ಕಲ್ಪ ಮೀಡಿಯಾ ಹೌಸ್ | ಗೋವಾ |
ಟಾಲಿವುಡ್ ಕೊರಿಯೋಗ್ರಾಫರ್ ಮತ್ತು ರಿಯಾಲಿಟಿ ಶೋ ವಿಜೇತೆ ಟೀನಾ ಸಿಧು Tollywood Choreographer Teena Sidhu ಮೃತದೇಹ ಗೋವಾದಲ್ಲಿ ಪತ್ತೆಯಾಗಿದ್ದು, ಈ ಕುರಿತು ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಟೀನಾ ಹೃದಯಾಘಾತದಿಂದ ಮೃತಪಟ್ಟಿದ್ದಾರೆ ಎಂದು ಆಕೆಯ ಆಪ್ತವರ್ಗ ಪೊಲೀಸರಿಗೆ ತಿಳಿಸಿದ್ದಾರೆ. ಆದರೆ ಇನ್ನೂ ಟೀನಾ ಸಾವಿಗೆ ನಿಜವಾದ ಕಾರಣ ತಿಳಿದುಬಂದಿಲ್ಲ.
ಕೊರಿಯೋಗ್ರಾಫರ್ ಆಟ ಸಂದೀಪ್ ಟೀನಾ ಸಾವಿಗೆ ಇನ್‍ಸ್ಟಾಗ್ರಾಮ್‍ನಲ್ಲಿ ಸಂತಾಪ ಸೂಚಿಸಿದ್ದು, ಟೀನಾ ಅವರ ನಿಧನ ಸುದ್ದಿ ತಿಳಿದು ಆಘಾತ ಮತ್ತು ತೀವ್ರ ದುಃಖವಾಗುತ್ತಿದೆ. ಡಾನ್ಸ್ ರಿಯಾಟಿಸಿ ಶೋನಲ್ಲಿ ಟೀನಾ ನನ್ನ ಜೋಡಿಯಾಗಿದ್ದರು. ಅವರು ತುಂಬಾ ವಿನಮ್ರ ವ್ಯಕ್ರಿಯಾಗಿದ್ದರು. ಅವರ ಕುಟುಂಬದವರಿಗೆ ಈ ದುಃಖ ಭರಿಸುವ ಶಕ್ತಿಯನ್ನು ದೇವರು ಕರುಣಿಸಲಿ ಎಂದು ಪೋಸ್ಟ್ ಮಾಡಿದ್ದಾರೆ.
Also read: ಪರಾರಿಯಾಗಲು ಯತ್ನಿಸಿದ ಆಸಿಡ್ ದಾಳಿ ಆರೋಪಿ ಕಾಲಿಗೆ ಪೊಲೀಸ್ ಗುಂಡೇಟು!
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news











Discussion about this post