ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಇಸ್ಲಾಮಾಬಾದ್: ದೇಶದ್ರೋಹದ ಆರೋಪದ ಹಿನ್ನೆಲೆಯಲ್ಲಿ ಪಾಕಿಸ್ಥಾನ ಮಾಜಿ ಅಧ್ಯಕ್ಷ ಪರ್ವೇಜ್ ಮುಶ್ರಫ್ ಅವರಿಗೆ ಮರಣ ದಂಡನೆ ಶಿಕ್ಷೆಯನ್ನು ವಿಧಿಸಿ ಅಲ್ಲಿನ ವಿಶೇಷ ನ್ಯಾಯಾಲಯ ಆದೇಶಿಸಿದೆ.
ನವೆಂಬರ್ 19ರಂದು ವಿಚಾರಣೆ ಅಂತ್ಯಗೊಳಿಸಿದ್ದ ವಿಶೇಷ ನ್ಯಾಯಾಲಯ ತೀರ್ಪನ್ನು ಕಾಯ್ದಿರಿಸಿತ್ತು. ಇಂದು ತೀರ್ಪು ಪ್ರಕಟಿಸಿದ ತ್ರಿಸದ್ಯ ಪೀಠ ಪರ್ವೇಜ್(74)ಗೆ ಗಲ್ಲು ಶಿಕ್ಷೆಯನ್ನು ಇಂದು ಪ್ರಕಟಿಸಿದೆ.
ನಾಲ್ಕು ವರ್ಷದ ಹಿಂದೆ ಲಂಡನ್’ಗೆ ಪರಾರಿಯಾಗಿದ್ದ ಮುಶ್ರಫ್ ನಂತರ ಕಳೆದ ಪಾಕಿಸ್ಥಾನ ಸಾರ್ವತ್ರಿಕ ಚುನಾವಣೆಯ ಸಮಯದಲ್ಲಿ ಮತ್ತೆ ಪಾಕಿಸ್ಥಾನಕ್ಕೆ ಆಗಮಿಸಿದ್ದರು.
ಇದಕ್ಕೂ ಮುನ್ನ ಡಿಸೆಂಬರ್’ನಲ್ಲಿ ಆಸ್ಪತ್ರೆಯಿಂದ ಮಾತನಾಡಿದ್ದ ಮುಶ್ರಫ್, ತಮ್ಮ ವಿರುದ್ಧದ ಆರೋಪ ಆಧಾರ ರಹಿತ ಎಂದು ಪ್ರತಿಪಾದಿಸಿದ್ದರು.
ಪಾಕಿಸ್ಥಾನದ ಮಾಜಿ ನಾಯಕ ಕೂಡ ಪಾಕಿಸ್ಥಾನಕ್ಕಾಗಿ ಯುದ್ಧಗಳನ್ನು ಮಾಡಿ ಒಂದು ದಶಕದಿಂದ ದೇಶಕ್ಕೆ ಸೇವೆ ಸಲ್ಲಿಸಿದ್ದಾನೆ ಎಂದಿದ್ದಾರೆ. ಈ ಪ್ರಕರಣ ಆಧಾರ ರಹಿತವಾಗಿದ್ದು, ನಾನು ಪಾಕಿಸ್ಥಾನಕ್ಕಾಗಿ ಯುದ್ಧಗಳನ್ನು ನಡೆಸಿ 10 ವರ್ಷಗಳಿಂದ ನನ್ನ ದೇಶಕ್ಕೆ ಸೇವೆ ಸಲ್ಲಿಸಿದ್ದೇನೆ. ನನ್ನ ವಕೀಲ ಸಲ್ಮಾನ್ ಸಫ್ದಾರ್ ಕೂಡ ನ್ಯಾಯಾಲಯದಿಂದ ವಿಚಾರಣೆ ನಡೆಸುತ್ತಿಲ್ಲ ಎಂದಿದ್ದರು.
ಪಾಕಿಸ್ಥಾನದ ಸೇನಾಧಿಕಾರಿಯಾಗಿದ್ದ ಪರ್ವೇಜ್ ನಂತರ ದಂಗೆ ನಡೆಸಿ ದೇಶದ ಚುಕ್ಕಾಣಿ ಹಿಡಿದಿದ್ದರು. 1999ರಿಂದ 2008ರವರೆಗೆ ಪಾಕಿಸ್ಥಾನದಲ್ಲಿ ಅಧಿಕಾರ ಅನುಭವಿಸಿದ್ದ ಮುಶ್ರಫ್ ಸಮಯದಲ್ಲೇ ಭಾರತ- ಪಾಕ್ ನಡುವಿನ ಕಾರ್ಗಿಲ್ ಯುದ್ದವೂ ನಡೆದಿತ್ತು.
Discussion about this post