ಕಲ್ಪ ಮೀಡಿಯಾ ಹೌಸ್
ಬೆಂಗಳೂರು: ಹೈದ ಸ್ಟುಡಿಯೋಸ್ ನಿರ್ಮಾಣವಾಗುತ್ತಿರುವ ಎಕ್ಕಾ ರಾಜ ರಾಣಿ ವೆಬ್ ಸೀರೀಸ್’ನ ಮೋಷನ್ ಪೋಸ್ಟರ್ ಬಿಡುಗಡೆಯಾಗಿದ್ದು, ಯೂಟ್ಯೂಬ್’ನಲ್ಲಿ ಭಾರೀ ಸೆನ್ಸೇಷನ್ ಕ್ರಿಯೇಟ್ ಮಾಡುತ್ತಿದೆ.
ಟಾಕೀಸ್ ಕನ್ನಡ ಯೂಟ್ಯೂಬ್ ಚಾನಲ್’ನಲ್ಲಿ ಇದು ಬಿಡುಗಡೆಯಾಗಿದ್ದು, ಇದರ ಬಿಜಿಎಂ ಭಾರೀ ಸದ್ದು ಮಾಡಿದೆ.
ಸಸ್ಪೆನ್ಸ್, ಕ್ರೈಂ ಹಾಗೂ ಥ್ರಿಲ್ಲರ್ ಕಥಾ ಹಂದರ ಹೊಂದಿರುವ ಎಕ್ಕಾ ರಾಜ ರಾಣಿ ವೆಬ್ ಸೀರೀಸನ್ನು ವಿಲಾಸ್ ರತ್ನಾಕರ್ ಕ್ಷತ್ರಿಯ ನಿರ್ದೇಶಿಸುತ್ತಿದ್ದು, ನಯನ್ ಥೇಮ್ಕರ್ ಅವರು ಹೈದ ಸ್ಟುಡಿಯೋಸ್ ಅಡಿಯಲ್ಲಿ ನಿರ್ಮಾಣ ಮಾಡಿದ್ದಾರೆ. ಸ್ಯಾಂಡಲ್’ವುಡ್ ಖ್ಯಾತ ಯುವ ಸಂಗೀತ ನಿರ್ದೇಶಕ
ಶಿವಮೊಗ್ಗದ ಋತ್ವಿಕ್ ಮುರಳೀಧರ್ ಸಂಗೀತ ಸಂಯೋಜನೆ ಮಾಡಿದ್ದು, ಈ ಮೋಷನ್ ಪೋಸ್ಟರ್’ನ ಬಿಜಿಎಂ ಯೂಟ್ಯೂಬ್’ನಲ್ಲಿ ಭಾರೀ ಮೆಚ್ಚುಗೆಗೆ ಪಾತ್ರವಾಗಿದೆ.
ಇನ್ನು, ಅರ್ಜುನ್ ಕುಮಾರ್ ಕ್ರಿಯೇಟಿವ್ ಹೆಡ್, ವಿಜೇತ್ ಚಂದ್ರ ಎಡಿಟರ್, ಉದಯ್ ಲೀಲಾ ಡಿಒಪಿ, ವಿಲಾಸ್ ಮತ್ತು ಸುದರ್ಶನ್ ಸಂಭಾಷಣೆ, ಜಯಂತ್ ಎಸ್ ಭಟ್ ಪ್ರೊಡಕ್ಷನ್ ಕಂಟ್ರೋಲರ್ ಆಗಿ ಜವಾಬ್ದಾರಿ ನಿರ್ವಹಿಸಿದ್ದರೆ, ಸುದರ್ಶನ್ ಆಚಾರ್ಯ ಸಹಾಯಕ ನಿರ್ದೇಶಕರಾಗಿ, ಸಚಿನ್, ಶ್ರೀಧರ್, ನಿಖಿಲ್, ರಾಕೇಶ್ ಅವರುಗಳು ನಿರ್ದೇಶನದ ವಿವಿಧ ಜವಾಬ್ದಾರಿ ಹೊತ್ತಿದ್ದಾರೆ. ರಾಕೇಶ್ ಇಂಜಿನಿಯರ್ ಆಗಿ, ನವೀನ್ ಕುಮಾರ್ ಸೌಂಡ್ ಡಿಸೈನ್ ಹಾಗೂ ಪುನೀತ್ ಅವರು ಪಬ್ಲಿಸಿಟಿ ಡಿಸೈನ್ ಜಬಾವ್ದಾರಿಯನ್ನು ನಿರ್ವಹಿಸಿದ್ದಾರೆ.
ಈಗ ಬಿಡುಗಡೆಯಾಗಿರುವ ಮೋಷನ್ ಪೋಸ್ಟರ್ ಈ ವೆಬ್ ಸೀರೀಸ್ ಬಗ್ಗೆ ಭಾರೀ ಕುತೂಹಲ ಮೂಡಿಸಿದ್ದು, ಯೂಟ್ಯೂಬ್ ವೀಕ್ಷಕರ ಮೆಚ್ಚುಗೆಗೆ ಪಾತ್ರವಾಗಿದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post