ಕಲ್ಪ ಮೀಡಿಯಾ ಹೌಸ್ | ಗಾಜೀಪುರ |
ನಮ್ಮ ದೇಶದ ಪ್ರಧಾನಿ ಯಾರು ಎಂಬ ಪ್ರಶ್ನೆಗೆ ಉತ್ತರ ಏನು ಎಂಬುದು ವರನಿಗೆ ತಿಳಿದಿಲ್ಲ ಎಂಬ ಕಾರಣದಿಂದಾಗ ವಧು ಮದುವೆಯನ್ನೇ ರದ್ದು ಮಾಡಿರುವ ಘಟನೆ ಉತ್ತರ ಪ್ರದೇಶದ ಗಾಜೀಪುರದಲ್ಲಿ ನಡೆದಿದೆ.
ಇಲ್ಲಿನ ಸೈದಾಪುರದಲ್ಲಿ ಘಟನೆ ನಡೆದಿದ್ದು, ರಾಮ ಅವತಾರ ಎಂಬುವವರ ಪುತ್ರ ಶಿವಶಂಕರ್ ಹಾಗೂ ಕರಂದ ಪೊಲೀಸ್ ಠಾಣೆ ವ್ಯಾಪ್ತಿಯ ಬಸಂತ್ ಪಟ್ಟಿ ಗ್ರಾಮದ ಲಖೇಡು ರಾಮ್ ಅವರ ಪುತ್ರಿ ರಂಜನಾ ಅವರೊಂದಿಗೆ ಇತ್ತೀಚಿಗೆ ವಿವಾಹವಿತ್ತು.

ಅದರ ಭಾಗವಾಗಿ ಪತ್ನಿ ರಂಜನಾ ದೇಶದ ಪ್ರಧಾನಿಯ ಹೆಸರು ಹೇಳುವಂತೆ ಶಿವಶಂಕರ್‌ಗೆ ಕೇಳಿದ್ದಾರೆ . ಆದರೆ ಶಿವಶಂಕರ್ ಅವರು ದೇಶದ ಪ್ರಧಾನಿ ನರೇಂದ್ರ ಮೋದಿಯವರ ಹೆಸರನ್ನು ಹೇಳಲು ಸಾಧ್ಯವಾಗಿಲ್ಲ. ಈ ಕಾರಣದಿಂದಾಗಿ, ವಧುವಿನ ಸಂಬAಧಿಕರು ಅವನನ್ನು ಅಪಹಾಸ್ಯ ಮಾಡಿದ್ದಾರೆ. ಮತ್ತು ಅವನನ್ನು ದಡ್ಡ ಎಂದು ಪರಿಗಣಿಸಿದ್ದಾರೆ.

Also read: ಪೊಲೀಸ್ ಇಲಾಖೆಯಲ್ಲಿ ಮೇಜರ್ ಸರ್ಜರಿ: 15 ಐಪಿಎಸ್ ಅಧಿಕಾರಿಗಳ ವರ್ಗಾವಣೆ











Discussion about this post