ಗೌರಿಬಿದನೂರು: ನಗರದ ಹೊರವಲಯದಲ್ಲಿರುವ ಸರ್ಕಾರಿ ಪ್ರಥಮ ದರ್ಜೆ ಪದವಿ ಕಾಲೇಜಿನ ಅಂಗವಿಕಲ ವಿದ್ಯಾರ್ಥಿ ಜೆ.ಎಲ್. ಶ್ರೀನಿವಾಸ್ ರವರಿಗೆ ಲಯಸ್ ಸಂಸ್ಥೆಯ ವತಿಯಿಂದ ತ್ರಿಚಕ್ರ ವಾಹನವನ್ನು ವಿತರಣೆ ಮಾಡಿದರು.
ಬಳಿಕ ಮಾತನಾಡಿದ ಲಯನ್ಸ್ ಸಂಸ್ಥೆಯ ಅಧ್ಯಕ್ಷ ಪ್ರೊ.ಕೆ.ಆರ್. ರಾಮಾಂಜನೇಯಲು, ಸಮಾಜದಲ್ಲಿ ಪ್ರತಿಯೊಬ್ಬರೂ ತನ್ನದೇ ಆದಂತಹ ವಿಶಿಷ್ಟ ಪ್ರತಿಭೆಯನ್ನು ಹೊಂದಿದ್ದು ಇದರಿಂದ ಅವರಲ್ಲಿನ ವ್ಯಕ್ತಿತ್ವದ ವಿಕಸನಕ್ಕೆ ಸಾಧ್ಯವಾಗುತ್ತದೆ. ಅಲ್ಲದೆ ಅಂಗವಿಕಲ ಮಕ್ಕಳು ಯಾವುದೇ ಕಾರಣಕ್ಕೂ ಕಲಿಕೆ ಅಥವಾ ಇನ್ನಿತರ ಚಟುವಟಿಕೆಗಳಿಂದ ದೂರ ಉಳಿಯದಂತೆ ಸರ್ಕಾರವು ಅನೇಕ ಯೋಜನೆಗಳನ್ನು ಜಾರಿಗೆ ತಂದಿದೆ. ಅವರಿಗೆ ಅವಶ್ಯಕವಿರುವ ಸಾಧನ ಸಲಕರಣೆಗಳನ್ನು ವಿತರಣೆ ಮಾಡಲು ಮುಂದಾಗಿದೆ. ಇದರ ಜೊತೆಯಲ್ಲಿ ವಿವಿಧ ಸಂಘಸಂಸ್ಥೆಗಳು ಅವರ ಕಲಿಕಾಸಕ್ತಿಗೆ ಹಾಗೂ ಬೆಳವಣಿಗೆಗೆ ಪೂರಕವಾದ ಸೌಲಭ್ಯಗಳನ್ನು ಒದಗಿಸಲು ಸಿದ್ಧರಾಗಿದ್ದಾರೆ. ಇದರ ಸಂಪೂರ್ಣ ಲಾಭವನ್ನು ವಿಕಲಚೇತನರು ಸದುಪಯೋಗ ಪಡಿಸಿಕೊಳ್ಳಬೇಕಾಗಿದೆ ಎಂದರು.
ಪ್ರಾಂಶುಪಾಲ ಎಂ. ಶಿವಣ್ಣ ಮಾತನಾಡಿ, ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಮತ್ತು ಭೌದ್ಧಿಕ ಚಟುವಟಿಕೆಗಳಿಗೆ ಆಸರೆಯಾಗುವ ನಿಟ್ಟಿನಲ್ಲಿ ಲಯನ್ಸ್ ಸಂಸ್ಥೆಯು ಉದಾರವಾಗಿ ವಿಕಲಚೇತನ ವಿದ್ಯಾರ್ಥಿಗಳಿಗೆ ಅವಶ್ಯಕವಿರುವ ಸಾಧನಗಳನ್ನು ನೀಡುತ್ತಿರುವುದು ನಿಜಕ್ಕೂ ಅಭಿನಂಧನಾರ್ಹವಾದುದು. ಇದಕ್ಕಾಗಿ ಸಂಸ್ಥೆಗೆ ಕಾಲೇಜಿನ ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಸದಾ ಅಭಾರಿಯಾಗಿರುತ್ತೇವೆ ಎಂದರು.
ಲಯನ್ಸ್ ಸಂಸ್ಥೆಯ ಪದಾಧಿಕಾರಿಗಳಾದ ಸೂರಜ್, ಶ್ರೀಧರ್, ವಿ. ರವೀಂದ್ರನಾಥ್, ಉಪನ್ಯಾಸಕರಾದ ರಮೇಶ್ ಚಂದ್ರಗುಪ್ತ, ಬಿ. ಮಂಜುನಾಥ್, ಮಧುಸೂಧನ ರೆಡ್ಡಿ, ಗಂಗಾಧರಯ್ಯ, ಸುರೇಶ್ ಬಾಬು, ರಾಧಿಕಾ, ಪಿ. ಸುನೀತಾ, ಅಡಿವಪ್ಪ, ಮಂಜುನಾಥ್, ಎಂ. ನಾಗರಾಜ್, ಜಭೀವುಲ್ಲಾ, ಪ್ರವೀಣ್, ವಾಣಿ, ಪಾರ್ವತಮ್ಮ ಉಪಸ್ಥಿತರಿದ್ದರು.
(ವರದಿ: ಬಿ.ಎಂ. ಅಜಯ್, ಗೌರಿಬಿದನೂರು)
Discussion about this post