ಕಲ್ಪ ಮೀಡಿಯಾ ಹೌಸ್ | ಹಾಸನ |
ಮೈಸೂರು ವಿಭಾಗದ ವಿಭಾಗೀಯ ರೈಲ್ವೆ ವ್ಯವಸ್ಥಾಪಕರಾದ ಮುದಿತ್ ಮಿತ್ತಲ್ ಅವರು ಇತ್ತೀಚೆಗೆ ಹಾಸನ-ಸಕಲೇಶಪುರ, ಸಕಲೇಶಪುರ-ಸುಬ್ರಹ್ಮಣ್ಯ ರಸ್ತೆ ಮತ್ತು ಸುಬ್ರಹ್ಮಣ್ಯ ರಸ್ತೆ-ಬಂಟ್ವಾಳ ಮಾರ್ಗಗಳವರೆಗೆ ತಪಾಸಣೆ ನಡೆಸಿದರು.
ಈ ತಪಾಸಣೆಯ ಉದ್ದೇಶವು ಮಾರ್ಗದ ಮೇಲಿರುವ ಹಳೆಯದಾದ ಟ್ರಾಕ್ ಮೂಲಸೌಕರ್ಯ, ಸಂಜ್ಞಾ ವ್ಯವಸ್ಥೆ (ಸಿಗ್ನಲಿಂಗ್ ಸಿಸ್ಟಮ್), ಭದ್ರತೆ ಮತ್ತು ನಿರ್ವಹಣಾ ಮಾನದಂಡಗಳನ್ನು ಪರಿಶೀಲಿಸುವುದಾಗಿತ್ತು. ಸಕಲೇಶಪುರ ಮತ್ತು ಸುಬ್ರಹ್ಮಣ್ಯ ರಸ್ತೆಯ ನಡುವಿನ ಘಾಟ್ ವಿಭಾಗದಲ್ಲಿ ಟ್ರಾö್ಯಕ್ ನಿಯತಾಂಕಗಳು, ಸೇತುವೆಗಳು, ವಕ್ರಗಳು ಮತ್ತು ಇಳಿಜಾರುಗಳ ಬಗ್ಗೆ ವಿಶೇಷ ಗಮನ ನೀಡಿದರು.

ಮಿತ್ತಲ್ ಅವರು ಸ್ಥಳದಲ್ಲಿರುವ ಇಂಜಿನಿಯರಿಂಗ್ ತಂಡಗಳೊಂದಿಗೆ ಸಂವಾದ ನಡೆಸಿದರು. ಕಾಮಗಾರಿಗಳು ನಿಗದಿಪಡಿಸಿದ ಸಮಯಕ್ಕೆ ಪೂರ್ಣಗೊಳ್ಳುವಂತೆ, ಗುಣಮಟ್ಟ ಮತ್ತು ಭದ್ರತಾ ಮಾನದಂಡಗಳನ್ನು ಕಡ್ಡಾಯವಾಗಿ ಪಾಲಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು.
ಅವರ ಜೊತೆ ಗತಿಶಕ್ತಿ ಘಟಕದ ಮುಖ್ಯ ಯೋಜನಾ ವ್ಯವಸ್ಥಾಪಕರಾದ ಆನಂದ್ ಭಾರತಿ ಹಾಗೂ ಇತರ ಹಿರಿಯ ವಿಭಾಗೀಯ ಅಧಿಕಾರಿಗಳು ಉಪಸ್ಥಿತರಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news











Discussion about this post