ಕಲ್ಪ ಮೀಡಿಯಾ ಹೌಸ್ | ವಿಶೇಷ ಲೇಖನ: ಯು.ಜೆ. ನಿರಂಜನಮೂರ್ತಿ |
ಶಿವಮೊಗ್ಗಕ್ಕೆ #Shivamogga ಕಳೆದ ಮೂರು ವರ್ಷಗಳಿಂದ ಅಂಟಿದ್ದು ಶಾಪವೋ ವರವೋ ತಿಳಿಯದೇ ನರಕ ಯಾತನೆ ಅನುಭವಿಸುವಂತಾಗಿದ್ದು ದುರದೃಷ್ಟಕರ. ಇದೇ ಫೆಬ್ರವರಿ 22 ಶಿವಮೊಗ್ಗ ಜನತೆಗೆ ಅದರಲ್ಲೂ ವಾಹನ ಚಾಲಕರಿಗೆ ನೆಮ್ಮದಿಯ ನಿಟ್ಟುಸಿರು ಬಿಡುವಂತಹ ದಿನ ಎಂದರೆ ತಪ್ಪಾಗಲಿಕ್ಕಿಲ್ಲ.
ಕೆಲವು ಯೋಜನೆಗಳು ಘೋಷಿಸಿದಾಗ ಅದೇನೊ ಖುಷಿ ನಮ್ಮ ಮನೆಗೆ ಅಥವಾ ನಮಗೆ ಏನೋ ಸಿಕ್ಕ ಸಂಭ್ರಮ. ಅ ಯೋಜನೆಗಳು ಶುರುವಾದ ದಿನವೂ ಹಬ್ಬದ ಸಡಗರ ಮನಸ್ಸಿಗೆ ಆವರಿಸಿರುತ್ತೆ.
ಅಂತಹದ್ದೇ ಸಂಭ್ರಮ ಸಡಗರವನ್ನು 2021ರಲ್ಲಿ ಅನುಭವಿಸಿದ್ದೆವು ಶಿವಮೊಗ್ಗದ ಮೂರು ಕಡೆ ಮೇಲ್ಸೇತುವೆ ಶಂಕುಸ್ಥಾಪನೆಯಾದಾಗ. ಆರಂಭದ ಒಂದು ತಿಂಗಳು ರೈಲ್ವೆ ಗೇಟ್ ಹಾಕಿದ ವಾಹನ ನಿಲ್ಲಿಸಿಕೊಂಡು ಒಣ ಧೂಳನ್ನು ಕುಡಿಯುತ್ತಾ ಯಾವಾಗ ಮುಗಿಯಬಹುದು!? ಇನ್ನು ಒಂದ್ ಒಂದುವರೆ ವರ್ಷನಾದರೂ ಈ ಟ್ರಾಫಿಕ್, #Traffic ಧೂಳು, ರೈಲ್ವೆ ಗೇಟ್ , ಕಾಮಗಾರಿ ಸಾಮಾನು ಸರಂಜಾಮುಗಳ ಹಾವಳಿ ಅನುಭವಿಸಲೇಬೇಕು ಎಂದು ನಮಗೆ ನಾವೇ ಹೇಳಿಕೊಳ್ಳುತ್ತಾ ರೈಲು ಹೋದ ಮೇಲೂ ಗೇಟ್ ಒಪನ್ ಮಾಡದನ್ನು ಕಂಡು ಸಿಡಿಮಿಡಿಯಿಂದ ಯಾವಾಗಪ್ಪ ಇದಕ್ಕೆಲ್ಲ ಮುಕ್ತಿ ಎಂದು ಪಕ್ಕದ ವಾಹನದವರ ಮುಖ ನೋಡು ಹರ್ನ್ ಹಾಕುತ್ತಿದ್ದೆವು.
ಮಳೆಗಾಲದಲ್ಲೊಂತೂ ಬೇಡ ಪಜೀತಿ. ಮಳೆ ಬರ್ತಾ ಇರುತ್ತೆ ರೈಲ್ವೆ ಗೇಟ್ ಹಾಕಿ ಬಿಡ್ತಾರೆ ಆಗ ನಿಲ್ಲಬೇಕು ನೋಡಿ ದ್ವಿಚಕ್ರ ವಾಹನದಲ್ಲಿ. ಆಗ ಅದರಂತಹ ರೋಧನೆ ಇನ್ನೊಂದಿಲ್ಲ. ನಾವು ಎಷ್ಟು ದಿನ ಇರ್ತೀವೋ ಏನೋ ಇನ್ಯಾರೊ ಆರಾಮಾಗಿ ಒಡಾಡೋಕೆ ಈ ಕರ್ಮ ಅನುಭವಿಸಬೇಕು. ಮಳೆಯಲ್ಲಿ ನೆನೆದರೂ ಅದೇ ಒದ್ದೆ ಬಟ್ಟೆಯಲ್ಲಿ ಆಫೀಸ್’ಗೆ ಹೋಗಬೇಕು. ಯಾಕ್ ಬೇಕು ಈ ನೌಕ್ರಿ ಅನ್ನೋ ಅಷ್ಟು ಹಿಂಸೆ ಆಗಿದ್ದು ಇದೆ.
ಎಲ್ಲರೂ ಬೆಳಗ್ಗೆ ಅವಸರದಲ್ಲೇ ಇರ್ತಾರೆ ದ್ವಿಚಕ್ರ ವಾಹನದವರು ಉಳಿದ ಎಲ್ಲ ವಾಹನಗಳನ್ನು ಹಿಂದಿಕ್ಕಿ ಹೋಗುವ ತವಕದಲ್ಲೂ ಇರ್ತಾರೆ. ದುಬಾರಿ ಬೆಲೆಯ ಕಾರು ತಗೊಂಡು ರೈಲ್ವೆ ಟ್ರಾಕ್ ಬಳಿ ಸಿಕ್ಕಿ ಹಾಕೊಂಡು ಈ ಮೂರು ವರ್ಷದಲ್ಲಿ ಕಾರು #Car ಸ್ಕ್ರಾಚ್ ಮಾಡಿಕೊಳ್ಳದೇ ಇರುವವರು ಪುಣ್ಯವಂತರು.
ವಾಹನ ಚಾಲಕರು ಅವರವರ ಒತ್ತಡದಲ್ಲಿ ಅವಸವಸರವಾಗಿ ವಾಹನ ಚಲಾಯಿಸುವಾಗ ಅನೇಕ ಅವಘಡಗಳು, ಟ್ರಾಫಿಕ್ ಜಾಮ್ಸ್ ಹೀಗೆ ಇನ್ನು ಏನ್ ಏನೋ ಆಗ್ತಾ ಇರುವಾಗ ನಮ್ಮ ಟ್ರಾಫಿಕ್ ಪೋಲಿಸಣ್ಣಗಳು ಇದೇಲ್ಲವನ್ನೂ ನಿವಾರಿಸುವ ಬದಲು ವಸೂಲಿಗೆ ನಿಂತಿರುವ ದೃಶ್ಯವನ್ನು ನೋಡಿದಾಗಲಂತೂ ನಖಶಿಖಾಂತ ಕೋಪ ನೆತ್ತಿಗೇರುತ್ತಿತ್ತು.
ಬಹುಸಂಖ್ಯಾ ಮಹಿಳೆಯರು ದ್ವಿಚಕ್ರ ಚಲಾಯಿಸುವಾಗ ಭಯದಲ್ಲಿಯೇ ಚಲಾಯಿಸುತ್ತಿದ್ದರು ಇಂತಹ ಕಾಮಗಾರಿ ಆಗುವಾಗ. ಅವರುಗಳನ್ನು ಲೆಕ್ಕಿಸದೇ ತೋಚಿದಂತೆ ವಾಹನ ಚಲಾಯಿಸುವವರನ್ನು ನೋಡಿದಾಗ ಯಾವಾಗ ಇದೆಲ್ಲದಕ್ಕೂ ಅಂತ್ಯ ಎಂದು ಆಕಾಶ ನೋಡಿ ಮುಂದೆ ಸಾಗುವುದು ಸಹಜವೆನಿಸಿತ್ತು.
ಶಿವಮೊಗ್ಗದಿಂದ ಹೊನ್ನಾಳಿ, ಶಿಕಾರಿಪುರ, ಚನ್ನಗಿರಿ, ಸಾಸ್ವೆಹಳ್ಳಿ, ಚಿತ್ರದುರ್ಗ, ಸೋವಿನಕೊಪ್ಪ ಮಾರ್ಗಗಳಲ್ಲಿ ನೌಕರಿ ಮಾಡುವವರು, ಇನ್ಯಾವುದೋ ಉದೇಶದಿಂದ ಪ್ರತಿ ನಿತ್ಯ ಬಸ್ ಸಂಚಾರ ನಡೆಸುವವರು ನಿಟ್ಟುಸಿರು ಬಿಡುವಂತಾಗಿದೆ.
ಹಾಗೆಯೇ ರವೀಂದ್ರ ನಗರ, ಕೃಷಿ ನಗರ, ಬಸವೇಶ್ವರ ನಗರ, ನವುಲೆ, ಎಲ್.ಬಿ. ಎಸ್ ನಗರ, ಅಶ್ವತ್ ನಗರ, ಕೀರ್ತಿ ನಗರ, ವಿನೋಬನಗರ, ಶಾಂತಮ್ಮ ಲೇಔಟ್, ಸೋಮಿನಕೊಪ್ಪ ಬದಿಯ ನಗರ ಪ್ರದೇಶದ ಜನರು ಮನೆಗಳ ಮುಂದೆ ಇನ್ನೆಂದು ಕಾಣದಷ್ಟು ವಾಹನ ಸಂದಣಿ, ವಾಯು ಮಾಲಿನ್ಯ, ಧೂಳು, ಶಬ್ದಮಾಲಿನ್ಯ ಹೀಗೆ ನಾನಾ ಬಗೆಯ ತಾಪತ್ರಯಗಳನ್ನು ಅನುಭವಿದ್ದಾರೆ.
ಆದರೆ, ಫೆ.22ರ ಗುರುವಾರ ಅವಿಸ್ಮರಣೀಯ ದಿನ. ನಾನು ಉಲ್ಲೇಖಿಸಿದ ಈ ಎಲ್ಲಾ ಸಮಸ್ಯೆಗಳನ್ನು ಅನುಭವಿಸುವುದರ ಜೊತೆಗೆ ಅವರುಗಳ ಆಯಷ್ಯನಲ್ಲಿ ಮೂರು ವರ್ಷಗಳು ಧೂಳು ಒತ್ತಡ ಹಿಂಸೆ ಅನುಭವಿದ ತ್ಯಾಗಕ್ಕೆ ಮೇಲ್ಸೇತುವೆ #Flyover ನಿರ್ಮಾಣ ಉದ್ಘಾಟನೆಯ ಹಂತ ತಲುಪಿ, ಸಾರ್ವಜನಿಕರಿಗಾಗಿ ಲೋಕಾರ್ಪಣೆ ಆಗಿರುವುದು ಅಭೂತಪೂರ್ವ ಸಂತೋಷವನ್ನು ಸೃಷ್ಠಿಸಿದೆ.
ಕೇಂದ್ರ ಭೂ ಸಾರಿಗೆ ಸಚಿವ ನಿತಿನ್ ಗಡ್ಕರಿ ಅವರು ನಮ್ಮ ಶಿವಮೊಗ್ಗದ ನಾಗರಿಕರಿಗೆ ಮೇಲ್ಸೇತುವೆಯನ್ನು ಲೋರ್ಪಾಣೆ ಮಾಡುವ ಮೂಲಕ ನೆಮ್ಮದಿಯ ನಿಟ್ಟುಸಿರು ಬಿಡುವಂತೆ ಮಾಡಿದ್ದಾರೆ. ಇನ್ನುಳಿದ ಪ್ರಗತಿಯಲ್ಲಿರುವ ಕಾಮಗಾರಿಗಳು ಶೀಘ್ರವಾಗಿ ಮುಗಿಯುಂತಾಗಲಿ. ಯೋಜನೆಗಳನ್ನು ನಿಗದಿತ ಸಮಯದೊಳಗೆ ಅನುಷ್ಠಾನಕ್ಕೆ ಬರುವಂತೆ ಸರ್ಕಾರ ಹಾಗೂ ಅಧಿಕಾರಿ ವರ್ಗ ಶ್ರಮಿಸುಂತಾಗಲಿ.
Discussion about this post