ಕಲ್ಪ ಮೀಡಿಯಾ ಹೌಸ್ | ವಿಶೇಷ ಲೇಖನ |
ಒಂದೆಡೆ ಕೊರೋನಾ ಸಾಂಕ್ರಾಮಿಕ ರೋಗ ನಿಯಂತ್ರಣಕ್ಕೆ ಬರುತ್ತಿದ್ದರೆ, ಇನ್ನೊಂದೆಡೆ ವಿವಿಧ ರೋಗ ಹರಡುವಿಕೆಯ ಭೀತಿಯೂ ಸಹ ಇಲ್ಲದೇ ಇಲ್ಲ. ಇದರಲ್ಲಿ ಸದ್ಯ ಪ್ರಮುಖವಾದುದು ಡೆಂಗ್ಯೂ.
ಹೌದು… ಹಲವು ವರ್ಗದ ಜನರನ್ನು ಅಪಾಯಕ್ಕೆ ಸಿಲುಕಿಸುವ ಈ ಡೆಂಗ್ಯೂ ಕುರಿತಾಗಿ ಹಾಗೂ ಮುಂಜಾಗ್ರತೆಯ ಬಗ್ಗೆ ಕೆಲವು ಮಾಹಿತಿ ತಿಳಿಯೋಣ.

ಈ ಕಾಯಿಲೆಯೂ ಏಡಿಸ್ ಎಂಬ ಸೊಳ್ಳೆ ಹಗಲು ವೇಳೆಯಲ್ಲಿ ಕಚ್ಚುವುದರಿಂದ ಹರಡುತ್ತದೆ. ಈ ಸೊಳ್ಳೆಯೂ ತನ್ನ ಸಂತಾನೋತ್ಪತ್ತಿಗಾಗಿ ಕೂಲರ್’ಗಳು, ಪ್ಲಾಸ್ಟಿಕ್ ವಸ್ತುಗಳು, ಟೈರ್’ಗಳು, ಹೂವಿನ ಪಾಟ್’ಗಳು ಇಂತಹ ಸ್ಥಳಗಳಲ್ಲಿ ವಾಸ ಮಾಡುತ್ತವೆ.
ಹೆಚ್ಚಿನ ಅಪಾಯಕ್ಕೆ ಸಿಲುಕುವ ವರ್ಗಗಳು
- ಮಕ್ಕಳು ಹಾಗೂ ವಯೋವೃದ್ಧರು
- ಸ್ಥೂಲಕಾಯದವರು
- ಗರ್ಭಿಣಿ ಮಹಿಳೆಯರು
- ಪೆಪ್ತಿಕ್ ಅಲ್ಸರ್ ಕಾಯಿಲೆವುಳ್ಳವರು
- ಋತುಸ್ರಾವದಲ್ಲಿರುವ ಮಹಿಳೆಯರು
- ಥಲಸೀಮಿಯ ಹಾಗೂ ಇತರ ರಕ್ತದೋಷದ ಕಾಯಿಲೆ ಉಳ್ಳವರು
- ಜನನದ ಹೃದಯದ ಕಾಯಿಲೆ
- ದೀರ್ಘಕಾಲದ ಕಾಯಿಲೆಗಳಾದ ಸಕ್ಕರೆ ಕಾಯಿಲೆ, ಹೆಚ್ಚಿನ ರಕ್ತದ ಒತ್ತಡ, ಅಸ್ತಮಾ, ಹೃದಯದ ಕಾಯಿಲೆ, ಮೂತ್ರಪಿಂಡಗಳ ಕಾಯಿಲೆ, ಯಕೃತ ಸಂಬಂಧಿ ಕಾಯಿಲೆವುಳ್ಳವರು
- ಸ್ಟೇರಿಯಡ್ ಔಷಧಿ ಉಪಯೋಗಿಸುವ ರೋಗಿಗಳು
ಈ ಕಾಯಿಲೆಯ ಲಕ್ಷಣಗಳೇನು?
- ಸೊಳ್ಳೆ ಕಚ್ಚಿದ 3 ರಿಂದ 14 ದಿನಗಳ ಒಳಗೆ ಗೋಚರವಾಗುತ್ತದೆ
- ತಲೆ, ಕಣ್ಣು, ಸ್ನಾಯು, ಕೀಲು ದದ್ದುಗಳ ನೋವು, ರಕ್ತಸ್ರಾವ
- ಬಿಳಿ ರಕ್ತ ಕೋಶಗಳ ಪ್ರಮಾಣ ಕಡಿಮೆಯಾಗುವುದು
- ಪ್ಲೇಟ್ಲೆಟ್ ಪ್ರಮಾಣ ಕಡಿಮೆಯಾಗುವುದು
- ರಕ್ತಸ್ರಾವವಾಗುವ ಜೊತೆಯಲ್ಲಿ ಜ್ವರ ಕಾಣಿಸಿಕೊಳ್ಳುವುದು

ಡೆಂಗ್ಯೂ ಜ್ವರವನ್ನು ಆರಂಭಿಕ ಹಂತದಲ್ಲೇ ಪತ್ತೆ ಮಾಡಿ ಸೂಕ್ತ ಚಿಕಿತ್ಸೆ ನೀಡಬೇಕು. ಇಲ್ಲದೇ ಹೋದಲ್ಲಿ ಇದು ಸಿಂಡ್ರೋಮ್ ಆಗಿ ರೋಗಿಯ ಮರಣದವರೆಗೂ ತಲುಪುವ ಸಾಧ್ಯತೆಯಿರುತ್ತದೆ. ಹೀಗಾಗಿ, ಇದರ ಲಕ್ಷಣಗಳನ್ನು ಆರಂಭದಲ್ಲೇ ಗುರುತಿಸಿ ಸೂಕ್ತ ಚಿಕಿತ್ಸೆ ನೀಡುವುದು ಅಗತ್ಯವಿದೆ. ಈ ಕಾಯಿಲೆಗೆ ನಿರ್ಧಿಷ್ಟ ಆಂಟಿ ವೈರಲ್ ಔಷಧಿ ಲಭ್ಯವಿಲ್ಲ. ಬೇಗ ಲಕ್ಷಣಗಳು ಕಂಡುಬಂದಲ್ಲಿ ರೋಗಿಯ ಲಕ್ಷಣ ಸ್ಥಿತಿ ಅನುಸಾರ ಚಿಕಿತ್ಸೆ ನೀಡಲಾಗುತ್ತದೆ.
ರೋಗ ತಡೆಗಟ್ಟುವ ಕ್ರಮಗಳೇನು?
- ಕೂಲರ್, ಪ್ಲಾಸ್ಟಿಕ್ ವಸ್ತು, ಬಕೇಟ್, ಟೈರ್’ಗಳು, ನೀರಿನ ಕೂಲರ್’ಗಳು ಹಾಗೂ ಹೂವಿನ ಕುಂಡದಲ್ಲಿ ಇರುವ ನೀರನ್ನು ವಾರದಲ್ಲಿ ಒಮ್ಮೆ ತೆಗೆಯಬೇಕು.
- ನೀರನ್ನು ಶೇಖರ ಮಾಡಿದ ವಸ್ತುಗಳನ್ನು ಸರಿಯಾಗಿ ಮುಚ್ಚಬೇಕು.
- ರೋಗ ಹರಡುವ ಕಾಲದಲ್ಲಿ (ಮಳೆಗಾಲದಲ್ಲಿ) ಜನರು ದೇಹ ತುಂಬಾ ಹಾಗೂ ಕೈ-ಕಾಲುಗಳನ್ನು ಮುಚ್ಚುವ ಬಟ್ಟೆ ಧರಿಸಬೇಕು.
- ಹಗಲಿನ ವೇಳೆ ಮಲಗುವಾಗ ಸೊಳ್ಳೆ ಪರದೆಗಳನ್ನು ಉಪಯೋಗಿಸಬೇಕು.
- ಕಿಟಕಿಗಳ ಪರದೆ, ಸೊಳ್ಳೆ ಪರದೆ, ಸುರುಳಿಗಳು ಹಾಗೂ ಅವಾಹಕಗಳನ್ನು ಉಪಯೋಗಿಸಿದರೆ ಸೊಳ್ಳೆ ಕಡಿತ ತಡೆಯಬಹುದು.
- ಹಗಲಿನ ಸಮಯದಲ್ಲಿ ಕೀಟನಾಶಕಗಳ ಸಿಂಪಡನೆ ಮಾಡುವುದರಿಂದ ಸೊಳ್ಳೆ ಕಡಿತ ತಪ್ಪಿಸಬಹುದು.
ಲೇಖಕರು: ಸಹಾಯಕ ಪ್ರಾಧ್ಯಾಪಕರು,
ಸಮುದಾಯ ವೈದ್ಯಕೀಯ ವಿಭಾಗ,
ಸುಬ್ಬಯ್ಯ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ,
ಶಿವಮೊಗ್ಗ
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news









Discussion about this post