ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಬಂಗಾರಪೇಟೆ: ತಾಲೂಕಿನ ಹುಲಿಬೆಲೆಯಲ್ಲಿರುವ ಗ್ರಾಮ ಪಂಚಾಯ್ತಿ ಗ್ರಂಥಾಲಯ ಮುಂಭಾಗ ನಿನ್ನೆ ರಾತ್ರಿ ನಾಯಿಯೊಂದು ಸತ್ತಿದ್ದು, ಇದುವರೆಗೂ ತೆರವುಗೊಳಿಸುವಲ್ಲಿ ಗ್ರಾಮ ಪಂಚಾಯ್ತಿ ವಿಫಲವಾಗಿದೆ.
ವಿಪರ್ಯಾಸ ಎಂದರೆ ನಾಯಿ ಸತ್ತ ಸ್ಥಳದಲ್ಲೇ ಅಂಗನವಾಡಿ ಕೇಂದ್ರವಿದ್ದು, ವಾಸನೆಯಿಂದ ಮಕ್ಕಳು ಹೈರಾಣಾಗಿದ್ದಾರೆ.
ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಅಂಗನವಾಡಿ ಕಾರ್ಯಕರ್ತೆ, ಪಂಚಾಯ್ತಿಗೆ ಮಾಹಿತಿ ನೀಡಲಾಗಿದೆ. ಸತ್ತ ನಾಯಿ ತೆರವುಗೊಳಿಸಲು ಗ್ರಾಮದ ತೋಟಿಗರಿಗೆ ಹೇಳಲಾಗಿದೆ. ಇನ್ನು ಬಂದಿಲ್ಲ ಎಂದರು.
ಅಂಗನವಾಡಿ ಕೇಂದ್ರ ಮುಂಭಾಗ ನಾಯಿ ಸತ್ತು ದುರ್ವಾಸನೆ ಬೀರುತ್ತಿದೆ. ಮಕ್ಕಳು ವಾಸನೆಯಿಂದ ಹೈರಾಣಾಗಿದ್ದರೂ ಸಹ ಗ್ರಾಮ ಪಂಚಾಯ್ತಿ ಇನ್ನು ತೆರವು ಮಾಡದಿರುವುದು ಬೇಸರದ ಸಂಗತಿಯಾಗಿದೆ.
Get in Touch With Us info@kalpa.news Whatsapp: 9481252093















