No Result
View All Result
Physical Intelligence to Shape India’s Future
English Articles

Physical Intelligence to Shape India’s Future

by kalpa News
July 2, 2026
0

Kalpa Media House  | Hyderabad  | Physical Intelligence will play a transformative role in India's future development by making infrastructure...

Read moreDetails
India marks the beginning of the Physical Intelligence era

MEIL-Analog Pact Ushers in AI-Driven Future

July 2, 2026
ಬೆಂಗಳೂರಿನಲ್ಲಿ ಆತ್ಮವಿಶ್ವಾಸದಿಂದ ಮೊದಲ ಮನೆ ಖರೀದಿಗೆ ಮುಂದಾಗುತ್ತಿರುವ ಜೆನ್ ಜೀ ತಲೆಮಾರು: ಕೋಟಕ್ ವರದಿ

Kotak Mahindra to acquire Deutsche Bank’s retail banking

July 1, 2026
A.G. Srinivas assumes charge as Additional General Manager of SWR

A.G. Srinivas assumes charge as Additional General Manager of SWR

June 30, 2026
V. Somanna Dedicates ₹22.40 Crore Road Over Bridge at Yelekeri Gate

V. Somanna Dedicates ₹22.40 Crore Road Over Bridge at Yelekeri Gate

June 30, 2026
  • Advertise With Us
  • Grievances
  • About Us
  • Contact Us
Thursday, July 2, 2026
Follow Us
kalpa.news
Advertisement
ADVERTISEMENT
  • Home
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಹುಬ್ಬಳ್ಳಿ-ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಯಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
    • ವಿಜಯನಗರ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
    • ಡಾ. ಮೈತ್ರೇಯಿ ಆದಿತ್ಯಪ್ರಸಾದ್
  • ರೈಲ್ವೆ ಸುದ್ದಿಗಳು
  • ಇತರೆ
    • ವಿಜ್ಞಾನ-ತಂತ್ರಜ್ಞಾನ
    • ಜಾಬ್-ಸ್ಟ್ರೀಟ್
    • ಕೈ ರುಚಿ
    • ನಿತ್ಯ ಪಂಚಾಂಗ/ದಿನ ವಿಶೇಷ
    • ಮುಂಜಾನೆ ಸುವಿಚಾರ
    • ಆಧ್ಯಾತ್ಮ/ಭಕ್ತಿಭಾವ
Subscribe
kalpa.news
No Result
View All Result
  • Home
  • ರಾಜಕೀಯ
  • ಶಿವಮೊಗ್ಗ
  • ಜಿಲ್ಲೆ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
  • ರೈಲ್ವೆ ಸುದ್ದಿಗಳು
  • ಇತರೆ
ADVERTISEMENT
Home ಜಿಲ್ಲೆ ಶಿವಮೊಗ್ಗ

ಶಿವಮೊಗ್ಗದ ಇತಿಹಾಸದಲ್ಲೇ ಪ್ರಥಮ | ಒಂದೇ ಬಾರಿಗೆ ಝೇಂಕರಿಸಲಿದೆ 301 ವೀಣಾವಾದನ

ಜ.17-18ರಂದು ಕಾರ್ಯಕ್ರಮ | ಮೈಸೂರು ಎಂಪಿ ಯದುವೀರ್ ಭಾಗಿ

kalpa News by kalpa News
January 14, 2026
in ಶಿವಮೊಗ್ಗ
0
ಶಿವಮೊಗ್ಗದ ಇತಿಹಾಸದಲ್ಲೇ ಪ್ರಥಮ | ಒಂದೇ ಬಾರಿಗೆ ಝೇಂಕರಿಸಲಿದೆ 301 ವೀಣಾವಾದನ
Share on FacebookShare on TwitterShare on WhatsApp

ಕಲ್ಪ ಮೀಡಿಯಾ ಹೌಸ್  |  ಶಿವಮೊಗ್ಗ  |

ಶ್ರೀ ಸರಸ್ವತಿ ಸಂಗೀತ ವಿದ್ಯಾಲಯ, ಸುಶ್ರಾವ್ಯ ಮತ್ತು ಶ್ರೀ ಸಾಯಿಶೃತಿ ಸಂಗೀತ ವಿದ್ಯಾಲಯ ಇವರ ಸಂಯುಕ್ತಾಶ್ರಯದಲ್ಲಿ ರಜತ ಮಹೋತ್ಸವದ ಅಂಗವಾಗಿ ವೀಣಾ ತ್ರಿಶತೋತ್ಸವ ಕಾರ್ಯಕ್ರಮವನ್ನು ಜ.17 ಮತ್ತು 18ರಂದು ನಗರದ ಫ್ರೀಡಂಪಾರ್ಕ್‌ನಲ್ಲಿ ಆಯೋಜಿಸಲಾಗಿದೆ ಎಂದು ಸರಸ್ವತಿ ಸಂಗೀತ ವಿದ್ಯಾಲಯದ ವಿದೂಷಿ ಬಿ.ಕೆ. ವಿಜಯಲಕ್ಷ್ಮೀರಾಘು ಹೇಳಿದರು.

ಅವರು ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ವೀಣೆ ಒಂದು ಅದ್ಭುತ ಕಲಾಪ್ರಕಾರ ಇದನ್ನು ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಸುಮಾರು 301 ವೀಣೆಗಳ ಸಾರಥ್ಯದಲ್ಲಿ ವೀಣಾನಂದ ಝೇಂಕಾರದ ಕಾರ್ಯಕ್ರಮವನ್ನು ನಾವು ಆಯೋಜಿಸಿದ್ದೇವೆ. ಇದು ಶಿವಮೊಗ್ಗ ಇತಿಹಾಸದಲ್ಲಿಯೇ ಪ್ರಥಮ ಬಾರಿಗೆ ನಡೆಯುತ್ತಿದೆ. ಒಂದೇ ವೇದಿಕೆಯಲ್ಲಿ 301 ವೀಣಾವಾದಕರು ಇರುವುದು ಇದರ ವಿಶೇಷವಾಗಿದೆ ಎಂದರು.

ಈ ವೀಣಾವಾದನ ಕಾರ್ಯಕ್ರಮವು ಜ.18ರಂದು ಸಂಜೆ 5 ಗಂಟೆಗೆ ನಡೆಯಲಿದೆ. ಇದರ ಉದ್ಘಾಟನೆಯನ್ನು ಮೈಸೂರು ರಾಜ ವಂಶಸ್ಥರು ಹಾಗೂ ಲೋಕಸಭಾ ಸದಸ್ಯ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ನೆರವೇರಿಸುವರು. ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಸಂಸದ ಬಿ.ವೈ. ರಾಘವೇಂದ್ರ, ಖ್ಯಾತ ವೀಣಾವಾದಕರಾದ ರೇವತಿ ಕಾಮತ್, ಗೀತಾ ರಮಾನಂದ್, ವಿಧಾನ ಪರಿಷತ್ ಸದಸ್ಯ ಡಿ.ಎಸ್. ಅರುಣ್, ಸರಸ್ವತಿ ಸಂಗೀತ ವಿದ್ಯಾಲಯದ ಗೌರವಾಧ್ಯಕ್ಷ ವೆಂಕಟರಾಘು ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿರುತ್ತಾರೆ ಎಂದರು.
ಇವರ ಜೊತೆಗೆ ವಿಶೇಷ ಆಹ್ವಾನಿತರಾಗಿ ಸಚಿವ ಮಧುಬಂಗಾರಪ್ಪ, ಶಾಸಕರುಗಳಾದ ಎಸ್.ಎನ್. ಚನ್ನಬಸಪ್ಪ, ಶಾರದಾ ಎಸ್. ಪೂರ‍್ಯಾನಾಯ್ಕ್, ಡಾ. ಧನಂಜಯ ಸರ್ಜಿ, ಡಿ.ಎಸ್.ಅರುಣ್, ಮಾಜಿ ಸಭಾಪತಿ ಡಿ.ಹೆಚ್. ಶಂಕರಮೂರ್ತಿ, ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ, ಮಾಜಿ ಉಪಮುಖ್ಯಮಂತ್ರಿ ಕೆ.ಎಸ್. ಈಶ್ವರಪ್ಪ, ಮಾಜಿ ಶಾಸಕ ಕೆ.ಬಿ. ಪ್ರಸನ್ನಕುಮಾರ್, ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಸಿ.ಎಸ್. ಷಡಾಕ್ಷರಿ, ಜಿಲ್ಲಾಧಿಕಾರಿ ಪ್ರಭುಲಿಂಗ ಕವಳಿಕಟ್ಟಿ, ಜಿಲ್ಲಾ ರಕ್ಷಣಾಧಿಕಾರಿ ಬಿ. ನಿಖಿಲ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ನಿರ್ದೇಶಕ ಉಮೇಶ್ ಹಾಲಾಡಿ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿರುತ್ತಾರೆ ಎಂದರು.

ಚಿಲಕುಂದ ಸಹೋದರಿಯರ ಕಾರ್ಯಕ್ರಮ
ಚಿಲಕುಂದ ಸಹೋದರಿಯರು ಎಂದೇ ಪ್ರಸಿದ್ಧರಾದ ಮತ್ತು ಸರಿಗಮಪ ಕಾರ್ಯಕ್ರಮದ ಮಾರ್ಗದರ್ಶಕರಾದ ಲಕ್ಷ್ಮೀ ನಾಗರಾಜ್ ಹಾಗೂ ಇಂದೂ ನಾಗರಾಜ್ ಅವರ ಗಾಯನೋತ್ಸವ ಕಾರ್ಯಕ್ರಮ ಜ.17ರಂದು ಸಂಜೆ 6 ಗಂಟೆಗೆ ಅಲ್ಲಮಪ್ರಭು ಮೈದಾನದಲ್ಲಿ ನಡೆಯಲಿದೆ. ಈ ಕಾರ್ಯಕ್ರಮದಲ್ಲಿ ಹೊಸಳ್ಳಿ ರಘುರಾಂ, ಕೇಶವದತ್, ಮಂಜುನಾಥ್ ಪಕ್ಕದವಾದ್ಯದಲ್ಲಿರುತ್ತಾರೆ ಎಂದು ರಜತ ಮಹೋತ್ಸವ ಆಚರಣಾ ಸಮಿತಿ ಗೌರವಾಧ್ಯಕ್ಷ ಡಿ.ಎಸ್. ಅರುಣ್ ಹೇಳಿದರು.
ಇದಕ್ಕೂ ಮೊದಲು ಜ.12ರ ಬೆಳಿಗ್ಗೆ 9 ಗಂಟೆಗೆ ಆರಾಧನೋತ್ಸವ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಗುವುದು. ಈ ಕಾರ್ಯಕ್ರಮದಲ್ಲಿ ಪ್ರಖ್ಯಾತ ವೀಣಾವಾದಕರು ಮತ್ತು ಸಂಗೀತ ವಿದ್ಯಾಲಯದ ವಿದ್ಯಾರ್ಥಿಗಳಿಂದ ಸಮೂಹ ಗಾಯನ, ವೀಣಾವಾದನ, ಗಾನಸಂಭ್ರಮ, ಗುರುವಂದನಾ ಕಾರ್ಯಕ್ರಮ ನಡೆಯಲಿದೆ. ಬೆಳಿಗ್ಗೆ 11.30ಕ್ಕೆ ಪಂಚರತ್ನ ಕೃತಿಗಳು ವಾದ್ಯ ಮತ್ತು ಗೋಷ್ಠಿ ಗಾಯನದಲ್ಲಿ ನಡೆಯಲಿದೆ. ವಿದ್ವಾನ್ ಹೆಚ್.ಎಸ್. ನಾಗರಾಜ್ ಮತ್ತು ವೃಂದದವರಿಂದ ಜಗದಾನಂದಕಾರಕ, ಹೊಸಳ್ಳಿ ವೆಂಕಟರಾಮ್ ಮತ್ತು ವೃಂದದವರಿಂದ ಪಿಟೀಲು ವಾದನ, ವಿ. ಅರುಣ್ ಮತ್ತು ವೃಂದದವರಿಂದ ಕನಕನರುಚಿರ, ಬಿ.ಕೆ. ವಿಜಯಲಕ್ಷ್ಮೀ ರಾಘು ಮತ್ತು ವೃಂದದವರಿಂದ ಸಮೂಹ ವೀಣಾ ವಾದನ, ಎಂದರೋ ಮಹಾನುಭಾವಲು ಕಾರ್ಯಕ್ರಮಗಳು ನಡೆಯಲಿವೆ ಎಂದು ತಿಳಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಪ್ರಮುಖರಾದ ಟಿ.ಎಸ್. ವೆಂಕಟರಾಘು, ಜಯಶ್ರೀ ನಾಗರಾಜ್, ಪದ್ಮಿನಿ ಸುಧೀರ್, ಶ್ರೀವತ್ಸ, ಶಿಲ್ಪ, ರೂಪ, ಮನು, ಗಾಯತ್ರಿ, ವೀಣಾ, ವಾಣಿ ಇದ್ದರು.

ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news   

http://kalpa.news/wp-content/uploads/2024/04/VID-20240426-WA0008.mp4

  

Tags: Harp playingKannada News WebsiteLatest News KannadaMusic ProgramShimogaShivamoggaShivamogga NewsVeeneYaduveer Krishnadatta chamaraja Odeyarಫ್ರೀಡಂಪಾರ್ಕ್ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ವೀಣಾ ತ್ರಿಶತೋತ್ಸವವೀಣಾವಾದನವೀಣೆಶಿವಮೊಗ್ಗಶ್ರೀ ಸರಸ್ವತಿ ಸಂಗೀತ ವಿದ್ಯಾಲಯ
Share202Tweet126Send
Aniruddha Vasishta S R

Aniruddha Vasishta S R

Editor-in-Chief

Previous Post

ಹುಷಾರ್! ಮುಗಿದಿಲ್ಲ ‘ಆಪರೇಷನ್ ಸಿಂಧೂರ` | ಪಾಕಿಸ್ಥಾನಕ್ಕೆ ಭಾರತೀಯ ಸೇನಾ ಮುಖ್ಯಸ್ಥರ ಎಚ್ಚರಿಕೆ

Next Post

ಎಸ್’ಪಿಬಿ ಅಭಿಮಾನಿಗಳಿಗೆ ಗುಡ್ ನ್ಯೂಸ್ | ಶಿವಮೊಗ್ಗದಲ್ಲಿ ‘ಗಾನ ಗಂಧರ್ವನ ನೂರೊಂದು ನೆನಪು’ ಕಾರ್ಯಕ್ರಮ

kalpa News

kalpa News

Next Post
ಎಸ್’ಪಿಬಿ ಅಭಿಮಾನಿಗಳಿಗೆ ಗುಡ್ ನ್ಯೂಸ್ | ಶಿವಮೊಗ್ಗದಲ್ಲಿ ‘ಗಾನ ಗಂಧರ್ವನ ನೂರೊಂದು ನೆನಪು’ ಕಾರ್ಯಕ್ರಮ

ಎಸ್'ಪಿಬಿ ಅಭಿಮಾನಿಗಳಿಗೆ ಗುಡ್ ನ್ಯೂಸ್ | ಶಿವಮೊಗ್ಗದಲ್ಲಿ 'ಗಾನ ಗಂಧರ್ವನ ನೂರೊಂದು ನೆನಪು’ ಕಾರ್ಯಕ್ರಮ

Leave a Reply Cancel reply

Your email address will not be published. Required fields are marked *

No Result
View All Result
Physical Intelligence to Shape India’s Future
English Articles

Physical Intelligence to Shape India’s Future

by kalpa News
July 2, 2026
0

Kalpa Media House  | Hyderabad  | Physical Intelligence will play a transformative role in India's future development by making infrastructure...

Read moreDetails
India marks the beginning of the Physical Intelligence era

MEIL-Analog Pact Ushers in AI-Driven Future

July 2, 2026
ಬೆಂಗಳೂರಿನಲ್ಲಿ ಆತ್ಮವಿಶ್ವಾಸದಿಂದ ಮೊದಲ ಮನೆ ಖರೀದಿಗೆ ಮುಂದಾಗುತ್ತಿರುವ ಜೆನ್ ಜೀ ತಲೆಮಾರು: ಕೋಟಕ್ ವರದಿ

Kotak Mahindra to acquire Deutsche Bank’s retail banking

July 1, 2026
A.G. Srinivas assumes charge as Additional General Manager of SWR

A.G. Srinivas assumes charge as Additional General Manager of SWR

June 30, 2026
V. Somanna Dedicates ₹22.40 Crore Road Over Bridge at Yelekeri Gate

V. Somanna Dedicates ₹22.40 Crore Road Over Bridge at Yelekeri Gate

June 30, 2026
kalpa.news

Copyright © 2026 Kalpa News. Designed by KIPL

Navigate Site

  • Advertise With Us
  • Grievances
  • Privacy & Policy
  • About Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected by Kalpa News!!
No Result
View All Result
  • Home
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಹುಬ್ಬಳ್ಳಿ-ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಯಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
    • ವಿಜಯನಗರ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
    • ಡಾ. ಮೈತ್ರೇಯಿ ಆದಿತ್ಯಪ್ರಸಾದ್
  • ರೈಲ್ವೆ ಸುದ್ದಿಗಳು
  • ಇತರೆ
    • ವಿಜ್ಞಾನ-ತಂತ್ರಜ್ಞಾನ
    • ಜಾಬ್-ಸ್ಟ್ರೀಟ್
    • ಕೈ ರುಚಿ
    • ನಿತ್ಯ ಪಂಚಾಂಗ/ದಿನ ವಿಶೇಷ
    • ಮುಂಜಾನೆ ಸುವಿಚಾರ
    • ಆಧ್ಯಾತ್ಮ/ಭಕ್ತಿಭಾವ

Copyright © 2026 Kalpa News. Designed by KIPL