ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಶಿವಮೊಗ್ಗ: ನಗರದ ಹೊರವಲಯ ಭಾಗದಲ್ಲಿರುವ ಸೋಮಿನಕೊಪ್ಪ ಗೆಜ್ಜೇನಹಳ್ಳಿ ರಸ್ತೆಯಲ್ಲಿನ ಬಾರ್ ಅಂಡ್ ರೆಸ್ಟೋರೆಂಟ್ ಬಳಿ ಸೋಮಿನಕೊಪ್ಪ ಭಾಗದ ಕೆಲ ಕಿಡಿಗೇಡಿಗಳು ಗಾಂಜಾ ಸೇವಿಸಿ ನಿತ್ಯ ನಿರಂತರ ದಾಂದಲೆ ನಡೆಸುತ್ತಿರುವ ಬಗ್ಗೆ ಶಿವಮೊಗ್ಗ ವಿನೋಬನಗರ ಪೊಲೀಸ್ ಠಾಣೆಗೆ ಬಾರ್‌ನ ಮಾಲೀಕ ವೆಂಕಟೇಶ್ ಶೆಟ್ಟಿ ದೂರು ನೀಡಿದ್ದಾರೆ.
ಕಳೆದ ಜು.27ರ ಸಂಜೆ 7 ಗಂಟೆಗೆ ಬಾರ್ ಅಂಡ್ ರೆಸ್ಟೋರೆಂಟ್‌ಗೆ ನುಗ್ಗಿದ ಕೆಲ ಕಿಡಿಗೇಡಿಗಳು ನಮ್ಮ ಸಿಬ್ಬಂದಿಗಳಿಗೆ ಬೈದು ಮಧ್ಯ ಕೊಡುವಂತೆ ಒತ್ತಾಯಿಸಿದ್ದಾರೆ. ಇದನ್ನು ಹಲ್ಲೆಗಳೆದ ಹಿನ್ನೆಲೆಯಲ್ಲಿ ಮಾರಣಾಂತಿಕ ಹಲ್ಲೆ ನಡೆಸಿದ್ದರು. ಈ ಸಂಬಂಧ ರೇಣುಕಾಂಬ ಸಿಎಲ್೯ನ ಮ್ಯಾನೇಜಿಂಗ್ ಪಾರ್ಟ್‌ನರ್ ವಿನೋಬನಗರ ಪೊಲೀಸರಿಗೆ ದೂರು ನೀಡಿದ್ದರು. ಈ ಸಂಬಂಧ ಮರುದಿನ ದೂರು ದಾಖಲಿಸಿಕೊಂಡ ವಿನೋಬನಗರ ಪೊಲೀಸರು ಆರೋಪಿಗಳ ವಿರುದ್ಧ ಕೈಗೊಳ್ಳಬೇಕಿತ್ತು. ಆದರೆ ಅಂತಹ ಚಟುವಟಿಕೆಗಳು ಅಲ್ಲಿ ಕಂಡು ಬಂದಿಲ್ಲ ಎಂಬುದಕ್ಕೆ ಪೂರಕವಾಗಿ ಇಂದು ಬೆಳಗ್ಗೆ ಮತ್ತದೇ ಕಿಡಿಗೇಡಿಗಳು ಅಲ್ಲಿ ದಾಂಧಲೆ ಮಾಡಿದ್ದಾರೆ. ಈ ಸಂಬಂಧ ಎಲ್ಲಾ ಚಿತ್ರಣಗಳು ಲಭ್ಯವಿವೆ ಎಂದು ಮತ್ತೆ ವೆಂಕಟೇಶ್ ದೂರಿದ್ದಾರೆ.
ಇಡೀ ಆಟೋಕಾಲೋನಿಯಲ್ಲಿ ಮನೆ ಮನೆಗಳ ಬಳಿ ನುಗ್ಗಿ ದಾಂದಲೆ ನಡೆಸುವ ಈ ಕಿಡಿಗೇಡಿಗಳು ಇಂದು ಬೆಳಗ್ಗೆ ಬಾರ್‌ಗೆ ಮಧ್ಯ ಸೇವಿಸಲು ಹೋಗಿ ಗಾಂಜಾ ಅಫೀಮು ಮತ್ತಿನಲ್ಲಿ ದಾಂಧಲೆ ನಡೆಸಿದ್ದಾರೆ. ಅವರನ್ನು ಹೊರಗೆ ಕಳುಹಿಸಲು ಯತ್ನಿಸಿದ್ದರು. ಹೊರಗೆ ಹೋಗದೇ ಬಾರ್‌ನ ಬ್ಯಾನರ್ ಕಿತ್ತುಹಾಕಿ ಬಾರ್ ಹಾಗೂ ಪಕ್ಕದ ಮನೆಯ ಮೇಲೆ ಕಲ್ಲುತೂರಿ ಗಲಾಟೆ ಮಾಡಿದ್ದಾರೆ.
ಇಲ್ಲಿನ ನಿವಾಸಿಗಳು ಈ ಘಟನೆಯಿಂದ ಭಯಬೀತರಾಗಿದ್ದು, ವಿನೋಬನಗರ ಪೊಲೀಸರು ಕ್ರಮ ಕೈಗೊಳ್ಳಬೇಕಿದೆ. ಮಚ್ಚು, ಲಾಂಗುಗಳ ಮೂಲಕ ಅಸಭ್ಯ ಭಾಷೆ ಬಳಸುತ್ತಾ ತಿರುಗಾಡುವ ಇಂತಹ ಕಿಡಿಗೇಡಿಗಳನ್ನು ಕಟ್ಟಿ ಹಾಕುವ ಕೆಲಸ ಮಾಡಬೇಕಿದೆ.
Get In Touch With Us info@kalpa.news Whatsapp: 9481252093
Discussion about this post