ಮೊದಲಿಗೆ ಆದರ್ಶದ ಮಾತಿದು ಅನಿಸುತ್ತದೆ. ಮೇಲ್ನೋಟಕ್ಕೆ ಸಾವಿರಾರು ಕೋಟಿ ರೂ.ಗಳ ಚುನಾವಣಾ ವೆಚ್ಚವನ್ನು, ಹೊರೆಯನ್ನು ಸಾಕಷ್ಟು ತಗ್ಗಿಸುವಲ್ಲಿ ಈ ಪ್ರಸ್ತಾವನೆ ಹೆಮ್ಮೆ ಪಡುವಂಥದ್ದು.
ಆದರೆ, ಸಂವಿಧಾನಾತ್ಮಕವಾಗಿ ಈ ಪ್ರಸ್ತಾವನೆಗೆ ತೊಡಕಿರುವ ಬಗ್ಗೆ ಅನೇಕ ರಾಜಕೀಯ ಪಕ್ಷಗಳು, ತಜ್ಞವೃಂದ ಕೊಂಚ ಸಂದೇಹ ವ್ಯಕ್ತಪಡಿಸಿವೆ.
ಜನರಿಂದ ಆಯ್ಕೆಯಾದ ಸರ್ಕಾರ ಬಹುಮತ ಕಳೆದುಕೊಂಡ ಹೊತ್ತಿನಲ್ಲಿ ನಡೆದುಕೊಳ್ಳಬೇಕಾದ ಸಂವಿಧಾನಾತ್ಮಕ ಕ್ರಮಗಳ ಬಗ್ಗೆ ರಾಜಕೀಯ ಪಕ್ಷಗಳ ಮುಖಂಡರು ತೀವ್ರ ಆಕ್ಷೇಪಗಳನ್ನ ಎತಿದ್ದಾರೆ.
ಅವರೆಲ್ಲರ ಅನಿಸಿಕೆಗಳ ಸಾರಾಂಶವೆಂದರೆ ಲೋಕಸಭೆಯಲ್ಲಿ ಅವಿಶ್ವಾಸ ಗೊತ್ತುವಳಿ ಅಂಗೀಕೃತವಾದ ಸಂದರ್ಭದಲ್ಲಿ ಸರ್ಕಾರದ ಸ್ವರೂಪ ಯಾವ ರೀತಿ ಇರುತ್ತೆ? ಆಗ ಚುನಾವಣೆಯನ್ನು ನಡೆಸುವಂತಿಲ್ಲದಿದ್ದಾಗ ಬಿಕ್ಕಟ್ಟು ಉದ್ಭವಿಸುತ್ತದೆ.
ಬಹುಮತವಿರುವ ಪಕ್ಷದವರೇ ಮತ್ತೋರ್ವ ನಾಯಕನನ್ನು ಆಯ್ಕೆ ಮಾಡಬೇಕೆ? ವಿಧಾನಸಭೆಗಳಲ್ಲಂತೂ ಈಗ ಪ್ರಾದೇಶಿಕ ಪಕ್ಷಗಳದ್ದೇ ಮೇಲುಗೈ. ಪಕ್ಷನಿಷ್ಠೆ ಬದಲಿಸುವ ಜನಪ್ರತಿನಿಧಿಗಳೇ ಬಹಳವಿದ್ದಾರೆ. ರಾಜ್ಯಗಳಲ್ಲಿ ರಾಜಕೀಯ ಡೋಲಾಯಮಾನ ಪರಿಸ್ಥಿತಿ ಬರುವ ಸಂದರ್ಭಗಳೇ ಅಧಿಕ. ಸರ್ಕಾರ ಪತನವಾದ ಸಮಯದಿಂದ ಅದರ ಪೂರ್ಣಾವಧಿ ಪೂರೈಸುವ ಬಗೆ ಎಂತು? ಪತನದ ನಂತರದ ಅವಧಿಯನ್ನು ಜನಪ್ರಿಯ ಸರ್ಕಾರವಿಲ್ಲದೇ ನಿಭಾಯಿಸುವ ಹೊಣೆ ಹೇಗೆ, ಯಾರು ನಿರ್ವಹಿಸಬೇಕು? ಚುನಾವಣಾ ಆಯೋಗದ ಕಾರ್ಯ, ಸ್ವರೂಪ ಮತ್ತು ಪಾತ್ರವೇನು? ಇದಕ್ಕೆಲ್ಲಾ ನಮ್ಮ ಸಂವಿಧಾನದಲ್ಲಿ ಅವಕಾಶವಿದೆಯೆ? ಇಲ್ಲದಿದ್ದಲ್ಲಿ ತಿದ್ದುಪಡಿ ಮಾಡಬಹುದೆ? ಅದಕ್ಕೆ ನಮ್ಮ ಸಂವಿಧಾನ ತಜ್ಞರು ಏನು ಅಭಿಪ್ರಾಯಪಡುತ್ತಾರೆ? ಈ ಎಲ್ಲಾ ಸಾಧಕ ಬಾಧಕಗಳನ್ನು ಸಾರ್ವಜನಿಕ ಚರ್ಚೆ ಮಾಡಬಹುದೇ? ಲೋಕಸಭೆಯಲ್ಲಿ ಈ ಪ್ರಸ್ತಾವನೆಗೆ ಜನಪ್ರತಿನಿಧಿಗಳ ಒಲವೇನು?
…..ಇತ್ಯಾದಿ ಇತ್ಯಾದಿ ಸಮಗ್ರ ಚರ್ಚೆ ಅಗತ್ಯವಿದೆ ಎನಿಸುತ್ತದೆ.
-ಡಾ.ಸುಧೀಂದ್ರ
Discussion about this post