No Result
View All Result
Tumkur limited height subway opens at bheemasandra gate
English Articles

Tumkur Traffic Relief : New Limited Height Subway Opens At Old Bheemasandra Gate

by kalpa News
September 18, 2026
0

Kalpa Media House  |  Tumkur   | Union Minister of State for Railways and Jal Shakti V. Somanna inaugurated the newly...

Read moreDetails
Hubballi railway Station Swacchata Pakhwada

Hubballi Division : Swachhata Hi Seva and Swachhata Pakhwada–2026 Launched in

September 18, 2026
swr mysuru division swacchata hi seva 2026 campaign

SWR : Mysuru Division Launches Swachhata Hi Seva 2026 Campaign

September 18, 2026
Teen Gang Rape Killed By 3 Minors Body Eaten By Dogs

Teen Gangraped, Killed by Minors in Delhi Body Eaten by Dogs

September 18, 2026
mysuru rss journey exhibition showcasing its history

A Century of RSS Through a Unique Exhibition

September 17, 2026
  • Advertise With Us
  • Grievances
  • About Us
  • Contact Us
Saturday, September 19, 2026
Follow Us
kalpa.news
Advertisement
ADVERTISEMENT
  • Home
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಹುಬ್ಬಳ್ಳಿ-ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಯಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
    • ವಿಜಯನಗರ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
    • ಡಾ. ಮೈತ್ರೇಯಿ ಆದಿತ್ಯಪ್ರಸಾದ್
  • ರೈಲ್ವೆ ಸುದ್ದಿಗಳು
  • ಇತರೆ
    • ವಿಜ್ಞಾನ-ತಂತ್ರಜ್ಞಾನ
    • ಜಾಬ್-ಸ್ಟ್ರೀಟ್
    • ಕೈ ರುಚಿ
    • ನಿತ್ಯ ಪಂಚಾಂಗ/ದಿನ ವಿಶೇಷ
    • ಮುಂಜಾನೆ ಸುವಿಚಾರ
    • ಆಧ್ಯಾತ್ಮ/ಭಕ್ತಿಭಾವ
Subscribe
kalpa.news
No Result
View All Result
  • Home
  • ರಾಜಕೀಯ
  • ಶಿವಮೊಗ್ಗ
  • ಜಿಲ್ಲೆ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
  • ರೈಲ್ವೆ ಸುದ್ದಿಗಳು
  • ಇತರೆ
ADVERTISEMENT
Home ಜಿಲ್ಲೆ ಮೈಸೂರು

ಮೈಸೂರು | ‘ಸ್ವರಸ್ವಪ್ನ’ | ಜ.12ರಂದು ಅಪರೂಪದ ವಯೋಲಿನ್ ವೃಂದ ವಾದನ

kalpa News by kalpa News
January 7, 2025
in ಮೈಸೂರು
0
SwarSwapn’: A rare violin ensemble experience on Sunday Jan 12 in the city
Share on FacebookShare on TwitterShare on WhatsApp

ಕಲ್ಪ ಮೀಡಿಯಾ ಹೌಸ್  |  ಮೈಸೂರು  |

ಭಾನುವಾರ ಜನವರಿ 12ರ ಸಂಜೆ ನಗರ ಒಂದು ಅಪರೂಪದ ಹಿಂದೂಸ್ತಾನಿ ಸಂಗೀತ ಕಾರ್ಯಕ್ರಮಕ್ಕೆ ಸಾಕ್ಷಿಯಾಗಲಿದೆ.

ನಗರದ  ಕೇರ್ಗಳ್ಳಿಯಲ್ಲಿರುವ “ನಿನಾದ ಗೃಹ ಸಂಗೀತ” ಸರಣಿಯ 16ನೇ ಕಾರ್ಯಕ್ರಮವಾಗಿ  ಹಿಂದುಸ್ತಾನಿ ವಯೋಲಿನ್ ವೃಂದ ವಾದನ ‘ಸ್ವರಸ್ವಪ್ನ’ವನ್ನು  ಪುಣೆಯ ಸುಪ್ರಸಿದ್ಧ ವಯೋಲಿನ್ ವಾದಕಿ, ಗುರು ವಿ.ಸ್ವಪ್ನಾ ದಾತಾರ್ ಅವರ ಆಯ್ದ ಯುವ ವಿದ್ಯಾರ್ಥಿಗಳು ನಡೆಸಿಕೊಡಲಿದ್ದಾರೆ. ಅಂದು  ಸಂಜೆ 6.30ಕ್ಕೆ  ಕೇರ್ಗಳ್ಳಿಯ ‘ನಿನಾದ’ ಸಭಾಂಗಣದಲ್ಲಿ ಈ ಸಂಗೀತ ಸಂಜೆ ಮೂಡಿಬರಲಿದೆ.

ಈ ದೇಶದ ಅಗ್ರಪಂಕ್ತಿಯ ವಯೋಲಿನ್ ವಾದಕರಲ್ಲಿ ಒಬ್ಬರಾಗಿರುವ ವಿ. ಸ್ವಪ್ನ ದಾತಾರ್   ಸಂಗೀತ ನಾಟಕ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಪಂ. ವಸಂತರಾವ್ ಶಿವಲೇಕರ್ ಅವರ ಹಿರಿಯ ಶಿಷ್ಯರು. ಗಾಯಕಿ ಅಂಗ ಹಾಗೂ ತಂತ್ರಕಾರ್ ಎರಡೂ ಅಂಗಗಳ ಸಮ್ಮಿಲನದೊಂದಿಗೆ ಆಕರ್ಷಕವಾಗಿ ವಯೋಲಿನ್ ನುಡಿಸಬಲ್ಲ ಸ್ವಪ್ನಾ ದಾತಾರ್ ಅವರು ವಿಶೇಷವಾದ ಪ್ರತಿಭೆ, ಸಾಮರ್ಥ್ಯ ಮತ್ತು ದೂರದರ್ಶಿತ್ವವುಳ್ಳ ಕಲಾವಿದೆ.
‘ಸ್ವರಸ್ವಪ್ನ’ ಅವರ ಕನಸಿನ ಕೂಸು. ಎಳೆಯ ಮಕ್ಕಳಲ್ಲಿ ಎಲ್ಲಾ ಕಲಾ ಪ್ರಕಾರಗಳ ಬಗ್ಗೆ ಅರಿವು ಮೂಡಿಸಿ, ಅವರನ್ನು ಅವುಗಳಲ್ಲಿ ತೊಡಗಿಕೊಳ್ಳುವಂತೆ ಮಾಡುವ ಅವರ ಪ್ರಯತ್ನದ ಫಲವೇ ‘ಸ್ವರಸ್ವಪ್ನ’. ಇಲ್ಲಿ ಶಾಸ್ತ್ರೀಯ ಸಂಗೀತದ ವಾದನವಿದೆ. ಜೊತೆಯಲ್ಲಿ ರಾಗಬದ್ಧ ಚಲನಚಿತ್ರದ ಹಾಡುಗಳಿವೆ, ಅಭಂಗ, ದೇಶಭಕ್ತಿಗೀತೆ, ಬೇರೆ ಬೇರೆ ಭಾಷೆಗಳ ಸುಪ್ರಸಿದ್ಧ ಹಾಡು ಜೊತೆಗೆ ಪಾಶ್ಚಾತ್ಯ ರಚನೆಗಳನ್ನೂ ಕಾಣಬಹುದು. ಸ್ವತಃ ವಿ.ಸ್ವಪ್ನಾ ಅವರೇ ರಚನೆಗಳ ಬಗ್ಗೆ, ತಮ್ಮ ವಿಚಾರಗಳ ಬಗ್ಗೆ ಅತ್ಯಂತ ಮನಮುಟ್ಟುವ ನಿವೇದನೆಯನ್ನು ಮಾಡುತ್ತಾರೆ. ತಬಲಾ, ಪಖಾವಾಜ್, ತಾಳ ಮುಂತಾದವುಗಳ ಉಪಯೋಗ ಅವಶ್ಯಕತೆಗೆ ತಕ್ಕಂತೆ ಮಾಡಲಾಗುತ್ತದೆ.

Also read: ಕೃಷಿಕರಿಗೆ ಉಪಕಾರಿಯಾದ ಸೈಲೇಜ್ ತಯಾರಿಕೆ ಹೇಗೆ? ಕೃಷಿ ವಿದ್ಯಾರ್ಥಿಗಳು ಹೇಳಿದ್ದಾರೆ ಓದಿ…

ಈವರೆಗೆ ಸುಮಾರು 80ಕ್ಕೂ  ಅಧಿಕ ಪ್ರಯೋಗ ಕಂಡಿರುವ  ‘ಸ್ವರಸ್ವಪ್ನ’  ಇತ್ತೀಚಿಗೆ  ಜರ್ಮನ್ ನಲ್ಲಿಯೂ ಸಂಗೀತ ಪ್ರಿಯರ ಮನಸೂರೆಗೊಂಡಿತ್ತು.

ಸಂಗೀತಾಸಕ್ತ  ಮಕ್ಕಳಿಗೆ ಸಂಗೀತದ ಅಭ್ಯಾಸ, ಕಾರ್ಯಕ್ರಮ ನೀಡುವ ಅವಕಾಶ, ವಿಚಾರ ವಿನಿಮಯ ಇವೆಲ್ಲವುಗಳನ್ನು ಪೂರೈಸಲು ‘ಪರಿವಾರ್’ ಎಂಬ ಹೆಸರಿನಲ್ಲಿ ಸಂಗೀತ ತರಗತಿಗೆ ಬೇಕಾದ ಕೊಠಡಿಗಳು, ಸಭಾಂಗಣ, ಧ್ವನಿ ವ್ಯವಸ್ಥೆ ಎಲ್ಲವನ್ನು ಒದಗಿಸಿಕೊಟ್ಟು ನೂರಾರು ಮಕ್ಕಳಲ್ಲಿ ಒಳ್ಳೆಯ ಸಂಸ್ಕಾರವನ್ನು ಬಿತ್ತುವ ಕೆಲಸ ಮಾಡುತ್ತಿದ್ದಾರೆ. ಅನೇಕ ಬಗೆಯ ಕಾರ್ಯಕ್ರಮಗಳು ಇಲ್ಲಿ ನಡೆಯುತ್ತಿರುತ್ತವೆ.
‘ಸ್ವರಸ್ವಪ್ನ’ ಕಾರ್ಯಕ್ರಮದ ಕುರಿತು ಅನೇಕ ಹಿರಿಯ ಸಂಗೀತಗಾರರು ಮೆಚ್ಚುಗೆ ವ್ಯಕ್ತ ಪಡಿಸಿರುವುದು ಅದರ ವಿಶೇಷತೆಯನ್ನು ಸಾರುತ್ತವೆ. ಅವರಲ್ಲಿ ಪ್ರಮುಖರು ಡಾ.ಎನ್ ರಾಜಂ, ಪಂ.ಬುದ್ಧಾದಿತ್ಯ ಮುಖರ್ಜೀ, ಪಂ.ಅರವಿಂದ  ಥತ್ತೆ, ಪಂ.ಮಧುಪ್ ಮುದ್ಗಲ್, ‘ಭಾವ ಗಂಧರ್ವ’ ಹೃದಯನಾಥ  ಮಂಗೇಶ್ಕರ್ ಮುಂತಾದವರು.

ಪ್ರಸ್ತುತ ಕಾರ್ಯಕ್ರಮದಲ್ಲಿ ವಿ.ಸ್ವಪ್ನಾ ಅವರ ಶಿಷ್ಯರಾದ ಕು.ವೇದಾ ಪೋಲ್, ಕು.ಸಿದ್ಧಿ ದೇಶಪಾಂಡೆ, ಮಾ.ಶ್ರೇಯಸ್ ಅಭ್ಯಂಕರ್ ಇವರುಗಳು ವಯೋಲಿನ್ ಮತ್ತು ಕು.ತನಿಶ್ಕಾ ಜೋಶಿ ಸೆಲ್ಲೊ ನುಡಿಸಲಿದ್ದಾರೆ. ಶ್ರೀ ಶುಭಂ ಶಹಾ ಇವರ ಜೊತೆ ತಬಲಾದಲ್ಲಿ ಸಹಕರಿಸಲಿದ್ದಾರೆ. ವಿ.ಸ್ವಪ್ನಾ ದಾತಾರ್ ಅವರು ಕಾರ್ಯಕ್ರಮವನ್ನು ನಿರೂಪಿಸಲಿದ್ದಾರೆ.

ವಿಳಾಸ: ‘ನಿನಾದ’, 37, ರಿಷಭ್ ಸಿದ್ಧಿ ಲೇಔಟ್, ಕೇರ್ಗಳ್ಳಿ, ಮೈಸೂರು. ಸಂಪರ್ಕ 9449676014.

ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news

https://kalpa.news/wp-content/uploads/2024/04/VID-20240426-WA0008.mp4

 

Tags: Kannada News WebsiteKannada_NewsKannada_News_LiveKannada_News_OnlineKannada_WebsiteLatest News KannadamysoreNews_in_KannadaNews_Kannadaಮೈಸೂರು
Share197Tweet123Send
Aniruddha Vasishta S R

Aniruddha Vasishta S R

Editor-in-Chief

Previous Post

ಕೃಷಿಕರಿಗೆ ಉಪಕಾರಿಯಾದ ಸೈಲೇಜ್ ತಯಾರಿಕೆ ಹೇಗೆ? ಕೃಷಿ ವಿದ್ಯಾರ್ಥಿಗಳು ಹೇಳಿದ್ದಾರೆ ಓದಿ…

Next Post

ಶಿವಮೊಗ್ಗದಲ್ಲಿ HMP ವೈರಸ್ ಸುದ್ದಿ | ಆತಂಕ ಬೇಡವೇಬೇಡ | ಡಾ. ಧನಂಜಯ ಸರ್ಜಿ

kalpa News

kalpa News

Next Post
ಶಿವಮೊಗ್ಗದಲ್ಲಿ HMP ವೈರಸ್ ಸುದ್ದಿ | ಆತಂಕ ಬೇಡವೇಬೇಡ | ಡಾ. ಧನಂಜಯ ಸರ್ಜಿ

ಶಿವಮೊಗ್ಗದಲ್ಲಿ HMP ವೈರಸ್ ಸುದ್ದಿ | ಆತಂಕ ಬೇಡವೇಬೇಡ | ಡಾ. ಧನಂಜಯ ಸರ್ಜಿ

Leave a Reply Cancel reply

Your email address will not be published. Required fields are marked *

No Result
View All Result
Tumkur limited height subway opens at bheemasandra gate
English Articles

Tumkur Traffic Relief : New Limited Height Subway Opens At Old Bheemasandra Gate

by kalpa News
September 18, 2026
0

Kalpa Media House  |  Tumkur   | Union Minister of State for Railways and Jal Shakti V. Somanna inaugurated the newly...

Read moreDetails
Hubballi railway Station Swacchata Pakhwada

Hubballi Division : Swachhata Hi Seva and Swachhata Pakhwada–2026 Launched in

September 18, 2026
swr mysuru division swacchata hi seva 2026 campaign

SWR : Mysuru Division Launches Swachhata Hi Seva 2026 Campaign

September 18, 2026
Teen Gang Rape Killed By 3 Minors Body Eaten By Dogs

Teen Gangraped, Killed by Minors in Delhi Body Eaten by Dogs

September 18, 2026
mysuru rss journey exhibition showcasing its history

A Century of RSS Through a Unique Exhibition

September 17, 2026
kalpa.news

Copyright © 2026 Kalpa News. Designed by KIPL

Navigate Site

  • Advertise With Us
  • Grievances
  • Privacy & Policy
  • About Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected by Kalpa News!!
No Result
View All Result
  • Home
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಹುಬ್ಬಳ್ಳಿ-ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಯಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
    • ವಿಜಯನಗರ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
    • ಡಾ. ಮೈತ್ರೇಯಿ ಆದಿತ್ಯಪ್ರಸಾದ್
  • ರೈಲ್ವೆ ಸುದ್ದಿಗಳು
  • ಇತರೆ
    • ವಿಜ್ಞಾನ-ತಂತ್ರಜ್ಞಾನ
    • ಜಾಬ್-ಸ್ಟ್ರೀಟ್
    • ಕೈ ರುಚಿ
    • ನಿತ್ಯ ಪಂಚಾಂಗ/ದಿನ ವಿಶೇಷ
    • ಮುಂಜಾನೆ ಸುವಿಚಾರ
    • ಆಧ್ಯಾತ್ಮ/ಭಕ್ತಿಭಾವ

Copyright © 2026 Kalpa News. Designed by KIPL