದ್ದರೆ ನಾಗರಿಕ ಯುದ್ದವಾಗುತ್ತದೆ, ರಕ್ತಪಾತವಾಗುತ್ತದೆ ಎಂದು ಹೇಳುವ ಮೂಲಕ ದೇಶದಲ್ಲಿ ಶಾಂತಿ ಕದಡುತ್ತೇವೆ ಎಂಬುದನ್ನು ಹೇಳಿದ್ದಾರೆ. ಈ ಹೆಂಗಸು ಸಂವಿಧಾನ ಬದ್ದವಾಗಿ ಬಂದ ಸ್ಥಾನದಲ್ಲಿ ಕುಳಿತ ಮುಖ್ಯಮಂತ್ರಿಯೋ ಅಥವಾ ಬೀದಿ ರೌಡಿಯೋ?

ಈ ಹಿಂದೆ ಭಾರತ, ಪಾಕಿಸ್ಥಾನ ಮತ್ತು ಬಾಂಗ್ಲಾದೇಶ ಒಂದೇಯಾಗಿತ್ತು ಎನ್ನುದನ್ನು ಅರ್ಥ ಮಾಡಿಕೊಳ್ಳಬೇಕಂತೆ ಈ ಹೆಂಗಸು ಹೇಳುತ್ತಾರೆ. ಏ! ಯಮ್ಮಾ… ಅಖಂಡ ಭಾರತವನ್ನು ನಿಮ್ಮಂತಹ ಗುಳ್ಳೆ ನರಿಗಳು ಹರಿದು ಮೂರು ಚೂರು ಮಾಡಿದ ಮೇಲೆ ಅವರಿಗೆ ನೀಡಿದ ರಾಷ್ಟ್ರದಲ್ಲಿ ಹೋಗಿ ಬೇಕಾದರೆ ಬದುಕಬೇಕು ಇಲ್ಲ ಅಲ್ಲೇ ಸಾಯಬೇಕು? ಹಿಂದೆ ಒಂದೆಯಾಗಿತ್ತು ಎಂದ ಮಾತ್ರಕ್ಕೆ ಬೇರೆ ರಾಷ್ಟ್ರ ಕೊಟ್ಟ ಮೇಲೂ ಇಲ್ಲಿ ಅವರನ್ನೆಲ್ಲಾ ಕಾಲು ತೊಳೆದು, ಆಶ್ರಯ ನೀಡುವುದಕ್ಕೆ ಭಾರತವೇನು ನಿಮ್ಮಪ್ಪನ ಧರ್ಮಛತ್ರವೇ? ಹೀಗೆ ಹೇಳುವ ನೀವುಮ ನಮ್ಮವರಲ್ಲಿ ಒಂದಷ್ಟು ಮಂದಿ ನಿರಾಶ್ರಿತರನ್ನು ಕಳುಹಿಸುತ್ತೇವೆ, ನಿಮ್ಮಲ್ಲಿ ಆಶ್ರಯ ನೀಡಿ, ಪೌರತ್ವ ನೀಡಿ ಎಂದು ಆ ದೇಶದವರಿಗೆ ಕೇಳಿ ನೋಡಿ… ಮುಖಕ್ಕೆ ಮಂಗಳಾರತಿ ಎತ್ತಿ ಕಳುಹಿಸುತ್ತಾರೆ.

ಇನ್ನೊಂದು ವಿಚಾರ: ನಿನ್ನೆಯಿಂದ ಬಾಂಗ್ಲಾ ಗಡಿಯಲ್ಲಿ ಕಟ್ಟುನಿಟ್ಟಿನ ಭದ್ರತೆ ಏರ್ಪಡಿಸಿದ್ದು ಪ್ರತಿಯೊಬ್ಬರನ್ನು ಗುರುತು ಪತ್ರ ಪರಿಶೀಲನೆ ಮಾಡಿ, ಅಕ್ರಮ ವಲಸಿಗರನ್ನು ಮುಲಾಜಿಲ್ಲದೇ ಹಿಂದಕ್ಕೆ ಕಳುಹಿಸುವ ಪ್ರಕ್ರಿಯೆ ಆರಂಭವಾಗಿದೆಯಂತೆ. ಅಂದರೆ, ಅದು ಇಲ್ಲಿಯವರೆಗೂ ನಡೆದಿಲ್ಲ ಎಂದಾಯಿತು ಅಲ್ಲವೇ? ಅಲ್ಲಿಗೆ ಅರ್ಥ ಮಾಡಿಕೊಳ್ಳಿ…

ದೇಶವನ್ನು ಹಾಳುಗೆಡವುವ ಹೆಗ್ಗಣಗಳನ್ನು ನಿರಾಶ್ರಿತರ ಹೆಸರಿನಲ್ಲಿ ಸೇರಿಸಿಕೊಳ್ಳಲಾಗಿದೆ. ಇವುಗಳನ್ನು ಮುಲಾಜಿಲ್ಲದೇ ಹೊರ ಹಾಕದೇ ಇದ್ದರೆ ದೇಶಕ್ಕೆ ಉಳಿಗಾಲವಿಲ್ಲ. ಎಲ್ಲರನ್ನೂ ಸಲಹಬೇಕು, ವಿಶ್ವಭ್ರಾತೃತ್ವ ಎಂಬ ನಮ್ಮ ನಂಬಿಕೆಯನ್ನು ಸ್ವಲ್ಪ ಪಕ್ಕಕ್ಕಿಟ್ಟು ಕಠಿಣ ನಿಲುವು ತಳೆದು ಅವರನ್ನೆಲ್ಲಾ ದೇಶದಿಂದ ಹೊರ ಹಾಕಬೇಕಿದೆ. ಇಲ್ಲದೇ ಹೋದಲ್ಲಿ ದೇಶದ ಭದ್ರತೆಗೇ ಆತಂಕವಿದೆ.

ಹಾಗೆಯೇ, ಪ್ರಜಾಪ್ರಭುತ್ವದ ಹೆಸರನ್ನು ತಮಗೆ ಬೇಕಾದಂತೆ ಅರ್ಥೈಸಿಕೊಂಡು ದೇಶವನ್ನು ಪ್ರಪಾತಕ್ಕೆ ತಳ್ಳುತ್ತಿರುವ ಅವಕಾಶವಾದಿ ರಾಜಕಾರಣಿಗಳೆಂಬ ಜಂತುಗಳನ್ನು 2019ರ ಚುನಾವಣೆಯಲ್ಲಿ ಹೇಳ ಹೆಸರಿಲ್ಲದಂತೆ ಓಡಿಸದೇ ಇದ್ದರೆ ದೇಶಕ್ಕೆ ಆತಂಕ ತಪ್ಪದ್ದಲ್ಲ..

ಎಚ್ಚರ ಭಾರತೀಯ ಎಚ್ಚರ..!

-ಎಸ್.ಆರ್. ಅನಿರುದ್ಧ ವಸಿಷ್ಠ

Tags: BangladeshBJPcongresseastern statesillegal migrants from bangladeshIndiaMamata BanerjeePM Narendra ModiWest Bengal
Share196Tweet123Send
Previous Post

ಈ ವಾರ ತೆರೆಗೆ ಸ್ಟೇಟ್‌ಮೆಂಟ್

Next Post

ನನ್ನ ಜೀವಿತಾವಧಿಯಲ್ಲಿ ಪ್ರತ್ಯೇಕ ಉತ್ತರ ಕರ್ನಾಟಕ ಸಾಧ್ಯವಿಲ್ಲ: ದೇವೇಗೌಡ ಸ್ಪಷ್ಟನೆ

ಕಲ್ಪ ನ್ಯೂಸ್

ಕಲ್ಪ ನ್ಯೂಸ್

Next Post

ನನ್ನ ಜೀವಿತಾವಧಿಯಲ್ಲಿ ಪ್ರತ್ಯೇಕ ಉತ್ತರ ಕರ್ನಾಟಕ ಸಾಧ್ಯವಿಲ್ಲ: ದೇವೇಗೌಡ ಸ್ಪಷ್ಟನೆ

Leave a Reply Cancel reply

Your email address will not be published. Required fields are marked *

  • Trending
  • Latest
ಪೋಕ್ಸೋ ಪ್ರಕರಣ ಸಂತ್ರಸ್ತ ಬಾಲಕಿಗೆ ಗರ್ಭಪಾತ ಆರೋಪ: ವೈದ್ಯೆ ಅಮಾನತು

ಪೋಕ್ಸೋ ಪ್ರಕರಣ ಸಂತ್ರಸ್ತ ಬಾಲಕಿಗೆ ಗರ್ಭಪಾತ ಆರೋಪ: ವೈದ್ಯೆ ಅಮಾನತು

February 4, 2026
ಸೊರಬದಲ್ಲೊಂದು ಅತಿ ಘೋರ | 5 ತಿಂಗಳ ಗರ್ಭಿಣಿ ಸೊಸೆಯನ್ನು ಜೀವಂತ ಸುಟ್ಟ ರಾಕ್ಷಸರು

ಸೊರಬದಲ್ಲೊಂದು ಅತಿ ಘೋರ | 5 ತಿಂಗಳ ಗರ್ಭಿಣಿ ಸೊಸೆಯನ್ನು ಜೀವಂತ ಸುಟ್ಟ ರಾಕ್ಷಸರು

April 3, 2026
ಅರಸಾಳಿನಿಂದ ಶೃಂಗೇರಿ-ಚಿಕ್ಕಮಗಳೂರು ಮೂಲಕ ಹಾಸನ ರೈಲು ಸಂಪರ್ಕ | ಎಂಪಿ ರಾಘವೇಂದ್ರ ಹೇಳಿದ್ದೇನು?

ಯಶವಂತಪುರ-ಶಿವಮೊಗ್ಗ ರೈಲು ತಾಳಗುಪ್ಪಕ್ಕೆ ತಾತ್ಕಾಲಿಕ ವಿಸ್ತರಣೆ | ಶೀಘ್ರ ಆದೇಶ | ಎಂಪಿ ರಾಘವೇಂದ್ರ

January 29, 2026
ಶಿವಮೊಗ್ಗ | ಮೆಗ್ಗಾನ್ ಆಸ್ಪತ್ರೆ ಆವರಣದಲ್ಲಿ ಭೀಕರ ಅಪಘಾತ | ಕಾರ್ಕಳ ಮೂಲದ ವಿದ್ಯಾರ್ಥಿನಿ ದುರ್ಮರಣ

ಶಿವಮೊಗ್ಗ | ಮೆಗ್ಗಾನ್ ಆಸ್ಪತ್ರೆ ಆವರಣದಲ್ಲಿ ಭೀಕರ ಅಪಘಾತ | ಕಾರ್ಕಳ ಮೂಲದ ವಿದ್ಯಾರ್ಥಿನಿ ದುರ್ಮರಣ

March 12, 2026
ಮಲೆನಾಡಿನಿಂದ ಕರಾವಳಿ, ಹುಬ್ಬಳ್ಳಿ ರೈಲು ಸಂಪರ್ಕ | ಶಿವಮೊಗ್ಗದಿಂದ ಈ ಎಲ್ಲಾ ಕಡೆಗಳಿಗೆ ನೂತನ ಮಾರ್ಗ?

ಮಲೆನಾಡಿನಿಂದ ಕರಾವಳಿ, ಹುಬ್ಬಳ್ಳಿ ರೈಲು ಸಂಪರ್ಕ | ಶಿವಮೊಗ್ಗದಿಂದ ಈ ಎಲ್ಲಾ ಕಡೆಗಳಿಗೆ ನೂತನ ಮಾರ್ಗ?

January 16, 2026
ಶರಾವತಿ ಪಂಪ್ಡ್ ಸ್ಟೋರೇಜ್ ಯೋಜನೆ ವಿರೋಧಿಸಿ ಏ.16ರಂದು ಬೃಹತ್ ರ್‍ಯಾಲಿ

ಶರಾವತಿ ಪಂಪ್ಡ್ ಸ್ಟೋರೇಜ್ ಯೋಜನೆ ವಿರೋಧಿಸಿ ಏ.16ರಂದು ಬೃಹತ್ ರ್‍ಯಾಲಿ

April 11, 2026
ಶ್ರೀ ರವಿಶಂಕರ್ ಗುರೂಜಿಯವರ 70ನೇ ಜನ್ಮೋತ್ಸವ | ಏ.14ರಿಂದ ಆರು ದಿನ ವಿಶೇಷ ಸುದರ್ಶನ ಕ್ರಿಯಾ ಶಿಬಿರ

ಶ್ರೀ ರವಿಶಂಕರ್ ಗುರೂಜಿಯವರ 70ನೇ ಜನ್ಮೋತ್ಸವ | ಏ.14ರಿಂದ ಆರು ದಿನ ವಿಶೇಷ ಸುದರ್ಶನ ಕ್ರಿಯಾ ಶಿಬಿರ

April 11, 2026
ಉತ್ತಮ ವ್ಯಕ್ತಿತ್ವ ರೂಪಿಸುವುದೇ ಎನ್‌ಎಸ್‌ಎಸ್‌ ಮುಖ್ಯ ಉದ್ದೇಶ: ಶುಭ ಮರವಂತೆ ಅಭಿಪ್ರಾಯ

ಉತ್ತಮ ವ್ಯಕ್ತಿತ್ವ ರೂಪಿಸುವುದೇ ಎನ್‌ಎಸ್‌ಎಸ್‌ ಮುಖ್ಯ ಉದ್ದೇಶ: ಶುಭ ಮರವಂತೆ ಅಭಿಪ್ರಾಯ

April 11, 2026
ಪಾರಂಪರಿಕ ಕಲೆಯ ಪುನರುಜ್ಜೀವನ ಅಭಿನಂದನೀಯ: ಹೊಂದಾಸನ ಧರ್ಮಪ್ಪ ಮೆಚ್ಚುಗೆ

ಪಾರಂಪರಿಕ ಕಲೆಯ ಪುನರುಜ್ಜೀವನ ಅಭಿನಂದನೀಯ: ಹೊಂದಾಸನ ಧರ್ಮಪ್ಪ ಮೆಚ್ಚುಗೆ

April 11, 2026
ಕೃತಕ ಬುದ್ಧಿಮತ್ತೆ ಪ್ರಯೋಜನ ಪಡೆಯುವಾಗ ಎಚ್ಚರಿಕೆ ಅಗತ್ಯ: ಪ್ರೊ. ಶರತ್  ಅನಂತಮೂರ್ತಿ

ಕೃತಕ ಬುದ್ಧಿಮತ್ತೆ ಪ್ರಯೋಜನ ಪಡೆಯುವಾಗ ಎಚ್ಚರಿಕೆ ಅಗತ್ಯ: ಪ್ರೊ. ಶರತ್  ಅನಂತಮೂರ್ತಿ

April 11, 2026
kalpa.news

Copyright © 2026 Kalpa News. Designed by KIPL

Navigate Site

  • Advertise With Us
  • Grievances
  • Privacy & Policy
  • About Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected by Kalpa News!!
No Result
View All Result
  • Home
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಹುಬ್ಬಳ್ಳಿ-ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಯಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
    • ವಿಜಯನಗರ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
    • ಡಾ. ಮೈತ್ರೇಯಿ ಆದಿತ್ಯಪ್ರಸಾದ್
  • ರೈಲ್ವೆ ಸುದ್ದಿಗಳು
  • ಇತರೆ
    • ವಿಜ್ಞಾನ-ತಂತ್ರಜ್ಞಾನ
    • ಜಾಬ್-ಸ್ಟ್ರೀಟ್
    • ಕೈ ರುಚಿ
    • ನಿತ್ಯ ಪಂಚಾಂಗ/ದಿನ ವಿಶೇಷ
    • ಮುಂಜಾನೆ ಸುವಿಚಾರ
    • ಆಧ್ಯಾತ್ಮ/ಭಕ್ತಿಭಾವ

Copyright © 2026 Kalpa News. Designed by KIPL