No Result
View All Result
Sparsh Hospital Sarjapur Bengaluru 1st Anniversary
English Articles

SPARSH Hospital Sarjapur Celebrates 1st Anniversary, Expands Advanced Healthcare Access

by kalpa News
September 16, 2026
0

Kalpa Media House  |  ​Bengaluru  | As Sarjapur and the larger South East Bengaluru corridor continue to expand rapidly, the...

Read moreDetails
Hero Motocorp Glamour x Integrated ABS

Hero Motocorp Launches Glamour x With Integrated-ABS

September 12, 2026
Bengaluru Banaswadi MEMU Shed GM Inspection

SWR : GM Reviews MEMU Operations and Infrastructure at Banaswadi

September 12, 2026
SWR hubballi-railway-fire-safety-training-emergency

Fire Safety Training Held for Railway Officials and Staff in Hubballi

September 11, 2026
Carnatic Music Intriguing Festival of Raga Tana Pallavi copy

RTP | An intriguing festival of Raga-Tana-Pallavi

September 9, 2026
  • Advertise With Us
  • Grievances
  • About Us
  • Contact Us
Wednesday, September 16, 2026
Follow Us
kalpa.news
Advertisement
ADVERTISEMENT
  • Home
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಹುಬ್ಬಳ್ಳಿ-ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಯಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
    • ವಿಜಯನಗರ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
    • ಡಾ. ಮೈತ್ರೇಯಿ ಆದಿತ್ಯಪ್ರಸಾದ್
  • ರೈಲ್ವೆ ಸುದ್ದಿಗಳು
  • ಇತರೆ
    • ವಿಜ್ಞಾನ-ತಂತ್ರಜ್ಞಾನ
    • ಜಾಬ್-ಸ್ಟ್ರೀಟ್
    • ಕೈ ರುಚಿ
    • ನಿತ್ಯ ಪಂಚಾಂಗ/ದಿನ ವಿಶೇಷ
    • ಮುಂಜಾನೆ ಸುವಿಚಾರ
    • ಆಧ್ಯಾತ್ಮ/ಭಕ್ತಿಭಾವ
Subscribe
kalpa.news
No Result
View All Result
  • Home
  • ರಾಜಕೀಯ
  • ಶಿವಮೊಗ್ಗ
  • ಜಿಲ್ಲೆ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
  • ರೈಲ್ವೆ ಸುದ್ದಿಗಳು
  • ಇತರೆ
ADVERTISEMENT
Home ಜಿಲ್ಲೆ ಉತ್ತರ ಕನ್ನಡ

ಭೋಜನವೆಂದರೆ ಅದ್ವೈತ ಸಾಧನೆ | ರಾಮಚಂದ್ರಾಪುರ ಶ್ರೀ

ನಮ್ಮೊಳಗೆ ಒಂದಾಗದೇ ಇರುವ ಆಹಾರವೇ ನಮಗೆ ಶತ್ರು | ರಾತ್ರಿ ವೇಳೆಯ ಕೆಲಸ ದೇಹದ ಜೊತೆಗಿನ ಯುದ್ಧ

kalpa News by kalpa News
August 6, 2026
in ಉತ್ತರ ಕನ್ನಡ
0
Food is a Path to Advaita Realization Raghaveshwara Sri
Share on FacebookShare on TwitterShare on WhatsApp

ಕಲ್ಪ ಮೀಡಿಯಾ ಹೌಸ್  |  ಗೋಕರ್ಣ  |

ಭೋಜನವೆಂದರೆ (Food) ಅದು ಅದ್ವೈತ ಸಾಧನೆಯಾಗಿದ್ದು, ಊಟ ಮಾಡಿದ ಆಹಾರ ನಮ್ಮೊಳಗೆ, ನಮ್ಮ ರಕ್ತ, ಮೇಧಸ್ಸು, ಚರ್ಮ ಎಲ್ಲವೂ ಆಗಿ, ಅದು ನಾವೇ ಆಗಿ ರೂಪುಗೊಳ್ಳುತ್ತದೆ. ಮೊದಲು ಆಹಾರವೇ ಬೇರೆ ನಾವೇ ಬೇರೆಯಾಗಿರುತ್ತೇವೆ. ಆದರೆ ನಾವು ಸ್ವೀಕರಿಸಿದ ಆಹಾರ ಕಾಲಕ್ರಮೇಣ ಪ್ರತ್ಯೇಕತೆಯನ್ನು ಕಳೆದುಕೊಂಡು ನಾವೇ ಆಗಿ ನಮ್ಮಲ್ಲಿ ಒಂದಾಗುತ್ತದೆ. ನಮ್ಮ ಜನ್ಮವೂ ಹಾಗೆಯೇ, ಭೂಮಿಯಲ್ಲಿ ಎಲ್ಲಾ ಕರ್ಮಗಳನ್ನು ಕಳೆದುಕೊಂಡು, ಆನಂತರ ಪರಮಾತ್ಮನಲ್ಲಿ ಒಂದಾಗುವುದೇ ಜೀವನದ ಪರಮ ಗುರಿಯಾಗಿದೆ ಎಂದು ಶ್ರೀರಾಮಚಂದ್ರಾಪುರ ಮಠದ ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳು ತಿಳಿಸಿದರು.

ಗೋಕರ್ಣದ (Gokarna) ಅಶೋಕೆಯ ಮೂಲಮಠದ ಪರಿಸರದಲ್ಲಿ ನಡೆಯುತ್ತಿರುವ ‘ಅನ್ನಬ್ರಹ್ಮ ಚಾತುರ್ಮಾಸ್ಯ’ದ ಧರ್ಮಸಭೆಯಲ್ಲಿ ‘ಅನ್ನಂ ಬ್ರಹ್ಮ’ ಮಾಲಿಕೆಯಲ್ಲಿ ಪ್ರವಚನ ಅನುಗ್ರಹಿಸಿದರು.

Also Read>> ಅಂತಾರಾಜ್ಯ ಜಲ ವಿವಾದ | ಕೋರ್ಟ್ ತೀರ್ಪು ಪರಿಹಾರವಲ್ಲ, ಸಹಕಾರಿ ಆಡಳಿತವೇ ಶಾಶ್ವತ ಮಾರ್ಗ

ಜೀವ – ದೇವಾದ್ವೈತಕ್ಕೆ ಭೋಜನವೆಂಬುದು ತಯಾರಿಯಾಗಿದ್ದು, ಇದು ಜೀವ-ಜೀವಾದ್ವೈತವಾಗಿದೆ. ಅದ್ವೈತವಿರುವಲ್ಲಿ ಆನಂದವಿದ್ದು, ಜೀವ-ಜೀವಾದ್ವೈತವಾದ ಭೋಜನವನ್ನು ಸವಿಯುವಾಗಲೂ ಆನಂದವಾಗುತ್ತದೆ. ಸೇವಿಸುವ ಆಹಾರ ನಮ್ಮೋಳಗೆ ಅದ್ವೈತವಾಗದೇ, ನಮ್ಮೊಳಗೆ ಒಂದಾಗದೇ ಇದ್ದಾಗ ಅದೇ ನಮಗೆ ಶತ್ರುವಾಗುತ್ತದೆ. ಅದೇ ಅನಾರೋಗ್ಯಕ್ಕೂ, ಮರಣಕ್ಕೂ ಕಾರಣವಾಗಬಹುದು. ಸೇವಿಸಿದ ಆಹಾರವನ್ನು ನಾವೇ ಜೀರ್ಣಿಸಿಕೊಳ್ಳಬೇಕು. ಅದಿಲ್ಲದಿದ್ದರೆ ಆ ಆಹಾರವೇ ನಮ್ಮನ್ನು ಜೀರ್ಣಗೊಳಿಸುತ್ತದೆ. ಆಯುರ್ವೇದದ ಸೂತ್ರವೂ ಇದನ್ನೇ ಹೇಳುತ್ತದೆ. ಜೀರ್ಣವಾಗದೇ ಉಳಿಯುವ ಆಹಾರವೇ ಸರ್ವ ರೋಗಕ್ಕೂ ಮೂಲ ಎನ್ನಲಾಗಿದೆ ಎಂದು ಅಭಿಪ್ರಾಯಪಟ್ಟರು.Kumadvathi College Shikariura

Food | ಭೌತಿಕ ಅದ್ವೈತ

ಭೋಜನದಲ್ಲಿ ಜೀವ- ಜೀವ ಸೇರಿದರೆ, ಜೀವನದಲ್ಲಿ ಜೀವ – ದೇವ ಸೇರುವುದಾಗಿದೆ. ಸೇವಿಸಿದ ಆಹಾರ ಸಂಪೂರ್ಣ ಜೀರ್ಣವಾಗಿ ದೇಹದ ಭಾಗವಾದರೆ ಅದು ಭೌತಿಕ ಅದ್ವೈತ. ಆದರೆ ಅನ್ನಂ ಬ್ರಹ್ಮ ಎಂಬ ಭಾವದಲ್ಲಿ ಸೇವಿಸಿದಾಗ ಅದು ಉನ್ನತ ಮಟ್ಟದ ಅದ್ವೈತವಾಗಿದ್ದು, ಅದು ನಮ್ಮನ್ನು ಮುಕ್ತಿಗೇ ಕರೆದುಕೊಂಡು ಹೋಗುವ ಸಾಧನವಾಗುತ್ತದೆ. ಹಾಗೆಯೇ ಮಣ್ಣು ಮರಳುಗಳನ್ನು ಸೇವಿಸಿ ಜೀವನ ಮಾಡಲಾಗದು ಎಂದು ತಿಳಿಸಿದರು.

ಜೀವವು ಉತ್ಕೃಷ್ಟ ಆಹಾರವನ್ನೇ ಸ್ವೀಕರಿಸಬೇಕಾಗುತ್ತದೆ. ದೋಷಯುಕ್ತವಾದ ಆಹಾರವನ್ನು ಸೇವಿಸಿದಾಗ ಅದು ನಮ್ಮ ಜೀವಕ್ಕೆ ಹಾನಿಯನ್ನು ಮಾಡುವುದರ ಜೊತೆಗೆ ಮುಂದಿನ ಪೀಳಿಗೆಗೂ ದೋಷವನ್ನು ವರ್ಗಾಯಿಸುತ್ತದೆ. ಹಾಗಾಗಿ ಜೀವವೆಂಬ ಯಂತ್ರಕ್ಕೆ ಉತ್ತಮವಾದ ಆಹಾರವೆಂಬ ಇಂಧನವನ್ನಷ್ಟೇ ನೀಡಬೇಕು.
-ಶ್ರೀ ರಾಘವೇಶರ ಭಾರತೀ ಮಹಾಸ್ವಾಮಿಗಳು

ನಾವು ಸೇವಿಸುವ ಆಹಾರಕ್ಕೆ ಜೀವವಿದ್ದು, ಗಿಡಗಳಿಗೆ ಸುಪ್ತವಾದ ಜೀವವಿದೆ. ಅದಕ್ಕೆ ಸಂವೇದನೆಯೂ ಇದೆ. ಒಂದಾಗುವ ವಸ್ತುಗಳಲ್ಲಿ ಸಮಾನತೆ ಬೇಕು ಎಂಬುದು ಸೃಷ್ಟಿಯ ನಿಯಮ. ಹಾಗಾಗಿ ಜಡ ವಸ್ತುವು ಜೀವಕ್ಕೆ ಆಹಾರವಾಗಲು ಸಾಧ್ಯವಿಲ್ಲ. ಜೀವಕ್ಕೆ ಜೀವವಿರುವ ವಸ್ತುವೇ ಆಹಾರವಾಗಬೇಕು ಎಂದು ತಿಳಿಸಿದರು.
ದೇಹವೆಂಬ ಯಂತ್ರ ಬೆಳಗಿನ ಹೊತ್ತು ಪೂರ್ಣ ಶಕ್ತಿಯಿಂದ ಕಾರ್ಯಾಚರಿಸಿದರೆ, ಸಂಜೆಯಾಗುತ್ತಿದ್ದಂತೆ ನಿಧಾನವಾಗುತ್ತದೆ. ರಾತ್ರಿ ಅದು ವಿಶ್ರಾಂತಿ ಪಡೆಯುವ ಹೊತ್ತು. ಇಂದಿನ ದಿನಗಳಲ್ಲಿ ರಾತ್ರಿ ವೇಳೆ ಕೆಲಸ ಮಾಡುವ ಪ್ರವೃತ್ತಿ ಇದೆ. ಇದು ನಿಜವಾಗಿ ದೇಹದ ಜೊತೆಗಿನ ಯುದ್ಧವೇ ಆಗಿದೆ ಎಂದು ಅಭಿಪ್ರಾಯಪಟ್ಟರು.

ಇದೇ ಸಂದರ್ಭದಲ್ಲಿ ಧಾರ್ಮಿಕ ಪಂಚಾಂಗ ಸಮಿತಿಯ ಪ್ರೋ. ಶಂಭು ಭಟ್ಟ ಕಡತೋಕ ಹಾಗೂ ವಿದ್ವಾನ್ ಪತಂಜಲಿ ವೀಣಾಕರ ಅವರು ಪ್ಲವಂಗ ನಾಮ ಸಂವತ್ಸರದ ಧಾರ್ಮಿಕಪಂಚಾಂಗದ ಕರಡು ಪ್ರತಿಯನ್ನು ಶ್ರೀಗಳಿಗೆ ಸಮರ್ಪಿಸಿ ಆಶೀರ್ವಾದ ಪಡೆದರು.

ಸಾಗರ ಹವ್ಯಕ ಮಂಡಲದ ಕೆಳದಿ ಪಶ್ಚಿಮ, ಕೆಳದಿ ಪೂರ್ವ, ಉಳವಿ, ಕ್ಯಾಸನೂರ, ಇಕ್ಕೆರಿ, ಆವಿನಳ್ಳಿ ವಲಯಗಳ ಪರವಾಗಿ ರಮೇಶ ಹಾರೆಗೊಪ್ಪ ದಂಪತಿಗಳು ಗುರುಭಿಕ್ಷಾ ಸೇವೆ ಸಮರ್ಪಿಸಿದರು. ಸುಬ್ರಹ್ಮಣ್ಯ ಚಿಪ್ಳಿ, ರಾಘವೇಂದ್ರ ಹೊಡಬಟ್ಟೆ, ಗೋವಿಂದ ಹೆಗಡೆ, ನಿಖಿಲ್ ಭಟ್, ದಿನ ಪ್ರಧಾನರಾಗಿ ಗಣಪತಿ ಟಿ. ಆರ್. ವರದಾಮೂಲ ದಂಪತಿಗಳು ಉಪಸ್ಥಿತರಿದ್ದರು.

ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news   
PES ShivamoggaKalpa News Advertising DisclaimerKalahamsa Infotech private limited

Tags: AdvaitaDinnerGokarnaKannada News WebsiteLatest News KannadaRaghaveshwara Bharathi MahaswamijiRamachandrapura MathaUttara Kannadaಅದ್ವೈತಗೋಕರ್ಣಭೋಜನಶ್ರೀ ರಾಘವೇಶ್ವರ ಭಾರತೀ ಮಹಾ ಸ್ವಾಮೀಜಿಶ್ರೀರಾಮಚಂದ್ರಾಪುರ ಮಠ
Share200Tweet125Send
Aniruddha Vasishta S R

Aniruddha Vasishta S R

Editor-in-Chief

Previous Post

ಶಿವಮೊಗ್ಗ ರೈಲ್ವೆ ಹಬ್ ಕನಸಿಗೆ ವೇಗ | ಕೋಟೆಗಂಗೂರು ಕೋಚಿಂಗ್ ಡಿಪೋ ನಿರ್ಮಾಣ ಅಂತಿಮ ಹಂತಕ್ಕೆ

Next Post

ಬಾರಕೂರು | ಭಂಡಾರಕೇರಿ ಶ್ರೀಗಳ ಚಾರ್ತುಮಾಸ್ಯ | ಆ.7ರಂದು ಏನೆಲ್ಲಾ ಕಾರ್ಯಕ್ರಮಗಳು ನಡೆಯಲಿವೆ?

kalpa News

kalpa News

Next Post
Udupi Bhandarakeri Matha Awards to 10 Scholars

ಬಾರಕೂರು | ಭಂಡಾರಕೇರಿ ಶ್ರೀಗಳ ಚಾರ್ತುಮಾಸ್ಯ | ಆ.7ರಂದು ಏನೆಲ್ಲಾ ಕಾರ್ಯಕ್ರಮಗಳು ನಡೆಯಲಿವೆ?

Leave a Reply Cancel reply

Your email address will not be published. Required fields are marked *

No Result
View All Result
Sparsh Hospital Sarjapur Bengaluru 1st Anniversary
English Articles

SPARSH Hospital Sarjapur Celebrates 1st Anniversary, Expands Advanced Healthcare Access

by kalpa News
September 16, 2026
0

Kalpa Media House  |  ​Bengaluru  | As Sarjapur and the larger South East Bengaluru corridor continue to expand rapidly, the...

Read moreDetails
Hero Motocorp Glamour x Integrated ABS

Hero Motocorp Launches Glamour x With Integrated-ABS

September 12, 2026
Bengaluru Banaswadi MEMU Shed GM Inspection

SWR : GM Reviews MEMU Operations and Infrastructure at Banaswadi

September 12, 2026
SWR hubballi-railway-fire-safety-training-emergency

Fire Safety Training Held for Railway Officials and Staff in Hubballi

September 11, 2026
Carnatic Music Intriguing Festival of Raga Tana Pallavi copy

RTP | An intriguing festival of Raga-Tana-Pallavi

September 9, 2026
kalpa.news

Copyright © 2026 Kalpa News. Designed by KIPL

Navigate Site

  • Advertise With Us
  • Grievances
  • Privacy & Policy
  • About Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected by Kalpa News!!
No Result
View All Result
  • Home
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಹುಬ್ಬಳ್ಳಿ-ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಯಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
    • ವಿಜಯನಗರ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
    • ಡಾ. ಮೈತ್ರೇಯಿ ಆದಿತ್ಯಪ್ರಸಾದ್
  • ರೈಲ್ವೆ ಸುದ್ದಿಗಳು
  • ಇತರೆ
    • ವಿಜ್ಞಾನ-ತಂತ್ರಜ್ಞಾನ
    • ಜಾಬ್-ಸ್ಟ್ರೀಟ್
    • ಕೈ ರುಚಿ
    • ನಿತ್ಯ ಪಂಚಾಂಗ/ದಿನ ವಿಶೇಷ
    • ಮುಂಜಾನೆ ಸುವಿಚಾರ
    • ಆಧ್ಯಾತ್ಮ/ಭಕ್ತಿಭಾವ

Copyright © 2026 Kalpa News. Designed by KIPL