ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಶಿವಮೊಗ್ಗ: ಇಲ್ಲಿನ ಚಿಕ್ಕಮರಡಿ ಗ್ರಾಮದಲ್ಲಿ ಕ್ಷುಲ್ಲಕ ಕಾರಣಕ್ಕೆ ತಂದೆ-ಮಗನ ಮೇಲೆ ಮಾರಣಾಂತಿಕ ಹಲ್ಲೆ ಮಾಡಿದ್ದು, ಯುವಕನ ಸ್ಥಿತಿ ಗಂಭೀರವಾಗಿದೆ.
ಇಂದು ಮುಂಜಾನೆ ಘಟನೆ ನಡೆದಿದ್ದು, ಗಾಯಾಳುವನ್ನು ನಗರದ ಸುಬ್ಬಯ್ಯ ವೈದ್ಯಕೀಯ ಮಹಾವಿದ್ಯಾಲಯದಲ್ಲಿ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.
ಚಿಕ್ಕಮರಡಿ ನಿವಾಸಿ ಪವನ್ ಕುಮಾರ್ ಮತ್ತು ಆತನ ತಂದೆ ಕುಮಾರ್ ಗೌಡ ಹಲ್ಲೆಗೊಳಗಾದವರು. ಅದೇ ಗ್ರಾಮದ ಪಳನಿ ಮತ್ತು ಆತನ ಮಗ ಗಣೇಶ ಹಲ್ಲೆ ಮಾಡಿದ ಆರೋಪಿಗಳು. ಕುಮಾರ್ ಗೌಡ ಮತ್ತು ಪವನ್ ತಮ್ಮ ತೋಟದಲ್ಲಿ ಹರಿಯುತ್ತಿದ್ದ ಕಾಲುವೆಯನ್ನು ಮುಚ್ಚಲು ಮುಂದಾಗಿದ್ದರು. ಈ ಸಂದರ್ಭದಲ್ಲಿ ಹಿಂದೆಯೂ ಹಲವಾರು ಬಾರಿಇದೇ ವಿಷಯಕ್ಕೆ ಖ್ಯಾತೆ ತೆಗೆದಿದ್ದರು. ನಿನ್ನೆ ಸಂಜೆ ಇದೇ ವಿಷಯದಲ್ಲಿ ಜಮೀನಿನ ಬಳಿ ಆಗಮಿಸಿದ ಆರೋಪಿಗಳಾದ ಪಳನಿ ಹಾಗೂ ಗಣೇಶ ಏಕಾಏಕಿ ಮಚ್ಚಿನಿಂದ ಪವನ್ ತಲೆಗೆ ಹಲ್ಲೆ ಮಾಡಿದ್ದಾರೆ.
ಹಲ್ಲೆಯಿಂದ ತೀವ್ರವಾಗಿ ರಕ್ತ ಸ್ರಾವವಾದ ಪವನ್’ನನ್ನು ಜಿಲ್ಲಾ ಮೆಗ್ಗಾನ್ ಆಸ್ಪತ್ರೆಗೆ ಚಿಕಿತ್ಸೆಗೆ ಕರೆದೊಯ್ಯಲಾಯಿತು. ನಂತರ ಹೆಚ್ಚಿನ ಚಿಕಿತ್ಸೆಗಾಗಿ ಸುಬ್ಬಯ್ಯ ವೈದ್ಯಕೀಯ ಮಹಾವಿದ್ಯಾಲಯಕ್ಕೆ ಕರೆತರಲಾಗಿದೆ. ಪ್ರಕರಣ ಈಗ ಪೊಲೀಸ್ ಠಾಣೆ ಮೆಟ್ಟಿಲೇರಿದೆ.
Get in Touch With Us info@kalpa.news Whatsapp: 9481252093
Discussion about this post