ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಬೆಂಗಳೂರು: ಸನಾತನ ಸಂಸ್ಕೃತಿಯ ಉಳಿವಿಗಾಗಿ ಮತ್ತು ಮುಂದಿನ ಪೀಳೀಗೆಯ ಅಭ್ಯುದಯಕ್ಕಾಗಿ ಶ್ರೀರಾಮಚಂದ್ರಾಪುರ ಮಠ ವತಿಯಿಂದ ಬಾಲಕಿಯರಿಗಾಗಿ ಗೋಕರ್ಣ ಬಳಿ ಆರಂಭಿಸುತ್ತಿರುವ ರಾಜರಾಜೇಶ್ವರಿ ಗುರುಕುಲ ಪ್ರವೇಶಕ್ಕೆ ಅರ್ಜಿ ಸಲ್ಲಿಸಲು ನೀಡಿದ್ದ ಕೊನೆಯ ದಿನಾಂಕವನ್ನು ಜೂನ್ 15ರವರೆಗೆ ವಿಸ್ತರಿಸಲಾಗಿದೆ.
ಕೊರೋನಾ ನಿಯಂತ್ರಣಕ್ಕಾಗಿ ಲಾಕ್‍ಡೌನ್ ಜಾರಿಯಲ್ಲಿರುವ ಹಿನ್ನೆಲೆಯಲ್ಲಿ ಪ್ರವೇಶಾವಕಾಶವನ್ನು ವಿಸ್ತರಿಸಲಾಗಿದೆ.
ಸ್ಮಾರ್ಟ್ ಕ್ಲಾಸ್ ಸೌಲಭ್ಯ, ಶ್ರೇಷ್ಠ ಶಿಕ್ಷಣ ತಜ್ಞರಿಂದ ಆನ್‍ಲೈನ್ ಪಾಠ, ನುರಿತ ಮೆಂಟರ್‍ಗಳು, ವಿಷಯತಜ್ಞರ ಜತೆ ಮಕ್ಕಳ ಸಂವಾದ ಸಂವಾದ, ಭಾರತ ಸರ್ಕಾರದ ಎನ್‍ಐಓಎಸ್ ಪಠ್ಯಕ್ರಮದಂತೆ ಪಾಠ, ಪರೀಕ್ಷೆ, ಸ್ಪರ್ಧಾತ್ಮಕ ಪರೀಕ್ಷೆ ಎದುರಿಸಲು ಬೇಕಾದ ಅರಿವು- ಸಾಮಥ್ರ್ಯ ವೃದ್ಧಿ, ಒಳಾಂಗಣ ಮತ್ತು ಹೊರಾಂಗಣ ಕ್ರೀಡಾ ಸೌಲಭ್ಯ, ವಿಜ್ಞಾನ ಮತ್ತು ಕಂಪ್ಯೂಟರ್ ಪ್ರಯೋಗಾಲಯ, ಭವ್ಯ ಪರಂಪರೆಯ ಬಗ್ಗೆ ಸಮಗ್ರ ಅರಿವು, ಭಾರತೀಯ ವಿದ್ಯೆ, ಕಲೆಗಳ ಸಮಗ್ರ ಪರಿಚಯ, ಸಂಸ್ಕಾರ ಮತ್ತು ಸಂಸ್ಕøತಿ ಅಳವಡಿಕೆ, ಪ್ರಕೃತಿಗೆ ತೆರೆದುಕೊಂಡ ಮುಕ್ತ ಕುಟೀರಗಳಲ್ಲಿ ಕಲಿಕೆಗೆ ಅವಕಾಶವಿದೆ.
ವಿವರಗಳಿಗೆ ರಾಜರಾಜೇಶ್ವರಿ ಗುರುಕುಲಮ್, ಆಂಜನೇಯ ಜನ್ಮಭೂಮಿ, ಕುಟ್ಲೆ, ಅಂಚೆ: ಗೋಕರ್ಣ, ಕುಮಟಾ ತಾಲೂಕು, ಉ.ಕ- 581326 ಸಂಪರ್ಕಿಸಬಹುದು. ಇ-ಮೇಲ್:gurukulam@srisamsthana.
Get in Touch With Us info@kalpa.news Whatsapp: 9481252093







Discussion about this post