ಕಲ್ಪ ಮೀಡಿಯಾ ಹೌಸ್ | ಇರುವಕ್ಕಿ(ಶಿವಮೊಗ್ಗ) |
ಸೈಲೇಜ್ #Silage ಎಂದರೇನು, ಅದನ್ನು ತಯಾರಿಸುವ ವಿಧಾನ, ಅದರಲ್ಲಿರುವ ಪೋಷಕಾಂಶಗಳ ವಿವರ, ಅದರ ಶೇಖರಣೆ ಮತ್ತು ಪಶುಪಾಲನೆಯಲ್ಲಿ ಅದರ ಬಳಕೆ ಕುರಿತು ಕೆಳದಿ ಶಿವಪ್ಪನಾಯಕ ಕೃಷಿ ಮತ್ತು ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯದ ಬಿಎಸ್’ಸಿ ಅಂತಿಮ ವರ್ಷದ ವಿದ್ಯಾರ್ಥಿಗಳ ಗುಂಪು ಚರ್ಚೆಯನ್ನು ನಡೆಸಿದರು.
ಗ್ರಾಮೀಣ ಕೃಷಿ ಕಾರ್ಯಾನುಭವ ಕಾರ್ಯಕ್ರಮದ ಅಡಿಯಲ್ಲಿ ಶಿಕಾರಿಪುರ ತಾಲೂಕಿನ ನೆಲವಾಗಿಲು ಗ್ರಾಮದಲ್ಲಿ ‘ಸೈಲೇಜ್ ತಯಾರಿಕೆ’ ಕುರಿತು ಗುಂಪು ಚರ್ಚೆ ಮತ್ತು ಪದ್ಧತಿ ಪ್ರಾತ್ಯಕ್ಷಿಕೆಯನ್ನು ಆಯೋಜಿಸಿದ್ದರು.
ಈ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು ಸೈಲೇಜ್ ಎಂದರೇನು, ಅದನ್ನು ತಯಾರಿಸುವ ವಿಧಾನ, ಅದರಲ್ಲಿರುವ ಪೋಷಕಾಂಶಗಳ ವಿವರ, ಅದರ ಶೇಖರಣೆ ಮತ್ತು ಪಶುಪಾಲನೆಯಲ್ಲಿ ಅದರ ಬಳಕೆ ಕುರಿತು ಗುಂಪು ಚರ್ಚೆ ನಡೆಸಿದರು.
ನಂತರ ಕತ್ತರಿಸಿದ ಹುಲ್ಲು, ಬೆಲ್ಲ, ಉಪ್ಪು, ಯೂರಿಯ ಬಳಸಿ ಸೈಲೇಜ್ ತಯಾರಿಕೆಯ ಪದ್ಧತಿ ಪ್ರಾತ್ಯಕ್ಷಿಕೆ ಮಾಡಿದರು.
Also read: SwarSwapn’: A rare violin ensemble experience on Sunday Jan 12 in the city
ಸೈಲೇಜ್ ಮಾಡಲು ಸೂಕ್ತವಾದ ಹುಲ್ಲು ಜಾತಿ, ತಳಿ, ಹೈಬ್ರಿಡ್ ಮತ್ತು ಸೈಲೇಜ್ ಅನ್ನು ಜಾನುವಾರುಗಳಿಗೆ ತಿನ್ನಿಸುವ ರೀತಿ, ಪ್ರಮಾಣದ ಕುರಿತು ಮಾಹಿತಿ ನೀಡಿದರು.
ಇನ್ನು, ಇದೇ ಸರಣಿಯ ಇನ್ನೊಂದು ಕಾರ್ಯಕ್ರಮದಲ್ಲಿ ಮಾತನಾಡಿದ ಪ್ರಗತಿಪರ ಸಾವಯವ ರೇಷ್ಮೆ ಕೃಷಿಕರಾದ ಶ್ರೀಧರ್ ಕೊರಗಿ, ಸಾವಯವ ಹಿಪ್ಪುನೇರಳೆ ಕೃಷಿ ಮತ್ತು ರೇಷ್ಮೆ ಕೃಷಿ ಮಾಡುವ ವಿಧಾನವನ್ನು ವಿವರಿಸಿದರು.
ಹಿಪ್ಪುನೇರಳೆಯಲ್ಲಿ ಅಂತರ ಬೆಳೆಗಳಾಗಿ ವಿವಿಧ ತರಕಾರಿಗಳು ಮತ್ತು ಹಣ್ಣುಗಳನ್ನು ಸಾವಯವ ಪದ್ಧತಿಯಲ್ಲಿ ಬೆಳೆಯಬಹುದೆಂದು ತಿಳಿಸಿದರು.
ಸಾವಯವ ಗೊಬ್ಬರಗಳ ಬಗ್ಗೆ ಮಾಹಿತಿ ನೀಡಿ ಗೋಕೂಪಾಮೃತ ತಯಾರಿಕೆಯ ಪದ್ಧತಿ ಪ್ರಾತ್ಯಕ್ಷಿಕೆಯನ್ನು ಮಾಡಿದರು. ಡಾ. ಅರುಣ್ ರವರು ರೈತರು ಅಡಿಕೆಯಲ್ಲಿ ಅಂತರ ಬೆಳೆಗಳಾಗಿ ಕಾಳು ಮೆಣಸು, ಪಪ್ಪಾಯ, ಜಾಯಿ ಕಾಯಿ, ನುಗ್ಗೆಕಾಯಿ ಮುಂತಾದವುಗಳನ್ನು ಬೆಳೆಯಬೇಕೆಂದು ಉತ್ತೇಜಿಸಿದರು.
ಶಿವಮೊಗ್ಗ ಕೃಷಿ ವಿವಿಯ ಕೀಟಶಾಸ್ತç ವಿಭಾಗದ ಸಹಾಯಕ ಪ್ರಾಧ್ಯಾಪಕರಾದ ಡಾ. ಕೃಷ್ಣ ರೆಡ್ಡಿ ಮತ್ತು ಕೃಷಿ ವಿಸ್ತರಣೆ ವಿಭಾಗದ ಸಹಾಯಕ ಪ್ರಾಧ್ಯಾಪಕರಾದ ಡಾ. ಅರುಣ್ ಅವರು ಆಗಮಿಸಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post