ಬೆಂಗಳೂರು: ಪತ್ರಕರ್ತೆ ಗೌರಿ ಲಂಕೇಶ ಹತ್ಯೆ ಪ್ರಕರಣದಲ್ಲಿ ಬಂಧಿತ ಹಿಂದೂಗಳಿಗೆ ಅಮಾನವೀಯವಾಗಿ ಥಳಿಸಿದ ಬಗ್ಗೆ ನ್ಯಾಯಾಲಯ ವರದಿ ವರದಿ ಕೇಳಿರುವುದು ತನಿಖೆಯ ಮೇಲೆಯೇ ಪ್ರಶ್ನೆಚಿನ್ಹೆಯನ್ನು ಹುಟ್ಟುಹಾಕಿದೆ ಎಂದು ಸನಾತನ ಸಂಸ್ಥೆಯ ವಕ್ತಾರ ಚೇತನ್ ರಾಜಹಂಸ ಹೇಳಿದ್ದಾರೆ.
ಈ ಕುರಿತಂತೆ ಪತ್ರಿಕಾ ಹೇಳಿಕೆ ನೀಡಿರುವ ಅವರು, ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆಯ ಆರೋಪದಲ್ಲಿ ರಾಜ್ಯ ಪೊಲೀಸರ ವಿಶೇಷ ತನಿಖಾ ತಂಡವು ಇಲ್ಲಿಯವರೆಗೆ ಕೆಲವು ಹಿಂದೂಗಳನ್ನು ಬಂಧಿಸಿದೆ. ಈ ಬಗ್ಗೆ ನಿಜವಾಗಿಯೂ ಏನೆಲ್ಲ ನಡೆಯುತ್ತಿದೆ, ಇದರ ಬಗ್ಗೆ ನಮಗೆ ತಿಳಿದಿರಲಿಲ್ಲ. ಆದರೆ ಆರೋಪಿಗಳ ಮೇಲೆ ಆದ ಹಲ್ಲೆಯ ಬಗ್ಗೆ ಈಗ ಕರ್ನಾಟಕದ ಉಚ್ಚ ನ್ಯಾಯಾಲಯವು ವರದಿಯನ್ನು ಕೇಳಿದ್ದರಿಂದ ಈ ಪ್ರಕರಣದ ಸತ್ಯತೆ ಬೆಳಕಿಗೆಬರಲಾರಂಭಿಸಿದೆ. ಇಲ್ಲಿಯ ವರೆಗೆ ಸನಾತನ ಸಂಸ್ಥೆ ಮತ್ತು ಇತರ ಹಿಂದುತ್ವವಾದಿ ಸಂಘಟನೆಗಳ ಹೆಸರಿನಲ್ಲಿ ಅನೇಕ ಕಾಲ್ಪನಿಕ ಕಥೆಗಳನ್ನು ಪತ್ರಕರ್ತರಿಗೆ ಕೊಡುತ್ತಿದ್ದವು. ಈ ಬಗ್ಗೆ ಪ್ರಸ್ತುತ ಬೆಳಕಿಗೆ ಬರುವಂತಹ ವಿಷಯ ಅತ್ಯಂತ ಗಂಭೀರವಾಗಿದೆ.
ಚೇತನ್ ಅವರ ಆರೋಪಗಳು:
1. ಆರೋಪಿಗಳಲ್ಲಿ ಸುಜಿತಕುಮಾರನನ್ನು ಮೇ 6 ರಂದು ಬಂಧಿಸಿದ್ದರು ಮತ್ತು ಆದರೆ ಪ್ರತ್ಯಕ್ಷದಲ್ಲಿ ಮೇ 20 ರಂದು ಬಂಧಿಸಲಾಗಿದೆ ಎಂದು ತೋರಿಸಲಾಗಿತ್ತು. ಇತರ ಮೂರು ಆರೋಪಿಗಳನ್ನು ಮೇ 14 ರಂದು ಬಂಧಿಸಿದೆ ಆದರೆ ಪ್ರತ್ಯಕ್ಷದಲ್ಲಿ ಅವರನ್ನು ಮೇ 21 ರಂದು ಬಂಧಿಸಲಾಗಿದೆ ಎಂದು ತೋರಿಸಲಾಗಿದೆ ಎಂದು ತೋರಿಸಲಾಗಿದೆ. ಅಂದರೆ ಇಷ್ಟುದಿನ ಅವರನ್ನು ಅನಧಿಕೃತವಾಗಿ ವಶಕ್ಕೆ ತೆಗೆದಿಟ್ಟುಕೊಂಡಿರುವುದು ಸ್ಪಷ್ಟವಾಗುತ್ತಿದೆ.
2. ಬಂಧಿಸಿದ ನಂತರ ಹಿಂದೂ ಆರೋಪಿಗಳಿಗೆ ವಕೀಲರ ಸಹಾಯ ಕೊಡಲಿಲ್ಲ. ಮುಂಬೈ ಮೇಲೆ ಭಯೋತ್ಪಾದನೆ ಹಲ್ಲೆಯನ್ನು ಮಾಡಿದ ಅಜ್ಮಲ್ ಕಸಾಬ್‌ನಿಗೂ ಭಾರತದಲ್ಲಿ ವಕೀಲರ ಸಹಾಯ ಕೊಡಲಾಗುತ್ತದೆ; ಆದರೆ ಹಿಂದೂ ಆರೋಪಿಗಳಿಗೆ ಅದನ್ನು ಕೊಡಲಿಲ್ಲ, ಇದು ಅತ್ಯಂತ ದೌರ್ಭಾಗ್ಯವೇ ಆಗಿದೆ.
3. ಪೊಲೀಸರು ಆರೋಪಿಗಳಿಗೆ ಅಮಾನವೀಯವಾಗಿ ಥಳಿಸಿದ್ದಾರೆ. ಆರೋಪಿಗಳೂ ನ್ಯಾಯಾಲಯದಲ್ಲಿ ಹಲ್ಲೆಯಾಗುತ್ತಿರುವ ಬಗ್ಗೆ ಗಮನಕ್ಕೆ ತಂದು ಶರೀರದ ಮೇಲಾಗಿರುವ ಗಾಯಗಳನ್ನು ತೋರಿಸಿದ್ದಾರೆ. ಆದರೂ ಅವರ ವೈದ್ಯಕೀಯ ಚಿಕಿತ್ಸೆ ಮಾಡಿಸಲಿಲ್ಲ.
ಒಟ್ಟಾರೆ ಅನಧಿಕೃತವಾಗಿ ಬಂಧಿಸುವುದು, ಅಜ್ಞಾತ ಸ್ಥಳದಲ್ಲಿಡುವುದು, ಅಮಾನವೀಯವಾಗಿ ಥಳಿಸಿ ಮಾಡದ ಅಪರಾಧವನ್ನು ಅವರಿಂದ ಹೇಳಿಸಿಕೊಳ್ಳುವುದು ಮತ್ತು ವಕೀಲರ ಸಹಾಯ ಪಡೆಯುವ ಮೂಲಭೂತ ಅಧಿಕಾರದಿಂದ ದೂರವಿಡುವುದು ಇಂತಹ ಚಿತ್ರಹಿಂಸೆ ಗಂಭೀರ ಸ್ವರೂಪದ್ದಾಗಿದೆ. ಹಿಂದೂ ಆರೋಪಿಗಳನ್ನು ಥಳಿಸಿ ಅವರಿಂದ ತಪ್ಪೊಪ್ಪಿಗೆ ಪಡೆಯುವುದು ಇಂತಹ ರಾಜ್ಯ ಪೊಲೀಸರ ‘ವಿಶೇಷ ತನಿಖಾ ತಂಡ’ದ ಪ್ರಯತ್ನದಿಂದ ಅದರ ತನಿಖೆಯ ಮೇಲೆಯೇ ಪ್ರಶ್ನೆಚಿಹ್ನೆ ಮೂಡುತ್ತದೆ ಎಂದು ಹೇಳಿದ್ದಾರೆ.
Discussion about this post