ಪ್ರಸ್ತುತ ಕಲಾ ಕ್ಷೇತ್ರದಲ್ಲಿ ಈಗ ಕಿರುಚಿತ್ರಗಳದ್ದೇ ದರ್ಬಾರ್… ಎರಡೂವರೆ ಗಂಟೆ ಚಿತ್ರಮಂದಿರದಲ್ಲಿ ಕುಳಿತು ಚಿತ್ರ ನೋಡುತ್ತಿದ್ದ ಪ್ರೇಕ್ಷಕನಿಗೆ ತನ್ನ ಮನೆಯಲ್ಲೇ ಅದೂ ತನ್ನ ಮೊಬೈಲ್‌ನಲ್ಲೇ ಕೇವಲ ನಿಮಿಷಗಳ ಲೆಕ್ಕದಲ್ಲಿ ಚಿತ್ರ ಅಂದರೆ ಕಿರುಚಿತ್ರ ನೋಡಿ ಮನೋರಂಜನೆ ಪಡೆಯುವ ಕಾಲವಿದು.. ಇಂತಹ ಕಿರುಚಿತ್ರಗಳ ಲೋಕದಲ್ಲಿ ಹೊಸ ಪ್ರತಿಭೆಗಳ ಪ್ರಯತ್ನದ ಫಲವೇ ‘ವೃತ್ತ’..
ಕಾಲ್ಪನಿಕ, ಕುತೂಹಲಕಾರಿ ಹಾಗೂ ರೋಚಕತೆಗೆ ಒತ್ತು ನೀಡುವ ಸಣ್ಣ ಕಥಾಹಂದರ ಹೊಂದಿರುವ ಈ ವೃತ್ತ ಕೇವಲ ಇಬ್ಬರು ನಟರನ್ನು ಮಾತ್ರ ಹೊಂದಿದ್ದು, ಕನ್ನಡ ಹಾಗೂ ತುಳು ಭಾಷೆಯಲ್ಲಿ ಕೆಲವೇ ಕೆಲವು ಡೈಲಾಗ್ ಗಳನ್ನು ಅಡಗಿಸಿಕೊಂಡಿದೆ.
ಕಾರ್ತಿಕ್ ಸುಂದರ್ ಹಾಗೂ ತುಳಸಿದಾಸ್ ಕೋಟೇಕರ್ ನಟಿಸಿರುವ ಈ ಕಿರುಚಿತ್ರವನ್ನು ಕಾರ್ತಿಕ್ ಸುಂದರ್ ಅವರೇ ನಿರ್ದೇಶಿಸಿದ್ದು, ಎಚ್. ಹರಿಕಿರಣ್ ಕಥೆ ಹಾಗೂ ಚಿತ್ರಕತೆ ಬರೆದಿದ್ದಾರೆ. ಎಚ್.ವಿ. ಪ್ರವೀಣ್ ಈ ಕಿರುಚಿತ್ರವನ್ನು ನಿರ್ಮಾಣ ಮಾಡಿದ್ದಾರೆ.
ಈ ಲಿಂಕ್ ಕ್ಲಿಕ್ ಮಾಡಿ, ಕಿರುಚಿತ್ರ ನೋಡಿ, ಹೊಸಬರ ಪ್ರಯತ್ನವನ್ನು ಪ್ರೋತ್ಸಾಹಿಸಿ…
Discussion about this post