ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಶಿವಮೊಗ್ಗ: ಪ್ರತಿವಾರದ ಮಾನಸಿಕ ಆರೋಗ್ಯದ ವೆಬಿನಾರ್ ಮಾಲಿಕೆಯಲ್ಲಿ ಜೂನ್ 20ರ ಶನಿವಾರ ಬೆಳಗ್ಗೆ 10.30 ಕ್ಕೆ ಡಾ. ಕೆ.ಎಸ್. ಪವಿತ್ರ ಅವರು ‘ಯೋಗ-ಧ್ಯಾನ ಮತ್ತು ಮಾನಸಿಕ ಆರೋಗ್ಯ’ದ ಕುರಿತು ಉಪನ್ಯಾಸ ನೀಡಲಿದ್ದಾರೆ.
ಚಿತ್ರದುರ್ಗದ ಬಸವೇಶ್ವರ ವೈದ್ಯಕೀಯ ಮಹಾವಿದ್ಯಾಲಯದ ಮನೋವೈದ್ಯಕೀಯ ವಿಭಾಗ ಆಯೋಜಿಸಿರುವ ಈ ವೆಬಿನಾರ್ ಮಾಲಿಕೆಯನ್ನು https://www.facebook.com/psychiatry.bmch ಲಿಂಕ್’ನಲ್ಲಿ ಆಸಕ್ತರು ನೇರಪ್ರಸಾರದಲ್ಲಿ ವೀಕ್ಷಿಸಬಹುದು.
ಯೋಗ ಮತ್ತು ಮಾನಸಿಕ ಆರೋಗ್ಯದ ಕುರಿತು ವೆಬಿನಾರ್
ಯೋಗದಿನದ ಮುನ್ನಾ ದಿನದಂದು, ಯೋಗ ಮತ್ತು ಮಾನಸಿಕ ಆರೋಗ್ಯದ ಕುರಿತು ವೆಬಿನಾರ್ ಅನ್ನು ಹಮ್ಮಿಕೊಳ್ಳಲಾಗಿದ್ದು, ಖ್ಯಾತ ವೈದ್ಯೆ ಡಾ.ಕೆ.ಎಸ್. ಪವಿತ್ರಾ ಅವರು ಉಪನ್ಯಾಸ ನೀಡಲಿದ್ದಾರೆ.
ಜೂನ್ 20ರ ಶನಿವಾರ ಸಂಜೆ 5 ಗಂಟೆಗೆ ನಡೆಯಲಿದೆ.
ಈ ವೆಬಿನಾರ್’ನಲ್ಲಿ ಪದ್ಮಶ್ರೀ ಪುರಸ್ಕೃತರಾದ ನಿಮ್ಹಾನ್ಸ್ ನಿರ್ದೇಶಕ ಪ್ರೊ. ಬಿ.ಎನ್. ಗಂಗಾಧರ್ ಅವರು ‘ಸೃಜನ ಶೀಲತೆಯಲ್ಲಿ ಯೋಗದ ಪಾತ್ರ’ ಕುರಿತು ಉಪನ್ಯಾಸ ನೀಡಲಿದ್ದು, ಖ್ಯಾತ ನೃತ್ಯಗಾತಿ ಮತ್ತು ಸಂಯೋಜಕಿಯಾದ ಡಾ. ವಸುಂಧರಾ ದೊರೆಸ್ವಾಮಿಯವರು ‘ನಾಟ್ಯ-ಯೋಗ ಮತ್ತು ಮಾನಸಿಕ ಆರೋಗ್ಯ’ದ ಕುರಿತು ನೃತ್ಯ ಯೋಗ ಪ್ರಾತ್ಯಕ್ಷಿಕೆಯನ್ನು ನಡೆಸಿಕೊಡಲಿದ್ದಾರೆ.
ಇದೇ ಸಂದರ್ಭದಲ್ಲಿ ಕೋವಿಡ್19 ಬಗೆಗಿನ ಸೃಜನಶೀಲ ನೃತ್ಯ ಸಂಯೋಜನೆ ಮತ್ತು ಮಾನಸಿಕ ಆರೋಗ್ಯ ಸ್ಪರ್ಧೆಯ ಬಹುಮಾನ ಘೋಷಣೆ ಮಾಡಲಾಗುವುದು.
ಕಾರ್ಯಕ್ರಮದಲ್ಲಿ ಭಾರತೀಯ ಮನೋವೈದ್ಯಕೀಯ ಅಧ್ಯಕ್ಷ ಸಂಘ ಪಿ.ಕೆ. ದಲಾಲ್, ಶ್ರೀವಿಜಯದ ಅಧ್ಯಕ್ಷ ಡಾ. ಕೆ.ಆರ್. ಶ್ರೀಧರ್ ಮತ್ತಿತರ ಗಣ್ಯರು ಉಪಸ್ಥಿತರಿರುವರು.
ಆಸಕ್ತರು ಜೂಮ್ ನ ನೋಡುಗರ ಲಿಂಕ್ http://digital-infomedia.com/yogacreativity ನಲ್ಲಿ ವೀಕ್ಷಿಸಬಹುದು ಎಂದು ಡಾ. ಕೆ.ಎಸ್. ಪವಿತ್ರ ಅವರು ತಿಳಿಸಿದ್ದಾರೆ.
ಭಾರತೀಯ ಮನೋವೈದ್ಯಕೀಯ ಸಂಘ, ಸೃಜನಶೀಲತೆ ಮತ್ತು ಮಾನಸಿಕ ಆರೋಗ್ಯ ಕಾರ್ಯಪಡೆ ಮತ್ತು ಶ್ರೀವಿಜಯ ಕಲಾನಿಕೇತನ ಸಂಯುಕ್ತವಾಗಿ ಆಯೋಜಿಸಲಾಗಿದೆ.
Get In Touch With Us info@kalpa.news Whatsapp: 9481252093
Discussion about this post