ನಿಮಗೆ ನೆನಪಿರಬಹುದು. ಮೋದಿಯವರು ಕರ್ನಾಟಕ ಚುನಾವಣೆಯಲ್ಲಿ ಸಿದ್ಧರಾಮಯ್ಯನವರ ಸರಕಾರವನ್ನು 10% ಎಂದಿದ್ದರು. ಇದು ಭಾರೀ ಅವಮಾನ ಎಂದು ಕಾಂಗ್ರೆಸ್ ಬಡಿದಾಡಿಕೊಂಡಿತ್ತು. 56 ಇಂಚಿನ ಅಹಂಕಾರ ಎಂದೂ ಹಳಿದ ನಾಯಕರೂ ಇದ್ದರು. ಆದರೆ, ಇದೊಂದು ದೈವ ಪ್ರೇರಿತ ಮಾತು ಎಂದು ನಾನು ಹೇಳುತ್ತೇನೆ.
ಮೂರ್ಖರಿಗೆ 10% ಎಂದರೆ ಅವಮಾನವಂತೆ. ಆದರೆ ಈಗ ಮೋದಿಯವರ 10% ಮಹಾತ್ಮೆಯು 100% ಆಗಿಲ್ಲವೇ? 100% ಆಗಲು 10% ಕೂಡಾ ಸಾಕು ಎಂಬುದನ್ನು ಸಾಬೀತು ಮಾಡಿ ತೋರಿಸಿದ್ದಾರೆ. ಅಸಮರ್ಥರು ೧೦೦ ಅಲ್ಲ 1000 ಇದ್ದರೂ 10 ಕ್ಕಿಳಿಯಬಹುದು. ಮೋದಿಯವರು ಹೇಳಿದ 10% ಮಾತನ್ನೇನಾದರೂ challengeಗೆ ತೆಗೆದುಕೊಳ್ಳುತ್ತಿದ್ದರೆ ಇವತ್ತು ಸಮ್ಮಿಶ್ರದ ಅಗತ್ಯ ಇರುತ್ತಿರಲಿಲ್ಲ. ಇವರ challenges ರೂಪವೇ ಬೇರೆ. ಇಂಧನ ಬೆಲೆ ಏರಿತೆಂದು ಆಕಾಶವೇ ಬಿದ್ದಂತೆ ಬಂದ್’ಗೆ ಕರೆ, demonetize ಆದಾಗ ದೇಶವೇ ಮುಳುಗಿ ಹೋಯ್ತೆಂದು ಅಪಪ್ರಚಾರ, GST ಬಂತೆಂದು ಗೋಳೋ ಅಳುತ್ತಾ ಬೀದಿಗೆ ಬರುವುದು ಇತ್ಯಾದಿ ಪ್ರತಿಭಟನೆ ಮಾಡುವುದು ಬಿಟ್ಟರೆ ಬೇರೇನೂ ಸಾಧನೆಗಳಿಲ್ಲ.
ಅಷ್ಟು ಸಂಖ್ಯಾಬಲದಲ್ಲಿದ್ದ ಕರ್ನಾಟಕದ ಕಾಂಗ್ರೆಸ್ ಸರಕಾರ ಕಳೆದ ಐದು ವರ್ಷದಲ್ಲಿ ಒಂದೊಂದೇ ವರ್ಷದಲ್ಲಿ ಒಂದೊಂದು ವಿಭಾಗದ ರೈತರ ಸಾಲ ಮನ್ನ ಮಾಡುತ್ತಾ ಬಂದಿದ್ದರೆ, ಈಗ ಸಾಲ ಮನ್ನಾ ಎಂಬ ಪದ ಇರುತ್ತಿತ್ತೇ? ಈಗ ನಾವು ಪ್ರಜೆಗಳು ಸರಕಾರದ ವಿಫಲತೆಯನ್ನು ತೋರಿಸುವ ನೈತಿಕತೆ ಇರುತ್ತಿತ್ತೇ?
ಕೇವಲ ಮೋದಿಯವರ ಪ್ರಾಬಲ್ಯತೆಯ ಮೇಲೆಯೇ ಕಿಡಿಕಾರುವುದು ಬಿಟ್ಟರೆ ಇನ್ನೇನು ಸಾಧನೆಗಳಿವೆ? ಟಿಪ್ಪು ಜಯಂತಿಯನ್ನು ಆಡಂಬರದಿಂದ ಮಾಡಿದ್ದು, ಟಿಪ್ಪುವಿನ ಮೇಲಿನ ಗೌರವದಿಂದಲೂ ಅಲ್ಲ, ಮುಸ್ಲಿಮರ ಮೇಲಿನ ಪ್ರೀತಿಯಿಂದಲೂ ಅಲ್ಲ. ಕೇವಲ ಮುಸ್ಲಿಂ ಮತಗಳು, ಮೋದಿಯವರ ಪಥನದ ದೃಷ್ಟಿಯೇ ಹೊರತು ಉದ್ಧಾರಕ್ಕಾಗಿ ಅಲ್ಲ. ಉದ್ದಾರ ಆಗಿರುತ್ತಿದ್ದರೆ ಕಾಂಗ್ರೆಸಿಗೆ ಈ ಸ್ಥಿತಿಯೂ ಬರುತ್ತಿರಲಿಲ್ಲ. ಯಾವ್ಯಾವುದೋ ತಲೆಗೆಟ್ಟ ಸಾಹಿತಿಗಳನ್ನು ವೇದಿಕೆಯಲ್ಲಿರಿಸಿ ಹಿಂದೂ ಧರ್ಮನಿಂದನೆ ಮಾಡಿಸೋದು, ರಾಮನನ್ನು ಅವಹೇಳನ ಮಾಡಿ ಪುಸ್ತಕ ಬರೆಯಿಸೋದು ಇವೆಲ್ಲ ಇವರ ಮಹತ್ಸಾಧನೆಯಾಗಿದೆ.
ಒಂದು ದೇಶದ ಪ್ರಧಾನ ಮಂತ್ರಿಯನ್ನು ತುಚ್ಚವಾಗಿ ತೀಟೆ ತೀರಿಸಲು ಬರುತ್ತಾನೆ ಎನ್ನುವ ಒಬ್ಬ ಮೂರ್ಖ ನಟನಿಗೆ ಪ್ರಶಸ್ತಿ ನೀಡಿ ಮಣೆಹಾಕಿ ಮೋದಿಯವರನ್ನು ಸೋಲಿಸಲು ಬಯಸುತ್ತಾರೆ. ಇಂತಹ ವಿದ್ಯಾಮಾನಗಳನ್ನು ಯಾವನೇ ಒಬ್ಬ ಕಾಂಗ್ರೆಸ್ ನಾಯಕನು ಈ ನಿಂದನೆಗಳಿಗೆ ವಿರುದ್ಧ ಧ್ವನಿ ಎತ್ತಿದ್ದಿದ್ದರೆ ತೋರಿಸಲಿ. ಅಷ್ಟು ಸಾಲದೆ ಈ ಮೀಸಲಾತಿಯಿಂದ ಅನ್ಯಾಯವಾಗಿದೆ ಎಂದು ದಲಿತರನ್ನು ಎತ್ತಿಕಟ್ಟಲು ಶುರು ಮಾಡಿಯಾಗಿದೆ.
ಕೇಂದ್ರ ಇಂಧನ ಬೆಲೆ ಇಳಿಸಿದ್ದೇ ತಡ, ಇದೇ ಬಂದ್ ಘೋಷಣೆ ಮಾಡಿದವರೇ ರಾಜ್ಯ ತೆರಿಗೆ ಹೆಚ್ಚಿಸಿ ‘ದೇವರು ಕೊಟ್ಟರೂ ಪೂಜಾರಿ ಬಿಡ’ ಎಂದು ದರ ಹೆಚ್ಚಿಸಬೇಕೇ? ಇನ್ಯಾವ ಧೈರ್ಯದಲ್ಲಿ ಕೇಂದ್ರ ಸರಕಾರ ಬೆಲೆ ಇಳಿಸೋದು? ಇದನ್ನು ಪ್ರಜೆಗಳು ನೋಡುತ್ತಿದ್ದಾರೆ. ಇನ್ನು ಯಾವ ಸುಳ್ಳಿನ ಕಂತೆಗಳಿಗೂ ಪ್ರಜೆಗಳು ಮರುಳಾಗಲ್ಲ. ಕೇವಲ 10% ಮೀಸಲಾತಿಯು ಕಾಂಗ್ರೆಸಿನ 1% ಗೆ ಇಳಿಯುವ ಅಧೋಗತಿಗೆ ಸಾಕಾದೀತು ಎಂದು ಕಾಣುತ್ತದೆ. ಇದನ್ನು ಸ್ವಾಗತಿಸುವ ಬದಲು ಇಂದು ಹಾಗೂ ನಾಳಿನ ಮುಷ್ಕರಕ್ಕೆ ಬೆಂಬಲ ನೀಡುವುದು ಹಾಸ್ಯಾಸ್ಪದವೂ, ಒಂದು ರೀತಿಯ ಮತ್ಸರ ಪೂರಿತ ಮನೋಭಾವನೆಯೂ ಆಗಿರುತ್ತದೆ. ಮೋದಿಯವರನ್ನು ಕರ್ನಾಟಕದಲ್ಲಿ ತಲೆ ತಗ್ಗಿಸಬೇಕು ಎಂಬ ಹಠ ಇದ್ದರೆ ಕಾಲ ಮಿಂಚಿಲ್ಲ. ದಿನ ನಿತ್ಯ ಕಲಹ ಮಾಡುವ ಬದಲು ರಾಜ್ಯದ ಹಿತದೃಷ್ಟಿಗೆ ದೃಷ್ಟಿ ಹಾಯಿಸಲಿ.
-ಪ್ರಕಾಶ್ ಅಮ್ಮಣ್ಣಾಯ, ಜ್ಯೋರ್ತಿವಿಜ್ಞಾನಂ
Discussion about this post