ಗೌರಿಬಿದನೂರು: ಇಲ್ಲಿನ ನ್ಯಾಷನಲ್ ಕಾಲೇಜಿನ ಖ್ಯಾತ ಗಣಿತಶಾಸ್ತ್ರ ಉಪನ್ಯಾಸಕಿ ಜಿ.ಎಸ್. ನಾಗಜ್ಯೋತಿ (ಮಂಚೇನಹಳ್ಳಿ) ನಿನ್ನೆ ವಿಧಿವಶರಾಗಿದ್ದಾರೆ.
ಜಿ.ಎನ್.ನಾಗಜ್ಯೋತಿ(48) ಕಳೆದ 20 ವರ್ಷಗಳಿಂದ ನ್ಯಾಷನಲ್ ಕಾಲೇಜ್ ನಲ್ಲಿ ಗಣಿತಶಾಸ್ತ್ರ ಉಪಾನ್ಯಾಸಕರಾಗಿ ಕಾರ್ಯನಿವಹಿಸುತ್ತಿದ್ದು, ಕಳೆದ ಒಂದು ತಿಂಗಳಿಂದ ಅನಾರೋಗ್ಯದಿಂದ ಚಿಕಿತ್ಸೆ ಪಡೆಯುತ್ತಿದ್ದು ತಡ ರಾತ್ರಿ ಅವರು ನಿಧನರಾಗಿದ್ದಾರೆ.
ಮೃತರ ಮನೆಗೆ ಕಾಲೇಜಿನ ಪ್ರಾಂಶುಪಾಲರಾದ ಎಂ.ವಿ.ಕೃಷ್ಣಮೂರ್ತಿ, ಸಿಬ್ಬಂದಿ ವರ್ಗದವರು ಹಾಗೂ ನೂರಾರು ವಿದ್ಯಾರ್ಥಿಗಳು ಭೇಟಿ ನೀಡಿ ಅಂತಿಮ ದರ್ಶನ ಪಡೆದಿದ್ದಾರೆ.
ಮೃತರು ಪತಿ ಹಾಗೂ ಒಬ್ಬಳು ಮಗಳನ್ನು ಅಗಲಿದ್ದಾರೆ. ಇವರ ಅಂತ್ಯಕ್ರಿಯ ಸಂಸ್ಕಾರವನ್ನು ಮಂಗಳವಾರ ಮಂಚೇನಹಳ್ಳಿ ನೆರವೇರಿಸಲಾಗಿದೆ ಎಂದು ಸಂಬಂಧಿಕರು ತಿಳಿಸಿದ್ದಾರೆ.







Discussion about this post