No Result
View All Result
Trade Challenges Pay10 Supports Women Entrepreneur
English Articles

“Pay10 Empowers Women in Global Trade”

by kalpa News
July 13, 2026
0

Kalpa Media House  |  New Delhi  | As women-led businesses emerge as one of the fastest-growing segments within India’s MSME ecosystem,...

Read moreDetails
“FZ Blue Flex Yamaha’s Ethanol-Ready Ride”

FZ Blue Flex | Yamaha Brings Ethanol-Ready Innovation to Indian Roads

July 13, 2026
“My Dad, My Hero Celebrating the Ultimate Bond with Hero Destini”

“My Dad, My Hero: Celebrating the Ultimate Bond with Hero Destini”

July 13, 2026
ಚಿತ್ರೋದ್ಯಮಕ್ಕೆ‌ ಹೊಸ ಕಳೆ ತಂದ ಹೇಮಂತ್ ಹವಾ!

Indian Railways | Partial Cancellation of Trains on Bengaluru–Chennai

July 10, 2026
ಫೆ.1 ರಿಂದ 7ರವರೆಗೆ ಈ ಪ್ರದೇಶಗಳಲ್ಲಿ ನಿಷೇಧಾಜ್ಞೆ ಜಾರಿ: ಡಿಸಿ ಪ್ರಭುಲಿಂಗ ಕವಳಿಕಟ್ಟಿ

Shivamogga SIR | District Achieves 81% e-Form Distribution

July 8, 2026
  • Advertise With Us
  • Grievances
  • About Us
  • Contact Us
Tuesday, July 14, 2026
Follow Us
kalpa.news
Advertisement
ADVERTISEMENT
  • Home
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಹುಬ್ಬಳ್ಳಿ-ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಯಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
    • ವಿಜಯನಗರ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
    • ಡಾ. ಮೈತ್ರೇಯಿ ಆದಿತ್ಯಪ್ರಸಾದ್
  • ರೈಲ್ವೆ ಸುದ್ದಿಗಳು
  • ಇತರೆ
    • ವಿಜ್ಞಾನ-ತಂತ್ರಜ್ಞಾನ
    • ಜಾಬ್-ಸ್ಟ್ರೀಟ್
    • ಕೈ ರುಚಿ
    • ನಿತ್ಯ ಪಂಚಾಂಗ/ದಿನ ವಿಶೇಷ
    • ಮುಂಜಾನೆ ಸುವಿಚಾರ
    • ಆಧ್ಯಾತ್ಮ/ಭಕ್ತಿಭಾವ
Subscribe
kalpa.news
No Result
View All Result
  • Home
  • ರಾಜಕೀಯ
  • ಶಿವಮೊಗ್ಗ
  • ಜಿಲ್ಲೆ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
  • ರೈಲ್ವೆ ಸುದ್ದಿಗಳು
  • ಇತರೆ
ADVERTISEMENT
Home Small Bytes

ಹವ್ಯಕ ಮಹಾಸಭೆಯ ಅಧ್ಯಕ್ಷರಾಗಿ ಡಾ.ಗಿರಿಧರ ಕಜೆ ಪುನರಾಯ್ಕೆ

kalpa News by kalpa News
March 13, 2019
in Small Bytes, ಬೆಂಗಳೂರು ನಗರ
0
ಹವ್ಯಕ ಮಹಾಸಭೆಯ ಅಧ್ಯಕ್ಷರಾಗಿ ಡಾ.ಗಿರಿಧರ ಕಜೆ ಪುನರಾಯ್ಕೆ
Share on FacebookShare on TwitterShare on WhatsApp

ಬೆಂಗಳೂರು: ಹವ್ಯಕ ಮಹಾಸಭೆಯ ಅಧ್ಯಕ್ಷರಾಗಿ ಡಾ.ಗಿರಿಧರ ಕಜೆ ಅವರು ಪುನರಾಯ್ಕೆಗೊಂಡಿದ್ದಾರೆ.

ಸರ್ವಸದಸ್ಯರ ಸಭೆಯ ನಂತರ ನಡೆದ ನಿರ್ದೇಶಕರ ಸಭೆಯಲ್ಲಿ ಡಾ. ಗಿರಿಧರ ಕಜೆ ಅಧ್ಯಕ್ಷರಾಗಿ ಸರ್ವಾನುಮತದಿಂದ ಪುನರಾಯ್ಕೆಯಾದರು. ಆ ಮೂಲಕ ಡಾ. ಕಜೆ ನಾಲ್ಕನೇ ಬಾರಿಗೆ ಮಹಾಸಭೆಯ ಅಧ್ಯಕ್ಷರಾಗಿ ಸರ್ವಾನುಮತದಿಂದ ಆಯ್ಕೆಯಾದರು.

ಆರ್.ಎಂ. ಹೆಗಡೆ ಬಾಳೆಸರ ಹಾಗೂ ಕೆಕ್ಕಾರು ಶ್ರೀಧರ್ ಭಟ್ ಉಪಾಧ್ಯಕ್ಷರಾಗಿ, ಸಿಎ ವೇಣುವಿಘ್ನೇಶ್ ಸಂಪ ಪ್ರಧಾನ ಕಾರ್ಯದರ್ಶಿಯಾಗಿ, ಪ್ರಶಾಂತ ಭಟ್ ಯಲ್ಲಾಪುರ, ಶ್ರೀಧರ್ ಭಟ್ ಸಾಲೇಕೊಪ್ಪ ಕಾರ್ಯದರ್ಶಿಗಳಾಗಿ ಹಾಗೂ ಕೃಷ್ಣಮೂರ್ತಿ ಭಟ್ ಯಲಹಂಕ ಕೋಶಾಧಿಕಾರಿಯಾಗಿ ಸರ್ವಾನುಮತದಿಂದ ಆಯ್ಕೆಯಾದರು. ನೂತನ ಆಡಳಿತ ಮಂಡಳಿಗೆ ನಿರ್ದೇಶಕರು, ಸಂಚಾಲಕರು ಶುಭಕೋರಿದರು.

75ನೇ ವರ್ಷದ ಸರ್ವಸದಸ್ಯರ ಸಭೆ: ಡಾ. ಕಜೆ ಪುನರಾಯ್ಕೆ
ಡಿಸೆಂಬರ್’ನಲ್ಲಿ ನಡೆದ ಅಮೃತಮಹೋತ್ಸವ ಹಾಗೂ ದ್ವಿತೀಯ ವಿಶ್ವ ಹವ್ಯಕ ಸಮ್ಮೇಳನವು ಕೇವಲ ಜಾತಿಯ ಸಮಾವೇಶವಾಗಿರಲಿಲ್ಲ. ಸರ್ವ ಸಮಾಜದವರಿಗೂ ಅಲ್ಲಿ ಅವಕಾಶ ಕಲ್ಪಿಸಲಾಗಿತ್ತು, ಹವ್ಯಕ ಸಂಸ್ಕೃತಿಯನ್ನು ನಾಡಿನಾದ್ಯಂತ ಪಸರಿಸುವ ಕಾರ್ಯಕ್ರಮ ಅದಾಗಿತ್ತು ಎಂದು ಡಾ. ಗಿರಿಧರ ಕಜೆ ಹೇಳಿದರು.

ಡಾ. ಗಿರಿಧರ ಕಜೆ

ಮಲ್ಲೇಶ್ವರದಲ್ಲಿರುವ ಮಹಾಸಭೆಯ ಸಭಾಂಗಣದಲ್ಲಿ ನಡೆದ ಶ್ರೀಅಖಿಲ ಹವ್ಯಕ ಮಹಾಸಭೆಯ ಸರ್ವಸದಸ್ಯರ 75ನೇ ವಾರ್ಷಿಕ ಮಹಾಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದ ಮಹಾಸಭೆಯ ಅಧ್ಯಕ್ಷರಾದ ಡಾ. ಗಿರಿಧರ ಕಜೆ, ವಿಶ್ವ ಹವ್ಯಕ ಸಮ್ಮೇಳನ ನಾವು ಆಲೋಚಿಸಿದಕ್ಕಿಂತ ಬಹಳ ಉತ್ತಮವಾಗಿ ನಡೆಯಿತು, ಅಷ್ಟು ದೊಡ್ಡಮಟ್ಟದಲ್ಲಿ ಜನ ಸೇರಿದರೂ ಪೋಲೀಸ್ ಸುರಕ್ಷತೆಯ ಅವಶ್ಯಕತೆಯೇ ಬರಲಿಲ್ಲ. ಸಭೆ – ಪಾರ್ಕಿಂಗ್ – ಊಟೋಪಚಾರ – ನಿರ್ವಹಣೆ ಎಲ್ಲವೂ ಸುವ್ಯವಸ್ಥಿತವಾಗಿತ್ತು, ಯಾವುದೇ ಗೊಂದಲ – ನ್ಯೂನತೆ ಇಲ್ಲದೇ ಕಾರ್ಯಕ್ರಮ ಸಂಪನ್ನವಾಯಿತು. ಇಷ್ಟು ಸುವ್ಯವಸ್ಥಿತವಾಗಿ ನಡೆದ ಕಾರ್ಯಕ್ರಮವನ್ನು ನೋಡಿರಲಿಲ್ಲ ಎಂದು ಅರಮನೆ ಮೈದಾನದ ಆಡಳಿತ ಹಾಗೂ ನೌಕರವರ್ಗದವರೇ ಹೇಳಿ ಸಂತೋಷ ವ್ಯಕ್ತಪಡಿಸಿದರು ಎಂದರು.

ಯೋಧರ ಜಾತಿ ಲೆಕ್ಕಕ್ಕೆ ಉತ್ತರವಾದ ಹವ್ಯಕ ದೇಶರತ್ನ ಸಮ್ಮಾನ
ಪುಲ್ವಾಮ ದಾಳಿಯ ನಂತರ ದೇಶಾದ್ಯಂತ ಯೋಧರ ಜಾತಿ ಲೆಕ್ಕಾಚಾರ ಚರ್ಚಿತವಾಯಿತು. ಕೀಳುಮಟ್ಟದ ಅಂತಹ ಚರ್ಚೆಗಳಿಗೆ ವಿಶ್ವ ಹವ್ಯಕ ಸಮ್ಮೇಳನದ ಹವ್ಯಕ ದೇಶ ರತ್ನ ಪುರಸ್ಕಾರ ಸ್ಪಷ್ಟ ಪ್ರತ್ಯುತ್ತರವಾಗಿತ್ತು. ಅನೇಕರು ಅನೇಕಕಡೆಗಳಲ್ಲಿ ಹವ್ಯಕ ದೇಶರತ್ನ ಪುರಸ್ಕಾರದ ವಿಷಯವನ್ನು ಇಟ್ಟುಕೊಂಡು ಕೀಳು ಪ್ರಶ್ನೆ ಹುಟ್ಟುಹಾಕಿದ್ದವರ ಬಾಯಿ ಮುಚ್ಚಿಸಿದರು. ಯೋಧರನ್ನು ವಿಶೇಷವಾಗಿ ಗೌರವಿಸಿದ ಕೀರ್ತಿ ನಮ್ಮ ಸಮಾಜದ್ದಾಗಿದ್ದು, ಇದೀಗ ಇದು ಬೇರೆಯವರಿಗೂ ಆದರ್ಶವಾಗಿದೆ ಎಂದರು.

ಮಾಧ್ಯಮದವರ ಸಹಕಾರ ಅನನ್ಯ
ವಿಶ್ವ ಸಮ್ಮೇಳನಕ್ಕೆ ಮಾಧ್ಯಮದವರು ನೀಡಿದ ಸಹಕಾರ ಅನನ್ಯವಾಗಿತ್ತು. ಸಮ್ಮೇಳನದ ವಿಚಾರವನ್ನು ನಾಡಿನ ಮನೆ – ಮನಗಳಿಗೆ ಮುಟ್ಟಿಸಿದ ಕೀರ್ತಿ ಮಾಧ್ಯಮದವರಿಗೆ ಸಲ್ಲಬೇಕು. ಮಾಧ್ಯಮದವರಿಂದಾಗಿ ಸಂಘಟಿತ ಸಮಾಜದ ಧ್ವನಿ ನಾಡಿನಾದ್ಯಂತ ಪ್ರತಿಧ್ವನಿಸಿತು. ಹವ್ಯಕ ಸಮಾಜದ ಕೀರ್ತಿ ಎಲ್ಲೆಡೆ ಪಸರಿಸಿತು ಎಂದು ಡಾ. ಕಜೆ ಮಾಧ್ಯಮಗಳಿಗೆ ಕೃತಜ್ಞತೆ ಸಲ್ಲಿಸಿದರು.

ಬಹಿಷ್ಕಾರದ ಕರೆಗೆ ಜನ ಸೊಪ್ಪು ಹಾಕಲಿಲ್ಲ
ಸಮ್ಮೇಳನವನ್ನು ಬಹಿಷ್ಕರಿಸುವಂತೆ ಕೆಲವರು ಕರೆ ನೀಡಿದರು. ಆದರೆ ಅದಕ್ಕೆ ಸಮಾಜ ಸೊಪ್ಪು ಹಾಕಲಿಲ್ಲ. ನಮ್ಮ ಅಂದಾಜಿಗಿಂತಲೂ ಚೆನ್ನಾಗಿ ಕಾರ್ಯಕ್ರಮಗಳು ನಡೆದವು. ಕಾರ್ಯಕ್ರಮಕ್ಕೆ ಬರಬೇಕಾದವರೆಲ್ಲ ಬಂದು ಭಾಗವಹಿಸಿದರು, ಒಟ್ಟು ಮೂರು ದಿನಗಳಲ್ಲಿ 75 ಸಾವಿರಕ್ಕಿಂತಲೂ ಹೆಚ್ಚು ಜನ ಕಾರ್ಯಕ್ರಮದಲ್ಲಿ ಭಾಗವಹಿಸಿ ಸಮ್ಮೇಳನವನ್ನು ಯಶಸ್ವಿಗೊಳಿಸಿದರು. ಇದು ಹವ್ಯಕ ಸಮಾಜ ಎಲ್ಲಿದೆ, ಹವ್ಯಕ ಸಮಾಜದ ನಿಲುವೇನು ಎಂಬುದನ್ನು ಸ್ಪಷ್ಟವಾಗಿ ಸೂಚಿಸುತ್ತದೆ ಎಂದು ಅಭಿಪ್ರಾಯಪಟ್ಟರು.

ಗುರುಪೀಠದ ಆಶೀರ್ವಾದದಿಂದ ಕಾರ್ಯಕ್ರಮ ನಿರ್ವಿಘ್ನವಾಗಿ ನಡೆಯಿತು ಎಂದ ಡಾ. ಕಜೆ, ಸಹಸ್ರಾರು ಕಾರ್ಯಕರ್ತರು ಕಾರ್ಯಕ್ರಮವನ್ನು ನಡೆಸಿಕೊಟ್ಟರು, ಸಮ್ಮೇಳನವನ್ನು ಇತರರಿಗೆ ಮಾದರಿಯಾಗುವಂತೆ ಯಶಸ್ವಿಯಾಗಿಸಿದ ಕೀರ್ತಿ ಪ್ರತಿಯೊಬ್ಬ ಕಾರ್ಯಕರ್ತರಿಗೆ ಸಲ್ಲಬೇಕು. ಸ್ಪಂದಿಸಿದ – ಸಹಕರಿಸಿದ ಸಮಾಜದ ಎಲ್ಲಾ ಬಂಧುಗಳಿಗೂ ಧನ್ಯವಾದಗಳನ್ನು ಅವರು ಸಮರ್ಪಿಸಿದರು.

ಮಾಜಿ ಅಧ್ಯಕ್ಷರಾದ ಶ್ರೀಧರ ಭಟ್ ಕಲಸಿ, ಮಾಜಿ ಗೌರವ ಪ್ರಧಾನ ಕಾರ್ಯದರ್ಶಿ ಎಂ. ಎನ್ ಹೆಗಡೆ ಹಾರೂಗಾರ್ ಮಾತನಾಡಿ ಹವ್ಯಕ ಮಹಾಸಭೆಯನ್ನು ಯಶಸ್ವಿಯಾಗಿ ಮುನ್ನೆಡೆಸುತ್ತಿರುವ ಡಾ. ಕಜೆ ನೇತೃತ್ವದ ಆಡಳಿತ ಮಂಡಳಿಯನ್ನು ಅಭಿನಂದಿಸಿದರು. ಸಮಾಜದ ಅಭ್ಯುದಯಕ್ಕೆ ಇನ್ನಷ್ಟು ತೊಡಗಿಸಿಕೊಳ್ಳುವ ಕುರಿತು ಚರ್ಚೆಗಳಾದವು.

Tags: Dr. Giridhara KajeHavyaka MahasabhaKalpa NewsKannada Newsಡಾ.ಗಿರಿಧರ ಕಜೆಬೆಂಗಳೂರುಹವ್ಯಕ ಮಹಾಸಭೆ
Share196Tweet123Send
Aniruddha Vasishta S R

Aniruddha Vasishta S R

Editor-in-Chief

Previous Post

ದೇಶದ ಸಮಗ್ರ ಅಭಿವೃದ್ಧಿ ಮುಂದುವರಿಗೆ ಬಿಜೆಪಿ ಬೆಂಬಲಿಸಿ: ಬಿ.ವೈ. ರಾಘವೇಂದ್ರ

Next Post

ಶಿವಮೊಗ್ಗ ದುರ್ಗಿಗುಡಿ ಮಠದಲ್ಲಿ ರಾಯರ ಅದ್ದೂರಿ ವರ್ಧಂತಿ ಉತ್ಸವ

kalpa News

kalpa News

Next Post
ಶಿವಮೊಗ್ಗ ದುರ್ಗಿಗುಡಿ ಮಠದಲ್ಲಿ ರಾಯರ ಅದ್ದೂರಿ ವರ್ಧಂತಿ ಉತ್ಸವ

ಶಿವಮೊಗ್ಗ ದುರ್ಗಿಗುಡಿ ಮಠದಲ್ಲಿ ರಾಯರ ಅದ್ದೂರಿ ವರ್ಧಂತಿ ಉತ್ಸವ

Leave a Reply Cancel reply

Your email address will not be published. Required fields are marked *

No Result
View All Result
Trade Challenges Pay10 Supports Women Entrepreneur
English Articles

“Pay10 Empowers Women in Global Trade”

by kalpa News
July 13, 2026
0

Kalpa Media House  |  New Delhi  | As women-led businesses emerge as one of the fastest-growing segments within India’s MSME ecosystem,...

Read moreDetails
“FZ Blue Flex Yamaha’s Ethanol-Ready Ride”

FZ Blue Flex | Yamaha Brings Ethanol-Ready Innovation to Indian Roads

July 13, 2026
“My Dad, My Hero Celebrating the Ultimate Bond with Hero Destini”

“My Dad, My Hero: Celebrating the Ultimate Bond with Hero Destini”

July 13, 2026
ಚಿತ್ರೋದ್ಯಮಕ್ಕೆ‌ ಹೊಸ ಕಳೆ ತಂದ ಹೇಮಂತ್ ಹವಾ!

Indian Railways | Partial Cancellation of Trains on Bengaluru–Chennai

July 10, 2026
ಫೆ.1 ರಿಂದ 7ರವರೆಗೆ ಈ ಪ್ರದೇಶಗಳಲ್ಲಿ ನಿಷೇಧಾಜ್ಞೆ ಜಾರಿ: ಡಿಸಿ ಪ್ರಭುಲಿಂಗ ಕವಳಿಕಟ್ಟಿ

Shivamogga SIR | District Achieves 81% e-Form Distribution

July 8, 2026
kalpa.news

Copyright © 2026 Kalpa News. Designed by KIPL

Navigate Site

  • Advertise With Us
  • Grievances
  • Privacy & Policy
  • About Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected by Kalpa News!!
No Result
View All Result
  • Home
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಹುಬ್ಬಳ್ಳಿ-ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಯಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
    • ವಿಜಯನಗರ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
    • ಡಾ. ಮೈತ್ರೇಯಿ ಆದಿತ್ಯಪ್ರಸಾದ್
  • ರೈಲ್ವೆ ಸುದ್ದಿಗಳು
  • ಇತರೆ
    • ವಿಜ್ಞಾನ-ತಂತ್ರಜ್ಞಾನ
    • ಜಾಬ್-ಸ್ಟ್ರೀಟ್
    • ಕೈ ರುಚಿ
    • ನಿತ್ಯ ಪಂಚಾಂಗ/ದಿನ ವಿಶೇಷ
    • ಮುಂಜಾನೆ ಸುವಿಚಾರ
    • ಆಧ್ಯಾತ್ಮ/ಭಕ್ತಿಭಾವ

Copyright © 2026 Kalpa News. Designed by KIPL