ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಹಿಂದೂ ಕಾರ್ಯಕರ್ತ ಹರ್ಷ ಎಂಬಾತನ ಹತ್ಯೆ ಹಿನ್ನೆಲೆಯಲ್ಲಿ ಹಳೇ ಶಿವಮೊಗ್ಗ ಭಾಗದಲ್ಲಿ ಪರಿಸ್ಥಿತಿ ಬಿಗುವಿನಿಂದ ಕೂಡಿದ್ದು, ಮನೆ ಮುಂಭಾಗದಲ್ಲಿ ನಿಲ್ಲಿಸಿದ್ದ ಹಲವು ವಾಹನಗಳಿಗೆ ಬೆಂಕಿ ಹಚ್ಚಲಾಗಿದೆ.
Also Read: ಶಿವಮೊಗ್ಗದಲ್ಲಿ ಮತ್ತೊಂದು ಭೀಕರ ಕೊಲೆ: ಹಳೇ ದ್ವೇಷ ಕಾರಣ?
ಸೀಗೆಹಟ್ಟಿ ಭಾಗದಲ್ಲಿ ಮೂರು ದ್ವಿಚಕ್ರ ವಾಹನಗಳಿಗೆ, ಲಗೇಜ್ ವಾಹನ ಸೇರಿದಂತೆ ಹಲವು ವಾಹನಗಳಿಗೆ ಬೆಂಕಿ ಹಚ್ಚಲಾಗಿದ್ದು, ಅಗ್ನಿ ಶಾಮಕ ಸಿಬ್ಬಂದಿಗಳು ನಂದಿಸಿದ್ದಾರೆ.
ಇಡಿಯ ಪ್ರದೇಶದಲ್ಲಿ ಹೆಚ್ಚಿನ ಪೊಲೀಸರನ್ನು ನಿಯೋಜಿಸಲಾಗಿದ್ದು, ಸದ್ಯ ಪರಿಸ್ಥಿತಿ ಬಹುತೇಕ ನಿಯಂತ್ರಣದಲ್ಲಿದೆ ಎಂದು ವರದಿಯಾಗಿದೆ. ನಾಳೆ ಬೆಳಗಾಗುವ ವೇಳೆಗೆ ಪರಿಸ್ಥಿತಿಯನ್ನು ಸಂಪೂರ್ಣ ನಿಯಂತ್ರಿಸಿ, ಯಾವುದೇ ರೀತಿಯ ಅಹಿತಕರ ಘಟನೆ ನಡೆಯದಂತೆ ನೋಡಿಕೊಳ್ಳಲು ಹೆಚ್ಚಿನ ಪೊಲೀಸ್ ಸಿಬ್ಬಂದಿಗಳನ್ನು ನಗರದಲ್ಲಿ ನಿಯೋಜಿಸಲಾಗುತ್ತಿದೆ.
ಇದೇ ವೇಳೆ, ನಗರದಲ್ಲಿ ಪ್ರಕ್ಷುಬ್ದ ವಾತಾವರಣದ ಹಿನ್ನೆಲೆಯಲ್ಲಿ ಐಜಿಪಿ ತ್ಯಾಗರಾಜನ್ ಅವರು ನಗರಕ್ಕೆ ದೌಡಾಯಿಸಿದ್ದಾರೆ.
Also Read: ಶಿವಮೊಗ್ಗ ನಗರದಾದ್ಯಂತ ನಾಳೆ ಶಾಲಾ-ಕಾಲೇಜುಗಳಿಗೆ ರಜೆ ಘೋಷಣೆ
ಗಾಳಿಸುದ್ದಿಗೆ ಕಿಡಿಗೊಡಬೇಡಿ
ಇನ್ನು, ಹಿಜಾಬ್ ವಿವಾದ ಬೂದಿ ಮುಚ್ಚಿದ ಕೆಂಡದಂತಿದ್ದು, ಇದರ ಬೆನ್ನಲ್ಲೇ ಹಿಂದೂ ಕಾರ್ಯಕರ್ತನ ಹತ್ಯೆಯ ಕಿಚ್ಚು ನಗರದಲ್ಲಿ ಹತ್ತಿಕೊಂಡಿದೆ. ಇದು ನಗರವನ್ನು ಮತ್ತಷ್ಟು ಸೂಕ್ಷ್ಮ ಪರಿಸ್ಥಿತಿಯನ್ನಾಗಿಸಿದ್ದು, ನಾಗರಿಕರಲ್ಲಿ ಆತಂಕ ಮೂಡಿಸಿದೆ.
ಹರ್ಷ ಎಂಬ ಯುವಕನ ಹತ್ಯೆಯಾಗಿರುವುದು ನಿಜಕ್ಕೂ ದುರದೃಷ್ಠಕರ. ಇದಕ್ಕೆ ಕಾರಣರಾದವರನ್ನು ಆದಷ್ಟು ಶೀಘ್ರ ಪತ್ತೆ ಮಾಡಿ, ಬಂಧಿಸುವಷ್ಟು ಶಿವಮೊಗ್ಗ ಜಿಲ್ಲಾ ಪೊಲೀಸರು ಸಮರ್ಥರಿದ್ದಾರೆ. ಈ ಕಾರ್ಯ ಆದಷ್ಟು ಶೀಘ್ರ ಆಗುತ್ತದೆಯೂ ಕೂಡ.
ಇಂತಹ ಸಂದರ್ಭದಲ್ಲಿ ನಗರದಲ್ಲಿ ಶಾಂತಿ ಕಾಪಾಡಿ, ಕಾನೂನು ಸುವ್ಯವಸ್ಥೆ ನಿಯಂತ್ರಣದಲ್ಲಿಡಲು ಜಿಲ್ಲಾಡಳಿತ ಹಾಗೂ ಜಿಲ್ಲಾ ಪೊಲೀಸ್ ಇಲಾಖೆಗೆ ನಾಗರಿಕರ ಸಹಕಾರ ಅತ್ಯಂತ ಮುಖ್ಯವಾದುದು. ಹತ್ಯೆಯಾದ ನೋವಿನಲ್ಲಿ ಆಕ್ರೋಶವನ್ನು ಹೊರಹಾಕುವ ಭರದಲ್ಲಿ ಮುಂದೆ ಮತ್ತೆ ಅಪಾಯ ಎದುರಾಗದಂತೆ ಎಚ್ಚರಿಕೆ ವಹಿಸಬೇಕಾದ ಜವಾಬ್ದಾರಿಯನ್ನು ನಾಗರಿಕರು ಪ್ರದರ್ಶಿಸಬೇಕಿದೆ.
Also Read: ಹಳೇ ಶಿವಮೊಗ್ಗದ ಕೆಲವು ಭಾಗ ಪ್ರಕ್ಷುಬ್ದ: ಪರಿಸ್ಥಿತಿ ನಿಯಂತ್ರಣಕ್ಕೆ ಖುದ್ದು ಫೀಲ್ಡಿಗಿಳಿದ ಎಸ್’ಪಿ
ಸೋಷಿಯಲ್ ಮೀಡಿಯಾದಲ್ಲಿ ಬೆಂಕಿ ಹಚ್ಚಬೇಡಿ
ಇನ್ನು, ಸೂಕ್ಷ್ಮ ಸಂದರ್ಭಗಳಲ್ಲಿ ಸೋಷಿಯಲ್ ಮೀಡಿಯಾದಲ್ಲಿ ಹಾಕುವ ಪ್ರತಿಯೊಂದು ಪೋಸ್ಟ್ ಯಾವುದೇ ರೀತಿಯ ಪರಿಣಾಮ ಬೀರುವ ಸಾಧ್ಯತೆಯಿರುತ್ತದೆ.ಸದ್ಯ ಹರ್ಷನ ಹತ್ಯೆಗೆ ಸಂಬಂಧಿಸಿದಂತೆ ಹೇಳುವುದಾದರೆ ಯಾವುದೇ ರೀತಿಯ ಪರ-ವಿರೋಧದ ಪೂರ್ವಗ್ರಹ ಪೀಡಿತ, ಕಪೋಲಕಲ್ಪಿತ ಪೋಸ್ಟ್’ಗಳು, ಅಭಿಪ್ರಾಯಗಳನ್ನು ಸಾಮಾಜಿಕ ಜಾಲತಾಣದಲ್ಲಿ ದಯಮಾಡಿ ಹಾಕಬೇಡಿ. ಅಲ್ಲದೇ, ಹಿಂದೆ ಮುಂದೆ ಯೋಚಿಸದೇ ಸಿಕ್ಕ ಸಿಕ್ಕ ಪೋಸ್ಟ್ ಶೇರ್ ಮಾಡಬೇಡಿ. ಇದು ಎಂತಹುದ್ದೇ ಪರಿಸ್ಥಿತಿಯನ್ನು ಸೃಷ್ಠಿಸುವ ಸಾಧ್ಯತೆಯಿರುತ್ತದೆ. ಇದು ನಗರದಲ್ಲಿ ಶಾಂತಿ ಕದಡಿ, ಕಾನೂನು ಸುವ್ಯವಸ್ಥೆಗೆ ಧಕ್ಕೆ ತರುವ ಸಾಧ್ಯತೆಗೆ ದಾರಿಯಾಗುತ್ತದೆ. ಹೀಗಾಗಿ, ಪ್ರತಿ ಪೋಸ್ಟ್ ಹಾಕುವ ಮುನ್ನ ಜಾಗ್ರತೆ ವಹಿಸಿ.
Also Read: ಬೆಳ್ಳಿತೆರೆಗೆ ರಾಜಾ ಹುಲಿ: ಸಿನಿಮಾ ಪಾತ್ರಕ್ಕಾಗಿ ಬಣ್ಣ ಹಚ್ಚಿದ ಮಾಜಿ ಸಿಎಂ ಯಡಿಯೂರಪ್ಪ
ಶಾಂತಿ-ಸುವ್ಯವಸ್ಥೆ ಕಾಪಾಡಲು ಜಿಲ್ಲಾಡಳಿತ ಹಾಗೂ ಪೊಲೀಸ್ ಇಲಾಖೆಯೊಂದಿಗೆ ಸಹಕರಿಸಿ…
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post