ಶಂಶಾಬಾದ್: ಈ ದೇಶದ ಜನರಿಗೆ ಪ್ರಧಾನಿ ನರೇಂದ್ರ ಮೋದಿ ಭಯೋತ್ಪಾದಕರಂತೆ ಕಾಣುತ್ತಿದ್ದು, ಜನರಲ್ಲಿ ಭಯವನ್ನು ಹುಟ್ಟು ಹಾಕುತ್ತಿದ್ದಾರೆ ಎಂದು ಮಾಜಿ ನಟಿ, ಕಾಂಗ್ರೆಸ್ ನಾಯಕಿ ವಿಜಯಶಾಂತಿ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.
ತೆಲಂಗಾಣದ ಶಂಶಾಬಾದ್’ನಲ್ಲಿ ನಡೆದ ಸಮಾವೇಶದಲ್ಲಿ ಮಾತನಾಡಿರುವ ಅವರು, ಯಾವ ಸಮಯದಲ್ಲಿ ಮೋದಿ ಬಾಂಬ್ ಸ್ಪೋಟಿಸುತ್ತಾರೆ ಎಂದು ಜನರು ಹೆದರಿದ್ದಾರೆ. ಜನಸಾಮಾನ್ಯರಿಗೆ ಮೋದಿ ಭಯೋತ್ಪಾದಕರಂತೆ ಕಾಣುತ್ತಿದ್ದಾರೆ ಎಂದಿದ್ದಾರೆ.
Vijaya Shanti, Congress in Shamshabad, Telangana: Everyone is scared that at what moment Modi will shoot the bomb. He looks like a terrorist. Instead of loving people, he is scaring people. It's not the way how a PM should be. pic.twitter.com/1pDEvYHXH8
— ANI (@ANI) March 9, 2019
ದೇಶದ ಪ್ರಧಾನಿಯಾಗಿ ಅವರು ಜನರನ್ನು ಪ್ರೀತಿಸಬೇಕು. ಆದರೆ, ಅವರು ಜನರನ್ನು ಹೆದರಿಸುತ್ತಿದ್ದಾರೆ. ದೇಶದ ಪ್ರಧಾನಿಯೊಬ್ಬರು ನಡೆದುಕೊಳ್ಳುವ ರೀತಿ ಇದಲ್ಲ ಎಂದು ನೀಡಿರುವ ಹೇಳಿಕೆ ಈಗ ಭಾರೀ ಚರ್ಚೆಗೆ ಗ್ರಾಸವಾಗಿದೆ.
Discussion about this post