ಕಲ್ಪ ಮೀಡಿಯಾ ಹೌಸ್ | ನವದೆಹಲಿ |
ವಂಶಪಾರಂಪರ್ಯ ರಾಜಕೀಯ ನಡೆಸಲಾಗುತ್ತಿದೆ ಎಂಬ ಬಿಜೆಪಿ ಆರೋಪಕ್ಕೆ ತಿರುಗೇಟು ನೀಡಲು ಸಜ್ಜಾಗಿರುವ ಕಾಂಗ್ರೆಸ್ Congress ‘ಒಂದು ಕುಟುಂಬ ಒಂದು ಟಿಕೆಟ್’ One family One Ticket ಎಂಬ ಹೊಸ ನೀತಿ ಜಾರಿ ತರಲು ಮುಂದಾಗಿದೆ.
ಆದರೆ ಈ ನೀತಿಯು ಹಾಲಿ ಜನಪ್ರತಿನಿಧಿಗಳಾಗಿರುವ ಹಾಗೂ ಪಕ್ಷದಲ್ಲಿ ಹುದ್ದೆಗಳನ್ನು ಹೊಂದಿರುವ ಹಲವಾರು ಪ್ರಭಾವಿಗಳು ಹಾಗೂ ಹಲವಾರು ವರ್ಷ ಸೇವೆ ಸಲ್ಲಿಸಿರುವ ಗಾಂಧಿ ಕುಟುಂಬದ ರಾಹುಲ್ ಗಾಂಧಿ, ಪ್ರಿಯಾಂಕಾ ಗಾಂಧಿ ಮಲ್ಲಿಕಾರ್ಜುನ ಖರ್ಗೆ-ಪ್ರಿಯಾಂಕ್ ಖರ್ಗೆ, ಪಿ. ಚಿದಂಬರಂ-ಕಾರ್ತಿ ಚಿದಂಬರಂ, ಡಿ.ಕೆ. ಶಿವಕುಮಾರ್-ಡಿ.ಕೆ. ಸುರೇಶ್ ಹೀಗೆ ಅನೇಕರಿಗೆ ಇದು ಅನ್ವಯಿಸುವುದಿಲ್ಲ.
ಹೊಸ ನೀತಿಯ ಪ್ರಮುಖಾಂಶಗಳು:
‘ಪಕ್ಷಕ್ಕೆ ಸೇರಿದ ತಕ್ಷಣ ಏಕಾಏಕಿ ಟಿಕೆಟ್ ನೀಡುವುದಿಲ್ಲ. ಆದರೆ ಪಕ್ಷ ಸೇರಿ ಕನಿಷ್ಠ 5 ವರ್ಷ ಉತ್ತಮ ಸೇವೆ ಸಲ್ಲಿಸಿದವರಿಗೆ ಟಿಕೆಟ್ ನೀಡಲಾಗುತ್ತದೆ.
ಮಲ್ಲಿಕಾರ್ಜುನ ಖರ್ಗೆ-ಪ್ರಿಯಾಂಕ್ ಖರ್ಗೆ, ಪಿ. ಚಿದಂಬರಂ-ಕಾರ್ತಿ ಚಿದಂಬರಂ, ಡಿ.ಕೆ. ಶಿವಕುಮಾರ್-ಡಿ.ಕೆ. ಸುರೇಶ್ ಹೀಗೆ ಅನೇಕರ ಕುಟುಂಬದ ಸದಸ್ಯರು ಪಕ್ಷ ಸೇರಿದ ತಕ್ಷಣ ಟಿಕೆಟ್ ಬಯಸಿದರೆ ಅವರಿಗೆ ಟಿಕೆಟ್ ದೊರಕುವುದಿಲ್ಲ.
ಇದೇ ವೇಳೆ, 50-60 ವರ್ಷದಿಂದ ಪಕ್ಷ ಸಂಘಟನೆಯಲ್ಲಿ ವ್ಯಾಪಕ ಬದಲಾವಣೆ ತರಲು ಚಿಂತನೆ ನಡೆಸಲಾಗಿದ್ದು, ಈಗಿರುವ ಬೂತ್ ಹಾಗೂ ಬ್ಲಾಕ್ ಮಟ್ಟದ ಸಮಿತಿಗಳ ಮಧ್ಯದಲ್ಲಿ ‘ಮಂಡಲ ಕಮಿಟಿ’ಗಳನ್ನು ರಚಿಸುವ ಪರಿಶೀಲನೆ ನಡೆದಿದೆ.
Also read: ಟಾಲಿವುಡ್ ಕೊರಿಯೋಗ್ರಾಫರ್ ಟೀನಾ ಸಿಧು ನಿಗೂಢ ಸಾವು!
ಯುವಕರಿಗೆ ಹೆಚ್ಚಿನ ಆದ್ಯತೆ ನೀಡುವ ನಿಟ್ಟಿನಲ್ಲಿ ಪಕ್ಷದ ಎಲ್ಲ ಕಮಿಟಿಗಳಲ್ಲಿ 50 ವರ್ಷಕ್ಕಿಂತ ಕೆಳಗಿರುವವರಿಗೆ ಆದ್ಯತೆ ನೀಡಲಾಗುತ್ತಿದ್ದು, ಪಕ್ಷದಲ್ಲಿ ಯಾವುದಾದರೂ ಸ್ಥಾನ ಬೇಕು ಎಂದರೆ ಪಕ್ಷದಲ್ಲಿ ಆತ ಕನಿಷ್ಠ 3ರಿಂದ 5 ವರ್ಷ ದುಡಿದಿರಬೇಕು. ಪಕ್ಷದಲ್ಲಿನ ಪದಾಧಿಕಾರಿಗಳ ಸಾಧನೆ ಅಳೆದು ಅವರಿಗೆ ಪದೋನ್ನತಿ ನೀಡಲು ‘ಮೌಲ್ಯಮಾಪನ ವಿಭಾಗ’ ಹಾಗೂ ಜನರ ನಾಡಿಮಿಡಿತ ಅರಿಯಲು ‘ಸಾರ್ವಜನಿಕ ದೂರದೃಷ್ಟಿವಿಭಾಗ’ ರಚನೆ ಮಾಡಬೇಕು ಎಂಬ ಪ್ರಸ್ತಾವಗಳೂ ಚಿಂತನ ಶಿಬಿರದಲ್ಲಿವೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post