ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಕೊಪ್ಪಳ: ಗಂಗಾವತಿ ಕೊಪ್ಪಳ ಮತ್ತು ಕಾರಟಗಿ ಭಾಗದ ರೈಸ್ ಮಿಲ್ ಗಳಿಗೆ ಲಾಕ್ ಡೌನ್’ನಿಂದ ವಿನಾಯ್ತಿ ನೀಡುವುದರ ಮೂಲಕ ಜಿಲ್ಲಾಧಿಕಾರಿ ಪಿ. ಸುನಿಲ್ ಕುಮಾರ್ ಅವರು ರೈತರಿಗೆ ಅನುಕೂಲ ಕಲ್ಪಿಸಿರುತ್ತಾರೆ.
ಈ ಭಾಗದ ಪ್ರಮುಖ ಬೆಳೆಯಾದ ಭತ್ತವು ಪ್ರತಿ ಊರಿನಲ್ಲಿಯೂ ಶೇಖರಣೆ ಯಾಗಿದ್ದು ಅವುಗಳನ್ನು ರೈಸ್ ಮಿಲ್’ಗೆ ಹಾಕ ಬೇಕಾಗಿರುತ್ತದೆ. ಈಗ ಕಟವ್ ಆಗಿರುವಂತಹ ಭತ್ತವನ್ನು ಮಿಲ್’ಗೆ ಹಾಕಬೇಕಾಗಿರುವುದರಿಂದ ಕೃಷಿ ಕಾರ್ಮಿಕರಿಗೆ ಅನುಕೂಲವನ್ನು ಒದಗಿಸಿ ಜಿಲ್ಲಾಧಿಕಾರಿಗಳಾದ ಪಿ.ಸುನಿಲ್ ಕುಮಾರ್ ಅವರು ಕೆಲಸ ನಿರ್ವಹಿಸುವ ಕೂಲಿ ಕಾರ್ಮಿಕರ ಹಾಗೂ ಕಾರ್ಮಿಕ ವರ್ಗಕ್ಕೆ ಮಾಸ್ಕ್’ಗಳನ್ನು ಧರಿಸಿ ಕೆಲಸ ನಿರ್ವಾಹಣೆ ಮಾಡಬೇಕು ಎಂದು ತಿಳಿಸಿದರು.
ಪ್ರತಿ ಹಂತದಲ್ಲಿಯೂ ಸ್ಯಾನಿಟರಿಗಳನ್ನು ಬಳಸಬೇಕು ಮತ್ತು ಕಾರ್ಮಿಕರಿಗೆ ಸರಿಯಾದ ಸುರಕ್ಷತಾ ಸಾಧನಗಳನ್ನು ನೀಡಿ ಉತ್ಪಾದನೆಯನ್ನು ಮಾಡಬೇಕು ಎಂದು ಆದೇಶ ನೀಡಿದ್ದಾರೆ. ಮಾಲೀಕರುಗಳು ಆದೇಶವನ್ನು ಪರಿಗಣಿಸಿ ಪಾಲಿಸುವುದಾಗಿ ತಿಳಿಸಿರುತ್ತಾರೆ. ಕೂರೋನಾ ವೈರಸ್ನಿಂದ ಮುಚ್ಚಲಾದ ರೈಸ್ ಮಿಲ್’ಗಳು ದಿನಾಂಕ 30 ರಿಂದ ಪ್ರಾರಂಭ ಮಾಡಲಾಗುತ್ತದೆ ಎಂದು ತಿಳಿಸಿದ್ದಾರೆ.
ವರದಿ: ಎಂ.ಎಂ. ನಾಡಿಗೇರ್, ಹೊಸಪೇಟೆ
Get in Touch With Us info@kalpa.news Whatsapp: 9481252093
Discussion about this post