ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಚಳ್ಳಕೆರೆ: ತರಕಾರಿ ಅಂಗಡಿಗಳಿಗೆ ಬೆಂಕಿ ಬಿದ್ದ ಪರಿಣಾಮವಾಗಿ ತರಕಾರಿ ಸುಟ್ಟು ಕರಕಲಾಗಿರುವ ಘಟನ ನಗರದಲ್ಲಿ ನಡೆದಿದೆ.
ನಗರದ ನೆಹರು ಸರ್ಕಲ್ ಸಮೀಪ ಪಾವಗಡ ರಸ್ತೆಯ ಎಡಭಾಗದಲ್ಲಿ ತರಕಾರಿ ಗೂಡಂಗಡಿಗಳಿಗೆ ಕಿಡಿಗೇಡಿಗಳು ಬೆಂಕಿ ಹಚ್ಚಿದ ಪರಿಣಾಮವಾಗಿ ಸುಟ್ಟು ಕರಕಲಾಗಿವೆ.
ಯಶೋಧಮ್ಮ, ಶ್ವೇತ, ವಿನೋದಮ್ಮ ಎನ್ನುವ ತರಕಾರಿ ಮಾರುವವರ ಗೂಡಂಗಡಿಗೆ ಕಿಡಿಗೇಡಿಗಳು ಬೆಂಕಿ ಹಚ್ಚಿದ ಪರಿಣಾಮವಾಗಿ ತರಕಾರಿ ಅಂಗಡಿಯಲ್ಲಿ, ಬಿದಿರುನ ಪುಟ್ಟಿ, ಬಿದುರಿನ ತಡಿಕೆ, ತರಕಾರಿ ತುಂಬುವ ಗೋಣಿ ಚೀಲ ಹಾಗೂ ತರಕಾರಿ ತುಂಬುವ ಟ್ರೇಗಳ ಸುಮಾರು ಅಂದಾಜಿನ ಪ್ರಕಾರ 1.50 ಲಕ್ಷ ರೂ.ಗಳಷ್ಟು ತರಕಾರಿ ಸುಟ್ಟಿದೆ. ಬೆಂಕಿ ಬಿದ್ದು ಸ್ವಲ್ಪ ಸಮಯದಲ್ಲಿ ಸ್ಥಳಕ್ಕೆ ಅಗ್ನಿ ಶಾಮಕ ದಳ ಸ್ಥಳಕ್ಕೆ ಧಾವಿಸಿ ಉರಿಯುತ್ತಿದ್ದ ಬೆಂಕಿಯನ್ನು ನಂದಿಸಿ ಹೆಚ್ಚಿನ ಅನಾಹುತ ತಪ್ಪಿಸಿದ್ದಾರೆ.
ಯಾರೋ ಕಿಡಿಗೇಡಿಗಳು ಪೆಟ್ರೋಲ್ ಹಾಕಿ ಬೆಂಕಿ ಹಚ್ಚಿದ್ದಾರೆ ಎಂದು ವ್ಯಾಪಾರಿ ಯಶೋಧಮ್ಮ ಮಾಧ್ಯಮಗಳಿಗೆ ತಿಳಿಸಿದ್ದಾರೆ.
ಪೊಲೀಸ್ ಇನ್ಸ್’ಪೆಕ್ಟರ್ ಎಸ್.ಜೆ. ತಿಪ್ಪೇಸ್ವಾಮಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದು, ನಗರ ನಗರಸಭೆ ಸ್ಥಾಯಿ ಸಮಿತಿ ಅಧ್ಯಕ್ಷ ಬಿ.ಟಿ. ರಮೇಶ್, ಸದಸ್ಯರಾದ ಶ್ರೀನಿವಾಸ್, ರುದ್ರನಾಯಕ ನಗರಸಭೆ ಪೌರಾಯುಕ್ತ ಪಾಲಯ್ಯ, ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಆರ್. ಪ್ರಸನ್ನ ಕುಮಾರ್ ನಗರಸಭೆ ಅಧಿಕಾರಿಗಳಾದ ಗಣೇಶ, ದಾದು ಭೇಟಿ ನೀಡಿದ್ದಾರೆ.
(ವರದಿ: ಸುರೇಶ್ ಬೆಳಗೆರೆ, ಚಳ್ಳಕೆರೆ)
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9481252093 – info@kalpa.news

















