ಸಿಂಗಾಪುರ: ವಿಶ್ವದ ಬದ್ದ ವೈರಿಗಳಾಗಿರುವ ಅಮೆರಿಕಾ ಹಾಗೂ ಉತ್ತರ ಕೊರಿಯಾ ಮುಖ್ಯಸ್ಥರು ಪರಸ್ಪರ ಹಸ್ತಲಾಘವ ಮಾಡಿಕೊಂಡಿರುವುದು ಇಡಿಯ ವಿಶ್ವೇವೇ ಹುಬ್ಬೇರಿಸುವಂತೆ ಮಾಡಿದೆ. ಇಂತಹ ಒಂದು ಸಂದರ್ಭಕ್ಕೆ ಸಾಕ್ಷಿಯಾಗಿದ್ದು ಮಾತ್ರ ಸಿಂಗಾಪುರ ನೆಲ.
ಹೌದು…ಆ ಕ್ಷಣಕ್ಕೆ ಇಡಿಯ ವಿಶ್ವವೇ ಕುತೂಹಲದಿಂದ ಕಾಯುತ್ತಿತ್ತು… ಸೆಂಟೋಸಾ ದ್ವೀಪದಲ್ಲಿರುವ ಕ್ಯಾಪೆಲ್ಲಾ ಹೋಟೆಲ್ನಲ್ಲಿ ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮತ್ತು ಉತ್ತರ ಕೊರಿಯಾ ಅಧ್ಯಕ್ಷ ಸರ್ವಾಧಿಕಾರಿ ಕಿಮ್ ಜಾಂಗ್ ಉನ್ ಮುಖಾಮುಖಿಯಾಗಿದ್ದು, ಹಸ್ತಲಾಘವದ ಮೂಲಕ ಪರಸ್ಪರ ಸ್ವಾಗತ ಕೋರಿದ್ದಾರೆ.
#UPDATE Donald Trump and Kim Jong Un make history by becoming the first sitting US and North Korean leaders to meet and shake hands https://t.co/D3qG538l4c pic.twitter.com/IgZMF3A5TZ
— AFP news agency (@AFP) June 12, 2018
ಈ ಐತಿಹಾಸಿಕ ದ್ವಿಪಕ್ಷೀಯ ಸಭೆಯಲ್ಲಿ ಭಾಷಾಂತರಕಾರರ ನೆರವಿನಿಂದ ಉಭಯ ನಾಯಕರು ಚರ್ಚೆ ನಡೆಸಿದರು.
VIDEO: US President Donald Trump and North Korean leader Kim Jong Un meet and shake hands in Singapore, creating history as they attempt to negotiate an end to a decades-old nuclear stand-off pic.twitter.com/ewcNz9hLFE
— AFP news agency (@AFP) June 12, 2018
ಉತ್ತರ ಕೊರಿಯಾ ಈ ಹಿಂದೆ ಅಣ್ವಸ್ತ್ರ ಪರೀಕ್ಷೆ ಮೂಲಕ ವಿಶ್ವದ ದೊಡ್ಡಣ್ಣಗೆ ಸೆಡ್ಡು ಹೊಡೆದಿತ್ತು. ಆಗ ಸರ್ವಾಧಿಕಾರಿ ಕಿಮ್ ಜಾಂಗ್ ಉನ್ ಅವರಿಗೆ ಟ್ರಂಪ್ ಸರ್ವನಾಶದ ಎಚ್ಚರಿಕೆ ನೀಡಿದ್ದರು. ಸದ್ಯ ಎರಡು ರಾಷ್ಟ್ರಗಳ ಅಧ್ಯಕ್ಷರು ಪ್ರತ್ಯೇಕ ಸಭೆ ನಡೆಯುತ್ತಿದ್ದು, ಸಭೆ ಬಳಿಕ ಅಲ್ಲಿ ಚರ್ಚೆಯಾದ ವಿಷಯಗಳನ್ನ ಮಾಧ್ಯಮಗಳ ಮುಂದೆ ತಿಳಿಸುವ ಸಾಧ್ಯತೆ ಇದೆ.
Discussion about this post