ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಮಹತ್ವದ ಬೆಳವಣಿಗೆಯಲ್ಲಿ ಕೇಂದ್ರ ಸರ್ಕಾರ ನಿನ್ನೆ ಅಬಕಾರಿ ಸುಂಕ ಇಳಿಸಿದ್ದು, ಈ ಪರಿಣಾಮ ಪೆಟ್ರೋಲ್ ಹಾಗೂ ಡೀಸೆಲ್ ದರ ಇಳಿಕೆಯಾಗಿದ್ದು, ವಾಹನ ಸವಾರರು ತುಸು ನಿಟ್ಟುಸಿರು ಬಿಡುವಂತಾಗಿದೆ.ಅಧಿಕೃತ ಮಾಹಿತಿಯಂತೆ ಶಿವಮೊಗ್ಗದಲ್ಲಿ ಇಂದು ಪೆಟ್ರೋಲ್ ದರ ಪ್ರತಿ ಲೀಟರ್’ಗೆ ರೂ. 103.39, ಡೀಸೆಲ್ ಪ್ರತಿ ಲೀಟರ್’ಗೆ ರೂ.89.12, ಪವರ್ ಪೆಟ್ರೋಲ್ ಪ್ರತಿ ಲೀಟರ್’ಗೆ ರೂ. 107.79 ಹಾಗೂ ಟರ್ಬೋ ಜೆಟ್ ಪ್ರತಿ ಲೀಟರ್’ಗೆ ರೂ. 92.20 ಆಗಿದೆ.
ಇನ್ನು ಅಬಕಾರಿ ಸುಂಕು ಇಳಿಕೆ ಕುರಿತಂತೆ ನಿನ್ನೆ ಮಾತನಾಡಿದ್ದ ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು, ಇಂಧನ ಬೆಲೆಗಳ ಮೇಲಿನ ಕೇಂದ್ರ ಅಬಕಾರಿ ಸುಂಕದಲ್ಲಿ ತೀವ್ರ ಕಡಿತವನ್ನು ಘೋಷಿಸಲಾಗಿದೆ. ಪೆಟ್ರೋಲ್ ಬೆಲೆ 9.5 ರಷ್ಟು ಮತ್ತು ಡೀಸೆಲ್ 7 ರಷ್ಟು ಅಗ್ಗವಾಗಲಿದ್ದು, ಪೆಟ್ರೋಲ್ ಮೇಲಿನ ಕೇಂದ್ರ ಅಬಕಾರಿ ಸುಂಕವನ್ನು ಪ್ರತಿ ಲೀಟರ್’ಗೆ 8 ಮತ್ತು ಡೀಸೆಲ್’ಗೆ 6 ರಷ್ಟು ಕಡಿತಗೊಳಿಸಲಾಗಿದೆ ಎಂದಿದ್ದಾರೆ.
ಇನ್ನು, ಸಿಮೆಂಟ್ ಪೂರೈಕೆ ಸುಧಾರಿಸಲು ಮತ್ತು ಸಿಮೆಂಟ್ ಬೆಲೆ ಕಡಿಮೆ ಮಾಡಲು ಉತ್ತಮ ಲಾಜಿಸ್ಟಿಕ್ಸ್ ಮೂಲಕ ಕ್ರಮಗಳನ್ನು ತೆಗೆದುಕೊಳ್ಳಲಾಗುತ್ತಿದೆ. ಪ್ಲಾಸ್ಟಿಕ್ ಉತ್ಪನ್ನಗಳಿಗೆ ಕಚ್ಚಾ ವಸ್ತುಗಳು ಮತ್ತು ಮಧ್ಯವರ್ತಿಗಳ ಮೇಲಿನ ಕಸ್ಟಮ್ಸ್ ಸುಂಕವನ್ನು ಸಹ ನಾವು ಕಡಿಮೆ ಮಾಡುತ್ತಿದ್ದು, ಉಕ್ಕಿನ ಕೆಲವು ಕಚ್ಚಾ ವಸ್ತುಗಳ ಮೇಲಿನ ಆಮದು ಸುಂಕವನ್ನು ಕಡಿಮೆ ಮಾಡಲಾಗುವುದು. ಕೆಲವು ಉಕ್ಕಿನ ಉತ್ಪನ್ನಗಳ ಮೇಲೆ ರಫ್ತು ಸುಂಕವನ್ನು ವಿಧಿಸಲಾಗುವುದು ಎಂದು ತಿಳಿಸಿದ್ದಾರೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post