ಕಲ್ಪ ಮೀಡಿಯಾ ಹೌಸ್ | ಬೆಂಗಳೂರು |
ಮಾಜಿ ಸಿಎಂ, ಮಾಜಿ ಕೇಂದ್ರ ಸಚಿವ ಡಿ.ವಿ. ಸದಾನಂದ ಗೌಡ ಅವರ ಬ್ಯಾಂಕ್ ಖಾತೆ ಹ್ಯಾಕ್ ಮಾಡಲಾಗಿದ್ದು, ಸೈಬರ್ ಕಳ್ಳರು ಮೂರು ಲಕ್ಷ ರೂ. ಹಣವನ್ನು ದೋಚಿರುವ ಘಟನೆ ನಡೆದಿದೆ.
ಪ್ರಧಾನಿ ನರೇಂದ್ರ ಮೋದಿ ಅವರ 75ನೇ ಜನ್ಮ ದಿನಾಚರಣೆ ಹಿನ್ನೆಲೆಯಲ್ಲಿ ಬಿಜೆಪಿಯಿಂದ ಆರ್’ಎಂವಿ ಎಕ್ಸೆö್ಟನ್ಷನ್ ಬಿಬಿಎಂಪಿ ಪಾರ್ಕ್’ನಲ್ಲಿ ಆಯೋಜಿಸಿದ್ದ 75 ಪೌರ ಕಾರ್ಮಿಕರರಿಗೆ ಸನ್ಮಾನ ಕಾರ್ಯಕ್ರಮದಲ್ಲಿ ಮಾಜಿ ಸಿಎಂ ಈ ಬಗ್ಗೆ ಮಾತನಾಡಿದ್ದಾರೆ.

ಸುಮಾರು 3 ಲಕ್ಷ ರೂ. ಹಣ ಹೋಗಿದ್ದು, ಎಚ್’ಡಿಎಫ್’ಸಿ, ಎಸ್’ಬಿಐ ಹಾಗೂ ಆಕ್ಸಿಸ್ ಬ್ಯಾಂಕಿನ ಖಾತೆಯಲ್ಲಿದ್ದ ಹಣ ಕಳ್ಳತನವಾಗಿದೆ ಎಂದು ತಿಳಿಸಿದ್ದಾರೆ.
ಯುಪಿಐ ಮೂಲಕ ಹ್ಯಾಕ್ ಮಾಡಿ ಹಣ ಕಳ್ಳತನ ಮಾಡಿದ್ದು ಸೈಬರ್ ಕ್ರೈಮ್’ಗೆ ದೂರು ನೀಡುತ್ತೇನೆ ಎಂದು ತಿಳಿಸಿದ್ದಾರೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news










Discussion about this post