ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಶಿವಮೊಗ್ಗ: ಹೊರವಲಯದ ದುಮ್ಮಳ್ಳಿ ಶ್ರೀಹರಿ ಲೇಔಟ್‌ನಲ್ಲಿ ಮನೆ ಕಟ್ಟಡ ಕಾರ್ಯದ ನಡುವೆ ಸುಮಾರು 5ಅಡಿ ಉದ್ದದ ನಾಗರಹಾವನ್ನು ದುಮ್ಮಳ್ಳಿ ಗ್ರಾಮದ ಪ್ರಕಾಶ್ (ಬಿಜೆಪಿ ಪ್ರಕಾಶ್) ಹಿಡಿದು ಅರಣ್ಯದೊಳಗೆ ಬಿಟ್ಟು ಬಂದಿದ್ದಾರೆ.
ನಿನ್ನೆ ಸಂಜೆ ಬಲವಾದ ನಾಗರಹಾವು ಪತ್ತೆಯಾದ ಸಂದರ್ಭದಲ್ಲಿ ಸ್ಥಳೀಯರು ಪ್ರಕಾಶ್ ಅವರಿಗೆ ಕರೆ ಮಾಡಿ ಹಾವನ್ನು ಹಿಡಿಯಲು ಕೋರಿದರು. ಪ್ರಕಾಶ್ ಸುರಕ್ಷಿತವಾಗಿ ಹಾವನ್ನು ಹಿಡಿದು ಸ್ಥಳೀಯರ ಸಹಯೋಗದಲ್ಲಿ ದೂರದ ಅರಣ್ಯದೊಳಗೆ ಬಿಟ್ಟಿದ್ದಾರೆ.
ಮರಿಯಪ್ಪ ಎಂಬುವವರ ಮಗ ದುಮ್ಮಳ್ಳಿ ಪ್ರಕಾಶ್ ಕಳೆದ 10 ವರ್ಷಗಳಿಂದ ಈ ಭಾಗದ ಅಪಾಯಕಾರಿ ಹಾವುಗಳನ್ನು ಚಾಕಚಕ್ಯತೆಯಿಂದ ಹಿಡಿದು ಬಿಡುವ ಕಾರ್ಯವನ್ನು ಸದ್ದಿಲ್ಲದೇ ಮಾಡುತ್ತಾ ಬಂದಿದ್ದಾರೆ. ಪ್ರಚಾರಪ್ರಿಯರಲ್ಲದ ಪ್ರಕಾಶ್ ಈ ಭಾಗದ ಸುತ್ತ ಮುತ್ತಲ ಹತ್ತಾರು ಹಳ್ಳಿಗಳಿಗೆ ಚಿರಪರಿಚಿತರು ಇವರ ಕಾರ್ಯವನ್ನು ಸ್ಥಳೀಯರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಪ್ರಕಾಶ್ ಅವರ ಸಂಪರ್ಕ ಸಂಖ್ಯೆ (98453 84462).
Get In Touch With Us info@kalpa.news Whatsapp: 9481252093
Discussion about this post