ಕಲ್ಪ ಮೀಡಿಯಾ ಹೌಸ್ | ಬೆಂಗಳೂರು |
ನಟ, ನಿರ್ದೇಶಕ ಗುರುಪ್ರಸಾದ್ #DirectorGuruprasad ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಾಲಗಾರರ ಪಟ್ಟಿ ತಯಾರಿಸಿಕೊಂಡು ನೋಟೀಸ್ ನೀಡಲು ಪೊಲೀಸರು ಸಿದ್ದತೆ ನಡೆಸಿದ್ದಾರೆ ಎಂದು ವರದಿಯಾಗಿದೆ.
ಗುರುಪ್ರಸಾದ್ ಆತ್ಮಹತ್ಯೆಗೆ ಸಂಬಂಧಿಸಿದಂತೆ ತನಿಖೆಯನ್ನು ಚುರುಕುಗೊಳಿಸಿರುವ ಮಾದನಾಯಕನಹಳ್ಳಿ ಠಾಣೆ ಪೊಲೀಸರು, ಜಪ್ತಿ ಮಾಡಿದ ಮೊಬೈಲ್ ರಿಟ್ರೈವ್ ಮಾಡಲು ವಿಧಿವಿಜ್ಞಾನ ಪ್ರಯೋಗಾಲಯಕ್ಕೆ #FSL ಕಳುಹಿಸಿದ್ದಾರೆ.

Also read: ಗಮನಿಸಿ! ನ.6ರಂದು ಕುಂಸಿ ಸುತ್ತಮುತ್ತಲಿನ ಈ ಗ್ರಾಮಗಳಲ್ಲಿ ಕರೆಂಟ್ ಇರುವುದಿಲ್ಲ
ಅವರ 2ನೇ ಪತ್ನಿ ಸಮಿತ್ರಾ ಕೂಡ ದೂರಿನಲ್ಲಿ ಸಾಲ ಮಾಡಿಕೊಂಡಿದ್ದರು ಎಂದು ಉಲ್ಲೇಖಿಸಿದ್ದಾರೆ ಎಂದು ವರದಿಯಾಗಿದ್ದು, ಹೀಗಾಗಿ ಗುರುಪ್ರಸಾದ್ ಎಷ್ಟು ಸಾಲ ಮಾಡಿ ಕೊಂಡಿದ್ದರು. ಸಾಲ ಪಾವತಿಯೇ ಮಾಡಿಲ್ಲವೇ? ಅವರಿಂದ ಕಿರುಕುಳ ಇತ್ತೆ? ಎಂಬ ಬಗ್ಗೆ ಮಾಹಿತಿ ಪಡೆಯಲು ಯಾರೆಲ್ಲ ಸಾಲ ಕೊಟ್ಟಿದ್ದಾರೆ ಎಂಬ ಮಾಹಿತಿ ಪಡೆಯಲಾಗುತ್ತಿದೆ.
ಅಲ್ಲದೇ, ಬ್ಯಾಂಕ್’ನಿಂದ ಹಣಕಾಸಿನ ವಹಿವಾಟಿನ ಬಗ್ಗೆಯೂ ಮಾಹಿತಿ ಸಂಗ್ರಹಿಸಲಾಗುತ್ತದೆ. ಇನ್ನು ಫ್ಲ್ಯಾಟ್’ನಲ್ಲಿ ಮೂರು ಮೊಬೈಲ್’ಗಳು, ಎರಡು ಟ್ಯಾಬ್’ಗಳು ಹಾಗೂ 1 ಲ್ಯಾಪ್ ಟಾಪ್ ಪತ್ತೆಯಾಗಿದ್ದು, ಎಲ್ಲವನ್ನು ಎಫ್’ಎಸ್’ಎಲ್’ಗೆ ಕಳುಹಿಸಲಾಗಿದೆ ಎಂದು ತಿಳಿದುಬಂದಿದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news








Discussion about this post