ಮೊನ್ನೆ ಯಾವುದೋ ಕೆಲಸದ ನಿಮಿತ್ತ ಕಾರಿನಲ್ಲಿ ಶಿವಮೊಗ್ಗದಿಂದ ಸಾಗರಕ್ಕೆ ಹೊರಟೆ.. ಶಿವಮೊಗ್ಗ-ಸಾಗರ ಮಲೆನಾಡಿನ ಹೃದಯಕ್ಕೇ ಸಾಗುವ ಹಾದಿ!ಅದು ಎಂತಹ ಅರಸಿಕರನ್ನೂ ಸೆಳೆಯುವ ಪ್ರಕೃತಿಯ ಹಸಿರು ಸಾಲು…. ಪಚ್ಚೆ ಹಸಿರಿನ ಬತ್ತದ ಸಾಲು ಸಾಲು ಗದ್ದೆಗಳು, ಅದಾದ ನಂತರ ದಟ್ಟ ಅರಣ್ಯ, ಒತ್ತೊತ್ತಾಗಿ ಬೆಳೆದು ನಿಂತಿರುವ ಹಳೆಯ ಮರಗಳು…..ನಿತ್ಯೋತ್ಸವ ಕವಿತೆಯ ಸಾಲು ನೆನಪಿಸುವ ನಿತ್ಯ ಹರಿದ್ವರ್ಣದ ತೇಗ-ಗಂಧ ತರುಗಳು!
ನಾನು, ಚಲಿಸುತ್ತಿರುವ ಕಾರಿನಲ್ಲಿ ಮುಖವನ್ನು ಹೊರಹಾಕಿ ತಂಗಾಳಿಯ ಪ್ರವಾಹವನ್ನು ಆಸ್ವಾದಿಸುತ್ತಾ, ಹಸಿರು ಸಿರಿಯನ್ನು ಕಣ್ತುಂಬಿಸಿಕೊಳ್ಳುತ್ತಾ ಕೂತೆ…. ಬಯಲುಸೀಮೆಯಂತೆ ನೇರವಲ್ಲದ ತಿರುವುಗಳಿಂದ ಕೂಡಿದ ಮಲೆನಾಡಿನ ಹಾದಿಯಲ್ಲಿ ಕಾರು ರಭಸವಾಗಿ ಸಾಗುತ್ತಿತ್ತು…. ಅದು ಆ ಕಾಲದ single lane road….. ಜೋಗದ ಜಲಪಾತದ ವೀಕ್ಷಣೆಗೆಂದೆ ಬ್ರಿಟಿಷರ ಕಾಲದಲ್ಲಿ ತಯ್ಯಾರಾದ ರಸ್ತೆ. ಆಯನೂರು, ಕುಂಸಿ, ಆನಂದಪುರ ಮಾರ್ಗವಾಗಿ ಸಾಗುವ ಈ ಹಾದಿಗೆ ಇದರದೇ ಆದ ಸೊಬಗಿದೆ. ರಸ್ತೆಯ ಇಕ್ಕೆಲಗಳ ಮರಗಳಲ್ಲಿ ಅದೇನೋ ಒಂದು ರೀತಿಯ ಮಾರ್ದವತೆ ಮನೆ ಮಾಡಿದೆ…. ಪ್ರಕೃತಿಯಲ್ಲೇ ದೇವರನ್ನು ಕಾಣುವ ಪೂಜೆಗೆ ಇದು ಪ್ರಶಸ್ತ ಪ್ರಯಾಣ.
ಕಾರಿನ ಅತ್ತ ಕೂತಿದ್ದ ನನ್ನ ಬೆಂಗಳೂರಿನ ಗೆಳೆಯರಿಗೆ ಈ ರೀತಿಯ ಮಲೆನಾಡಿನ ಪ್ರಯಾಣ ಕೊಂಚ ಇರಿಸು ಮುರಿಸು ತಂದಿತ್ತೆಂದು ಕಾಣುತ್ತದೆ. ಒಮ್ಮೆಲ್ಲೆ ಅವರು ,ಈ ರಸ್ತೆ ಇನ್ನೂ ಅಗಲವಾಗಲೇಬೇಕು, ಕನಿಷ್ಠ 6 lane ರಸ್ತೆಯಾದರೂ ಆಗಲೇಬೇಕು…. ಜೋಗ ನೋಡಲು ಪ್ರತಿ ವರ್ಷ ಅದೆಷ್ಟು tourists ಬರ್ತಾರೆ?! ರಸ್ತೆ ಸರಿಯಾಗಿ develop ಮಾಡ್ಲಿಲ್ಲ ಅಂದ್ರೆ tourism ಹೇಗೆ ಬೆಳೆಯೋಕೆ ಸಾಧ್ಯ?! ಅ೦ತ ತಮ್ಮ ಅಸಮಾಧಾನವನ್ನು ಒಮ್ಮೆಲೆ ಬಡಬಡಿಸಿದರು.
ಅವರು ಆಡಿದ ಮಾತು ನನ್ನ ತಲೆಯಲ್ಲಿ ಇನ್ನೂ ಪ್ರತಿಧ್ವನಿಸುತ್ತಿತ್ತು!!! 6 lane road ಅಂದ್ರೆ ಅದೆಷ್ಟು ಮರಗಳನ್ನು ಕಡಿಯಲೇಬೇಕು?!!! ಒಮ್ಮೆ ಊಹಿಸಿದರೂ ಸಂಕಟ ಆಗತ್ತೆ…. ತುಂಬಿದ ಕಾಡಿನ “ಸಂಮೃಧ್ಧಿ”ಯನ್ನು ನುಣ್ಣನೆ ಸವರಿ ಬೋಳುಮಾಡಿ ರಸ್ತೆ ಮಾಡಿದರೆ ಅದು “ಅಭಿವೃದ್ಧಿ” ಎನ್ನುವ ಮನಸ್ಥಿತಿಗೆ ಏನೆನ್ನೋಣ?!!! By the way, ಮೊದಲೇ ಮಳೆ ಕಮ್ಮಿಯಾಗಿದೆ, ಇನ್ನಷ್ಟು ಕಾಡು development ಹೆಸರಲ್ಲಿ ಇಲ್ಲವಾದರೆ ಮಳೆ ಇನ್ನೂ ಕಮ್ಮಿಯಾಗಬಹುದು…. ಮಳೆ ಕಮ್ಮಿಯಾದರೆ ಶರಾವತಿ ಬಡಕಲಾಗುತ್ತಾಳೆ, ಶರವಾತಿ ಮೈ ತುಂಬಿ ಹರಿಯದಿದ್ದರೆ ಜೋಗದ ಜಲಪಾತದ ಸ್ಥಿತಿ?!
ನೀರಿಲ್ಲದ ಜೋಗದ ಜಲಪಾತ ನೋಡಲು 6 lane ರಸ್ತೆಗಳನ್ನು ಮಾಡಿ ಈ ಭಾಗದಲ್ಲಿ tourism development ಮಾಡುವ ಯೋಜನೆ ರೂಪಿಸುವ ಬುದ್ಧಿವಂತರು ನಮ್ಮಲ್ಲಿ ಹೆಜ್ಜೆ ಹೆಜ್ಜೆಗೆ ಸಿಗುತ್ತಾರೆ….. ಸದ್ಯದ ಪರಿಸ್ಥಿತಿಯಲ್ಲಿ Tourism improve ಮಾಡೋದಂದ್ರೆ ಆ ಜಾಗಗಳನ್ನು ಕಸ-ಪ್ಲಾಸ್ಟಿಕ್’ಗಳಿಂದ ಇನ್ನಷ್ಟು ಕೊಳಕು ಮಾಡದಂತಾನೆ ಅರ್ಥ.

-ವಿನಯ್ ಶಿವಮೊಗ್ಗ

















