ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ರಾಜ್ಯ ವಿಧಾನಸಭಾ ಚುನಾವಣೆಗೆ ಮತದಾನ ಇಂದು ಸಂಜೆ ಮುಕ್ತಾಯವಾಗಿದ್ದು, ಜಿಲ್ಲೆಯಲ್ಲಿ ಒಟ್ಟಾರೆಯಾಗಿ ಶೇ.76.19ರಷ್ಟು ಮತದಾನವಾಗಿದೆ.
ಮಾಹಿತಿಯಂತೆ, ಸಂಜೆ ಆರು ಗಂಟೆಗೆ ಮತದಾನ ಪ್ರಕ್ರಿಯೆ ಮುಕ್ತಾಯವಾಗಿದ್ದು, ಅಂತಿಮವಾಗಿ ಜಿಲ್ಲೆಯ ಎಲ್ಲ ವಿಧಾನಸಭಾ ಕ್ಷೇತ್ರಗಳಲ್ಲಿ ಶೇಕಡಾವಾರು 76.19ರಷ್ಟು ಮತದಾನ ನಡೆದಿದೆ.
ಇನ್ನು, ಶಿವಮೊಗ್ಗ ಗ್ರಾಮಾಂತರ ಕ್ಷೇತ್ರದಲ್ಲಿ ಅತಿ ಹೆಚ್ಚು ಮತದಾನಾಗಿದ್ದರೆ, ಭದ್ರಾವತಿಯಲ್ಲಿ ಅತಿ ಕಡಿಮೆ ಮತ ಚಲಾವಣೆಯಾಗಿದೆ.
ಯಾವ ಕ್ಷೇತ್ರದಲ್ಲಿ ಎಷ್ಟು?
- ಭದ್ರಾವತಿ: ಶೇ.68.59
- ಸಾಗರ: ಶೇ.79.85
- ಶಿಕಾರಿಪುರ: ಶೇ.77.52
- ಶಿವಮೊಗ್ಗ: ಶೇ.66.00
- ಶಿವಮೊಗ್ಗ ಗ್ರಾಮಾಂತರ: ಶೇ.83.05
- ಸೊರಬ: ಶೇ.82.66
- ತೀರ್ಥಹಳ್ಳಿ: ಶೇ.79.00



















